ಕೃಷಿ ಎಂದರೆ ಈಗ ಬೆಳೆ ಬೆಳೆಯುವುದು ಮಾತ್ರವಲ್ಲದೆ ಕೃಷಿಗೆ ಪೂರಕವಾದ ಅನೇಕ ಚಟುವಟಿಕೆಗಳು ಕೂಡ ಸೇರಿವೆ. ಕೃಷಿ ಭೂಮಿಯಲ್ಲಿ ವ್ಯವಸಾಯದ ಜೊತೆಗೆ ಕುರಿ ಮೇಕೆ ಸಾಕಾಣಿಕೆ, ಹೈನುಗಾರಿಕೆ, ಪಶುಸಂಗೋಪನೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಇದೆಲ್ಲವನ್ನು ಮಾಡಿ ಆಹಾರ ಕೊರತೆ ನೀಗಿಸುವುದರ ಜೊತೆಗೆ ಕೈ ತುಂಬಾ ಆದಾಯ ಕಾಣಬಹುದು.
ಅತಿ ಕಡಿಮೆ ಕೃಷಿ ಭೂಮಿ ಹೊಂದಿರುವವರು ಲಕ್ಷ ಲಕ್ಷ ಆದಾಯ ಪಡೆಯಬೇಕು ಎಂದರೆ ಈ ಕುರಿ ಕೋಳಿ ಸಾಗಾಣಿಕೆ ಮತ್ತು ಪಶುಸಂಗೋಪನೆ, ಮೀನುಗಾರಿಕೆಯಂತಹ ಕಸಬುಗಳು ಕೈ ಹಿಡಿಯುತ್ತವೆ. ಇದಕ್ಕೆ ಸಾಕ್ಷಿಯಂತೆ ತುಮಕೂರು ಜಿಲ್ಲೆಯ ಚಿಕ್ಕದೇವನಹಳ್ಳಿ ಸಮೀಪದ ಗ್ರಾಮದ ಯುವಕನೊಬ್ಬ ಇದರಲ್ಲಿ ಯಶಸ್ವಿಯಾಗಿದ್ದಾರೆ.
4 ಗುಂಟೆ ಜಮೀನಿನಲ್ಲಿ 1 ಲಕ್ಷ ಆದಾಯ ಪಡೆಯುವ ಈ ಯುವಕ ಕೃಷಿಯಲ್ಲಿ ಕೂಡ ಲಕ್ಷ ಲಕ್ಷ ಆದಾಯವನ್ನು ತಿಂಗಳಿಗೆ ಗಳಿಸಬಹುದು. ಆದರೆ ಅದನ್ನು ಕೂಡ ಬಹಳ ಆಸಕ್ತಿಯಿಂದ ಮಾಡಬೇಕು. ಆಗ ಮಾತ್ರ ಕೈ ಹಿಡಿಯುತ್ತದೆ ಎಂದು ತಾವು ಕೈ ತುಂಬಾ ಸಂಬಳ ಸಿಗುತ್ತಿದೆ. ಕೆಲಸ ಬಿಟ್ಟು ಕೃಷಿ ಕಡೆಗೆ ಬದುಕು ಬದಲಾಯಿಸಿಕೊಂಡ ಕಥೆಯನ್ನು ಹೇಳುತ್ತಾರಿವರು.
ಈ ಸುದ್ದಿ ನೋಡಿ:-ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಅರ್ಜಿ ಆಹ್ವಾನ. ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಏನೆಲ್ಲಾ ದಾಖಲೆಗಳು ಬೇಕು.? ಎಲ್ಲಿ ಅರ್ಜಿ ಹಾಕಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
2019 ರಲ್ಲಿ ಮೊದಲಿಗೆ ಕೋಳಿ ಸಾಕಾಣಿಕೆ ಮಾಡಬೇಕು ಎಂದು ನಿರ್ಧರಿಸಿ ಕೋಳಿ ಸಾಕಾಣಿಕೆ ಆರಂಭಿಸಿದ ಇವರು ಆ ಸಮಯದಲ್ಲಿ ಸರಿಯಾಗಿ ಯಾವುದರ ಬಗ್ಗೆ ಕೂಡ ತಿಳಿದುಕೊಂಡಿರಲಿಲ್ಲವಂತೆ, ಆದರೆ ಕೋಳಿ ಸಾಕಾಣಿಕೆ ಮಾಡಬೇಕು ಎಂದು ಬಲವಾದ ಇಚ್ಛೆ ಹೊಂದಿ ವಿಚಾರಿಸಿದಾಗ ಅನೇಕರು ಅನೇಕ ಬಗೆಯಲ್ಲಿ ಹೇಳಿದರು. ಧೈರ್ಯ ಮಾಡಿ ಮೈಸೂರು ನಾಟಿ ಎನ್ನುವ ತಳಿಯನ್ನು ಆರಂಭಿಸಿದೆ, ಕೈಹಿಡಿಯಿತು.
2 ಲಕ್ಷ ಇನ್ವೆಸ್ಟ್ ಮಾಡಿದರೆ ನನಗೆ ಒಂದೂವರೆ ತಿಂಗಳಿನಲ್ಲಿ ಡಬ್ಬಲ್ ಹಣ ಬಂತು ಹೀಗಾಗಿ ಇದನ್ನೇ ಯಾಕೆ ದೊಡ್ಡ ಮಟ್ಟದಲ್ಲಿ ಮಾಡಬಾರದು ಎಂದು ನಿರ್ಧರಿಸಿ ಒಂದೇ ಬಾರಿಗೆ ರೂ.1800 ಕೋಳಿಗಳನ್ನು ಸಾಕಿದೆ. ಆದರೆ ಈ ಸಮಯದಲ್ಲಿ ನನಗೆ ಆಸಕ್ತಿ ಕಡಿಮೆಯಾಗಿತ್ತು ನೀರು ಹಾಗೂ ಆಹಾರ ಕೊಟ್ಟರೆ ಸಾಕು ಎಂದುಕೊಂಡು ನಿರ್ಲಕ್ಷ ಮಾಡಿದ್ದ ಪರಿಣಾಮ ನನಗೆ ಅರ್ಧಕ್ಕಿಂತ ಹೆಚ್ಚು ಲಾಸ್ ಆಯಿತು.
ಯಾಕೆಂದರೆ ಯಾವುದೇ ಕೃಷಿಯಾದರೂ ಅದರ ಬಗ್ಗೆ ಸಮರ್ಪಕ ಭಾವನೆ ಇರಬೇಕು ಬೇಕಾಬಿಟ್ಟಿ ಮಾಡಿದರೆ ಖಂಡಿತ ಆದಾಯ ಬರುವುದಿಲ್ಲ. ನಾನು ಮಾಡಿದ ತಪ್ಪೇನೆಂದರೆ ಮೊದಲೆಲ್ಲ ಅವುಗಳ ಆರೋಗ್ಯದ ಬಗ್ಗೆಯೂ ಗಮನ ಕೊಡುತ್ತಿದ್ದೆ, ನಾನು ಆಚೆಗೆ ಬಿಡುತ್ತಿರಲಿಲ್ಲ ಮತ್ತು ಬೇಗ ಬೇಕಾಬಿಟ್ಟಿ ನೀರು ಬಿಡುತ್ತಿದ್ದ ಕಾರಣ.
ಈ ಸುದ್ದಿ ನೋಡಿ:- ಪ್ರತಿ ತಿಂಗಳು ನಿಮ್ಮ PF ಖಾತೆಗೆ ಹಣ ಜಮಾ ಆಗುತ್ತಿದಿಯೋ ಇಲ್ಲವೋ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!
ನೀರೆಲ್ಲಾ ಚೆಲ್ಲಿ ಅಲ್ಲಲ್ಲಿ ಬ್ಯಾಡ್ ಬ್ಯಾಕ್ಟೀರಿಯಾ ಉಂಟಾಗಿ ಅವುಗಳಿಗೆ ಕಾಯಿಲೆ ಬಂತು ಮತ್ತು ರೆಕ್ಕೆಗಳು ಕೂಡ ಕಾರಣ ಅನೇಕ ಕೋಳಿಗಳು ಸ.ತ್ತು ಹೋದವು ಮತ್ತು ನಾವು ಹಾಕಿದ ಊಟವನ್ನು ಚೆನ್ನಾಗಿರುವ ಕೋಳಿಗಳು ತಿನ್ನುತ್ತಿದ್ದವು ಮತ್ತು ಸ್ವಲ್ಪ ವೀಕ್ ಇದ್ದವು ತಿನ್ನಲಾಗುತ್ತಿರಲಿಲ್ಲ ಮತ್ತು ಕೋಳಿ ಜಗಳ ಆದಾಗ ಗಮನಿಸದೇ ಹಲವಾರು ಕೋಳಿಗಳಿಗೆ ಹಾನಿಯಾಯಿತು.
ಇದೆಲ್ಲದ ಪರಿಣಾಮ ಬಹಳ ಲಾಸ್ ಆಯ್ತು, ಆದರೀಗ ಆ ತಪ್ಪು ಮಾಡುತ್ತಿಲ್ಲ. ಬಹಳ ಪ್ರೀತಿ ಮತ್ತು ಕಾಳಜಿಯಿಂದ ಕೆಲಸ ಮಾಡುತ್ತೇನೆ. ಒಂದೇ ಬಾರಿಗೆ 2,000 ಹಾಕಿ ಕಷ್ಟ ಮಾಡಿಕೊಳ್ಳುವುದರ ಬದಲು ಒಂದು ಗುಂಟೆ ಜಮೀನಿನಲ್ಲಿ 300 ಕೋಳಿಗಳನ್ನು ಸಾಕುತ್ತಿದ್ದೇನೆ. ಮತ್ತೊಂದು ಗುಂಟೆಯಲ್ಲಿ ಮೀನು ಸಾಕಾಣಿಕೆ, ಮತ್ತೊಂದು ಗುಂಟೆಯಲ್ಲಿ ಕುರಿ ಕೋಳಿ ಸಾಕಾಣಿಕೆ ಹಾಗೂ ಒಂದು ಎಕರೆ ಜಮೀನಲ್ಲಿ ಜೇನು ಪೆಟ್ಟಿಗೆಯನ್ನು ಇಟ್ಟಿದ್ದೇವೆ.
ಕೃಷಿ ನನಗೆ ಎಷ್ಟು ಇಷ್ಟವಾಯಿತು ಎಂದರೆ ನಾನು ಬೆಂಗಳೂರಿನಲ್ಲಿ ಕೆಲಸ ಇತ್ತು ಅದನ್ನು ಬಿಟ್ಟು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ. ಆರಂಭದಲ್ಲಿ ಒಂದು ವರ್ಷ ಸ್ವಲ್ಪ ತಾಳ್ಮೆಯಿಂದ ಇರಬೇಕು ಒಂದೇ ಪಾಲಿಗೆ 50,000 ಲಕ್ಷ ಪಡೆಯಲು ಆಗುವುದಿಲ್ಲ ಆದರೆ ಸರಿಯಾಗಿ ಪ್ಲಾನ್ ಮಾಡಿದರೆ ಖಂಡಿತ ರೈತನು ಕೂಡ ಯಶಸ್ವಿಯಾಗಬಹುದು ಎನ್ನುತ್ತಾರೆ.
ಈ ಸುದ್ದಿ ನೋಡಿ:- ಇನ್ಮುಂದೆ ಗೃಹಲಕ್ಷ್ಮಿ ಹಣ ಪಡೆಯೋಕೆ 4 ಹೊಸ ನಿಯಮ ಜಾರಿಗೆ ತಂದ ಸರ್ಕಾರ.! ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಹಣ.!
ಕೋಳಿ ಸಾಕಾಣಿಕೆಗೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ವಿಳಾಸವನ್ನು ಸಂಪರ್ಕಿಸಿ.
ಪ್ರಭಾಕರ್,
ಹುಲಿಯಾರ್,
ಚಿಕ್ಕ ನಾಯಕನಹಳ್ಳಿ ತಾಲ್ಲೂಕು,
ತುಮಕೂರು ಜಿಲ್ಲೆ.
9886800418.