ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಮಹಿಳೆಯರು ನೂರು ದಿನಗಳ ಕಾಲ ಕೆಲಸವನ್ನು ಮಾಡಿ ಪ್ರತಿದಿನ 309 ರೂಪಾಯಿಗಳಷ್ಟು ಕೂಲಿಯನ್ನು ಪಡೆಯಬಹುದಾಗಿದೆ. ಇನ್ನು ಮಹಿಳಾ ಸಬಲೀಕರಣ ಯೋಜನೆಯ ಅಡಿಯಲ್ಲಿ ಮತ್ತಷ್ಟು ಪ್ರಯೋಜನಗಳನ್ನು ಮಹಿಳೆಯರು ಪಡೆಯಬಹುದಾಗಿದೆ. ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಗಾಗಿ ಬರಹವನ್ನು ತಪ್ಪದೆ ಓದಿ.
ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಡೆಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮಹಿಳೆಯರು ನೂರು ದಿನಗಳ ಕಾಲದ ಕೆಲಸವನ್ನು ಖಚಿತವಾಗಿ ಪಡೆಯಬಹುದು. ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ವತ್ತು ನೀಡಲಾದ ಈ ಯೋಜನೆಯಿಂದ ಮಹಿಳೆಯು ಒಂದು ದಿನಕ್ಕೆ 309 ರೂಪಾಯಿಗಳಷ್ಟು ದಿನಗೂಲಿಯನ್ನು ಪಡೆಯಬಹುದು.
ಹೆಣ್ಣು ಮತ್ತು ಗಂಡು ಇಬ್ಬರೂ ಸರಿಸಮ ಗಂಟೆಗಳ ಕಾಲ ಕಾರ್ಯದಲ್ಲಿ ನಿರತರಾದರು ಹೆಣ್ಣಿಗೆ ದೊರಕುವ ಕೂಲಿಯಲ್ಲಿ ಕಡಿಮೆ ಇರುತ್ತಿತ್ತು. ಅಷ್ಟೇ ಅಲ್ಲದೆ ಹೆಣ್ಣಿಗೆ ದೊರಕುವ ಕೂಲಿ ಅವಕಾಶಗಳು ಕಡಿಮೆ ಎಂದರೆ ತಪ್ಪಾಗಲಾರದು. ಹಾಗೆ ನೋಡಿದರೆ ಗ್ರಾಮೀಣ ಭಾಗದಲ್ಲಿ ದುಡಿದ ಹಣವನ್ನು ಪೂರ್ಣ ರೂಪದಲ್ಲಿ ಸದುಪಯೋಗಪಡಿಸಿಕೊಂಡು ದುಂದು ವೆಚ್ಚ ಮಾಡದೆ ಇರುವುದು ಮಹಿಳೆಯೆ. ತಾನು ದುಡಿದ ಸಂಪೂರ್ಣ ಹಣವನ್ನು ತನ್ನ ಮಕ್ಕಳ ಕುಟುಂಬದ ಅಭಿವೃದ್ಧಿಗಾಗಿ ಮೀಸಲಿಡುತ್ತಾಳೆ. ಈ ಎಲ್ಲವನ್ನು ಆಧರಿಸಿ ಸರ್ಕಾರವು ಮಹತ್ತರ ಯೋಜನೆಯನ್ನು ರೂಪಿಸಿದೆ.
ಉದ್ಯೋಗ ಖಾತ್ರಿಯಿಂದ ಮಹಿಳಾ ಸಬಲೀಕರಣ :
• ಗಂಡು ಮತ್ತು ಹೆಣ್ಣಿನ ನಡುವೆ ಇರುವ ಅಸಮಾನತೆಯನ್ನು ಹೋಗಲಾಡಿಸಲು ದುಡಿಯುವ ಮಹಿಳೆಗೆ ಉದ್ಯೋಗ ಖಾತ್ರಿಯ ಅಡಿಯಲ್ಲಿ ಸಮಾನ ಅವಕಾಶ ಮತ್ತು ಸಮಾನ ಕೂಲಿ.
• ಮುಂದೆ ದುಡಿಯಲು ಪ್ರಾರಂಭಿಸುವ ಮಹಿಳೆಗೆ ಧೈರ್ಯ ಮತ್ತು ನಂಬಿಕೆ ನೀಡಲು, ಈಗಾಗಲೇ ಕೆಲಸ ಪಡೆದ 24 ಲಕ್ಷ ಗ್ರಾಮೀಣ ಭಾಗದ ಮಹಿಳೆಯರ ಖಾತೆಗೆ 1,549 ಕೋಟಿ ಹಣವನ್ನು ಬಿಡುಗಡೆ ಮಾಡಿ ಜಮಾ ಮಾಡಲಾಗಿದೆ.
• ” ಮಹಿಳಾ ಸಬಲೀಕರಣ ಅಭಿಯಾನ” ಇದರ ಮೂಲಕವಾಗಿ ಹೆಚ್ಚಿನ ಮಹಿಳೆಯರು ಕೆಲಸವನ್ನು ಪಡೆಯುವಲ್ಲಿ ಪ್ರೋತ್ಸಾಹಿಸಲಾಗಿದೆ.
• ಕುಟುಂಬದ ಸಬಲತೆಗಾಗಿ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರು ದುಡಿಯಲು ಹಾಜರಾದಲ್ಲಿ ದುಡಿತದ ಪರಿಮಾಣವನ್ನು 50ರಷ್ಟು ಕಡಿಮೆ ಗೊಳಿಸಲಾಗಿದೆ. ಮಹಿಳೆಯ ಆರೋಗ್ಯದ ಹಿತದೃಷ್ಟಿಯಿಂದ ಕೆಲಸದಲ್ಲಿ ರಿಯಾಯಿತಿಯನ್ನು ನೀಡಲಾಗುತ್ತದೆ.
• ಗರ್ಭಿಣಿ ಮಹಿಳೆಯು ಮಗುವಿಗೆ ಜನನ ನೀಡಿ ಆಗುತ್ತಾನೆ ಬಾಣಂತನವನ್ನು ಮುಗಿಸಿ ದುಡಿಯಲು ನಿರ್ಧರಿಸಿದರೆ ಆಕೆಯ ಮಕ್ಕಳ ಕಾಳಜಿಯ ಹೊಣೆ ಹೊತ್ತು ಮಕ್ಕಳ ಪಾಲನೆಗಾಗಿ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ.
• ಮಹಿಳಾ ಕೂಲಿಕಾರರಿಗೆ ಜಾಗೃತಿ ಮೂಡಿಸಲು 1,926 ಮಹಿಳಾ ಗ್ರಾಮ ಕಾಯಕ ಮಿತ್ರರ ನೇಮಕ ಮಾಡಲಾಗಿದೆ.
ಮಹಿಳೆಯು ದುಡಿಯಲು ಇಚ್ಛಿಸಿದಲ್ಲಿ ಮಾಡಬೇಕಾದುದು ಇಷ್ಟೇ. ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಉದ್ಯೋಗ ಕಾರ್ಡ್ ಅನ್ನು ಪಡೆದುಕೊಳ್ಳಬೇಕು. ಜಾಬ್ ಕಾರ್ಡ್ ಅನ್ನು ಪಡೆದ ಬಳಿಕ ಅವರು ಹೇಳಿದ ಸ್ಥಳಗಳಿಗೆ ತೆರಳಿ ಕೆಲಸವನ್ನು ಪ್ರಾರಂಭಿಸಬಹುದು. ಪ್ರತಿನಿತ್ಯವೂ ಕೆಲಸಕ್ಕೆ ಹಾಜಾರಾದಲ್ಲಿ ದಿನದ ಕೂಲಿ 309 ರೂಪಾಯಿಗಳಂತೆ ನೂರು ದಿನಗಳ ಕಾಲ ತಪ್ಪದೆ ಕೆಲಸವನ್ನು ನೀಡಲಾಗುತ್ತದೆ.
ಈ ಯೋಜನೆಯ ಮೂಲಕ ಮಹಿಳೆಯು ಪುರುಷರಷ್ಟೇ ಹಣವನ್ನು ಗಳಿಸಬಹುದಾಗಿದೆ. ಪಡೆದ ಹಣವನ್ನು ಗ್ರಾಮೀಣ ಭಾಗದ ಮಹಿಳೆಯು ತನ್ನ ಆರೋಗ್ಯದ ಸುಸ್ತಿರತೆಗೆ, ಮಕ್ಕಳ ಪೋಷಣೆಗೆ ಅಥವಾ ವಿದ್ಯಾಭ್ಯಾಸಕ್ಕೆ, ಕುಟುಂಬದ ಅಗತ್ಯ ವಸ್ತುಗಳ ಪೂರೈಕೆಗೆ ಹೀಗೆ ಅವಶ್ಯಕತೆಗಾಗಿ ಬಳಸಿಕೊಳ್ಳಬಹುದು. ಸ್ನೇಹಿತರೆ, ಈ ಯೋಜನೆಯ ಮಾಹಿತಿಗಳನ್ನು ಹೆಚ್ಚೆಚ್ಚು ಜನರಿಗೆ ಹಂಚಿಕೊಳ್ಳುವುದರ ಮೂಲಕ ಗ್ರಾಮೀಣ ಭಾಗದ ಮಹಿಳೆಯ ಸವಲೀಕರಣ ಕಾರ್ಯದಲ್ಲಿ ನಿಮ್ಮ ಪಾಲು ಇರಲಿ.