Medical Seats
ಆಗಸ್ಟ್ 15, 2024ರ ಸ್ವಾಂತಂತ್ರ್ಯೋತ್ಸವ(Independence Day)ದ ಸಂದರ್ಭದಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಹೌದು, ಮುಂದಿನ ಐದು ವರ್ಷಗಳಲ್ಲಿ ತಮ್ಮ ಸರ್ಕಾರ 75,000 ಹೊಸ ವೈದ್ಯಕೀಯ ಸೀಟುಗಳನ್ನು (Medical Seats) ಸೃಷ್ಟಿಸಲಿದೆ ಎಂದು ಘೋಷಣೆ ಮಾಡಿದ್ದಾರೆ.
78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯ ಆವರಣ(Precincts of the Red Fort)ದಿಂದ ಧ್ವಜಾರೋಹಣ(hoisting the flag) ಮಾಡಿ ದೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಇಂದಿಗೂ ಮಧ್ಯಮ ವರ್ಗದ ಮಕ್ಕಳು ವೈದ್ಯಕೀಯ ಶಿಕ್ಷಣ(Medical education)ಕ್ಕಾಗಿ ವಿದೇಶ(Abroad)ಕ್ಕೆ ಹೋಗುತ್ತಿದ್ದಾರೆ.
ವಿದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಲಕ್ಷ ಕೋಟಿ ಖರ್ಚು ಮಾಡುತ್ತಾರೆ ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರ ಒಟ್ಟು ವೈದ್ಯಕೀಯ ಸೀಟುಗಳನ್ನು ಸುಮಾರು 1 ಲಕ್ಷಕ್ಕೆ ಹೆಚ್ಚಿಸಿದೆ ಎಂದು ಹೇಳಿದರು. ಪ್ರತಿ ವರ್ಷ ಸುಮಾರು 25,000 ಯುವಕರು ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ ಅನ್ನೋದನ್ನು ಕೇಳಿದಾಗ ನನಗೆ ಆಶ್ಚರ್ಯವಾಗುತ್ತದೆ.
ಆದ್ದರಿಂದ, ನಾವು ಮುಂದಿನ ಐದು ವರ್ಷಗಳಲ್ಲಿ ವೈದ್ಯಕೀಯ ಸಾಲಿನಲ್ಲಿ 75,000 ಹೊಸ ಸೀಟುಗಳನ್ನು ಸೃಷ್ಟಿಸಲು ನಿರ್ಧರಿಸಿದ್ದೇವೆ. ನಾವು ಭಾರತದಲ್ಲಿ ಅಂತಹ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲು ಬಯಸುತ್ತೇವೆ, ಯುವಕರು ವಿದೇಶಕ್ಕೆ ಹೋಗಿ ಅಧ್ಯಯನ ಮಾಡುವ ಅಗತ್ಯವಿಲ್ಲ. ವಿದೇಶಿ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಅಧ್ಯಯನ ಮಾಡಬೇಕೆಂದು ನಾವು ಬಯಸುತ್ತೇವೆ ಎಂದು ಮೋದಿ ಹೇಳಿದರು.
ಮುಂದುವರಿದು ಮಾತನಾಡಿದ ಮೋದಿ, ಈ ವರ್ಷ ಮತ್ತು ಕಳೆದ ಕೆಲವು ವರ್ಷಗಳಿಂದ, ನೈಸರ್ಗಿಕ ವಿಕೋಪದಿಂದಾಗಿ, ನಮ್ಮ ಕಳವಳಗಳು ಹೆಚ್ಚುತ್ತಿವೆ. ಈ ನೈಸರ್ಗಿಕ ವಿಕೋಪದಿಂದ ಹಲವಾರು ಜನರು ತಮ್ಮ ಕುಟುಂಬ ಸದಸ್ಯರನ್ನು, ಆಸ್ತಿಯನ್ನು ಕಳೆದುಕೊಂಡಿದ್ದಾರೆ ರಾಷ್ಟ್ರವೂ ನಷ್ಟ ಅನುಭವಿಸಿದೆ.
ಇಂದು, ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಈ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಎಂದು ಅವರಿಗೆ ಭರವಸೆ ನೀಡುತ್ತೇನೆ ಎಂದರು. ಭಾರತದಿಂದ ವಸಾಹತುಶಾಹಿ ಆಡಳಿತವನ್ನು ಬೇರು ಸಹಿತ ಕಿತ್ತೊಗೆದ 40 ಕೋಟಿ ಜನರ ರಕ್ತವನ್ನು ನಾವು ಕೊಂಡೊಯ್ಯುಲು ನಾವು ಹೆಮ್ಮೆಪಡುತ್ತೇವೆ.
ಇಂದು ನಾವು 140 ಕೋಟಿ ಜನರಿದ್ದೇವೆ ನಾವು ಒಂದು ದಿಕ್ಕಿನಲ್ಲಿ ಸಂಕಲ್ಪ ಮಾಡಿ ಒಟ್ಟಿಗೆ ಸಾಗಿದರೆ. ದಾರಿಯಲ್ಲಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಮೂಲಕ 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣವಾಗಹುದು. ವಿಕಸಿತ ಭಾರತ 2047 ಕೇವಲ ಹೇಳಿಕೆಯಲ್ಲ. ಅದನ್ನು ಸಾಧಿಸಲು ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಪಡಿಸಲು ಜನರು ಹಲವು ಸಲಹೆಗಳನ್ನು ನೀಡಿದ್ದಾರೆ. ವಿಕಸಿತ ಭಾರತಕ್ಕಾಗಿ ಜನರು ಆಡಳಿತ ಸುಧಾರಣೆಗಳು, ತ್ವರಿತ ನ್ಯಾಯ ವಿತರಣಾ ವ್ಯವಸ್ಥೆ, ಸಾಂಪ್ರದಾಯಿಕ ಔಷಧಗಳನ್ನು ಉತ್ತೇಜಿಸುವುದು ಸೇರಿ ಹಲವು ಸಲಹೆಗಳನ್ನು ತಿಳಿಸಿದ್ದಾರೆ.
ಸುಧಾರಣೆಗಳ ಕಡೆಗೆ ನಮ್ಮ ಸಮರ್ಪಣೆ ಕೇವಲ ಕಾಗದಗಳಿಗೆ ಸೀಮಿತವಾಗಿಲ್ಲ, ನಾವು ಅದನ್ನು ಮೆಚ್ಚುಗೆ ಗಳಿಸಲು ಮಾಡುವುದಿಲ್ಲ. ಭಾರತವನ್ನು ಬಲಿಷ್ಠಗೊಳಿಸಲು ಈ ಕೆಲಸ ಮಾಡುತ್ತೇವೆ. ನಮ್ಮ ಸುಧಾರಣೆಗಳು ಭಾರತದ ಬೆಳವಣಿಗೆಗೆ ನೀಲನಕ್ಷೆಯಾಗಿದೆ. ನಾವು ತರುವ ಸುಧಾರಣೆಗಳು ಯಾವುದೇ ರಾಜಕೀಯ ಬಲವಂತದ ಕಾರಣದಿಂದಲ್ಲ, ನಮಗೆ ರಾಷ್ಟ್ರವೇ ಮೊದಲು ಎಂದು ಪ್ರಧಾನಿ ಮೋದಿ ಹೇಳಿದರು.
ನಾವು ವೋಕಲ್ ಫಾರ್ ಲೋಕಲ್ ಎಂಬ ಮಂತ್ರವನ್ನು ನೀಡಿದ್ದೇವೆ. ಇಂದು ವೋಕಲ್ ಫಾರ್ ಲೋಕಲ್ ಆರ್ಥಿಕ ವ್ಯವಸ್ಥೆಗೆ ಹೊಸ ಮಂತ್ರವಾಗಿ ಮಾರ್ಪಟ್ಟಿದೆ ಎಂದು ನನಗೆ ಸಂತೋಷವಾಗಿದೆ. ಪ್ರತಿಯೊಂದು ಜಿಲ್ಲೆಯೂ ತನ್ನ ಉತ್ಪನ್ನಗಳ ಬಗ್ಗೆ ಹೆಮ್ಮೆ ಪಡಲಾರಂಭಿಸಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಪರಿಸರವಿದೆ ಎಂದರು.