ತಾವರೆ ಬೀಜಗಳು ಅಥವಾ ಕಮಲದ ಬೀಜಗಳು ಅಥವಾ ಲೋಟಸ್ ಸೀಡ್ಸ್ ಅಥವಾ ಫಾಕ್ಸ್ ಸೀಡ್ಸ್ ಈ ಎಲ್ಲಾ ಹೆಸರಿಗಳಿಗಿಂತಲೂ ಹೆಚ್ಚಾಗಿ ಇದು ಮಾರ್ಕೆಟ್ ನಲ್ಲಿ ಮಖಾನ ಎಂದೇ ಹೆಚ್ಚು ಫೇಮಸ್. ಹಲವಾರು ಜನರಿಗೆ ಇದನ್ನು ಮಖಾನ ಎಂದು ಕರೆದರೆ ಮಾತ್ರ ಗೊತ್ತಾಗುವುದು. ಈ ಹೆಸರನ್ನು ಮೊದಲು ಕೇಳಿದವರಿಗೆ ಇದ್ಯಾವುದಪ್ಪ ವಿಚಿತ್ರವಾದ ರೆಸಿಪಿ ಎಂದು ಎನಿಸಬಹುದು ಆದರೆ ಇದು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಒಂದು ಆಹಾರ ಪದಾರ್ಥ. ಇದನ್ನು ಆಹಾರ ಪದ್ಧತಿಯಲ್ಲಿ ಸರಿಯಾಗಿ ಬಳಸಿಕೊಂಡು ಸೇವಿಸುವುದರಿಂದ ಮನುಷ್ಯನ ದೇಹದ ಎಷ್ಟೋ ಅನಾರೋಗ್ಯ ಸಮಸ್ಯೆಗಳನ್ನು ಯಾವುದೇ ಔಷಧಿ ಇಲ್ಲದೆ, ಯಾವುದೇ ಅಡ್ಡ ಪರಿಣಾಮಗಳಿರದೆ ಆಸ್ಪತ್ರೆಗಳಿಗೆ ದಾರಿ ಸವಿಸದೇ ಮನೆಯಲ್ಲಿಯೇ ಇದ್ದುಕೊಂಡು ಸರಿ ಮಾಡಿಕೊಳ್ಳಬಹುದು. ಮತ್ತು ಆಹಾರ ಪದಾರ್ಥದಲ್ಲಿ ಇದು ಎಷ್ಟು ಉತ್ತಮವಾದ ಅಂಶಗಳನ್ನು ಒಳಗೊಂಡಿದೆ ಎನ್ನುವುದನ್ನು ಒಮ್ಮೆ ಅರಿತರೆ ಯಾವುದೇ ಕಾರಣಕ್ಕೂ ಪ್ರತಿನಿತ್ಯ ಇದನ್ನು ತಿನ್ನುವುದನ್ನು ನೀವು ನಿಲ್ಲಿಸುವುದಿಲ್ಲ.
ಹೇಗೆ ಪ್ರತಿನಿತ್ಯ ನಾವು ಬೆಳಂ ಬೆಳಗ್ಗೆ ಎದ್ದು ಡ್ರೈ ಫ್ರೂಟ್ಸ್ ಗಳಾದ ದ್ರಾಕ್ಷಿ ಗೋಡಂಬಿ ಹಾಗೂ ಬಾದಾಮಿ ಮುಂತಾದವುಗಳನ್ನು ಸೇವಿಸುವುದರಿಂದ ದೇಹಕ್ಕೆ ಎನರ್ಜಿ ಬರುತ್ತದೆ ವಿಟಮಿನ್ಸ್ ಮಿನರಲ್ಸ್ ಪ್ರೋಟೀನ್ಸ್ ಇನ್ನು ಮುಂತಾದ ಎಷ್ಟೋ ಉತ್ತಮ ಪೋಷಕಾಂಶಗಳು ದೇಹಕ್ಕೆ ದೊರಕುತ್ತದೆರೋ ಇದರಿಂದ ದೇಹ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆಯೋ ದಿನಪೂರ್ತಿ ನಾವು ಚಟುವಟಿಕೆಯಿಂದ ಇರಲು ಸಹಾಯವಾಗುತ್ತದೆ ಎಂದು ಹೇಳುತ್ತೇವೆಯೋ ಹಾಗೂ ಅದನ್ನು ನಂಬಿ ಹೇಗೆ ಬಳಸುತ್ತೇವೆ ಮತ್ತು ಅದರ ಫಲಿತಾಂಶಗಳನ್ನು ನಾವು ಹೇಗೆ ಅನುಭವಿಸಿ ನಂಬಿದ್ದೇವೆಯೋ, ಅದೇ ರೀತಿಯಾಗಿ ಒಂದು ಹಿಡಿ ಮಖಾನವನ್ನು ಕೂಡ ಬೆಳ್ಳಂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನೀವು ಡ್ರೈ ಫ್ರೂಟ್ಸ್ ತಿನ್ನುವುದಕ್ಕಿಂತಲೂ ಹೆಚ್ಚಿಗೆ ಎನರ್ಜಿಯಿಂದ ಇರುತ್ತೀರ. ಡ್ರೈ ಫ್ರೂಟ್ಸ್ ನಲ್ಲಿ ಇರುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳು ಹಾಗೂ ಆರೋಗ್ಯಕರ ಅಂಶಗಳು ಮಖಾನದಲ್ಲಿ ಅಡಗಿದೆ ಎಂದರೆ ನೀವು ಖಂಡಿತವಾಗಿಯೂ ನಂಬಲೇಬೇಕು.
ಮಖಾನದಲ್ಲಿ ಪ್ರೋಟೀನ್ಸ್ ಕಾರ್ಬೋಹೈಡ್ರೇಟ್ಸ್ ಸೋಡಿಯಂ ಪೊಟ್ಯಾಶಿಯಂ ಮುಂತಾದ ಉತ್ತಮ ಪೋಷಕಾಂಶಗಳು ಹೇರಳವಾಗಿವೆ. ಇವುಗಳ ಜೊತೆಯಲ್ಲಿ ಮನುಷ್ಯನ ದೇಹಕ್ಕೆ ಮೂಲಭೂತ ಅವಶ್ಯಕತೆ ಇರುವ ವಿಟಮಿನ್ ಗಳಾದ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಕೂಡ ಮಖಾನದಲ್ಲಿ ಇದೆ. ಇದು ಫ್ಲೈಟೋ ಕೆಮಿಕಲ್ ಹಾಗೂ ಫ್ಲೇವನಾಯ್ಡ್ಗಳನ್ನು ಕೂಡ ಹೊಂದಿದೆ. ಇದು ಒಂದು ಉತ್ತಮವಾದ ಆಯುರ್ವೇದಿಕ್ ಅಂಶ ಹೊಂದಿರುವ ಆಹಾರ ಪದಾರ್ಥವಾಗಿದೆ. ಇವುಗಳನ್ನು ಪ್ರತಿನಿತ್ಯ ನಾವು ಆಹಾರದಲ್ಲಿ ಬಳಸಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಇದನ್ನು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದವರು ಕೂಡ ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಕೂಡ ದಿನನಿತ್ಯ ನಾವು ಆಹಾರಗಳನ್ನು ಹೇಗೆ ಸೇವಿಸುತ್ತೀವೋ ಅದೇ ರೀತಿ ಇದನ್ನು ಒಂದು ಆಹಾರ ಪದಾರ್ಥ ಎಂದು ತಿಳಿದುಕೊಂಡು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ತುಂಬಾ ಒಳ್ಳೆಯದು.
ಇದರಿಂದ ಈಗಿರುವ ಆರೋಗ್ಯ ಸಮಸ್ಯೆಗಳು ಪರಿಹಾರ ಆಗುವುದರ ಜೊತೆಗೆ ಮುಂದೆ ನಮಗೆ ಬರಬಹುದಾದ ಎಷ್ಟೋ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಇದು ಸಹಾಯ ಮಾಡುತ್ತದೆ. ಈ ಎಲ್ಲಾ ಅಂಶಗಳು ಸೇರಿ ಮನುಷ್ಯನನ್ನು ಯಾವ ಯಾವ ಸಮಸ್ಯೆಗಳಿಂದ ದೂರ ಇಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಸಂಪೂರ್ಣವಾಗಿ ಓದಿ. ಪ್ರಮುಖವಾಗಿ ಇದು ಪುರುಷರಲ್ಲಿ ಸಂತಾನೋತ್ಪತ್ತಿಯ ಶಕ್ತಿ ಹಾಗೂ ಇದಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳುವಲ್ಲಿ ತುಂಬಾ ಸಹಕಾರಿಯಾಗುತ್ತದೆ ಇದನ್ನು ಪ್ರತಿನಿತ್ಯ ಆಹಾರದಲ್ಲಿ ಸೇವಿಸುವುದರಿಂದ ಪುರುಷರಿಗೆ ವೀರ್ಯ ದ ಸಂಖ್ಯೆ ಹೆಚ್ಚಾಗಿರುವುದರ ಜೊತೆಗೆ ಅದು ಆರೋಗ್ಯವಾಗಿಯೂ ಕೂಡ ಇರುತ್ತದೆ ಹೀಗಾಗಿ ಈ ರೀತಿ ಸಂತಾನೋತ್ಪತ್ತಿ ಸಮಸ್ಯೆ ಇರುವವರಿಗೆ ಆಯುರ್ವೇದ ಔಷಧೀಯ ಪ್ರಕಾರ ಮಖಾನವನ್ನು ತಿನ್ನಲು ಸೂಚಿಸುತ್ತಾರೆ. ಉರಿಯೂತದ ಸಮಸ್ಯೆ ಇರುವವರು ಕೂಡ ಪ್ರತಿನಿತ್ಯ ಮಖಾನವನ್ನು ಸೇವಿಸುವುದರಿಂದ ಅದು ಕಂಟ್ರೋಲ್ ಗೆ ಬರುತ್ತದೆ. ದೇಹವು ಹೆಚ್ಚು ಹೀಟ್ ಆದಾಗ ಅಥವಾ ಉಷ್ಣ ದೇಹ ಪ್ರವೃತ್ತಿ ಇರುವವರಿಗೆ ಈ ರೀತಿ ಉಳಿಯೂತದ ಸಮಸ್ಯೆ ಹೆಚ್ಚು ಭಾದಿಸುತ್ತದೆ ಇದನ್ನು ತಡೆಯಲು ಸಹ ಕಷ್ಟ.
ಇವುಗಳಿಗಾಗಿ ಆಸ್ಪತ್ರೆಯ ಮೊರೆ ಹೋದರೆ ಅದರಿಂದ ಸೈಡ್ ಎಫೆಕ್ಟ್ ಆಗುವ ಸಾಧ್ಯತೆ ಇರುತ್ತದೆ ಹಾಗೂ ಸಂಪೂರ್ಣವಾಗಿ ಗುಣ ಆಗುವ ವಿಶ್ವಾಸ ಇರುವುದಿಲ್ಲ ಆದ್ದರಿಂದ ಅದರ ಬದಲು ಆಯುರ್ವೇದ ಪದ್ಧತಿಯ ಪ್ರಕಾರ ಮಖಾನವನ್ನು ಪ್ರತಿನಿತ್ಯ ತಪ್ಪದೆ ಸೇವಿಸುತ್ತಾ ಬರುವುದರಿಂದ ಉರಿಯೂತದ ಸಮಸ್ಯೆ ಪರಿಣಾಮಕಾರಿಯಾಗಿ ಕಂಟ್ರೋಲ್ ಗೆ ಬರುತ್ತದೆ. ದೇಹದ ಕಾಂತಿ ಹೆಚ್ಚಿಸುವಲ್ಲಿ ಕೂಡ ಮಖಾನವು ಬಹಳ ಸಹಾಯ ಮಾಡುತ್ತದೆ. ಮಖಾನದಲ್ಲಿ ಇರುವ ಒಂದು ಅದ್ಭುತವಾದ ಅಂಶವು ಈ ರೀತಿ ವಯಸ್ಸಾದವರು ಕೂಡ ಯಂಗ್ ಆಗಿ ಕಾಣುವಂತೆ ಮತ್ತು ತ್ವಛೆಯ ಹೊಳಪು ಹೆಚ್ಚಾಗುವಂತೆ ಮಾಡಲು ಸಹಾಯ ಮಾಡುತ್ತದೆ ಹಾಗಾಗಿ ಮಖಾನವನ್ನು ಸೇವಿಸುವುದು ಮುಖದ ಕಾಂತಿ ಹೆಚ್ಚಿಸುವುದಕ್ಕೂ ಕೂಡ ಸಹಕಾರಿಯಾಗುತ್ತದೆ. ಮಧುಮೇಹ ಸಮಸ್ಯೆ ಇರುವವರಿಗಂತೂ ಮಖಾನ ಹೇಳಿ ಮಾಡಿಸಿದ ಔಷಧಿ ಎನ್ನಬಹುದು. ಪ್ರತಿನಿತ್ಯವೂ ಕೂಡ ಮಖಾನವನ್ನು ಸೇವಿಸುವುದರಿಂದ ಮದುಮೇಹ ಖಂಡಿತವಾಗಿಯೂ ಕಂಟ್ರೋಲ್ ಗೆ ಬರುತ್ತದೆ.
ಇದನ್ನು ಈಗಾಗಲೇ ಅನೇಕ ಸರ್ವೇಗಳಲ್ಲಿ ಸಾಬೀತು ಕೂಡ ಮಾಡಲಾಗಿದೆ. ಅಲ್ಲದೆ ಡಯಟ್ ಪ್ಲಾನ್ ಮಾಡುವವರು ಕೂಡ ಅಕ್ಕಿ, ಗೋಧಿ ಆಹಾರ ಪದಾರ್ಥಗಳನ್ನು ತಿಂದು ಬೇಸತ್ತು ಹೋಗಿದ್ದರೆ ಅವುಗಳ ಬದಲಾಗಿ ಮಖಾನವನ್ನು ಬಳಸಬಹುದು. ಮಖಾನದಲ್ಲೂ ಸಹ ಪ್ರೊಟೀನ್ ಕಾರ್ಬೋಹೈಡ್ರೇಟ್ಸ್ ಹೇರಳವಾಗಿ ಇರುವುದರಿಂದ ಇದು ಅಕ್ಕಿ ಗೋಧಿಯಲ್ಲಿ ಇರುವಷ್ಟು ಪೋಷಕಾಂಶಗಳನ್ನು ಅದರ ಬದಲು ನೀಡುತ್ತದೆ. ಹೃದಯದ ಆರೋಗ್ಯಕ್ಕೂ ಕೂಡ ಇದು ತುಂಬಾ ಒಳ್ಳೆಯದು. ಗುಲ್ಮಾದ ಸಮಸ್ಯೆಗಳನ್ನು ಪರಿಹಾರ ಮಾಡುವುದರ ಜೊತೆಗೆ ರಕ್ತ ಶುದ್ದಿ ಮಾಡುವಲ್ಲೂ ಕೂಡ ಮಖಾನ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಮಲಬದ್ಧತೆಯ ಸಮಸ್ಯೆಗಳು ಕೂಡ ಗುಣವಾಗುತ್ತದೆ. ಈ ರೀತಿಯಾಗಿ ಇನ್ನೂ 10 ಅನೇಕ ಉಪಯೋಗಗಳು ಮಖಾನವನ್ನು ಸೇವಿಸುವುದರಿಂದ ನಮಗೆ ಸಿಗುತ್ತದೆ.