ನಾವು ನಮ್ಮ ಗೌಪ್ಯತೆಗಾಗಿ ನಮ್ಮ ಮೊಬೈಲ್ನಲ್ಲಿ ಸೀಕ್ರೆಟ್ ಪ್ಯಾಟ್ರನ್ ಅಥವಾ ಪಿನ್ ಲಾಕ್ ಇಟ್ಟುಕೊಂಡಿರುತ್ತೇವೆ. ಇದು ಎಲ್ಲರ ಮೊಬೈಲ್ನಲ್ಲೂ ವಿವಿಧ ರೀತಿಯಲ್ಲಿ ಇರುತ್ತದೆ. ಈ ಪ್ಯಾಟ್ರನ್ ಮೊಬೈಲ್ ಮಾಲೀಕರಿಗೆ ಮಾತ್ರವೇ ತಿಳಿದಿರುತ್ತದೆ. ಹೌದು, Android ಮೊಬೈಲ್ ಸೇಫ್ಟಿಗಾಗಿ ಎಲ್ಲರೂ ಪ್ಯಾಟರ್ನ್ ಲಾಕ್ ಅಥವಾ ಪಿನ್ ಲಾಕ್ ಗಳನ್ನು ತಮ್ಮ ಫೋನ್ (smartphone) ಗಳಲ್ಲಿ ಅಳವಡಿಸುತ್ತಾರೆ. ನಮ್ಮ ಸ್ಮಾರ್ಟ್ ಫೋನ್ ನಲ್ಲಿ ಬಹಳಷ್ಟು ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತೇವೆ.
ಇದಕ್ಕಾಗಿ, ನಾವು ನಮ್ಮ ಫೋನ್ನಲ್ಲಿ ಪಿನ್ ಅಥವಾ ಪ್ಯಾಟರ್ನ್ ಅನ್ನು ಹಾಕುವ ಮೂಲಕ ಫೋನ್ ಅನ್ನು ಲಾಕ್ ಮಾಡುತ್ತೇವೆ. ಆದರೆ ಅನೇಕ ಬಾರಿ ನಾವು ಫೋನಿಗೆ ಹಾಕಿದ ಪಿನ್ ಅಥವಾ ಪ್ಯಾಟರ್ನ್ ಅನ್ನು ಮರೆತುಬಿಡುತ್ತೇವೆ. ಆ ಸಮಯದಲ್ಲಿ ನಾವು “ಮರೆತಿದ್ದ Android ಫೋನ್ ಪ್ಯಾಟರ್ನ್ ಲಾಕ್ ಅನ್ನು ಅನ್ಲಾಕ್ ಮಾಡುವುದು ಹೇಗೆ” ಎಂಬ ಪ್ರಶ್ನೆಗಳನ್ನು ಸಹ ಹುಡುಕುತ್ತೇವೆ. ಇಂದಿನ ಈ ಲೇಖನದಲ್ಲಿ, ಆಂಡ್ರಾಯ್ಡ್ ಅನ್ನು ಅನ್ಲಾಕ್ ಮಾಡಲು 2 ಪರಿಣಾಮಕಾರಿ ವಿಧಾನಗಳು ತಿಳಿಸಿಕೊಡಲಾಗುತ್ತದೆ. ಹಾಗಾದ್ರೆ, ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮಾಹಿತಿ ತಿಳಿದುಕೊಳ್ಳಿ.
ನಿಮ್ಮ ಫೋನಿನ ಲಾಕ್ ಪ್ಯಾಟ್ರನ್ ಮರೆತಿದ್ದರೆ ಈ ವಿಧಾನ ಅನುಸರಿಸಿ
* ಮರೆತು ಹೋದ ಆಂಡ್ರಾಯ್ಡ್- ಲಾಕ್ ಪ್ಯಾಟರ್ನ್ ಅನ್ನು Tenorshsre 4ukey ನೊಂದಿಗೆ ಅನ್ ಲಾಕ್ ಮಾಡಿ.
* Android ಗಾಗಿ-Tenorshre 4uKey ಯು ಅತ್ಯುತ್ತಮ ಆಂಡ್ರಾಯ್ಡ್ ಪ್ಯಾಟರ್ನ್ ಅನ್ಲಾಕರ್ ಸಾಫ್ಟ್ವೇರ್. ಇದು ಆಂಡ್ರಾಯ್ಡ್ ಸಾಧನಗಳಲ್ಲಿನ ಪ್ಯಾಟರ್ನ್ ಲಾಕ್ ಅನ್ನು ಕೆಲವೇ ನಿಮಿಷಗಳಲ್ಲಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಅದು ಹೇಗೆ ಎಂಬುದರ ಬಗ್ಗೆ ಈ ಕೆಳಗೆ ನೋಡೋಣ ಬನ್ನಿ…
ಹಂತ 1: ಮೊದಲು ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಿ.
ಹಂತ 2: ನಿಮ್ಮ ಕಂಪ್ಯೂಟರ್(computer)ನೊಂದಿಗೆ ನಿಮ್ಮ ಫೋನ್ ಅನ್ನು ಸಂಪರ್ಕಿಸಿ(connect) ಮತ್ತು ಉಪಕರಣದ ಮೂಲಕ ಫೋನ್ ಪತ್ತೆಯಾಗುವವರೆಗೆ ಕಾಯಿರಿ.
ಹಂತ 3: ರಿಮೋವ್ ಸ್ಕ್ರೀನ್ ಲಾಕ್ ಇಂಟರ್ಫರೆನ್ಸ್ ಅನ್ನು ಆಯ್ಕೆಮಾಡಿಕೊಳ್ಳಿ.
ಹಂತ 4: ಮೊದಲ ಆಯ್ಕೆಯನ್ನು ಆರಿಸಿ – ಹೆಚ್ಚಿನ Android ಸಾಧನಗಳಿಗೆ ಸ್ಕ್ರೀನ್ ಲಾಕ್ ತೆಗೆದುಹಾಕಿ ಮತ್ತು ಸ್ಟಾರ್ಟ್(start) ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 5: ಸಾಫ್ಟ್ವೇರ್ ಡೇಟಾ ಸಿದ್ಧಪಡಿಸಿ ಪ್ಯಾಕೇಜ್ ಅನ್ನು ಫೋನ್ಗೆ ಕಳುಹಿಸುತ್ತದೆ.
ಹಂತ 6: ನಂತರ 4uKey ಯು ಪಾಸ್ವರ್ಡ್ ತೆಗೆದುಹಾಕುವಿಕೆಯ ಡೇಟಾವನ್ನು ಅಳಿಸುತ್ತದೆ ಎಂಬ ಪೋಪ್-ಆಪ್ ನೋಟಿಫಿಕೇಟಿನ್(Notification) ಕಳಿಸುತ್ತದೆ. ಎಸ್( yes) ಅಂತ ಕ್ಲಿಕ್ ಮಾಡಿ.
ಹಂತ 7: ಅಂತಿಮವಾಗಿ, ಸಾಫ್ಟ್ವೇರ್ ನಿಮ್ಮ Android ಸಾಧನದಿಂದ ಮರೆತುಹೋದ ಪ್ಯಾಟರ್ನ್ ಲಾಕ್ ಅನ್ನು ತೆಗೆದುಹಾಕುತ್ತದೆ.
ಹೀಗೆ ನೀವು ಮರೆತು ಹೋದ ಲಾಕ್ ಪ್ಯಾಟರ್ನ್ tenorshare 4uKey ಇಂದ ಅನ್ಲಾಕ್ ಮಾಡಬಹುದು
ವಿಧಾನ 2: Android ಸಾಧನ ನಿರ್ವಾಹಕವನ್ನು(Android Device Manager)ಬಳಸಿಕೊಂಡು ಪ್ಯಾಟರ್ನ್ ಅನ್ನು ಅನ್ಲಾಕ್ ಮಾಡಿ.
Android ಸಾಧನ ನಿರ್ವಾಹಕ ಅಥವಾ Google ನನ್ನ ಸಾಧನವನ್ನು ಹುಡುಕಿ(Google find my device ). ನೀವು ಗೂಗಲ್ ಖಾತೆಗೆ ಲಾಗಿನ್ ಆಗಿದ್ದರೆ ಸಾಕು. ಈ ವಿಧಾನವು ಎಲ್ಲಾ Android ಫೋನ್ ಗಳಿಗೆ ಕಾರ್ಯನಿರ್ವಹಿಸುತ್ತದೆ.
ಹಂತ 1: ಅಧಿಕೃತ ಗೂಗಲ್ನ ನನ್ನ ಸಾಧನವನ್ನು ಹುಡುಕಿ (Google find my device ) ಎಂಬ ಆಪನ್ನು ಡೌನ್ಲೋಡ್ ಮಾಡಿಕೊಂಡು ನಂತರ ಲಾಗಿನ್ ಆಗಿ.
ಹಂತ 2: ಮುಖಪುಟದಲ್ಲಿ, ನಿಮ್ಮ Google ಖಾತೆಗೆ ಲಿಂಕ್ ಮಾಡಲಾಗಿದ್ದು ಮತ್ತು ನಕ್ಷೆಯಲ್ಲಿ ಅವುಗಳ ಸ್ಥಳವನ್ನು(location) ನೋಡುತ್ತೀರಿ.
ಹಂತ 3: ಎಡಭಾಗದ ಫಲಕದಲ್ಲಿರುವ ERASE DEVICE ಮೇಲೆ ಕ್ಲಿಕ್ ಮಾಡಿ ಮತ್ತು ಸಾಧನವನ್ನು ಅಳಿಸಲು ನಿಮ್ಮ ಪಾಸ್ವರ್ಡ್(password) ಅನ್ನು ನಮೂದಿಸಿ.
ಹಂತ 4: ಪುನಹ ERASE ಅನ್ನು ಕ್ಲಿಕ್ ಮಾಡಿ, ಇದು ನಿಮ್ಮ ಸ್ಮಾರ್ಟ್ ಫೋನ್ ರಿಸೆಟ್(reset) ಮಾಡುತ್ತದೆ ಮತ್ತು ಲಾಕ್ ಪ್ಯಾಟರ್ನ್ ತೆಗೆದುಹಾಕುತ್ತದೆ.
ಹೀಗೆ ನೀವು ಮರೆತು ಹೋದ ಲಾಕ್ ಪ್ಯಾಟರ್ನ್ ಅನ್ನು Google find my device ಇಂದ ಅನ್ಲಾಕ್ ಮಾಡಬಹುದು.
ಈ ಮೇಲಿನ ಎರಡು ವಿಧಾನಗಳು, ನಿಮ್ಮ ಫೋನ್ ಪ್ಯಾಟ್ರನ್ ಮರೆತು ಹೋದಲ್ಲಿ ಪುನಃ ಫೋನನ್ನು ಅನ್ಲಾಕ್ ಮಾಡಲು ಸಹಾಯ ಮಾಡುತ್ತದೆ. ಈ ಲೇಖನವು ನಿಮಗೆ ಉಪಯುಕ್ತವಾಗಲಿದೆ.