ಪ್ರತಿಯೊಬ್ಬರೂ ಕೂಡ ಬಾಯಿ ಹುಣ್ಣಿನಿಂದ ಬಳಲುತ್ತಾರೆ. ಬಾಯಿ ಒಳಗೆ, ನಾಲಿಗೆ ಮೇಲೆ, ವಸಡುಗಳ ಮೇಲೆ, ಚೀಕ್ಸ್ ನಲ್ಲಿ ಸಣ್ಣ ಸಣ್ಣ ಗುಳ್ಳೆಗಳಾಗಿರುತ್ತವೆ. ಕೆಲವು ಬಾರಿ ಇದು ಆಳವಾಗಿ ಇರುತ್ತದೆ, ಖಾರ ತಿನ್ನಲು ಆಗುವುದಿಲ್ಲ, ಎಷ್ಟೋ ಬಾರಿ ಊಟವನ್ನೇ ಮಾಡಲು ಆಗುವುದಿಲ್ಲ, ಬರಿ ಅನ್ನವನ್ನು ತಿಂದರೂ ಕೂಡ ಒತ್ತಿದ ರೀತಿ ಆಗಿ ಕಣ್ಣೀರು ಬರುತ್ತದೆ, ಇದು ಬಹಳಷ್ಟು ನೋವು ಕೊಡುತ್ತದೆ.
ಆಗ ವೈದ್ಯರು ಇದನ್ನು ಚೆಕ್ ಮಾಡಿ ಹಚ್ಚಿಕೊಳ್ಳಲು ಜೆಲ್ ಕೊಡುತ್ತಾರೆ, ಒಮ್ಮೊಮ್ಮೆ ಮಾತ್ರೆಗಳನ್ನು ಕೂಡ ಕೊಡುತ್ತಾರೆ, ಇನ್ನು ಕೆಲವರು ವೈದ್ಯರ ಬಳಿ ಹೋಗುವುದೇ ಇಲ್ಲ, ನೇರವಾಗಿ ಮೆಡಿಕಲ್ ಗಳಿಗೆ ಹೋಗಿ ಬಿ ಕಾಂಪ್ಲೆಕ್ಸ್ ಮಾತ್ರೆ ತೆಗೆದುಕೊಂಡು ತಿನ್ನುತ್ತಾರೆ ಮತ್ತು ಕೆಲವು ಮನೆಗಳಲ್ಲಿ ಅಮ್ಮಂದಿರು ಮನೆಮದ್ದುಗಳನ್ನು ಮಾಡಿಕೊಡುತ್ತಾರೆ.
ತುಪ್ಪ ಅಥವಾ ಕೊಬ್ಬರಿ ಎಣ್ಣೆ ಹಚ್ಚುವುದು ಅಥವಾ ಗಸಗಸೆ ಪಾಯಸ ಮಾಡಿಕೊಡುವುದು, ಕೊಬ್ಬರಿ ತಿನ್ನಲು ಹೇಳುವುದು, ಹಾಲಿನ ಕೆನೆ ಹಚ್ಚುವುದು ಈ ರೀತಿ ಮನೆಮದ್ದುಗಳಿಂದಲೂ ಕೂಡ ಇದು ಗುಣವಾಗುತ್ತದೆ. ಹಾಗಾದರೆ ಇದಕ್ಕೆಲ್ಲ ಕಾರಣ ಏನು? ಇದು ಪರ್ಮನೆಂಟ್ ಆಗಿ ಬರಲೇಬಾರದು ಎಂದರೆ ಏನು ಮಾಡಬೇಕು? ಇದರಿಂದ ಇನ್ನೇನಾದರೂ ಸಮಸ್ಯೆ ಆಗುತ್ತಿದೆಯೇ ಎನ್ನುವುದು ಹಲವರ ಪ್ರಶ್ನೆ ಅದರ ಬಗ್ಗೆ ಕೆಲವು ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇನೆ.
ಬಾಯಿಯ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ ಯಾಕೆಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆ ಬಾಯಿಯಿಂದ ಶುರುವಾಗಿರುತ್ತದೆ. ಬಾಯಿಯಲ್ಲಿ ಹುಣ್ಣು ಏಕೆ ಆಗುತ್ತದೆ ಎಂದರೆ ಖಂಡಿತವಾಗಿಯೂ ಕೆಲ ವಿಟಮಿನ್ ಗಳ ಕೊರತೆಯಿಂದಾಗಿ ಬಾಯಿಹುಣ್ಣು ಉಂಟಾಗುತ್ತದೆ ಜೊತೆಗೆ ಮತ್ತೊಂದು ಆಶ್ಚರ್ಯಕರ ಸಂಗತಿ ಏನೆಂದರೆ ನಮಗೆ ಹೆಚ್ಚಿನ ಟೆನ್ಶನ್ ಇದ್ದಾಗ ಕೂಡ ಬಾಯಿ ಹುಣ್ಣು ಆಗುತ್ತದೆ.
ಮಕ್ಕಳಿಗೆ ಪಕರಿಕ್ಷೆ, ದೊಡ್ಡವರಿಗೆ ಇಂಟರ್ವ್ಯೂ ಅಥವಾ ಇನ್ನಿತರ ಒತ್ತಡ ಸಮಯದಲ್ಲಿ ಅವರಿಗೆ ಬಾಯಿ ಹುಣ್ಣು ಆಗುತ್ತದೆ. ದೇಹದಲ್ಲಿ ಉಷ್ಣ ಹೆಚ್ಚಾದಾಗ, ಪಿತ್ತ ಹೆಚ್ಚಾದಾಗ ಕೂಡ ಬಾಯಲ್ಲಿ ಹುಣ್ಣು ಆಗುತ್ತದೆ. ನೋವಿನಿಂದ ಕೂಡಿದ ಬಾಯಿ ಹುಣ್ಣಿನಿಂದ ಒಂದೆರಡು ದಿನ ಕ’ಷ್ಟ ಆಗಬಹುದು ಆದರೆ ಇದು ಗುಣವಾಗುತ್ತದೆ. ಇದಕ್ಕೆ ಮನೆ ಮದ್ದು ಅಥವಾ ಡಾಕ್ಟರ್ ಹೇಳಿದಂತೆ ಮಾತ್ರೆಗಳನ್ನು ತೆಗೆದುಕೊಂಡಾಗ ಅದು ಗುಣವಾಗಿ ಬಿಡುತ್ತದೆ.
ಆದರೆ ನೋವು ಕೊಡದ ಹುಣ್ಣುಗಳ ಬಗ್ಗೆ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಕೆಲವರಿಗೆ ಹುಣ್ಣುಗಳಾಗಿರುತ್ತವೆ, ಆದರೆ ಆ ಬಗ್ಗೆ ಗಮನಿಸಲು ಹೋಗಿರುವುದಿಲ್ಲ. ವಿಪರೀತವಾದಾಗ ಅವರು ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಯಾಕೆಂದರೆ ಇದು ಕ್ಯಾನ್ಸರ್ ಗಂಟುಗಳಾಗಿರಬಹುದು ಹಾಗೆಯೇ ಎಲ್ಲಾ ಮೌತ್ ಅಲ್ಸರ್ ನಿಂದ ಕ್ಯಾನ್ಸರ್ ಬರುವುದಿಲ್ಲ.
ಹೆಚ್ಚಾಗಿ ಅಡಿಕೆ, ತಂಬಾಕು, ಗುಟ್ಕಾ ಸೇವಿಸುವವರು, ಶಾರ್ಪ್ ಟೀತ್ ಇಂದ ಈ ರೀತಿ ಸಮಸ್ಯೆ ಆಗಿರುತ್ತದೆ. ಈ ರೀತಿ ಲಕ್ಷಣಗಳಿದ್ದರೆ ತಪ್ಪದೇ ವೈದ್ಯರ ಬಳಿ ಹೋಗಬೇಕು. ದೇಶದಲ್ಲಿ ಒಮ್ಮೆಯಾದರೂ ವೈದ್ಯರ ಬಳಿ ಹೋಗಿ ಓರಲ್ ಹೆಲ್ತ್ ಚೆಕ್ ಅಪ್ ಮಾಡಿಸಿಕೊಳ್ಳಬೇಕು ಆಗ ವೈದ್ಯರು ಕ್ಯಾನ್ಸರ್ ಲಕ್ಷಣಗಳಿದ್ದರೆ ಅದನ್ನು ಬಯೋಪ್ಸಿ ಟೆಸ್ಟ್ ಗೆ ಕಳುಹಿಸಿ.
ಅದು ಕ್ಯಾನ್ಸರ್ ಅಥವಾ ಅಲ್ಲವೋ ಎನ್ನುವುದನ್ನು ಪತ್ತೆ ಹಚ್ಚಿ ಗುಣಪಡಿಸುವುದಕ್ಕೆ ಪ್ರಯತ್ನಿಸುತ್ತಾರೆ. ಇದು ಅರ್ಲಿ ಸ್ಟೇಜ್ ನಲ್ಲಿ ಗೊತ್ತಾದರೆ ಬಹಳ ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಇದು ಬಹಳ ಉಪಯುಕ್ತವಾದ ಮಾಹಿತಿಯಾಗಿದೆ, ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ.