ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಸೇರಲು ಬಯಸಿರುವವರಿಗೆ ಅಥವಾ ಇರುವ ಉದ್ಯೋಗವನ್ನು ಬದಲಾಯಿಸಿ ಬೇರೆ ಉದ್ಯೋಗ ಮಾಡಬೇಕು ಎಂದು ಯೋಚನೆ ಹೊಂದಿರುವ ಎಲ್ಲರಿಗೂ ಕೂಡ ಹೊಸದೊಂದು ಅವಕಾಶ ಸಿಗುತ್ತಿದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ (MESCOM Recruitment 2023) 200ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಕೂಡ ಹೊರಬಿದ್ದಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎನ್ನುವುದನ್ನು ಕೂಡ ಸವಿವರವಾಗಿ ತಿಳಿಸಲಾಗಿದೆ. ನಾವು ಕೂಡ ಈ ಅಂಕಣದಲ್ಲಿ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ, ವೇತನ ಶ್ರೇಣಿ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು, ಆಯ್ಕೆ ವಿಧಾನ, ಬೇಕಾಗುವ ದಾಖಲೆಗಳು ಇತ್ಯಾದಿ ವಿವರಗಳನ್ನು ತಿಳಿಸುತ್ತಿದ್ದೇವೆ.
ಸೋಲಾರ್ ಪಂಪ್ ಸೆಟ್ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 1.5 ಲಕ್ಷ ಸಹಾಯಧನ ಆಸಕ್ತ ರೈತರು ತಪ್ಪದೆ ಅರ್ಜಿ ಸಲ್ಲಿಸಿ.!
ಈ ಅರ್ಹತೆಗಳನ್ನು ಪೂರೈಸುವ ಕರ್ನಾಟಕದ ಯಾವುದೇ ಪುರುಷ ಅಥವಾ ಮಹಿಳಾ ಅಭ್ಯರ್ಥಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹಾಗಾಗಿ ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರಿಗೂ ಸ್ನೇಹಿತರ ಜೊತೆಗೂ ತಪ್ಪದೆ ಹಂಚಿಕೊಳ್ಳಿ.
ನೇಮಕಾತಿ ಸಂಸ್ಥೆ:- ಮೆಸ್ಕಾಂ
ಒಟ್ಟು ಹುದ್ದೆಗಳ ಸಂಖ್ಯೆ:- 200
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಹುದ್ದೆ ಮಾದರಿ:- ಶಿಶಿಕ್ಷು
ಅವಧಿ:- 1 ವರ್ಷ
ಹುದ್ದೆಗಳ ವಿವರ:-
ಗ್ರಾಜುಯೆಟ್ ಅಪ್ರೆಂಟಿಸ್ – 70
ಟೆಕ್ನಿಕಲ್ ಡಿಪ್ಲೋಮಾ ಅಪ್ರೆಂಟಿಸ್ – 65
ಜನರಲ್ ಸ್ಟ್ರೀಮ್ ಗ್ರಾಜುಯೆಟ್ಸ್ – 65
ವೇತನ ಶ್ರೇಣಿ
ಗ್ರಾಜುಯೆಟ್ ಅಪ್ರೆಂಟಿಸ್ – 8,000ರೂ.
ಟೆಕ್ನಿಕಲ್ ಡಿಪ್ಲೋಮಾ ಅಪ್ರೆಂಟಿಸ್ – 8,000ರೂ.
ಜನರಲ್ ಸ್ಟ್ರೀಮ್ ಗ್ರಾಜುಯೆಟ್ಸ್ – 9,000ರೂ.
ಶೈಕ್ಷಣಿಕ ವಿದ್ಯಾರ್ಹತೆ:-
ಗ್ರಾಜುಯೆಟ್ ಅಪ್ರೆಂಟಿಸ್ – BE / B.Tech
ಟೆಕ್ನಿಕಲ್ ಡಿಪ್ಲೋಮಾ ಅಪ್ರೆಂಟಿಸ್ – ಡಿಪ್ಲೊಮಾ
ಜನರಲ್ ಸ್ಟ್ರೀಮ್ ಗ್ರಾಜುಯೆಟ್ಸ್ – BA, BSc, B.Com, BBA, BCA
ಅರ್ಜಿ ಶುಲ್ಕ:-
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಅರ್ಜಿ ಸಲ್ಲಿಸಲು ನೇರವಾಗಿ ಮೆಸ್ಕಾಂ ಅಧಿಕೃತ ವೆಬ್ಸೈಟ್ mescom.karnataka.gov.in ಗೆ ಭೇಟಿ ಕೊಡಿ.
ಅರ್ಜಿ ಫಾರಂ ಲಿಂಕ್ ಕ್ಲಿಕ್ ಮಾಡಿ ಕೇಳಿರುವ ಎಲ್ಲ ವಿವರಗಳನ್ನು ಭರ್ತಿ ಮಾಡಬೇಕು. ಜೊತೆಗೆ ಎಲ್ಲಾ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಯಾದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬೇಕು.
ಆಯ್ಕೆ ವಿಧಾನ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಆಕಾಂಕ್ಷಿಗಳ ಮೆರಿಟ್ ಲಿಸ್ಟ್ ತಯಾರಿಸಿ ಸೂಕ್ತ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ನಡೆಸಿ ಈ ಹುದ್ದೆಗಳಿಗೆ ಆಯ್ದುಕೊಳ್ಳಲಾಗುವುದು.
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 19.08.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 13.09.2023
ಬೇಕಾಗುವ ದಾಖಲೆಗಳು:-
ಇತ್ತೀಚಿನ ಭಾವಚಿತ್ರ ಮತ್ತು ಸಹಿ
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
ನಿವಾಸ ದೃಢೀಕರಣ ಪತ್ರ
ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
ಬ್ಯಾಂಕ್ ಖಾತೆ ವಿವರ
ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು.