ಮನೆ ಎನ್ನುವುದು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆ. ಎಲ್ಲರಿಗೂ ಕೂಡ ತಮ್ಮ ಸ್ವಂತ ಮನೆ ಇರಬೇಕು ಎನ್ನುವ ಆಸೆ ಇರುತ್ತದೆ. ಕೆಲವರಿಗೆ ಕನಸಿನ ಅರಮನೆಂತಹ ಮನೆಯನ್ನು ಕಟ್ಟಿಕೊಂಡು ನೆಮ್ಮದಿಯಾಗಿ ಅಲ್ಲಿ ಹಲವು ವರ್ಷಗಳ ಕಾಲ ಹಾಯಾಗಿ ಬದುಕು ಕಳೆಯಬೇಕು ಎನ್ನುವ ಆಸೆ ಇದ್ದರೆ ಕೆಲವರಿಗೆ ಸ್ವಂತದು ಎಂದು ಒಂದು ಸಣ್ಣ ಸೂರಾದರೆ ಸಾಕು. ಯಾವುದೇ ಬಾಡಿಗೆ ಅಥವಾ ತಕರಾರು ಇಲ್ಲದೆ ಅಲ್ಲಿ ಬದುಕುವಂತಾದರೆ ಸಾಕು ಎನ್ನುವ ಭಾವ ಇರುತ್ತದೆ.
ಆದರೆ ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ ಅದರಲ್ಲೂ ಕೂಡ ಈಗಿನ ಕಾಲದಲ್ಲಿ ಏರುತ್ತಿರುವ ಕಚ್ಚಾ ವಸ್ತುಗಳ ಬೆಲೆ ಕಾರಣ ಮನೆ ಕಟ್ಟುವುದು ಬಡವರು ಮತ್ತು ಸಾಮಾನ್ಯದವರಿಗೆ ಕೈಗೆಟುಕದ ಗಗನ ಕುಸುಮ ಎನಿಸುತ್ತದೆ. ಸರ್ಕಾರಗಳು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮುಂತಾದ ಯೋಜನೆಗಳನ್ನು ರೂಪಿಸಿ ಖಾಲಿ ಸೈಟ್ ಇದ್ದವರಿಗೆ ಮನೆ ಕಟ್ಟಿಕೊಳ್ಳುವ ಅಥವಾ ಈಗಾಗಲೇ ಮನೆ ಹೊಂದಿದವರಿಗೆ ಅದನ್ನು ದುರಸ್ತಿ ಮಾಡಿಕೊಳ್ಳುವ ಅನುಕೂಲತೆ ಮಾಡಿಕೊಡುತ್ತೇವೆ.
ಇದರ ಜೊತೆಗೆ ಬ್ಯಾಂಕುಗಳು ಕೂಡ ಲೋನ್ ಗಳನ್ನು ಕೊಡುವ ಕೆಲಸ ಮಾಡುತ್ತಿವೆ. ಸೈಟ್ ಖರೀದಿಗೆ ಮತ್ತು ಮನೆ ನಿರ್ಮಾಣಕ್ಕೆ 70% ರಿಂದ 85% ಬ್ಯಾಂಕುಗಳಲ್ಲಿ ಲೋನ್ ಸಿಗುತ್ತವೆ. ಒಬ್ಬ ಉದ್ಯೋಗಿ ಆರಾಮಾಗಿ ಇಂದು, ತನ್ನ ಆದಾಯ ಮೂಲವನ್ನು ತೋರಿಸಿ ಬ್ಯಾಂಕ್ ಗಳಿಂದ ಸಾಲ ಪಡೆದು ಸ್ವಂತ ಮನೆ ಕನಸನ್ನು ನನಸಾಗಿಸಿಕೊಳ್ಳಬಹುದು. ಆದರೆ ಇದು ಕೂಡ ಸಾಧ್ಯವಾಗದ ತೀರ ಬಡವರು ಕಡುಬಡವರು ನಮ್ಮ ದೇಶದಲ್ಲಿದ್ದಾರೆ.
ಸ್ಲಂಗಳಲ್ಲಿ ವಾಸ ಮಾಡುವವರು ಇದ್ದಾರೆ. ನಮ್ಮ ದೇಶದಲ್ಲಿ ಕೊಳಚೆ ಪ್ರದೇಶಗಳ ನಿರ್ಮೂಲನೆ ಎಲ್ಲರ ಕನಸು ಇದಕ್ಕಾಗಿ ಸರಕಾರ ಮಾತ್ರವಲ್ಲದೇ ಸರ್ಕಾರೇತರವಾದ ಕೆಲವು ಟ್ರಸ್ಟ್ ಗಳು ಕೂಡ ತಮ್ಮಿಂದಾದ ಸಹಾಯ ಮಾಡುವ ಮೂಲಕ ಕೈಜೋಡಿಸುತ್ತಿವೆ. ಅವರು ಕಡು ಬಡವರಿಗೆ ಮತ್ತು ಈ ರೀತಿ ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರಿಗೆ ಚಿಕ್ಕದಾದ ಚೊಕ್ಕದಾದ ಮನೆ ಕಟ್ಟಿಸಿ ಕೊಡುವ ಕೆಲಸವನ್ನು ಮಾಡುತ್ತಿವೆ.
ಎಲ್ಲ ಮೂಲಭೂತ ಸೌಲಭ್ಯಗಳನ್ನು ಕೂಡ ಹೊಂದಿರುವ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎಂದರೆ ಕನಿಷ್ಠ 5 ರಿಂದ 6 ಲಕ್ಷದ ಮೇಲಾದರೂ ಹಣ ಬೇಕು ಎನ್ನುವುದು ಎಲ್ಲರ ಮಾತು. ಆದರೆ ಎರಡರಿಂದ ಮೂರು ಲಕ್ಷದ ಒಳಗೆ ಸಂಪೂರ್ಣವಾಗಿ ಅಚ್ಚುಕಟ್ಟಾಗಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದು. ಇದು ಆಶ್ಚರ್ಯ ಆದರೂ ಕೂಡ ಸತ್ಯ ಆದರೆ ನಿಮ್ಮಲ್ಲಿ ಸ್ವಂತ ಜಾಗ ಇರಬೇಕು ಅಷ್ಟೇ.
ನಿಮಗೆ ನಿಮ್ಮದೇ ಆದ ಸ್ವಂತ ಜಾಗ ಇದ್ದರೆ ಕಡಿಮೆ ಜಾಗದಲ್ಲಿ ಎಲ್ಲಾ ಸೌಲಭ್ಯ ಕೂಡ ಇರುವ ಮನೆಗಳನ್ನು ಇಷ್ಟು ಕಡಿಮೆ ಬಜೆಟ್ಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ ಇದೆ. ಇದಕ್ಕೀಗ ಮಂಗಳೂರಿನ ಕಡೆ ಚಾರಿಟೇಬಲ್ ಟ್ರಸ್ಟ್ ಒ ಕಡುಬಡವರಿಗೆ ಮನೆ ನೀಡುವ ಕೆಲಸ ಮಾಡುತ್ತಿದೆ. ಅಲ್ಲಿ ಮನೆಗಳನ್ನು ನಿರ್ಮಾಣ ಮಾಡಿರುವವರು 3 ವರ್ಷಗಳ ಒಳಗೆ ಮನೆ ನಿರ್ಮಾಣದ ಸಂಪೂರ್ಣ ಕೆಲಸವನ್ನು ಮುಗಿಸಿದ್ದಾರೆ.
ಕೆಲ ಮನೆಗೆ ಮೂರು ಲಕ್ಷವೂ ಕೂಡ ತಗುಲಿಲ್ಲ. ಆದರೆ ಮಂಗಳೂರು ಬಿಟ್ಟು ಬೇರೆ ಭಾಗದ ಜನರು ಇದೇ ರೀತಿ ಮನೆ ಕಟ್ಟಿಕೊಳ್ಳಬೇಕು ಎಂದರೆ 20,000 ರಿಂದ 50,000 ಹೆಚ್ಚು ಖರ್ಚಾಗಬಹುದು ಅಷ್ಟೇ. ಇದಕ್ಕೆ ಸಾಕ್ಷಿ ಬೇಕು ಎಂದರೆ ಈ ವಿಡಿಯೋವನ್ನು ನೋಡಿ. ಈ ವಿಡಿಯೋದಲ್ಲಿ ಅಚ್ಚುಕಟ್ಟಾಗಿ ಮೂರು ಲಕ್ಷ ಘಟಕ ವೆಚ್ಚದ ಒಳಗೆ ಮನೆ ನಿರ್ಮಾಣ ಮಾಡಲಾಗಿದೆ ಮತ್ತು ಅಲ್ಲೇ ಅವರ ಸಂಪರ್ಕ ಸಂಖ್ಯೆಯು ಕೂಡ ಇದೆ ನೀವು ಆ ನಿರ್ಮಾಣ ಸಂಸ್ಥೆಯನ್ನು ಭೇಟಿ ಮಾಡುವ ಮೂಲಕ ಇಷ್ಟೇ ಕಡಿಮೆ ಬಜೆಟ್ಟಿಗೆ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಬಹುದು.