ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಗ್ಗೆ ಹೆಚ್ಚು ನಿರೀಕ್ಷೆ. ಯಾಕೆಂದರೆ ಅತಿ ದೊಡ್ಡ ಬಜೆಟ್ ಗಾತ್ರವನ್ನು ಹೊಂದಿರುವ ಈ ಯೋಜನೆ ಮೂಲಕ ಕರ್ನಾಟಕದಲ್ಲಿ ರೇಷನ್ ಕಾರ್ಡ್ (Ration Card) ಹೊಂದಿರುವ ಪ್ರತಿ ಕುಟುಂಬದ ಮಹಿಳೆಯು ಕೂಡ ಸರ್ಕಾರದಿಂದ ಕುಟುಂಬ ನಿರ್ವಹಣೆಗಾಗಿ ಮಾಸಿಕವಾಗಿ ರೂ.2000 ಸಹಾಯಧನವನ್ನು ಪಡೆಯುತ್ತಾರೆ.
ನೂರಕ್ಕೆ ನೂರರಷ್ಟು ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎನ್ನುವುದು ಸರ್ಕಾರದ ಗುರಿ. ಆದರೆ ಇದುವರೆಗೂ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿ ಕೊಂಡಿದ್ದರೂ 95% ಮಾತ್ರ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಅರ್ಹರಾಗಿದ್ದರೂ ಕೂಡ ಇನ್ನು ಸಹ ಲಕ್ಷಾಂತರ ಮಹಿಳೆಯರು ತಮ್ಮ ದಾಖಲೆಗಳಲ್ಲಿ ಸಮಸ್ಯೆ ಹೊಂದಿರುವ ಕಾರಣದಿಂದಾಗಿ ಈ ಸಹಾಯಧನ ಪಡೆಯಲು ಆಗುತ್ತಿಲ್ಲ.
ಈ ಸುದ್ದಿ ನೋಡಿ:- SSLC ಆಗಿರುವವರಿಗೆ ಸಿಹಿಸುದ್ಧಿ ಭರ್ಜರಿ 25,000 ಉದ್ಯೋಗವಕಾಶ, ನೀವು ಇರುವ ಊರಿನಲ್ಲಿಯೇ ಕೆಲಸ 15,000 ವೇತನ, ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!
ಕಳೆದ ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (CM Siddaramaih) ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಕ್ಯಾಂಪ್ (Gruhalakshmi Camp) ನಡೆಸಿ ಈ ಅದಾಲತ್ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸ್ಥಳೀಯ ಬ್ಯಾಂಕ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಚೆ ಕಚೇರಿ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಭಾಗಿಯಾಗಿ ಮಹಿಳೆಯರಿಗೆ DBT ಮೂಲಕ ಹಣ ಪಡೆಯಲು ಇರುವ ಸಮಸ್ಯೆ ಪರಿಹರಿಸಿ ಕೊಡಬೇಕು ಎಂದು ಸೂಚನೆ ಕೊಟ್ಟಿದ್ದರು.
ಈ ಕಾರ್ಯಕ್ರಮ ಕೂಡ ಯಶಸ್ವಿ ಆಗಿದ್ದರು ನಂತರವೂ ಲಕ್ಷಾಂತರ ಮಹಿಳೆಯರಿಗೆ ಒಂದು ಹಣ ಕೂಡ ಬರದೇ ಇರುವುದು ದುಃ’ಖದ ಸಂಗತಿ ಆಗಿದೆ. ಇದರೊಂದಿಗೆ ನೀವೇನಾದರೂ ಪ್ರತಿ ತಿಂಗಳು ಹಣ ಪಡೆಯುವುದಕ್ಕೆ ಸಮಸ್ಯೆ ಆಗುತ್ತಿದ್ದರೆ ಮೊದಲ ಕಂತಿನ ಅಥವಾ ಎರಡನೇ ಕಂತಿನ ಹಣ ಪಡೆದು ನಂತರ ಹಣ ಪಡೆಯಲು ಸಮಸ್ಯೆ ಆಗುತ್ತಿದೆ ಎಂದರೆ ಅಂಥವರು ಕೂಡ ಈಗ ನಾವು ಹೇಳುವ ಈ ನಾಲ್ಕು ವಿಚಾರಗಳ ಬಗ್ಗೆ ಗಮನ ಕೊಟ್ಟು ಸರಿಪಡಿಸಿಕೊಳ್ಳಿ. ಮುಂದಿನ ತಿಂಗಳಿನಿಂದ ಖಂಡಿತವಾಗಿಯೂ ಹಣ ಬರಲಿದೆ.
ಈ ಸುದ್ದಿ ನೋಡಿ:- ಜಮೀನು ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ಅಥವಾ ಪಹಣಿ ಪತ್ರದಲ್ಲಿ ಹೆಸರಿನ ತಿದ್ದುಪಡಿ ಇದ್ದರೆ ಕಂದಾಯ ಅದಾಲತ್ ಜಾರಿ.!
1. ರೇಷನ್ ಕಾರ್ಡ್ ಸ್ಥಿತಿ ಸಕ್ರಿಯವಾಗಿರದೇ ಇದ್ದರೆ ರೇಷನ್ ಕಾರ್ಡ್ ಆಧಾರಿತವಾದ ಯಾವುದೇ ಯೋಜನೆಗಳ ಅನುದಾನ ಸಿಗುವುದಿಲ್ಲ. ರೇಷನ್ ಕಾರ್ಡ್ ನಲ್ಲಿರುವ ಪ್ರತಿ ಸದಸ್ಯನ ಆಧಾರ್ ಕಾರ್ಡ್ ಲಿಂಕ್ ಮಾಡಿ ಇ-ಕೆವೈಸಿ (e-KYC) ಮಾಡಿಸಬೇಕು. ಫೆಬ್ರವರಿ 28ರ ವರೆಗೆ e-KYC ಮಾಡಿಸದಿದ್ದರೆ ಅಂತಹ ರೇಷನ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುವುದು ಎಂದು ಸರ್ಕಾರವು ಎಚ್ಚರಿಕೆ ನೀಡಿದೆ.
ಆದ್ದರಿಂದ ಕೂಡಲೇ ಹತ್ತಿರದ ಬಾಪೂಜಿ ಸೇವಾ ಕೇಂದ್ರ ಇಲ್ಲವೇ ಗ್ರಾಮ್ ಒನ್ ಗಳಿಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿ, ಮೊಬೈಲ್ ನಂಬರ್ ನೀಡಿ e-KYC ಮಾಡಿಸಿಕೊಳ್ಳಬೇಕು. ಪ್ರತಿ ತಿಂಗಳು ಆಹಾರ ಇಲಾಖೆಯಿಂದ ಕೆಲವು ರೇಷನ್ ಕಾರ್ಡ್ ಗಳು ಸ್ಥಗಿತಗೊಳ್ಳುತ್ತಿರುತ್ತವೆ ಅಥವಾ ರದ್ದಾಗುತ್ತಿರುತ್ತವೆ. ಮಾಹಿತಿ ಕಣಜ ಅಥವಾ ಆಹಾರ ಇಲಾಖೆ ವೆಬ್ಸೈಟ್ ಮೂಲಕ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಏನಾಗಿದೆ ಎಂದು ಪರಿಶೀಲಿಸಿಕೊಳ್ಳಿ ಸ್ಥಗಿತಗೊಂಡಿದ್ದರೆ ಸಮಸ್ಯೆ ಪರಿಹರಿಸಿಕೊಳ್ಳಿ.
ಈ ಸುದ್ದಿ ನೋಡಿ:- ಜಮೀನು ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ಅಥವಾ ಪಹಣಿ ಪತ್ರದಲ್ಲಿ ಹೆಸರಿನ ತಿದ್ದುಪಡಿ ಇದ್ದರೆ ಕಂದಾಯ ಅದಾಲತ್ ಜಾರಿ.!
2. ಇದುವರೆಗೂ ಒಂದು ಕಂತಿನ ಗೃಹಲಕ್ಷ್ಮಿ ಸಹಾಯಧನದ ಹಣ ಪಡೆಯಲಾಗದ ಫಲಾನುಭವಿಗಳಿಗೆ DBT ಮೂಲಕ ಹಣ ವರ್ಗಾವಣೆ ಮಾಡಲು ಸಮಸ್ಯೆಯಾಗಿರಬಹುದು. ಹಾಗಾಗಿ ಮತ್ತೊಮ್ಮೆ ತಮ್ಮ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು ಬ್ಯಾಂಕ್ ಖಾತೆ ಆಕ್ಟಿವ್ (Bank Account Active) ಆಗಿ ಇದೆಯೋ ಮತ್ತು ಆ ಖಾತೆಗಳಿಗೆ Aadhar Seeding and NPCI Mapping ಆಗಿದೆಯೇ ಎನ್ನುವುದನ್ನು ಪರಿಶೀಲಿಸಿ ಇಲ್ಲವಾದಲ್ಲಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲೆ ನೀಡಿ ಅರ್ಜಿ ಸಲ್ಲಿಸಿ ಈ ಪ್ರಕ್ರಿಯೆ ಪೂರ್ತಿಗೊಳಿಸಬೇಕು.
3. ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದಿರಲು ಬ್ಯಾಂಕ್ ಖಾತೆಯಲ್ಲಿ ಇರುವ ತಾಂತ್ರಿಕ ದೋಷಗಳು (Bank Account Issues) ಪ್ರಮುಖ ಕಾರಣವಾಗಿದೆ. ಕೆಲವೊಮ್ಮೆ ಯಾವುದೋ ಹಳೆಯ ಬ್ಯಾಂಕ್ ಖಾತೆಗೆ ಹಣ ಹೋಗುತ್ತಿರಬಹುದು ಮತ್ತು ಆ ಖಾತೆ ದಾಖಲೆ ಇಲ್ಲದೆ ಇರಬಹುದು. ಅಂತವರು ಖಾತೆ ಬದಲು ಈಗ ಚಾಲ್ತಿಯಲ್ಲಿರುವ ಬೇರೆ ಬ್ಯಾಂಕ್ ಖಾತೆ ದಾಖಲೆಯನ್ನು ಗೃಹಲಕ್ಷ್ಮಿ ಅರ್ಜಿಗೆ ಲಿಂಕ್ ಮಾಡಿಸಿ ಹಣ ಪಡೆದುಕೊಳ್ಳಬಹುದು ಇದಕ್ಕಾಗಿ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ.
ಈ ಸುದ್ದಿ ನೋಡಿ:- ಈ ಬೆಲೆ ಬೆಳೆದರೆ ಎಕರೆಗೆ 30 ಲಕ್ಷ ಆದಾಯ ಗ್ಯಾರಂಟಿ.!
4. ಒಂದು ಕಂತಿನ ಹಣ ಕೂಡ ಪಡೆಯದೆ ಇದ್ದವರ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಯಶಸ್ವಿಯಾಗದೆ ಇರಬಹುದು. ಹತ್ತಿರದ ಗ್ರಾಮ ಒನ್ ಕೇಂದ್ರಗಳಿಗೆ ಹೋಗಿ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ದಾಖಲೆ ನೀಡಿ ಈ ಸಮಸ್ಯೆ ಪರಿಹರಿಸಿಕೊಳ್ಳಿ.