ಕುರಿ ಸಾಕಾಣಿಕೆ ಮೇಕೆ ಸಾಕಾಣಿಕೆ ಪಶು ಸಂಗೋಪನೆಯ ಭಾಗ ಆಗಿದೆ. ರೈತರು ಹೇಗೆ ಕೃಷಿ ಜೊತೆ ಹೈನುಗಾರಿಕೆಯನ್ನು ಮಾಡಿಕೊಂಡು ಜೀವನೋಪಾಯ ಕಂಡುಕೊಂಡಿದ್ದರು ಅದೇ ರೀತಿ ಹಳ್ಳಿಗಳಲ್ಲಿ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ ಕೂಡ ಇದೇ ರೀತಿಯ ರೈತರ ಪ್ರಮುಖ ಕಸುಬಾಗಿದೆ. ಕುರಿ ಮತ್ತು ಮೇಕೆಗಳು ರೈತರಿಗೆ ಎರಡನೇ ಕಾಮಧೇನುಗಳಾಗಿವೆ. ಕುರಿ ಮತ್ತು ಮೇಕೆಯನ್ನು ಹಾಲು, ಉಣ್ಣೆ, ಚರ್ಮ, ಗೊಬ್ಬರ ಮತ್ತು ಮಾಂಸ ಈ ಕಾರಣಕ್ಕಾಗಿ ಇವುಗಳ ಸಾಕಾಣಿಕೆ ಮಾಡುತ್ತಾರೆ.
ಇದು ರೈತನಿಗೆ ಕಷ್ಟಕಾಲಕ್ಕೆ ಕನಿಷ್ಠವಾದರೂ ಆದಾಯ ಕೊಡುವ ಕಸುಬಾಗಿವೆ. ಈಗ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವವರನ್ನು ಇನ್ನಷ್ಟು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಅವರನ್ನು ಈ ಕ್ಷೇತ್ರದಲ್ಲಿ ಉತ್ತೇಜಿಸುವ ಸಲುವಾಗಿ ಸರ್ಕಾರ ಹೊಸ ಯೋಜನೆ ಯನ್ನು ಜಾರಿಗೆ ತಂದು ಅವರ ಸಹಾಯಕ್ಕೆ ನಿಂತಿದೆ.
ಅದೇನೆಂದರೆ ಮೇಕೆ ಸಾಕಾಣಿಕೆ ಮಾಡುವವರಿಗೆ ಮೇಕೆ ಸಾಕಾಣಿಕೆ ಕೇಂದ್ರ ತೆರೆಯಲು 1 ಲಕ್ಷದಿಂದ 25 ಲಕ್ಷದವರೆಗೂ ಕೂಡ ಸಾಲ ನೀಡುತ್ತಿದೆ. ಈ ಸಾಲ ಸೌಲಭ್ಯ ಪಡೆಯಲು ಮೇಕೆ ಸಾಕಾಣಿಕೆ ಮಾಡುವ ರೈತ ಕೆಲವು ಅರ್ಹತೆಗಳನ್ನು ಹೊಂದಿರಬೇಕು ಮತ್ತು ಕೆಲವು ಪುರಾವೆಗಳನ್ನು ಕೂಡ ಕೊಡಬೇಕಾಗುತ್ತದೆ. ಮುಖ್ಯವಾಗಿ ಮೇಕೆ ಸಾಕಾಣಿಕೆ ಕೇಂದ್ರ ತೆರೆಯಲು ನಿರ್ಧಾರ ಮಾಡಿದ ರೈತ ಆತನ ಹೆಸರಿನಲ್ಲಿ 0.25 ಎಕರೆ ವಿಸ್ತೀರ್ಣದ ಜಮೀನನ್ನು ಹೊಂದಿರಬೇಕು.
ಆತ ಯಾವ ಸ್ಥಳದಲ್ಲಿ ವಾಸಿಸುತ್ತಿದ್ದಾನೋ ಅದೇ ಸ್ಥಳದಲ್ಲಿ ಮೇಕೆ ಸಾಕಾಣಿಕೆ ಕೇಂದ್ರ ತೆರೆಯಬೇಕು. ಆತನ ಬಳಿ ಕನಿಷ್ಠ 20 ಮೇಕೆಗಳಾದರೂ ಇರಬೇಕು. ಈ ಹಿಂದೆ ಅವನು ಈ ಯೋಜನೆಯ ಲಾಭ ಪಡೆದಿರಬಾರದು. ಮತ್ತು ಆತನ ವಯಸ್ಸು 18ರಿಂದ 65 ವರ್ಷದ ಒಳಗಿರಬೇಕು. ಇಷ್ಟೆಲ್ಲ ಅರ್ಹತೆಗಳು ಇದ್ದ ಪಕ್ಷದಲ್ಲಿ ಆತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಕಾಮಗಾರಿ ಅಡಿಯಲ್ಲಿ ಮೇಕೆ ಸಾಕಾಣಿಕೆಗೆ ಸಹಾಯಧನ ಮತ್ತು ಸಾಲ ಸೌಲಭ್ಯ ಪಡೆಯಬಹುದು.
ಈ ಮೇಲ್ಕಂಡ ಅರ್ಹತೆಗಳೊಂದಿಗೆ ಕೆಲ ಪ್ರಮುಖ ದಾಖಲಾತಿಗಳನ್ನು ಕೂಡ ನೀಡಬೇಕಾಗುತ್ತದೆ. ಅದೇನೆಂದರೆ ಆತ ಆಧಾರ್ ಕಾರ್ಡ್ ಹೊಂದಿರಬೇಕು, ಪಾನ್ ಕಾರ್ಡ್ ಇರಬೇಕು, ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಪುಸ್ತಕ ಇರಬೇಕು, ನಿವಾಸ ದೃಢೀಕರಣ ಪತ್ರ, ಚೆಕ್ ರದ್ದು, ಫೋಟೋ, ಅನುಭವ ಪ್ರಮಾಣ ಪತ್ರ, ಪ್ರಾಜೆಕ್ಟ್ ಪ್ರಸ್ತಾವನೆ, ತೆರಿಗೆ ರಿಟರ್ನ್ಸ್, ಭೂ ದಾಖಲೆ ಇವೆಲ್ಲವನ್ನು ದಾಖಲೆಗಳಾಗಿ ನೀಡಬೇಕು.
ಇಷ್ಟೆಲ್ಲಾ ದಾಖಲೆಗಳು ಸರಿಯಾಗಿದ್ದರೆ ಮೇಕೆ ಸಾಕಾಣಿಕೆಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ವಾಣಿಜ್ಯ ಬ್ಯಾಂಕ್, ಸಿಟಿಜನ್ ಬ್ಯಾಂಕ್, ಗ್ರಾಮೀಣಾಭಿವೃದ್ಧಿ ಬ್ಯಾಂಕ್, ರಾಜ್ಯ ಸಹಕಾರಿ ಕೃಷಿ ಬ್ಯಾಂಕ್ ಇವುಗಳಲ್ಲಿ ಅರ್ಜಿ ಸಲ್ಲಿಸಿ, ಸಾಲ ಸೌಲಭ್ಯ ಪಡೆಯಬಹುದು. ಈ ಮೇಲ್ಕಂಡ ಯೋಜನೆ ರೀತಿಯೇ ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಮತ್ತಿತರ ಉದ್ಯೋಗಗಳಿಗೆ ರೈತರಿಗೆ ಅನುಕೂಲ ಆಗಲಿ ಎಂದು ಸರ್ಕಾರ ಆರ್ಥಿಕ ನೆರವು ನೀಡಿ ಅನುಕೂಲ ಮಾಡಿಕೊಡುತ್ತಿದೆ.
ಅವುಗಳ ವಿವರಗಳನ್ನು ರೈತರು ತಪ್ಪದೆ ತಿಳಿದುಕೊಂಡು ಈ ಮೂಲಕ ಸಹಾಯ ಪಡೆದು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬಹುದು. ಈ ವಿಭಾಗಗಳಲ್ಲಿ ರೈತರು ನಷ್ಟ ಅನುಭವಿಸಬಾರದು ಎನ್ನುವುದೇ ಸರ್ಕಾರದ ಉದ್ದೇಶ ಆಗಿದೆ ಹಾಗಾಗಿ ಈ ಯೋಜನೆಗಳ ಫಲಾನುಭವಿಗಳಾಗಿ ಹೆಚ್ಚು ಲಾಭ ಪಡೆಯಿರಿ ಮತ್ತು ಈ ವಿಷಯ ಇನ್ನಷ್ಟು ಜನರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಹೆಚ್ಚು ಶೇರ್ ಮಾಡಿ.