ಪುತ್ರನ ಆಸ್ತಿಯಲ್ಲಿ ತಾಯಿಗೂ ಹಕ್ಕಿದೆ.! ಹೈಕೋರ್ಟ್‌ನಿಂದ ಮಹತ್ವದ ಆದೇಶ.! ಮಗ ಸಂಪಾದನೆ ಮಾಡಿದ ಆಸ್ತಿಯಲ್ಲಿ ತಾಯಿ ಕೂಡ ಪಾಲು ಪಡೆಯಬಹುದು.!

 

WhatsApp Group Join Now
Telegram Group Join Now

ನಮ್ಮ ದೇಶದಲ್ಲಿ ನ್ಯಾಯಾಲಯಗಳಲ್ಲಿ ಹೂಡಲಾಗುತ್ತಿರುವ ಕೇಸ್ ಗಳಲ್ಲಿ ಆಸ್ತಿ ಕುರಿತ ವ್ಯಾಜ್ಯದ ಕೇಸ್ ಗಳೇ ಹೆಚ್ಚಾಗಿವೆ. ಅದರಲ್ಲೂ ಒಂದೇ ಕುಟುಂಬದಲ್ಲಿ ಸಹೋದರ ಸಹೋದರಿಯ ಮಧ್ಯೆ, ತಂದೆ ಮಕ್ಕಳ ಮಧ್ಯೆ, ಅತ್ತೆ ಸೊಸೆ ಮಧ್ಯೆ, ಆಸ್ತಿ ಸಂಬಂಧಿತ ವಿವಾದ ಹೆಚ್ಚಾಗಿದ್ದು ಅನೇಕರಿಗೆ ಈ ಬಗ್ಗೆ ಕಾನೂನಿನಲ್ಲಿ ಏನಿದೆ ಎನ್ನುವುದರ ಸ್ಪಷ್ಟ ಅರಿವು ಇರುವುದಿಲ್ಲ.

ಹಾಗಾಗಿ ತಮ್ಮ ಸಮಸ್ಯೆಯನ್ನು ಕಾನೂನು ಬಗೆ ಹರಿಸಲಿ ಎಂದು ನ್ಯಾಯಾಲಯಗಳಲ್ಲಿ ತಮ್ಮ ಹಕ್ಕಿನ ಕುರಿತು ದಾವೆ ಹೂಡುತ್ತಾರೆ. ಈ ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಾಲಯಗಳು ಅನ್ಯಾಯವಾಗಿರುವ ಪಕ್ಷಕ್ಕೆ ನ್ಯಾಯ ಒದಗಿಸುತ್ತದೆ ಮತ್ತು ನ್ಯಾಯಾಲಯದಿಂದ ತೀರ್ಪು ಬಂದ ಮೇಲೆ ಅದಕ್ಕೆ ತಲೆ ಬಾಗಿ ಇನ್ನು ಮುಂದೆ ಅದೇ ರೀತಿ ನಡೆದುಕೊಳ್ಳಬೇಕಾಗುತ್ತದೆ.

ಒಂದು ಪ್ರಕರಣದಲ್ಲಿ ಬಂದಿರುವ ತೀರ್ಪನ್ನು ಮತ್ತಷ್ಟು ಇದೇ ರೀತಿಯ ಸಮಸ್ಯೆಗಳಲ್ಲಿ ಹುಡುಕಿಕೊಳ್ಳುವುದಕ್ಕೆ ಪಾಠ ಎನ್ನಬಹುದು ಆದರೆ ಎಲ್ಲ ಪ್ರಕರಣಗಳಿಗೂ ಇದು ಅನ್ವಯವಾಗುವುದಿಲ್ಲ ಎನ್ನುವುದು ಸ್ಪಷ್ಟ ಕೆಲವೊಮ್ಮೆ ಒಂದು ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಅದೇ ಮಾದರಿಯ ಇನ್ನೊಂದು ಪ್ರಕರಣಕ್ಕೆ ಬಂದಿರುವುದಿಲ್ಲ ಯಾಕೆಂದರೆ ಪ್ರಕರಣದ ಅಳದಲ್ಲಿ ವಿಷಯ ಭಿನ್ನವಾಗಿರುತ್ತದೆ.

ಹಾಗಾಗಿ ಕಾನೂನಿನಲ್ಲಿ ಸಾಕಷ್ಟು ನಿಯಮಗಳಿವೆ ಆ ನಿಯಮದ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ಇಂತಹದೇ ಒಂದು ಹೊಸ ವಿಷಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದೇನೆಂದರೆ ಆಸ್ತಿ ಸಂಬಂಧಿತ ವಿಷಯದಲ್ಲಿ ಅತ್ತೆ ಹಾಗೂ ಸೊಸೆ ತಮ್ಮ ಪಾಲಿನ ಹಕ್ಕಿನ ಕುರಿತು ಕೋರ್ಟ್ ಮೆಟ್ಟಿಲೇರಿದ್ದಾಗ ಮೃ’ತ ಮಗನ ಆಸ್ತಿಯಲ್ಲಿ ಹೆತ್ತ ತಾಯಿಗೂ ಕೂಡ ಹಕ್ಕಿದೆ ಎಂದು ಕೊರ್ಟ್ ತೀರ್ಪು ನೀಡಿದೆ.

ಆ ಪ್ರಕರಣದ ವಿಷಯಗಳ ಸಮೇತ ಈ ಉದಾಹರಣೆಯನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸುತ್ತಿದ್ದೇವೆ ಹಿಂದೂ ಉತ್ತರಾಧಿಕಾರಿದ ಕಾಯಿದೆ ಸಾಮಾನ್ಯ ನಿಯಮಗಳ ಪ್ರಕಾರ ಮೃ’ತ ಮಗನ ಆಸ್ತಿಗೆ ಆತನ ಹೆತ್ತ ತಾಯಿಯು ಮೊದಲನೇ ವಾರಸುದಾರರು ಆಗಿರುತ್ತಾರೆ. ಆ ವ್ಯಕ್ತಿಗೆ ಪತ್ನಿ ಹಾಗೂ ಮಕ್ಕಳಿದ್ದರೂ ಕೂಡ ತಾಯಿಯು ಸಹ ತನ್ನ ಪಾಲಿಗೆ ಬರಬೇಕಾದ ಆಸ್ತಿಯನ್ನು ಪಡೆಯಬಹುದು.

ಸಂತೋಷ್ ಹಾಗೂ ಸುಶೀಲಮ್ಮ ಎನ್ನುವವರ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಈ ತೀರ್ಪು ನೀಡಿದೆ. ಸಂತೋಷ್ ಎನ್ನುವ ವ್ಯಕ್ತಿಯು ಮೃ’ತಪಟ್ಟ ನಂತರ ಸಂತೋಷ್ ಪತ್ನಿ ಹಾಗೂ ಪುತ್ರನು ಸಂತೋಷ್ ಪಾಲಿಗೆ ಬರಬೇಕಾಗಿದ್ದ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿ ವಿಚಾರಣಧೀನ ನ್ಯಾಯದಲ್ಲಿ ದಾವೆ ಹೂಡಿದ್ದರು.

ಆ ಸಮಯದಲ್ಲಿ ನೀಡಿದ ತೀರ್ಪಿನಲ್ಲಿ ಸುಶೀಲಮ್ಮನನ್ನು ಕೂಡ ಪಾಲುದಾರರಾಗಿ ಪರಿಗಣನೆಗೆ ತೆಗೆದುಕೊಳ್ಳದ ಕಾರಣ ಸುಶೀಲಮ್ಮ ವಿಚಾರಣಧೀನ ನ್ಯಾಯಾಲಯವು ಕೊಟ್ಟ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್ ಗೆ ಮೊರೆ ಇಟ್ಟಿದ್ದರು.

ಕಾನೂನಿನ ನಿಬಂಧನೆಗಳು ಹಾಗೂ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದ ಹೈಕೋರ್ಟ್ ಸುಶೀಲಮ್ಮ ಅವರನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿದ ಮೇಲೆ ಸುಶೀಲಮ್ಮ ಕೂಡ ಮೊದಲನೇ ವರ್ಗದ ವಾರಸುದರಾಗಲಿದ್ದಾರೆ. ಅವಿಭಾಜ್ಯ ಕುಟುಂಬದ ಆಸ್ತಿಯ ಸಂತೋಷ್ ಪಾಲಿನಲ್ಲಿ ಪಾಲು ಸುಶೀಲಮ್ಮ ಕೂಡ ಅರ್ಹರಾಗಿರುತ್ತಾರೆ.

ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ನೀಡಿರುವ ತೀರ್ಪು ದೋಷದಿಂದ ಕೂಡಿದೆ. ಅಲ್ಲದೆ ಸುಶೀಲಮ್ಮ ಅವರ ಪತಿ ಅಂದರೆ ಸಂತೋಷ್ ತಂದೆ ಕೂಡ ಜೀವಂತವಾಗಿ ಇದ್ದಿದ್ದರಿಂದ ಪ್ರಕರಣದಲ್ಲಿ ಸುಶೀಲಮ್ಮನನ್ನು ದಾಯದಿ ಎಂದು ಪರಿಗಣಿಸಲಾಗದು. ಹೀಗಾಗಿ ಪಿತ್ರಾರ್ಜಿತ ಅಥವಾ ಜಂಟಿ ಆಸ್ತಿಯಲ್ಲಿ ಆಕೆಯ ಪಾಲು ಇಲ್ಲ ಎಂದು ಹೇಳಲಾಗುವುದಿಲ್ಲ ಎಂದು ತೀರ್ಪು ನೀಡಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now