ತಕ್ಷಣವೇ ಬೇಧಿ ನಿಲ್ಲಬೇಕಾದರೆ ಈ ಮನೆಮದ್ದು ಸೇವಿಸಿ ಸಾಕು.

ಮನುಷ್ಯನಿಗೆ ಆರೋಗ್ಯ ಎನ್ನುವುದು ಒಂದು ಅದ್ಭುತವಾದ ವರ. ಆರೋಗ್ಯದಲ್ಲಿ ಯಾವುದೇ ಸಣ್ಣಪುಟ್ಟ ಸಮಸ್ಯೆಯಿಂದ ಹಿಡಿದು ದೊಡ್ಡ ಕಾಯಿಲೆ ವರೆಗೂ ಯಾವುದೇ ಬಂದರೂ ಸಹ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳು ಮನುಷ್ಯನ ಆರೋಗ್ಯದ ಜೊತೆ ನೆಮ್ಮದಿಯನ್ನು ಕೂಡ ಹಾಳು ಮಾಡಿಬಿಡುತ್ತದೆ. ಹಾಗಾಗಿ ಆರೋಗ್ಯದ ಪ್ರತಿ ಸಣ್ಣ ಸಣ್ಣ ಸೂಕ್ಷ್ಮ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅದರ ಬಗ್ಗೆ ಹೆಚ್ಚು ಕಾಳಂಜಿಯಿಂದ ಇರಬೇಕಾದದ್ದು ಪ್ರತಿಯೊಬ್ಬ ಆರೋಗ್ಯ ಬಯಸುವ ಮನುಷ್ಯನ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಅದರಲ್ಲೂ ಮಕ್ಕಳ ವಿಷಯವಾಗಿ ಎಷ್ಟೇ ಕಾಳಜಿ ತೋರಿದರು ಸಾಲದು ನಮ್ಮ ಕಣ್ತಪ್ಪಿಸಿ ಒಂದೆರಡು ಎಡವಟ್ಟು ಆದರೂ ಕೂಡ ಅದರಿಂದ ಮಕ್ಕಳ ಜೊತೆ ಮನೆಮಂದಿಯೆಲ್ಲಾ ಬಹಳ ಸಂಕಟ ಪಡಬೇಕಾಗುತ್ತದೆ. ಎಲ್ಲಾ ಸಮಸ್ಯೆಗಳಿಗೂ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಏನು ಬರುವುದಿಲ್ಲ.

WhatsApp Group Join Now
Telegram Group Join Now

ಮಹಿಳೆಯರು ಹೇಳಿಕೊಟ್ಟಿರುವ ಕೆಲವೊಂದು ಮನೆ ಮದ್ದುಗಳನ್ನು ಉಪಯೋಗಿಸುವ ಮೂಲಕ ಇವುಗಳನ್ನು ಸರಿ ಮಾಡಿಕೊಳ್ಳಬಹುದು. ಗ್ಯಾಸ್ಟ್ರಿಕ್ ಅಥವಾ ಕಣ್ಣಿನ ದೃಷ್ಟಿ ಇಂಥದ ಸಮಸ್ಯೆಗಳಿಂದ ಕೆಲವೊಮ್ಮೆ ಮಕ್ಕಳಿಗೆ ಹಾಗೂ ಎಲ್ಲರಿಗೂ ಭೇದಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಆಸ್ಪತ್ರೆಗೂ ಸಹ ಹೋಗಲು ನಮಗೆ ಶಕ್ತಿ ಇರುವುದಿಲ್ಲ ಮತ್ತು ಕೆಲವೊಮ್ಮೆ ರಾತ್ರಿಯ ಸಮಯದಲ್ಲಿ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಆಸ್ಪತ್ರೆಗೆ ಹೋಗಲು ಸಮಯ ಆಗದೇ ಇರಬಹುದು ಇಂತಹ ಪರಿಸ್ಥಿತಿಯಲ್ಲಿ ಇದನ್ನು ಹಾಗೆ ಬಿಟ್ಟರೆ ನಿರ್ಜಲ ಪರಿಸ್ಥಿತಿಯನ್ನು ತಲುಪಿ ಮತ್ತಷ್ಟು ಗಂಭೀರ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಆದಷ್ಟು ಹಿರಿಯರು ನಮಗೆ ತಿಳಿಸಿರುವ ಆಯುರ್ವೇದಿಕ್ ಪದ್ದತಿಯಿಂದ ಮನೆ ಮದ್ದುಗಳನ್ನು ಮಾಡಿಕೊಂಡು ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಔಷಧಿ ಮಾಡಿಕೊಳ್ಳಬೇಕು. ಇದಕ್ಕೆ ಸಂಬಂಧಪಟ್ಟ ಹಾಗೆ ಇಲ್ಲಿ ಎರಡು ಔಷಧಿಗಳನ್ನು ತಿಳಿಸಿಕೊಡಲಾಗಿದೆ ಇವುಗಳನ್ನು ಪ್ರಯೋಗ ಮಾಡಿ ನೋಡಿ.

ವಿಪರೀತವಾಗಿ ಭೇದಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಅಂತಹವರು ಒಂದು ಲೋಟ ಹಾಲನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕೆನೆ ಕಟ್ಟುವ ಹಾಗೆ ಕಾಯಿಸಿ, ಈ ಹಾಲನ್ನು ಕಾಯಿಸುವಾಗ ಅದಕ್ಕೆ ಯಾವುದೇ ಬೆಲ್ಲ ಅಥವಾ ಸಕ್ಕರೆಯನ್ನು ಅಥವಾ ಇನ್ಯಾವುದೇ ಟೆಸ್ಟಿಂಗ್ ಪೌಡರ್ ಅನ್ನು ಸೇರಿಸಬಾರದು. ಹಾಲನ್ನು ಮಾತ್ರ ಚೆನ್ನಾಗಿ ಕಾಯಿಸಿ ಒಂದು ಲೋಟಕ್ಕೆ ಹಾಕಿಕೊಳ್ಳಿ ಇದು ಸ್ವಲ್ಪ ತಣ್ಣಗಾದ ಬಳಿಕ ಬೆಚ್ಚಗಿರುವಾಗ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದರಲ್ಲಿ ಅರ್ಧ ಹೋಳು ಮಾತ್ರ ಹಾಲಿಗೆ ಹಿಂಡಬೇಕು ಮತ್ತು ಅದನ್ನು ತಕ್ಷಣವೇ ಕುಡಿಯಬೇಕು. ಈ ರೀತಿ ಮಾಡುವುದರಿಂದ ಭೇಧಿ ತಕ್ಷಣ ನಿಲ್ಲುತ್ತದೆ ಹಾಗೂ ದೇಹವು ನಿರ್ಜಲ ಆಗುವುದು ತಪ್ಪುತ್ತದೆ ಈ ಅದ್ಭುತವಾದ ಮನೆ ಮದ್ದನ್ನು ಒಮ್ಮೆ ಪ್ರಯೋಗ ಮಾಡಿ ನೋಡಿ ನಂತರ ಇದರ ಫಲಿತಾಂಶ ನಿಮಗೆ ತಿಳಿಯುತ್ತದೆ. ಆ ಬಳಿಕ ನೀವೇ ನಿಮ್ಮ ಅಕ್ಕಪಕ್ಕ ಇರುವ ಅನೇಕರಿಗೆ ಈ ಮನೆ ಬತ್ತಿನ ಬಗ್ಗೆ ತಿಳಿಸಿ ಕೊಡುತ್ತೀರಾ ಅಷ್ಟು ಚೆನ್ನಾಗಿ ಇದು ವರ್ಕ್ ಮಾಡುತ್ತದೆ.

ಅಕಸ್ಮಾತ್ ನಿಮ್ಮ ಮನೆಯಲ್ಲಿ ಹಾಲು ಇಲ್ಲದಿದ್ದರೆ, ಹಾಲು ಸಿಗದ ಸಮಯದಲ್ಲಿ ತಕ್ಷಣ ಪರಿಹಾರ ಬೇಕಿದ್ದರೆ ಇನ್ನೊಂದು ಅದ್ಭುತವಾದ ಮನೆ ಮದ್ದು ಇದೆ. ಒಂದು ಲೋಟ ನೀರನ್ನು ಕುಡಿಯಲು ಇಡಿ ನಂತರ ಅದಕ್ಕೆ ಅರ್ಧ ಚಮಚ ಟೀ ಪುಡಿ ಹಾಕಿ ಮತ್ತು ಅರ್ಧ ಚಮಚ ಸಕ್ಕರೆ ಹಾಕಿ. ಎಲ್ಲವನ್ನು ಚೆನ್ನಾಗಿ ಬೇಯಿಸಿ ನಂತರ ಒಂದು ಲೋಟಕ್ಕೆ ಶೋಧಿಸಿ ಕೊಳ್ಳಿ. ಇದು ಕೂಡ ಸ್ವಲ್ಪ ಹಾರಿದ ಬಳಿಕ ಅರ್ಧ ನಿಂಬೆಹಣ್ಣಿನ ರಸವನ್ನು ಇದಕ್ಕೆ ಹಿಂಡಿ ಚಹಾವನ್ನು ತಕ್ಷಣ ಸೇವಿಸಿ ಇದನ್ನು ಕುಡಿದ ಸ್ವಲ್ಪ ಹೊತ್ತಿಗೆ ನಿಮ್ಮ ಭೇದಿಯ ಸಮಸ್ಯೆ ಸಂಪೂರ್ಣವಾಗಿ ನಿಲ್ಲುತ್ತದೆ. ಈ ಮನೆ ಮದ್ದನ್ನು ಕೂಡ ನೀವು ಪ್ರಯೋಗಿಸಿ ನೋಡಬಹುದು. ಈ ಎರಡು ಮನೆಮದ್ದುಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತವೆ ಇದರ ಫಲಿತಾಂಶ ನಿಮಗೆ ತೃಪ್ತಿಕರವಾಗಿ ಇದ್ದರೆ ನಿಮ್ಮ ಮನೆ ಮಂದಿಗೆ ಅಥವಾ ಸ್ನೇಹಿತರಿಗೆ ಮತ್ತು ಸಹೋದ್ಯೋಗಿಗಳಿಗೂ ಕೂಡ ಈ ಮನೆಮದ್ದಿನ ಬಗ್ಗೆ ತಿಳಿಸಿಕೊಡಿ.

ಅಕಸ್ಮಾತ್ ಸಮಸ್ಯೆ ತುಂಬಾ ಗಂಭೀರವಾಗಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಆ ಸಮಯದಲ್ಲಿ ಬೇಕಾದರೆ ಸೂಕ್ತ ವೈದ್ಯರ ಬಳಿ ಹೋಗುವುದು ಒಳ್ಳೆಯದು. ಬಹುತೇಕ ಸಮಯದಲ್ಲಿ ಈ ಮನೆಮದ್ದು ಸಾಕು ಅದೇ ಅದ್ಭುತವಾಗಿ ಕೆಲಸ ಮಾಡುತ್ತದೆ. ಎಲ್ಲ ಸಮಸ್ಯೆಗಳಿಗೂ ಆಸ್ಪತ್ರೆಯ ಮೊರೆಹೋಗುವ ಬದಲು ನಿಮ್ಮ ಮನೆಯಲ್ಲಿ ಇರುವ ಅದ್ಭುತವಾದ ವಸ್ತುಗಳನ್ನು ಬಳಸಿಕೊಂಡು ಔಷಧಿಯನ್ನು ಮಾಡಿಕೊಂಡು ಸೇವಿಸಿ ಇದರೊಂದಿಗೆ ಹಣ ಮತ್ತು ಸಮಯದ ಉಳಿತಾಯದ ಜೊತೆ ಆರೋಗ್ಯಕ್ಕೆ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ.

ಹಿಂದೆ ಹಳ್ಳಿಗಳಲ್ಲಿ ಆಸ್ಪತ್ರೆಗಳು ಇರುತ್ತೀರಲಿಲ್ಲ ಹಾಗೆಲ್ಲ ನಮ್ಮ ಹಿರಿಯರು ಇದೇ ರೀತಿ ಔಷಧಿಗಳನ್ನು ಮಾಡುವ ಮೂಲಕ ಎಂತಹ ಸಮಸ್ಯೆಗಳು ಇದ್ದರೂ ಕೂಡ ಪರಿಹಾರ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ ಎಲ್ಲರೂ ಇಂಗ್ಲಿಷ್ ಮೆಡಿಸನ್ ಗೆ ಮಾತ್ರ ಬೆಲೆ ಕೊಡುತ್ತಾರೆ. ನಮ್ಮ ಭಾರತದ ಆಯುರ್ವೇದಿಕ್ ಪದ್ಧತಿ ಯಾವುದೇ ಇಂಗ್ಲಿಷ್ ಮೆಡಿಸಿನ್ ಗಿಂತ ಕಡಿಮೆ ಇಲ್ಲ ಮತ್ತು ಈ ಇಂಗ್ಲಿಷ್ ಮೆಡಿಸನ್ ಗಳಲ್ಲಿ ಅಡ್ಡ ಪರಿಣಾಮ ಆಗುವ ಸಾಧ್ಯತೆಗಳು ಇರುತ್ತವೆ ಆದರೆ ಆಯುರ್ವೇದಿಕ್ ಅಲ್ಲಿ ಬಳಸುವ ಪ್ರತಿ ಪದಾರ್ಥವು ಕೂಡ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿರುತ್ತವೆ ಹೊರತು ಮಾರಕವಾಗಿರುವುದಿಲ್ಲ. ಆದ್ದರಿಂದ ಮತ್ತೆ ಎಲ್ಲರೂ ಕೂಡ ನಮ್ಮ ಆಯುರ್ವೇದ ಪದ್ಧತಿಯನ್ನು ಮತ್ತೆ ಪಾಲಿಸುವ ರೂಢಿ ಮಾಡಿಕೊಳ್ಳೋಣ. ನಮ್ಮ ಆರೋಗ್ಯವನ್ನು ಉಳಿಸಿಕೊಳ್ಳುವುದರ ಜೊತೆಗೆ ಹಣ ಮತ್ತು ಸಮಯವನ್ನು ಉಳಿತಾಯ ಮಾಡೋಣ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now