LIC ನೇಮಕಾತಿ ಅಧಿಸೂಚನೆ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಭಾರತದ ನಂಬಿಕಾರ್ಹ ವಿಮಾ ಸಂಸ್ಥೆಗಳಲ್ಲಿ ಒಂದಾಗಿರುವ LIC (Life Insurance Corporation of India Recruitment) ಹಲವು ವಿಧದ ಪಾಲಿಸಿಗಳ ಮೂಲಕ ದೇಶದಾದ್ಯಂತ ಹೆಸರುವಾಸಿಯಾಗಿದೆ. ಈಗ LIC ಕಡೆಯಿಂದ ದೇಶದ ಯುವ ಜನತೆಗೆ ಮತ್ತೊಂದು ಸಿಹಿಸುದ್ದಿ ಇದ್ದು ಈ ಬಾರಿ ಹೂಡಿಕೆ ವಿಷಯವಾಗಿ ಮಾತ್ರವಲ್ಲದೆ ನೇಮಕಾತಿ ಕುರಿತು ಕೂಡ ಈ ನೋಟಿಫಿಕೇಶನ್ ನೀಡಿದೆ.

LIC ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು, ನೀವು ಕೂಡ LIC ಕಂಪನಿಯ ಭಾಗವಾಗಿ ಉದ್ಯೋಗ ಮಾಡಲು ಬಯಸುವವರಾದರೆ ನಿಮಗಾಗಿ ನೋಟಿಫಿಕೇಶನ್ ನಲ್ಲಿ ಇರುವ ಕೆಲ ಮುಖ್ಯವಾದ ಸಂಗತಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

ಈ ಸುದ್ದಿ ಓದಿ:- 2024 ರ ಮತದಾರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದೆಯೇ ಇಲ್ಲವೇ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ ಒಂದ್ವೇಳೆ ಇಲ್ಲದಿದ್ರೆ ಈ ರೀತಿ ಮಾಡಿ.!

ನೇಮಕಾತಿ ಸಂಸ್ಥೆ:- LIC (Life Insurance Corporation of India)
ಹುದ್ದೆ ಹೆಸರು:- ಡಿಜಿಟಲ್ ಪ್ರಕ್ರಿಯೆ ಮಾಲೀಕರ
ಒಟ್ಟು ಹುದ್ದೆಗಳ ಸಂಖ್ಯೆ:- 02
ಹುದ್ದೆಗಳ ಬಗೆ:- ಗುತ್ತಿಗೆ ಆಧಾರದ ಹುದ್ದೆಗಳು
ಉದ್ಯೋಗ ಸ್ಥಳ:- ಭಾರತದಾದ್ಯಂತ

ಅರ್ಹತಾ ಮಾನದಂಡ:-

* ಶೈಕ್ಷಣಿಕ ವಿದ್ಯಾರ್ಹತೆ:-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ B.E ಅಥವಾ MBA ಶಿಕ್ಷಣ ಪಡೆದಿರಬೇಕು
* ವಯೋಮಿತಿ:- ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 40 ವರ್ಷಗಳು.
* ಇನ್ನಿತರೆ ಕಂಡೀಷನ್ ಗಳು:- ಕನಿಷ್ಠ 8 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:-

* LIC ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ವೃತ್ತಿಗಳು ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ಪ್ರದೇಶ ಮತ್ತು ಇಲಾಖೆ ಎಂಬ ಎರಡು ಆಪ್ಷನ್ ಕಾಣುತ್ತದೆ ಕಾಲ್ ಮಾಡಿ ಆಲ್ ಎನ್ನುವ ಆಪ್ಷನ್ ಸಿಗುತ್ತದೆ ಕ್ಲಿಕ್ ಮಾಡಿ.
* ಒಪ್ಪಂದದ ಆಧಾರದ ಮೇಲೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಡಿಜಿಟಲ್ ಪ್ರಕ್ರಿಯೆಯ ಮಾಲೀಕರ ನಿಶ್ಚಿತಾರ್ಥ ಎನ್ನುವ ಆಪ್ಷನ್ ಸಿಗುತ್ತದೆ ಇದರ ಮೇಲೆ ಕ್ಲಿಕ್ ಮಾಡಿ.

* ಅರ್ಜಿ ಫಾರ್ಮ್ ಓಪನ್ ಆಗುತ್ತದೆ ಎಲ್ಲವನ್ನು ಭರ್ತಿ ಮಾಡಿ ಕೇಳಲಾಗುವ ಪೂರಕ ದಾಖಲೆಗಳ ಸಂಖ್ಯೆಗಳನ್ನು ನಮೂದಿಸಿ ಅಥವಾ ದಾಖಲೆ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ಆನ್ಲೈನ್ನಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಿದ ಮೇಲೆ ಅರ್ಜಿ ಸಲ್ಲಿಕೆ ಯಶಸ್ವಿಯಾಗುತ್ತದೆ. ತಪ್ಪದೆ ಇ-ರಸೀದಿ ಇಟ್ಟುಕೊಳ್ಳಿ ಇದು ಭವಿಷ್ಯದಲ್ಲಿ ಅನುಕೂಲಕ್ಕೆ ಬರುತ್ತದೆ.

ಈ ಸುದ್ದಿ ಓದಿ:-ಕೊಟಕ್ ಸುರಕ್ಷಾ ವಿದ್ಯಾರ್ಥಿ ವೇತನ, 1 ಲಕ್ಷ ಸ್ಕಾಲರ್ಶಿಪ್ ಸಿಗಲಿದೆ ಈ ರೀತಿ ಅರ್ಜಿ ಸಲ್ಲಿಸಿ.!

ಆಯ್ಕೆ ವಿಧಾನ:-
ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಸಂದರ್ಶನ ನಡೆಸಿ ಕೇಳಿರುವ ಮಾನದಂಡಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಶುಲ್ಕ:-

* ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿಯೇ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಅಥವಾ UPI ಆಧಾರಿತ ಆಪ್ ಗಳ ಮೂಲಕ ಭರ್ತಿ ಮಾಡಬಹುದು
* SC / ST & ಅಂಗವಿಕಲ ಅಭ್ಯರ್ಥಿಗಳಿಗೆ ರೂ.100
* ಉಳಿದ ಅಭ್ಯರ್ಥಿಗಳಿಗೆ ರೂ.1000

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 19 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 08 ಏಪ್ರಿಲ್, 2024.

ಈ ಸುದ್ದಿ ಓದಿ:-4 ಗುಂಟೆಯಲ್ಲಿ ತಿಂಗಳಿಗೆ 1 ಲಕ್ಷ ಆದಾಯ, ಲಕ್ಷ ಲಕ್ಷ ಆದಾಯ ನೋಡಿ ಕೆಲಸ ಬಿಟ್ಟು ಸಂಪೂರ್ಣ ಕೃಷಿ ಕಡೆ ಮುಖ ಮಾಡಿದ ಯುವಕ.!

ಬೇಕಾಗುವ ದಾಖಲೆಗಳು:-

* ಇತ್ತೀಚಿನ ಭಾವಚಿತ್ರ ಮತ್ತು ಸಹಿ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ * ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿಯಾಗಿ ಯಾವುದಾದರೂ ಒಂದು ದಾಖಲೆ
* ವಿಳಾಸ ಪುರಾವೆ
* ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
* ಅಂಗವಿಕಲ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
* ಕೆಲಸದ ಅನುಭವ ಹೊಂದಿರುವ ಪ್ರಮಾಣ ಪತ್ರ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now