ಸಾಲ ಎನ್ನುವುದು ಶೂಲ ಎಂದು ಹಿರಿಯರು ಹೇಳುವ ಮಾತು ಅಕ್ಷರಶಃ ಸತ್ಯ ಆಗಿದೆ ಒಮ್ಮೆ ನಮ್ಮ ತಪ್ಪಿನಿಂದಲೂ ಅಥವಾ ಮತ್ಯಾವುದೋ ಋಣದಿಂದಲೋ ಈ ರೀತಿ ಸಾಲದ ಕೂಪಕ್ಕೆ ಸಿಲುಕಿಕೊಂಡು ಬಿಟ್ಟರೆ ಅದರಿಂದ ಹೊರಬರುವುದು ಬಹಳ ಕಷ್ಟ. ಸಾಲದಲ್ಲಿ ಇರುವ ವ್ಯಕ್ತಿ ತನ್ನ ಆದಾಯ ಗಳಿಂದ ಗಳಿಸಿದನೆಲ್ಲ ಮಾಡಿರುವ ಸಾಲದ ಬಡ್ಡಿ ತೀರಿಸಲು ಕಟ್ಟುತ್ತಿರುತ್ತಾನೆ, ಹೊರತು ಅತಿಯಾದ ಸಾಲದ ಹೊರೆ ಕಡಿಮೆ ಮಾಡಿಕೊಳ್ಳವುದು ಬಹಳ ಕಷ್ಟ. ನೀವು ಸಹ ಇದೇ ರೀತಿ ಎಷ್ಟೇ ಕಷ್ಟಪಟ್ಟು ಸಾಲ ತೀರಿಸುವ ಪ್ರಯತ್ನ ಮಾಡುತ್ತಿದ್ದರೂ ಕೂಡ ಈ ಋಣದಿಂದ ಮುಕ್ತಿ ಸಿಗಲಿಲ್ಲ ಎಂದರೆ ಒಂದು ಸಣ್ಣ ತಂತ್ರ ಇದೆ ಇದನ್ನು ಮಾಡಿದರೆ ಆದಷ್ಟು ಬೇಗ ನಿಮ್ಮ ಸಾಲದ ಹೊರೆ ಇಳಿಯುತ್ತದೆ.
ಅದೇನೆಂದರೆ ಇದು ಬಹಳ ಸುಲಭವಾಗಿ ಮನೆಯ ದೇವರ ಕೋಣೆಯಲ್ಲಿ ಮಾಡುವ ತಂತ್ರ ಆಗಿದೆ. ಈ ಕಾಲದಲ್ಲಿ ಯಂತ್ರಗಳು ಮಂತ್ರಗಳು ಎಷ್ಟು ಫಲ ಕೊಡುತ್ತವೆ ಹಾಗೆ ತಂತ್ರಗಳು ಕೂಡ ಫಲ ಕೊಡುತ್ತದೆ. ತಂತ್ರ ಜೊತೆ ಕೆಲವೊಂದು ಮಂತ್ರ ಹೇಳುವುದರಿಂದ ನೀವು ಕಠಿಣ ಸಮಸ್ಯೆಗಳಿಂದ ಕೂಡ ಸುಲಭವಾಗಿ ಆಚೆ ಬರಬಹುದು. ಈ ಸಾಲದ ತಂತ್ರದಿಂದ ಹೊರಬರಲು ಮಾಡುವ ಈ ಪೂಜೆಯ ತಂತ್ರ ಶಿವನನ್ನು ಕುರಿತು ಮಾಡುವುದಾಗಿದೆ.
ಆದ್ದರಿಂದ ಈ ಪೂಜೆಯನ್ನು ಮಾಡಲು ಶಿವಲಿಂಗ ಬೇಕೇ ಬೇಕು ಒಂದು ಶಿವಲಿಂಗವನ್ನು ತಂದು ನಿಮ್ಮ ದೇವರ ಇಟ್ಟುಕೊಳ್ಳಬೇಕು ಅಥವಾ ನೀವೇ ವಿಭೂತಿಯ ಸಹಾಯದಿಂದ ಶಿವಲಿಂಗ ಮಾಡಿಕೊಂಡು ಬೇಕಾದರೂ ಪೂಜೆ ಮಾಡಬಹುದು. ಅಮಾವಾಸ್ಯೆ ಆದ ಬಳಿಕ ಬರುವ ಸೋಮವಾರದಂದು ಈ ಪೂಜೆಯನ್ನು ಆರಂಭಿಸಬೇಕು. ಈ ಪೂಜೆ ಮಾಡಲು ಮುಖ್ಯವಾಗಿ ಉಮ್ಮತ್ತಿ ಗಿಡದ ಎಲೆಗಳು ಬೇಕು. ಯಾಕೆಂದರೆ ಶಿವನಿಗೆ ಇಷ್ಟ ಇರುವ ಪುಷ್ಪಗಳಲ್ಲಿ ಬಿಲ್ವಪತ್ರೆ ಜೊತೆ ಉಮ್ಮತಿ ಎಲೆ ಕೂಡ ಒಂದು.
ಹರಿ ಅಲಂಕಾರ ಪ್ರಿಯನಾದರೆ ಹರ ಅಭಿಷೇಕ ಪ್ರಿಯ. ಹಾಗಾಗಿ ಮಹಾದೇವನಿಗೆ ಅಭಿಷೇಕಗಳನ್ನು ಮಾಡಿದಷ್ಟು ಪ್ರಸನ್ನನಾಗುತ್ತಾನೆ. ಜೊತೆಗೆ ಬೇಡಿದ ವರವನ್ನು ಆಗಲೇ ಕೊಡುವ ಸಾಂಬಸದ ಶಿವ ಇವನು. ಆದ್ದರಿಂದ ಶಿವನನ್ನು ಕುರಿತು ಪೂಜೆ ಮಾಡಬೇಕು. ಶಿವಲಿಂಗಕ್ಕೆ ಮೊದಲಿಗೆ ನೀರಿನಲ್ಲಿ ಅಭಿಷೇಕ ಮಾಡಿ ನಂತರ ಹಾಲಿನ ಅಭಿಷೇಕ ಮಾಡಿ, ಮತ್ತೆ ನೀರಿನ ಅಭಿಷೇಕ ಮಾಡಿ ಆಮೇಲೆ ಗಂಧ ಚಂದನ ಅಕ್ಷತೆಯಿಂದ ಅಲಂಕರಿಸಿ, ಧೂಪ ದೀಪದಿಂದ ಆರತಿ ಮಾಡಿ ಒಂದೊಂದೇ ಉಮ್ಮತ್ತಿ ಗಿಡದ ಎಲೆಗಳನ್ನು ಶಿವಲಿಂಗದ ಮೇಲೆ ಹಾಕುತ್ತಾ ಓಂ ಋಣಮುಕ್ತೇಶ್ವರಾಯ ಮಹದೇವಾಯ ನಮಃ ಎಂದು ಹೇಳಬೇಕು.
108 ಉಮ್ಮತಿ ಎಲೆಗಳನ್ನು 108 ಬಾರಿ ಈ ಮಂತ್ರವನ್ನು ಜಪಿಸುತ್ತಾ ಹಾಕಿ ಕೊನೆಗೆ ದೇವರಿಗೆ ಭಕ್ತಿಯಿಂದ ನೀವು ಮಾಡಿರುವ ನೈವೇದ್ಯವನ್ನು ಅರ್ಪಿಸಿ. ಸ್ವಲ್ಪ ಹೊತ್ತು ಮನಸ್ಸಿನಿಂದ ದೇವರ ಬಳಿ ನನ್ನನ್ನು ಈ ಕಷ್ಟದಿಂದ ಪಾರು ಮಾಡಿ, ಆದಷ್ಟು ಬೇಗ ನನ್ನ ಸಾಲ ತೀರುವಂತೆ ಮಾಡಿ ಎಂದು ಶಿವನನ್ನು ಪ್ರಾರ್ಥಿಸಿ. ಈ ರೀತಿ ಹದಿನಾರು ಸೋಮವಾರಗಳು ತಪ್ಪದೇ ಈ ಒಂದು ವ್ರತವನ್ನು ಅಥವಾ ಪೂಜೆಯನ್ನು ಮಾಡುತ್ತಾ ಬಂದಿದ್ದೆ ಆದಲ್ಲಿ ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಸಾಲದ ಹೊರೆ ಇಳಿಯುತ್ತಾ ಹೋಗುತ್ತದೆ. ಈ ಉಪಯುಕ್ತಕರ ಮಾಹಿತಿಯನ್ನು ಸಾಲದ ಸಮಸ್ಯೆಯಿಂದ ಬಳಲುತ್ತಿರುವ ಆ ನಿಮ್ಮ ಸ್ನೇಹಿತರು ಹಾಗು ಪರಿಚಯರಸ್ಥರೊಂದಿಗೆ ಹಂಚಿಕೊಳ್ಳುವ ಮೂಲಕ ಅವರಿಗೆ ಸಹಾಯ ಮಾಡಿ.