ಮಾನ್ಸೂನ್ ರಾಗ ಚಿತ್ರಕ್ಕೆ ರಚಿತರಾಮ್ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.

ರಚಿತಾ ರಾಮ್ ಅವರು ಸ್ಯಾಂಡಲ್ವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಸಾಕಷ್ಟು ರಚಿತಾ ರಾಮ್ ಅವರ ಅಭಿಮಾನಿಗಳು ಅವರ ಸೀಮಗಾಗಿ ಕಾಯುತ್ತಾ ಕುಳಿತಿರುತ್ತಾರೆ. ಇದೀಗ ಡಾಲಿ ಧನಂಜಯ್ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಯಶ ಶಿವಕುಮಾರ್ ನಟನೆಯ ಮಾನ್ಸೂನ್ ರಾಗ ಸಿನಿಮಾ ಇದೆ ಆಗಸ್ಟ್ 19ರಂದು ತೆರೆಯ ಮೇಲೆ ಬರಲಿದೆ. ಈ ಸಿನಿಮಾದ ಒಂದು ಸಣ್ಣ ಟ್ರೈಲರ್ ಕೂಡ ಈ ಚಿತ್ರತಂಡ ಬಿಡುಗಡೆ ಮಾಡಲಾಗಿದೆ ಈ ಒಂದು ಮಾನ್ಸೂನ್ ರಾಗ ಸಿನಿಮಾದ ಟ್ರೈಲರ್ ಮತ್ತು ಹಾಡುಗಳಿಂದಲೇ ಸಿನಿಮಾ ಜನರ ಮನಸ್ಸನ್ನು ಗೆದ್ದಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಬಗ್ಗೆ ಸಾಕಷ್ಟು ರೀತಿಯಾದಂತಹ ಚರ್ಚೆಗಳು ನಡೆಯುತ್ತಲೇ ಇದೆ.

ಈ ಒಂದು ಮಾನ್ಸೂನ್ ರಾಗ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ವಿಭಿನ್ನ ಕಥೆಯನ್ನು ತೆರೆಯ ಮೇಲೆ ಹೇಳಲು ಹೊರಟಿದ್ದಾರೆ. ಈ ರೀತಿಯಾದ ಒಂದು ಹೊಸ ಪಾತ್ರವನ್ನು ಇದೆ ಮೊದಲ ಬಾರಿಗೆ ರಚಿತಾ ರಾಮ್ ಅವರು ನಟಿಸುತ್ತಿರುವುದು. ಈ ಸಿನಿಮಾದ ಒಂದು ಟ್ರೈಲರ್ ನೋಡಿದರೆ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಳ್ಳೋ ರಚಿತಾ ರಾಮ್ ಮೇಲೆ ಡಾಲಿಗೆ ಲವ್ ಆಗೋ ಸೂಚನೆ ನಮಗೆ ತಿಳಿಯುತ್ತದೆ. ಈ ಒಂದು ಟ್ರೈಲರ್ ನಿಮಗೆ ಅದ್ಭುತವಾದಂತಹ ಸ್ಟೋರಿ ಯನ್ನು ಒಳಗೊಂಡಿದೆ ಎನ್ನುವುದನ್ನು ತೋರಿಸುತ್ತದೆ. ಮಾನ್ಸೂನ್ ರಾಗ ಸಿನಿಮವು 80% ನಷ್ಟು ಮಳೆಯಲ್ಲಿ ಶೂಟಿಂಗ್ ಆಗಿರುವಂತಹ ಸಿನಿಮಾ ಎಂದು ಸಾಕಷ್ಟು ಬಾರಿ ಚಿತ್ರತಂಡ ಇದನ್ನು ಹೇಳಿಕೊಂಡಿದೆ

ಈ ಒಂದು ಮಾನ್ಸೂನ್ ರಾಗ ಸಿನಿಮಾ 70 ರಿಂದ 80 ದಶಕದಲ್ಲಿ ನಡೆಯುವಂತಹ ಕಥೆಯನ್ನು ಹೊಂದಿದೆ. ಈ ಸಿನಿಮಾವನ್ನು ವೀರೇಂದ್ರನಾಥ್ ನಿರ್ದೇಶನ ಮಾಡುತ್ತಿದ್ದು, ಎ ಆರ್ ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ, ಸಂಭಾಷಣೆಯನ್ನು ಗುರು ಕಶ್ಯಪ್ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಈ ರೀತಿಯಾದಂತಹ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಒಂದು ಪಾತ್ರ ಎಲ್ಲರಿಗೂ ಕಿಕ್ ಕೊಡುವಂತಹ ಪಾತ್ರವಾಗಿದೆ. ಇದೊಂದು ಭಾವನಾತ್ಮಕವಾಗಿ ಇರುವಂತಹ ಮ್ಯೂಸಿಕಲ್ ಸಿನಿಮಾ ಎಂದು ಎಲ್ಲೆಡೆ ಪ್ರಚಾರವಾಗಿದೆ. ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಅವರು ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಈ ಒಂದು ಸಿನಿಮಾದ ಟ್ರೈಲರ್ ರಿಲೀಸ್ ಆದ ನಂತರ ಮಾಧ್ಯಮಗಳುಂದಿಗೆ ಮಾತನಾಡಿದ ರಚಿತಾ ರಾಮ್ ಅವರು ಡಾಲಿ ಧನಂಜಯ್ ಅವರು ನಿಜಕ್ಕೂ ನಟ ರಾಕ್ಷಸ ಎಂದು ಹೇಳಿದ್ದಾರೆ. ಅವರ ಜೊತೆ ನಟಿಸುವುದು ನನಗೆ ತುಂಬಾ ಚಾಲೆಂಜ್ ಆಗಿತ್ತು ಎಂದು ಹೇಳಿಕೊಂಡು ಈ ಒಂದು ಚಿತ್ರದ ಸಂಭಾಷಣೆ ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟವಾಯಿತು ಎಂದು ಹೇಳಿದ್ದಾರೆ. ಈ ಒಂದು ಸಿನಿಮಾದಲ್ಲಿ ಪತ್ರ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಚಿತಾ ರಾಮ್ ಅವರ ಪಾತ್ರವನ್ನು ತುಂಬಾ ನೀಟಾಗಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಈ ಸಿನಿಮಾದ ಹಾಡುಗಳು ತುಂಬಾ ಅದ್ಭುತವಾಗಿದ್ದು ಕೇಳಿಗರಿಗೆ ಖುಷಿ ಆಗುವಂತೆ ಮಾಡುತ್ತವೆ ಇದರಲ್ಲಿ ಇರುವಂತಹ ಪ್ರತಿ ಪಾತ್ರವನ್ನು ಕೂಡ ತುಂಬಾ ಅದ್ಭುತವಾಗಿ ಚಿತ್ರತಂಡ ತೋರಿಸಿದೆ ಎಂದು ರಚಿತಾ ರಾಮ್ ಹೇಳಿದ್ದಾರೆ.

ಈ ಒಂದು ಸಿನಿಮಾವನ್ನು ಕುಟುಂಬ ಸಮೇತವಾಗಿ ನೋಡಬಹುದು ಇಲ್ಲಿ ಮುಜುಗರ ಆಗುವಂತಹ ದೃಶ್ಯ ಇಲ್ಲ, ರಾತ್ರಿ ಎಲ್ಲಾ ಮಳೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿದೆ. ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಚಿತ್ರರಂಗ ಗಳಲ್ಲಿಯೂ ಕೂಡ ನಟಿಸುತ್ತಿರುವ ರಚಿತಾ ರಾಮ್ ಅವರು ಬಹು ಬೇಡಿಕೆ ನಟಿ ಎಂದರೆ ತಪ್ಪಾಗಲಾರದು ರಚಿತಾ ರಾಮ್ ಅವರು 40 ರಿಂದ 50 ಲಕ್ಷ ರೂಪಾಯಿ ಸಂಬಾವನೆ ಪಡೆದುಕೊಳ್ಳುತ್ತಿದ್ದಾರೆ. ರಚಿತಾ ರಾಮ್ ಅವರಿಗೆ ಹೆಚ್ಚು ಡಿಮ್ಯಾಂಡ್ ಇರುವ ಕಾರಣದಿಂದಾಗಿ ಇವರ ಸಂಭಾವನೆಯನ್ನು ಈ ಒಂದು ಮಾನ್ಸೂನ್ ರಾಗ ಚಿತ್ರಕ್ಕೆ 80 ಲಕ್ಷ ರೂಗೆ ಏರಿಕೆ ಮಾಡಿಕೊಂಡಿದ್ದಾರೆ ಅಂದರೆ ಇವರು ಮೊದಲು ಪಡೆದುಕೊಳ್ಳುತ್ತಿದ್ದಂತಹ ಸಂಭಾವನಿಗಿಂತ ದುಪ್ಪಟ್ಟು ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ರಚಿತರಾಮ್ ಅವರ ಬೇಡಿಕೆಯು ಹೆಚ್ಚಾಗಿದ್ದು ಇದರಿಂದ ಅವರ ಸಂಭಾವನೆಯೂ ಸಹ ಹೆಚ್ಚಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಈಗ ಕನ್ನಡದಲ್ಲಿ ಇರುವಂತಹ ಟಾಪ್ ನಟಿಯರಲ್ಲಿ ರಚಿತರಾಮ್ ಕೂಡ ಒಬ್ಬರು.

Leave a Comment

%d bloggers like this: