ಪ್ರತಿದಿನ ಊಟ ಆದ ನಂತರ ಬಾಳೆಹಣ್ಣು ಸೇವಿಸುತ್ತಿರ.? ಆಗಿದ್ರೆ ತಪ್ಪದೆ ಇದನ್ನು ನೋಡಿ.

ಕನ್ನಡದಲ್ಲಿ ಒಂದೆರಡು ಮಾತುಗಳಿವೆ. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂದು ಹಾಗೆ ಅದೇ ರೀತಿ ಇರುವ ಇನ್ನೊಂದು ಮಾತು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವುದು. ಈ ಎರಡು ಮಾತುಗಳ ಅರ್ಥ ಏನೆಂದರೆ ತನ್ನ ದೇಹಕ್ಕೆ ಯಾವ ರೀತಿಯ ಹಾಗೂ ಎಷ್ಟು ಪ್ರಮಾಣದ ಆಹಾರವನ್ನು ಸೇವಿಸಿದರೆ ಒಳ್ಳೆಯದು ಎನ್ನುವುದನ್ನು ಅರಿತುಕೊಂಡಿರುವ ವ್ಯಕ್ತಿಗೆ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಭಾದಿಸುವುದಿಲ್ಲ ಯಾಕೆಂದರೆ ಆರೋಗ್ಯ ಕಂಟ್ರೋಲ್ ಮಾಡುವ ಒಳ್ಳೆಯ ಹಿಡಿತ ಅವನಿಗೆ ಗೊತ್ತಿರುತ್ತದೆ. ಹಾಗೆ ಊಟ ತನ್ನಿಚ್ಛೆ ಎನ್ನುವ ಮಾತು ಇದೆ ಯಾಕೆಂದರೆ ಒಬ್ಬೊಬ್ಬರು ಊಟ ಮಾಡುವ ಶೈಲಿ ಒಂದೊಂದು ರೀತಿ ಇರುತ್ತದೆ. ಅವರಿಗೆ ಇಷ್ಟ ಆಗುವ ರೀತಿಯಲ್ಲಿ ಅವರು ಊಟ ಮಾಡುತ್ತಿರುತ್ತಾರೆ ಹಾಗಾಗಿ ಎಲ್ಲರ ಊಟ ಕ್ರಮವೂ ಕೂಡ ಒಂದೇ ರೀತಿ ಇರಲು ಸಾಧ್ಯವಿಲ್ಲ.

ಈ ಎರಡು ಮಾತುಗಳನ್ನು ಯಾಕಿಲ್ಲಿ ಹೇಳುತ್ತಿದ್ದೇವೆ ಎಂದರೆ ಸಾಮಾನ್ಯವಾಗಿ ಎಲ್ಲರೂ ಕೂಡ ಊಟ ಆದ ನಂತರ ಬಾಳೆಹಣ್ಣು ತಿನ್ನಬೇಕು ಎಂದು ಹೇಳುತ್ತಾರೆ. ಈ ರೀತಿ ಪ್ರತಿದಿನವೂ ಕೂಡ ಊಟ ಆದಮೇಲೆ ಬಾಳೆಹಣ್ಣು ತಿನ್ನುವುದರಿಂದ ಯಾರ್ಯಾರ ದೇಹದ ಮೇಲೆ ಯಾರ್ಯಾವ ರೀತಿ ಪರಿಣಾಮ ಬೀಳುತ್ತದೆ ಎನ್ನುವುದು ಸಂಪೂರ್ಣವಾಗಿ ಎಲ್ಲರಿಗೂ ತಿಳಿದಿರುವುದಿಲ್ಲ. ಒಬ್ಬೊಬ್ಬರ ದೇಹ ಒಂದೊಂದು ರೀತಿ ಇರುವುದರಿಂದ ಯಾರ್ಯಾರಿಗೆ ಇದು ಸೂಟ್ ಆಗುತ್ತದೆಯೋ ಆ ರೀತಿ ಮಾಡುವುದು ಒಳ್ಳೆಯದು ಇಲ್ಲದಿದ್ದರೆ ಕೆಲವು ದೇಹ ಕೆಲವರಿಗೆ ಇದು ಒಳ್ಳೆಯ ರೀತಿಯಾಗಿ ಪರಿಣಮಿಸಬಹುದು ಅದೇ ರೀತಿ ಕೆಲವರಿಗೆ ಕೆಟ್ಟ ಪರಿಣಾಮ ಕೂಡ ಆಗಬಹುದು. ಈ ರೀತಿ ಪ್ರತಿದಿನವೂ ಎರಡು ಬಾಳೆಹಣ್ಣುಗಳನ್ನು ಊಟ ಮಾಡಿದ ನಂತರ ಸೇವಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಎಲ್ಲರಿಗೂ ಇದು ಅನ್ವಯಿಸುವುದಿಲ್ಲ ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಇದು ತೊಂದರೆ ತರುತ್ತದೆ ಹಾಗಾಗಿ ಅವರು ರಾತ್ರಿ ಊಟದ ನಂತರ ಬಾಳೆಹಣ್ಣು ತಿನ್ನುವುದನ್ನು ಅವಾಯ್ಡ್ ಮಾಡುವುದು ಒಳ್ಳೆಯದು.

ಮತ್ತು ಬಾಳೆಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಅದು ರಾತ್ರಿ ಹೊತ್ತು ಸೇವನೆ ಬೇಡ ಎಂದು ಹೇಳುತ್ತಾರೆ. ಬದಲಾಗಿ ಮಧ್ಯಾಹ್ನ ಊಟದ ನಂತರ ಬೇಕಾದರೆ ಇದನ್ನು ಸೇವಿಸಬಹುದು ಡಯಾಬಿಟಿಸ್ ಪೇಷಂಟ್ಗಳು ಮಾತ್ರವಲ್ಲದೆ ಇತರರು ಕೂಡ ಕ್ಯಾಲರಿ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುತ್ತಿದ್ದರೆ ಬಾಳೆಹಣ್ಣಿನಲ್ಲಿ ಹೆಚ್ಚಿನ ಕ್ಯಾಲರಿ ಅಂಶ ಇರುವುದರಿಂದ ಅದನ್ನು ಊಟ ಮಾಡಿದ ನಂತರ ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು ಇದರ ಬದಲಾಗಿ ರಾತ್ರಿ ಊಟಕ್ಕೂ ಅರ್ಧ ಗಂಟೆ ಮುಂಚೆ ಎರಡು ಬಾಳೆಹಣ್ಣನ್ನು ಸೇವಿಸುವುದರಿಂದ ಆಲ್ರೆಡಿ ಇದರಲ್ಲಿ ಕ್ಯಾಲೋರಿ ಇರುವುದರಿಂದ ಇದು ಊಟದ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಬಹುದು ಹೀಗಾಗಿ ನಿಮ್ಮ ಡಯಟ್ಗು ಕೂಡ ಇದು ಉಪಯೋಗವಾಗುತ್ತದೆ. ಹಾಗೆಯೇ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ತಪ್ಪದೆ ರಾತ್ರಿ ಊಟ ಆದನಂತರ ಎರಡು ಬಾಳೆಹಣ್ಣನ್ನು ಸೇವಿಸುವುದು ಒಳ್ಳೆಯದು ಇದರಿಂದ ಜೀರ್ಣಕ್ರಿಯೆಗೆ ಸುಲಭವಾಗಿ ದಿನನಿತ್ಯ ಕರ್ಮಗಳನ್ನು ಮುಗಿಸಲು ಅವರಿಗೆ ಅನುಕೂಲವಾಗಬಹುದು.

ಮತ್ತು ವರ್ಕೌಟ್ ಮಾಡುತ್ತಿರುವವರು ತೂಕ ಇಳಿಸಿಕೊಳ್ಳಬೇಕು ಎಂದು ಪ್ರಯತ್ನ ಪಡುತ್ತಿದ್ದರೆ ಅವರು ಬಾಳೆಹಣ್ಣನ್ನು ಊಟದ ನಂತರ ತಿನ್ನುವುದನ್ನು ಅವಾಯ್ಡ್ ಮಾಡುವುದು ಒಳ್ಳೆಯದು. ಯಾಕೆಂದರೆ ಬಾಳೆಹಣ್ಣು ತೂಕ ಹೆಚ್ಚು ಮಾಡಿಕೊಳ್ಳುವವರಿಗೆ ಅನುಕೂಲಕಾರಿ ಆದರೆ ತೂಕ ಇಳಿಸಿಕೊಳ್ಳಬೇಕು ಎನ್ನುವವರು ಇದನ್ನು ರಾತ್ರಿ ಹೊತ್ತು ತಿನ್ನುವುದನ್ನು ಅವಾಯ್ಡ್ ಮಾಡಬಹುದು. ತರಕಾರಿಗಳಲ್ಲಿ ಶುಗರ್ ಅಂಶ ಕಡಿಮೆ ಇರುತ್ತದೆ ಹಾಗಾಗಿ ಇದನ್ನು ದಿನದ ಯಾವ ಸಮಯದಲ್ಲಿ ಬೇಕಾದರೂ ಸೇವಿಸಬಹುದು ಆದರೆ ಹಣ್ಣುಗಳ ವಿಷಯದಲ್ಲಿ ಆ ರೀತಿ ಆಗುವುದಿಲ್ಲ ಹಣ್ಣುಗಳಲ್ಲಿ ಸಕ್ಕರೆ ಅಂಶ ಇರುವುದರಿಂದ ಅದರಲ್ಲೂ ಕೂಡ ಬಾಳೆಹಣ್ಣಿನಲ್ಲಿ ಸಕ್ಕರೆ ಅಂಶ ಇರುವುದರಿಂದ ಇದನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಹಾಗಾಗಿ ವರ್ಕೌಟ್ ಮಾಡುವವರು ಬಾಳೆಹಣ್ಣನ್ನು ತಿನ್ನುವುದನ್ನು ಅವಾಯ್ಡ್ ಮಾಡಿ. ಮತ್ತೆ ಇನ್ನೊಂದು ಸರ್ವೆಯ ಪ್ರಕಾರ ಹೇಗೆ ಮೊಸರು ತಿನ್ನುವುದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ ಹಾಗೂ ಮನಸ್ಸು ತಾಳ್ಮೆಯಿಂದ ಇರುತ್ತದೆ ಇದರಿಂದ ಎಲ್ಲಿಗಾದರೂ ಪಯಾಣ ಮಾಡುವಾಗ ಮೊಸರನ್ನು ತಿಂದು ಹೋದರೆ ಶುಭ ಎಂದು ಹೇಳುತ್ತಿದ್ದರು.

ಇದು ಬಾಳೆಹಣ್ಣಿಗೂ ಕೂಡ ಅನ್ವಯವಾಗುತ್ತದೆ ಎಂದು ಹೇಳಬಹುದು. ಯಾಕೆಂದರೆ ತುಂಬಾ ಟೆನ್ಶನ್ ಹಾಗೂ ಪ್ರೆಶರ್ ಅಲ್ಲಿ ಇರುವವರು, ಬಾಳೆಹಣ್ಣನ್ನು ಸೇವಿಸುವುದರಿಂದ ಅವರ ಮನಸ್ಸು ಶಾಂತಿಯಿಂದ ಕೂಡಿರುತ್ತದೆ. ಮತ್ತು ಮನಸ್ಸಿಗೆ ಒಂದು ರೀತಿಯ ಶಾಂತಿಯ ಅನುಭವವಾಗುತ್ತದೆ ಹಾಗೂ ಮೈಂಡ್ ಕೂಲ್ ಆಗುತ್ತದೆ ಹೀಗಾಗಿ ಎಲ್ಲಿಗಾದರೂ ಜರ್ನಿ ಮಾಡಬೇಕು ಎಂದಾದಾಗ ಸಾಧ್ಯವಾದರೆ ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದು ಮತ್ತು ಹೆಚ್ಚು ಟೆನ್ಶನ್ ಆದ ಸಂದರ್ಭಗಳಲ್ಲಿ ಬಾಳೆಹಣ್ಣನ್ನು ಸೇವಿಸುವುದು ಒಳ್ಳೆಯದು. ಮತ್ತು ಬಾಳೆಹಣ್ಣು ಹೆಚ್ಚು ಶೀತ ಪ್ರವೃತ್ತಿ ಹೊಂದಿರುವ ಹಣ್ಣು ಆದ್ದರಿಂದ ಇದನ್ನು ಬಿಸಿಲು ಇರುವ ದಿನಗಳಲ್ಲಿ ಬೇಸಿಗೆಯ ಸಮಯಗಳಲ್ಲಿ ತಿನ್ನುವುದು ಒಳ್ಳೆಯದು. ಶೀತ ದಿಂದ ಕೂಡಿದ ವಾತಾವರಣ ಅಂದರೆ ಬೆಳ್ಳಂ ಬೆಳಗ್ಗೆ ಹಾಗೂ ರಾತ್ರಿ ಹೊತ್ತು ಬಾಳೆಹಣ್ಣನ್ನು ತಿನ್ನುವುದನ್ನು ಅವಾಯ್ಡ್ ಮಾಡುವುದೇ ಒಳ್ಳೆಯದು ಎನ್ನಬಹುದು.

ಜೊತೆಗೆ ಬಾಳೆಹಣ್ಣನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ಕೂಡ ಯಾರು ಬೇಕಾದರೂ ಸೇವಿಸಬಹುದು. ಮತ್ತು ಉಳಿದೆಲ್ಲಾ ಹಣ್ಣುಗಳಿಗೆ ಹೋಲಿಸಿದರೆ ಬಾಳೆಹಣ್ಣು ಕಡಿಮೆ ಬೆಲೆ ಬಾಳುವುದರಿಂದ ಹಾಗೂ ಜನಸಾಮಾನ್ಯರಿಗೆ ಕೈಗಟಕುವ ದರದಲ್ಲಿ ಸಿಗುವುದರಿಂದ ಇದರಲ್ಲಿ ಹೆಚ್ಚು ಪೋಷಕಾಂಶ ಇರುವುದರಿಂದ ಎಲ್ಲರೂ ಕೂಡ ಆರಾಮವಾಗಿ ಇದನ್ನು ಸೇವಿಸಬಹುದು ಮತ್ತು ಹಳ್ಳಿಗಳಲ್ಲಿ ಹಾಗೂ ಸಿಟಿಗಳಲ್ಲಿ ಅನುಕೂಲ ಇರುವವರು ಕೂಡ ಮನೆ ಹಿಂದೆ ಒಂದು ಬಾಳೆ ಗಿಡವನ್ನು ಬೆಳೆಸಬಹುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲರ ಮನೆ ಹಿಂದೆಯೂ ಕೂಡ ನೀರು ಹೋಗುವ ಜಾಗದಲ್ಲಿ ಈ ರೀತಿ ಬಾಳೆ ಗಿಡವನ್ನು ನೆಟ್ಟು ಅವರಿಗೆ ಮನೆಗಾಗುವಷ್ಟು ಬಾಳೆಹಣ್ಣನ್ನು ಅವರು ಬೆಳೆಸುತ್ತಾರೆ. ಹೀಗಾಗಿ ನೈಸರ್ಗಿಕವಾಗಿರುವ ಈ ಬಾಳೆಹಣ್ಣು ಎಲ್ಲರ ಆರೋಗ್ಯ ಕಾಪಾಡುವ ಒಂದು ಉತ್ತಮ ಹಣ್ಣಾಗಿದೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ.

Leave a Comment

%d bloggers like this: