ಗ್ರಾಮೀಣ ಭಾಗದಲ್ಲಿ ವಾಸಿಸುವ ಕಡಿಮೆ ವಿದ್ಯಾಭ್ಯಾಸ ಮಾಡಿರುವ (SSLC) ಅಭ್ಯರ್ಥಿಗಳಿಗೂ ಕೂಡ ಈಗ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಮಾಡುವ ಅವಕಾಶ ಸಿಗುತ್ತಿದೆ. ರಾಜ್ಯದ ನಾಗರಿಕರಿಗೆ 80 ಇಲಾಖೆಯ ಸುಮಾರು 700 ಕ್ಕೂ ಹೆಚ್ಚು ಸೇವೆಗಳು ಸೇವಾ ಕೇಂದ್ರಗಳಿಂದ ಸಿಗುತ್ತಿವೆ.
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು, ತಿದ್ದುಪಡಿ ಮಾಡಿಸುವುದು, ಮರಣ ಪ್ರಮಾಣ ಪತ್ರ ಪಡೆಯಲು, ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಲು, ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಪಿಂಚಣಿಗಾಗಿ ಅರ್ಜಿ ಸಲ್ಲಿಸುವುದು ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ಸಂಬಂಧಪಟ್ಟ ಕಚೇರಿಗಳಲ್ಲಿ ಜನದಟ್ಟಣೆ ಇದ್ದೇ ಇರುತ್ತದೆ.
ಜನದಟ್ಟಣೆ ಸಮಸ್ಯೆಯಿಂದ ಮತ್ತು ಸರ್ಕಾರಿ ಕಛೇರಿಗಳು, ಸೇವಾ ಕೇಂದ್ರಗಳು ಗ್ರಾಮೀಣ ಪ್ರದೇಶದಿಂದ ದೂರ ಇರುವುದರಿಂದ ರೈತರಿಗೆ ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗುತ್ತಿತ್ತು ಹೊರತು ಸಮಯಕ್ಕೆ ಸರಿಯಾಗಿ ಕೆಲಸ ಆಗುತ್ತಿರಲಿಲ್ಲ ಮತ್ತು ಹಣ ಹಾಗೂ ಸಮಯವೂ ವ್ಯರ್ಥವಾಗುತ್ತಿತ್ತು, ನಡುವೆ ಮಧ್ಯವರ್ತಿಗಳ ಹಾವಳಿಯಿಂದ ಇನ್ನಷ್ಟು ತೊಂದರೆಯಾಗುತ್ತಿತ್ತು.
ಈ ಸುದ್ದಿ ಓದಿ:- ಜಮೀನು ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ಅಥವಾ ಪಹಣಿ ಪತ್ರದಲ್ಲಿ ಹೆಸರಿನ ತಿದ್ದುಪಡಿ ಇದ್ದರೆ ಕಂದಾಯ ಅದಾಲತ್ ಜಾರಿ.!
ಇದನ್ನು ತಪ್ಪಿಸಿ ಈ ಎಲ್ಲಾ ಸೇವೆಗಳನ್ನು ಸುಲಭವಾಗಿ ಜನರು ಪಡೆಯುವಂತೆ ಆಗಲು ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುವಂತಹ ಜನಮಿತ್ರರು (Jana Mithra) ಎನ್ನುವ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದು ಸರ್ಕಾರದ ಇ- ಆಡಳಿತ ಇಲಾಖೆಯನ್ನು ( E-Administration Department ) ಬಳಸಿಕೊಂಡು ರಾಜ್ಯದ 25,000 ಗ್ರಾಮ ಪಂಚಾಯಿತಿಗಳಲ್ಲಿ ಜನ ಮಿತ್ರರನ್ನು ನೇಮಿಸಿ.
ಸರ್ಕಾರಿ ಕಚೇರಿಗಳ ಸೇವೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಈ ಜನಮಿತ್ರ ನೇಮಕಾತಿ ಯಾವ ರೀತಿ ನಡೆಯುತ್ತದೆ? ಕಾರ್ಯವೈಖರಿ ಯಾವ ರೀತಿ ಇರುತ್ತದೆ? ಹೇಗೆ ಸೇವೆಗಳನ್ನು ಪಡೆಯಬಹುದು ಎನ್ನುವುದರ ಕುರಿತ ಪ್ರಮುಖ ಮಾಹಿತಿ ಹೀಗಿದೆ ನೋಡಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:-
* ಅರ್ಜಿ ಸಲ್ಲಿಸುವ ಅಭ್ಯರ್ಥಿಗೂ ವಾಸ ಇರುವ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಜನ ಮಿತ್ರನಾಗಲು ಸಾಧ್ಯ
* ಕಡ್ಡಾಯವಾಗಿ ಕನಿಷ್ಠ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರಲೇಬೇಕು
* ಇದು ಕೂಡ ಡಿಜಿಟಲ್ ರೂಪದ ಸೇವೆ ಆಗಿರುವುದರಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕಂಪ್ಯೂಟರ್ ಕೌಶಲ್ಯ ಇರಬೇಕು
* ಚಾಲನಾ ಪರವಾನಗಿ, ಸ್ವಂತ ದ್ವಿಚಕ್ರ ವಾಹನದ ಹೊಂದಿರಬೇಕು
* ಯಾವುದೇ ಬಗೆಯ ಅಪರಾಧ ಪ್ರಕರಣಗಳಿಂದ ಮುಕ್ತವಾಗಿರಬೇಕು.
ಆಯ್ಕೆ ಪ್ರಕ್ರಿಯೆ:-
* ಪ್ರತಿ ನಾಗರಿಕ ಸೇವಾ ಕೇಂದ್ರಗಳಿಗೆ 2 ರಿಂದ 4 ಜನಮಿತ್ರರನ್ನು ನೇಮಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಒಟ್ಟಾರೆ ರಾಜ್ಯಾದ್ಯಂತ ಅಂದಾಜು 25,000 ಜನಮಿತ್ರರನ್ನು ಈ ಸೇವೆಗೆ ನೇಮಕ ಮಾಡಲು ನಿರ್ಧರಿಸಲಾಗಿದೆ
* ಆನ್ಲೈನ್ ನಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುವುದು ಹಾಗೂ ಆನ್ಲೈನ್ನಲ್ಲಿಯೇ ಪರಿಶೀಲನೆ ಮಾಡಿ ಆಯ್ಕೆ ಮಾಡಿಕೊಂಡು ಆಯ್ಕೆ ಆದವರಿಗೆ ಆನ್ಲೈನ್ ಮೂಲಕವೇ ತರಬೇತಿ ಕೂಡ ನೀಡಲಾಗುತ್ತದೆ.
ಜನ ಮಿತ್ರರ ಕಾರ್ಯ ವೈಖರಿ:-
* ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತ ನಂತರ ಕಂದಾಯ ವಿಭಾಗಗಳ ತಲಾ ಒಂದು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿ ಮಾಡಿ ನಂತರ ರಾಜ್ಯದಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ
* ಯೋಜನೆ ಜಾರಿಯಾದ ಮೇಲೆ ಸರ್ಕಾರದಿಂದ ಪ್ರತಿ ಗ್ರಾಮ ಪಂಚಾಯಿತಿಗೆ ಪ್ರತ್ಯೇಕವಾದ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗುತ್ತದೆ.
ಈ ಸುದ್ದಿ ಓದಿ:- ಈ ಬೆಲೆ ಬೆಳೆದರೆ ಎಕರೆಗೆ 30 ಲಕ್ಷ ಆದಾಯ ಗ್ಯಾರಂಟಿ.!
* ಜನಮಿತ್ರರ ಸೇವೆ ಬೇಕು ಎಂಬುವವರು ಆ ಸಹಾಯವಾಣಿ ಸಂಖ್ಯೆಗಳಿಗೆ ಮಿಸ್ ಕಾಲ್ ( Miss call ) ನೀಡಬೇಕು. ಅವರ ಹೆಸರು ಎಂಟ್ರಿ ಮಾಡಿ ಪಿನ್ಕೋಡ್ ( Pincode ) ಪಡೆದುಕೊಳ್ಳಬೇಕು. ನೋಂದಣಿ ಸಂಖ್ಯೆಯನ್ನು SMS ಮೂಲಕ ಕೂಡ ಕಳುಹಿಸಲಾಗುತ್ತದೆ. ನಂತರ ಜನಮಿತ್ರ ಆಪ್ ( Janamithra App ) ಮೂಲಕ ಜನಮಿತ್ರನಿಗೆ ಮಾಹಿತಿ ಕಳುಹಿಸಲಾಗುತ್ತದೆ.
* ಒಂದು ಗಂಟೆಯೊಳಗೆ ಸಂಬಂಧಿಸಿದ ನಾಗರಿಕರನ್ನು ಜನಮಿತ್ರ ಭೇಟಿ ಮಾಡುತ್ತಾರೆ. ಆನ್ಲೈನಲ್ಲಿ ಯಾವುದೇ ಸೇವೆಗಾದರೂ ಅರ್ಜಿ ಸಲ್ಲಿಸಿ ಕೊಡುತ್ತಾರೆ ಮತ್ತು ಅದರ ಬಗ್ಗೆ ಪೂರ್ತಿ ಮಾಹಿತಿಯನ್ನು ನೀಡುತ್ತಾರೆ.
* ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯ ತನಕ ಆ ದಿನದ ನೋಂದಣಿಗೆ ಅವಕಾಶ ನೀಡಲಾಗುತ್ತದೆ. ರಾತ್ರಿ 8 ಗಂಟೆಯ ನಂತರದ ಅವಧಿಯನ್ನು ಮಾರನೇ ದಿನಕ್ಕೆ ಲೆಕ್ಕ ಹಾಕಲಾಗುತ್ತದೆ.
ಈ ಸುದ್ದಿ ಓದಿ:- ಗೃಹ ಜ್ಯೋತಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಬಿಗ್ ಅಪ್ಡೇಟ್.!
* ಅರ್ಜಿ ಸಲ್ಲಿಕೆ ಮತ್ತು ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಲು ಅರ್ಜಿ ಶುಲ್ಕದ ಜೊತೆಗೆ 50 ರೂ. ಮತ್ತು ಪ್ರಮಾಣ ಪತ್ರ ವಿತರಣೆಗೆ ಶುಲ್ಕವಾಗಿ 25 ರೂ. ನಿಗದಿ ಮಾಡಲಾಗುವುದು. ಶುಲ್ಕ ಸರ್ಕಾರಕ್ಕೆ ಬಂದರೆ ಉಳಿದ ಮೊತ್ತ ಜನಮಿತ್ರರಿಗೆ ಸಿಗಲಿದೆ.