ಭಾರತೀಯ ಅಂಚೆ ಇಲಾಖೆಯು Ministry of communications department of Posts).
ತನ್ನಲ್ಲಿ ಖಾಲಿ ಇರುವ 1714 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಹಾಗೂ ಅಸಿಸ್ಟೆಂಟ್ ಬ್ಯಾಂಕ್ ಪೋಸ್ಟ್ ಮಾಸ್ಟರ್ (ABPM) / ಡಾಕ್ ಸೇವಕ್ ಹುದ್ದೆಗಳಿಗೆ ಈ ಅಧಿಸೂಚನೆ ಹೊರಡಿಸಲಾಗಿದ್ದು.
ಈ ಬಾರಿ ಕರ್ನಾಟಕ ಅಂಚೆ ವೃತ್ತದಲ್ಲಿ (Karnata circle) ಸಾಕಷ್ಟು ಹುದ್ದೆಗಳು ಖಾಲಿ ಇವೆ ಎನ್ನುವುದು ವಿಶೇಷ. ಈ ಹುದ್ದೆಗಳಿಗೆ ಭಾರತದಾದ್ಯಂತ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಾಗಿರುವ (aspirants) ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಇರುವ ಪ್ರಮುಖ ಮಾಹಿತಿಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಒಂದು ಲಕ್ಷ ಖರ್ಚಿನಲ್ಲಿ ಕಟ್ಟಿರುವ ಮನೆ ಇದು, ಸಣ್ಣ ಫ್ಯಾಮಿಲಿ ಇರೋದಕ್ಕೆ, ಬಾಡಿಗೆಗೆ ಕೊಡೋದಕ್ಕೆ ಸೂಕ್ತವಾದ ಮನೆ.!
ಇಲಾಖೆ:- ಭಾರತೀಯ ಅಂಚೆ ಇಲಾಖೆ.
ಉದ್ಯೋಗದ ವಿಧ:- ಕೇಂದ್ರ ಸರ್ಕಾರದ ಹುದ್ದೆಗಳು.
ಒಟ್ಟು ಹುದ್ದೆಗಳ ಸಂಖ್ಯೆ:- 1714.
ಹುದ್ದೆಗಳ ವಿವರ:-
● ಬ್ರಾಂಚ್ ಪೋಸ್ಟ್ ಮಾಸ್ಟರ್ (BPM)
● ಅಸಿಸ್ಟೆಂಟ್ ಬ್ಯಾಂಕ್ ಪೋಸ್ಟ್ ಮಾಸ್ಟರ್ (ABPM) / ಡಾಕ್ ಸೇವಕ್.
ಜಿಲ್ಲಾವಾರು ಹುದ್ದೆಗಳ ವಿವರ:-
● ಬಾಗಲಕೋಟೆ – 29
● ಬಳ್ಳಾರಿ – 43
● ಬೆಳಗಾವಿ – 42
● ಬೆಂಗಳೂರು ಪೂರ್ವ – 11
● ಬೆಂಗಳೂರು ದಕ್ಷಿಣ – 04
● ಬೆಂಗಳೂರು ಪಶ್ಚಿಮ – 06
● ಬೀದರ್ – 49
● ಚನ್ನಪಟ್ಟಣ – 66
● ಚಿಕ್ಕಮಗಳೂರು – 63
● ಚಿಕ್ಕೋಡಿ – 45
● ಚಿತ್ರದುರ್ಗ – 51
● ದಾವಣಗೆರೆ – 47
● ಧಾರವಾಡ – 33
● ಗದಗ – 63
● ಗೋಕಾಕ್ – 13
● ಹಾಸನ – 84
● ಹಾವೇರಿ – 33
● ಕಲ್ಬುರ್ಗಿ – 44
● ಕಾರವಾರ – 53
● ಕೊಡಗು – 44
● ಕೋಲಾರ – 75
● ಮಂಡ್ಯ – 78
● ಮಂಗಳೂರು – 52
● ಮೈಸೂರು – 43
● ನಂಜನಗೂಡು – 41
● ಪುತ್ತೂರು – 89
● ರಾಯಚೂರು – 49
● RMSHV – 44
● RMSQ – 6
● ಶಿವಮೊಗ್ಗ – 74
● ಉಡುಪಿ – 110
● ವಿಜಯಪುರ – 65
● ಯಾದಗಿರಿ – 33
ವೇತನ ಶ್ರೇಣಿ:-
● ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) – 12,000 ದಿಂದ 29,380.
● ಅಸಿಸ್ಟೆಂಟ್ ಬ್ಯಾಂಕ್ ಪೋಸ್ಟ್ ಮಾಸ್ಟರ್ (ABPM) 10,000 ದಿಂದ 24,470.
ವಿದ್ಯಾರ್ಹತೆ:- SSLC ಪರೀಕ್ಷೆ ಉತ್ತರಣರಾಗಿರಬೇಕು.
ವಯೋಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 40 ವರ್ಷಗಳು.
ವಯೋಮಿತಿ ಸಡಿಲಿಕೆ:-
● SC / ST ಅಭ್ಯರ್ಥಿಗಳಿಗೆ 5 ವರ್ಷಗಳು
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.
ಗೃಹಲಕ್ಷ್ಮಿ ಯೋಜನೆಗೆ ಮತ್ತೆ 8 ಕಂಡಿಷನ್ ಹಾಕಿದ ಸರ್ಕಾರ.! ಇಂಥವರಿಗೆ 2000 ಸಿಗಲ್ಲ.!
ಅರ್ಜಿ ಶುಲ್ಕ:-
SC / ST, ಅಂಗವಿಕಲ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಉಳಿದ ಅಭ್ಯರ್ಥಿಗಳಿಗೆ 110ರೂ.
● ಅರ್ಜಿ ಶುಲ್ಕವನ್ನು ಆನ್ಲೈನ್ ಪೇಮೆಂಟ್ ಮೂಲಕ ಪಾವತಿ ಮಾಡಬೇಕು.
ಅರ್ಜಿ ಸಲ್ಲಿಸುವ ವಿಧಾನ:-
● ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ indiapost.gov.in ಭೇಟಿಕೊಟ್ಟು ಅರ್ಜಿಯಲ್ಲಿ ವಿವರಗಳನ್ನು ತುಂಬಿಸಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
● ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಅರ್ಜಿ ಸಲ್ಲಿಕೆ ಯಶಸ್ವಿ ಆದ ಬಳಿಕ ಅರ್ಜಿ ಸ್ವೀಕೃತಿ ಪತ್ರದ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 03 ಆಗಸ್ಟ್, 2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23 ಆಗಸ್ಟ್, 2023
● ಅರ್ಜಿ ಸಲ್ಲಿಸುವಾಗ ಆಗಿರುವ ತಪ್ಪುಗಳ ತಿದ್ದುಪಡಿಗೆ ಅವಕಾಶ – ಆಗಸ್ಟ್ 24 ರಿಂದ ಆಗಸ್ಟ್ 26.