ಮೇಘನಾ ರಾಜ್ ರವರು ತಮ್ಮ ಮುದ್ದಾದ ಮಗನ ಹುಟ್ಟುಹಬ್ಬವನ್ನು ಎಷ್ಟು ಅದ್ದೂರಿಯಾಗಿ ಆಚರಿಸಿದ್ದಾರೆ ನೋಡಿ.

ನಮ್ಮ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರು ಮತ್ತು ನಟಿಯರು ಸಹ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಿಸುತ್ತಾರೆ. ಇದೀಗ ಮೇಘನಾ ರಾಜ್ ಹಾಗೆ ಚಿರಂಜೀವಿ ಸರ್ಜಾ ಅವರ ಮುದ್ದಾದ ಮಗ ರಾಯನ್ ರಾಜ್ ಸರ್ಜಾ ಅವರು ಎರಡು ವರ್ಷವನ್ನು ಪೂರೈಸಿ ಮೂರನೇ ವಸಂತಕ್ಕೆ ಅಣಿ ಇಟ್ಟಿದ್ದಾರೆ. ಚಿರಂಜೀವಿ ಸರ್ಜಾ ಅವರು ನಿಧನರಾದ ನಂತರ ಮೇಘನಾ ರಾಜ್ ರವರು ತುಂಬಾ ದುಃಖದಲ್ಲಿ ಇದ್ದರು ಆ ದುಃಖವನ್ನು ನೀಗಿಸುವಂತಹ ಕೆಲಸವನ್ನು ರಾಯನ್ ರಾಜ್ ಸರ್ಜಾ ಮಾಡಿದ್ದಾನೆ ಹೌದು ಮೇಘನಾ ರಾಜ್‍ರವರ ಬಾಳಲ್ಲಿ ರಾಯನ್ ಬಂದ ಮೇಲೆ ಅವರಿಗೆ ಇದ್ದಂತಹ ಎಲ್ಲಾ ನೋವು ಸಹ ಮರೆಸಿದ್ದಾನೆ. ಮೇಘನಾ ಅವರ ಮುಖದಲ್ಲಿ ಸದಾ ಮಂದಹಾಸ ತುಂಬಿರುತ್ತದೆ ಇದಕ್ಕೆ ಕಾರಣ ಅವರ ಮಗ ರಾಯನ್.

https://youtu.be/EG1PmSNjwUQ

ಎಷ್ಟು ಬೇಗ ಎರಡು ವರ್ಷಗಳು ಕಳೆದು ಹೋಯಿತು ಎಂದು ಗೊತ್ತಿಲ್ಲ ಇದೀಗ ನನ್ನ ಮಗನಿಗೆ ಎರಡನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಸಹ ತಮ್ಮ ಮಗನೊಟ್ಟಿಗೆ ಕೆಲವೊಂದಷ್ಟು ಸಮಯವನ್ನು ಕಳೆಯುತ್ತಾ ಖುಷಿಯ ಕ್ಷಣಗಳನ್ನು ಅನು ಆನಂದಿಸುತ್ತಾ ಇದ್ದಾರೆ. ಆಗಾಗ ತಮ್ಮ instagram ಖಾತೆಯಲ್ಲಿ ತಮ್ಮ ಮಗುವಿನ ಫೋಟೋವನ್ನು ಹಂಚಿಕೊಳ್ಳುತ್ತಾ ಇದ್ದಾರೆ ಈ ಫೋಟೋಗಳನ್ನು ನೋಡಿದಂತಹ ಅಭಿಮಾನಿಗಳು ರಾಯನ್ ಅವರ ದೊಡ್ಡ ಅಭಿಮಾನಿಗಳಾಗಿದ್ದಾರೆ ರಾಯನ್ ರಾಜ್ ಗೆ ಈಗ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಜೂನಿಯರ್ ಚಿರು ಸರ್ಜಾ ಅವರಿಗೆ ಸಾಕಷ್ಟು ಜನ ಫಾಲೋವರ್ಸ್ ಇದ್ದಾರೆ. ಇನ್ನು ತಮ್ಮ ಮಗನ ಫೋಟೋವನ್ನು instagram ನಲ್ಲಿ ಹಂಚಿಕೊಂಡು ಅವನಿಗೆ ಹುಟ್ಟು ಹಬ್ಬದ ಶುಭಾಶಯಗಳು ಮೇಘನಾ ರಾಜ್ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಅಭಿಮಾನಿಗಳು ಶುಭಾಶಯಗಳು ತಿಳಿಸಿದ್ದಾರೆ. ಹಾಗೆಯೆ ರಾಯನ್ ಹುಟ್ಟುಹಬ್ಬವನ್ನು ಮೇಘನಾ ರಾಜ್ ಅವರು ತುಂಬಾ ಅದ್ದೂರಿಯಾಗಿ ಆಚರಿಸಿದ್ದಾರೆ. ರಾಯನ್ ಹುಟ್ಟುಹಬ್ಬಕ್ಕೆ ಕುಟುಂಬ ಸದಸ್ಯರು ಹಾಗೆಯೇ ಸ್ನೇಹಿತರು ಇನ್ನಿತರರು ಆಗಮಿಸಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಅಷ್ಟೇ ಅಲ್ಲದೆ ದೃವ ಸರ್ಜಾ ಅವರು ಮೇಘನಾ ರಾಜ್ ಅವರ ಪುತ್ರನಿಗೆ ಚಿನ್ನದ ಬಳೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ ಇದನ್ನು ನೋಡಿದಂತಹ ಮೇಘನಾ ರಾಜ್ ಅವರು ತುಂಬಾ ಖುಷಿಪಟ್ಟಿದ್ದಾರೆ. ಹುಟ್ಟು ಹಬ್ಬದ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗಿದೆ, ಸಾಕಷ್ಟು ವಿಡಿಯೋಗಳನ್ನು ಸಹ ನಾವು ನೋಡಬಹುದು

ರಾಯನ್ ರಾಜ್ ಸರ್ಜಾ ಅವರು ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ ತಮ್ಮ ಮಗ ಸಹ ಚಿರಂಜೀವಿ ಸರ್ಜಾ ಅವರ ಹಾಗೆಯೇ ಉತ್ತಮ ವ್ಯಕ್ತಿತ್ವವುಳ್ಳಂತಹ ವ್ಯಕ್ತಿಯಾಗಬೇಕು, ಸಮಾಜಕ್ಕೆ ಮಾದರಿಯಾಗಬೇಕು ಎನ್ನುವಂತಹ ಹಂಬಲವನ್ನು ಇಟ್ಟುಕೊಂಡಿದ್ದಾರೆ. ಇನ್ನು ಪ್ರಮೀಳಾ ಜೋಷಾಯಿ ಹಾಗೆಯೇ ಸುಂದರ್ ರಾಜ್ ಅವರು ತಮ್ಮ ಮಗಳು ಮತ್ತು ಮೊಮ್ಮಗಳನಿಗೆ ತುಂಬಾ ಬೆಂಬಲವಾಗಿ ನಿಂತಿದ್ದು ಯಾವುದೇ ಕೆಲಸವನ್ನು ಮಾಡಬೇಕಾದರೂ ಇವರ ಸಹಕಾರ ಇದ್ದೇ ಇರುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: