ತುಂಬಾ ಜನರು ಈ ಒಂದು ಮೌತ್ ಅಲ್ಸರ್ ಅಥವಾ ಬಾಯಿ ಹುಣ್ಣು ಸಮಸ್ಯೆಯನ್ನು ಅನುಭವಿಸುತ್ತಾ ಇರುತ್ತಾರೆ. ಈ ಒಂದು ಸಮಸ್ಯೆಯೂ ನಮಗೆ ಬಂದಿದ್ದೆ ಆದಲ್ಲಿ ನಮಗೆ ಸರಿಯಾಗಿ ಊಟ ಮಾಡಲು ಆಗುವುದಿಲ್ಲ ಹಾಗೆ ಅದರಿಂದ ನೋವು ಸಹ ನಮಗೆ ಉಂಟಾಗುತ್ತದೆ. ಇದನ್ನು ಬರ್ನಿಂಗ್ ಮೌತ್ ಸಿನ್ಡ್ರಮ್ ಎಂತಲೂ ಸಹ ಕರೆಯುತ್ತಾರೆ. ಹಲವಾರು ಕಾರಣಗಳಿಂದ ಬಾಯಿಯಲ್ಲಿ ಹುಣ್ಣು ಪಾರ್ವೇಶನ್ ಆಗುತ್ತದೆ ಅಂದರೆ ವಿಟಮಿನ್ ಡಿ ಮತ್ತು ವಿಟಮಿನ್ ಸಿ ಡಿಫಿಷಿಎನ್ಸಿ ಇದ್ದರೂ ಕೂಡ ಈ ರೀತಿಯಾದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ, ಸರಿಯಾಗಿ ನೀವು ಬ್ರಷ್ ಮಾಡದೇ ಇದ್ದರೂ ಕೂಡ ನಿಮ್ಮ ಬಾಯಲ್ಲಿ ಫಂಗಲ್ ಅಥವಾ ಬ್ಯಾಕ್ಟೀರಿಯಾ ಫಾರ್ಮ್ ಆಗಿ ಹುಣ್ಣಾಗುವಂತಹ ಸಾಧ್ಯತೆ ಇರುತ್ತದೆ. ಹಾಗೆಯೇ ನಿಮಗೆ ಸರಿಯಾಗಿ ಜೀರ್ಣ ಆಗದೆ ಇದ್ದರು ಸಹ ನಿಮ್ಮ ಬಾಯಲ್ಲಿ ಹುಣ್ಣು ಆಗುತ್ತದೆ, ಹಾಗೆ ಹೊಟ್ಟೆ ಸರಿಯಿಲ್ಲದದ್ದರೂ ಈ ಒಂದು ಸಮಸ್ಯೆ ನಿಮಗೆ ಕಂಡುಬರುತ್ತದೆ. ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರು ಸಹ ಹುಣ್ಣು ಜಾಸ್ತಿಯಾಗುತ್ತದೆ.
ಕೆಲವರಿಗೆ ಈ ಒಂದು ಅಲ್ಸರ್ ಬಂದರೆ ತಿಂಗಳಾನುಗಟ್ಟಲೆ ಹೋಗವುದೇ ಅಂತಹವರು ಸಿಂಪಲ್ಲ ಮನೆಮದ್ದುಗಳನ್ನು ಉಪಯೋಗ ಮಾಡಿಕೊಂಡು ನಿಮ್ಮ ಬಾಯಿ ಹುಣ್ಣಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಮೊದಲಿಗೆ ನೀವು ದಿನಾಲೂ ಎದ್ದು ಬೆಳಗ್ಗೆ ಬ್ರಷ್ ಮಾಡಬೇಕು ನಂತರ ನೀವು ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಅಡುಗೆ ಸೋಡವನ್ನು ಹಾಕಿ ಆ ನೀರಿನಿಂದ ಬಾಯನ್ನು ಮುಕ್ಕಳಿಸುವುದರಿಂದ ನಿಮ್ಮ ಬಾಯಲ್ಲಿ ಬ್ಯಾಕ್ಟೀರಿಯಾಸ್ ಇದ್ದರೆ ಅದು ಬೇಗ ಸಾಯುತ್ತದೆ. ಎರಡನೆಯದಾಗಿ ಬೆಳಗ್ಗೆ ಬ್ರಷ್ ಮಾಡಿದ ನಂತರ ಒಂದು ದೊಡ್ಡ ಲೋಟ ಬಿಸಿ ನೀರಿಗೆ ಉಪ್ಪನ್ನು ಹಾಕಿ ಬಾಯಿಯನ್ನು ಮುಕ್ಕಳಿಸುವುದರಿಂದ ಉಪ್ಪಿನಲ್ಲಿ ಇರುವಂತಹ ಅಯೋಡಿನ್ ಅಂಶ ಬ್ಯಾಕ್ಟೀರಿಯಾಸ್ ಅನ್ನು ಸಾಯಿಸುತ್ತದೆ ಯಾರಿಗೆ ಹುಣ್ಣಾಗಿ ಕೆಟ್ಟ ನೀರು ತುಂಬಿಕೊಂಡಿರುತ್ತದೆಯೋ ಆಗ ಕೆಟ್ಟ ನೀರು ಆಚೆ ಬಂದುಬಿಡುತ್ತದೆ ನೋವು ಕೂಡ ನಿವಾರಣೆಯಾಗುತ್ತದೆ.
ಮೂರನೆಯದಾಗಿ ಬೇಯಿಸಿದ ಮೊಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಇರುವಂತಹ ಹಳದಿ ಭಾಗವನ್ನು ನಿಮಗೆ ಅಲ್ಸರ್ ಆಗಿರುವಂತಹ ಸ್ಥಳದಲ್ಲಿ ಹಾಕಿ ಈ ರೀತಿಯಾಗಿ ಮಾಡುವುದರಿಂದ ಹುಣ್ಣಿನಲ್ಲಿರುವಂತಹ ನೀರು ಎಲ್ಲವನ್ನು ಎಳೆದು ಬಿಡುತ್ತದೆ ಆನಂತರ ನೀವು ಉಗಿದರೆ ನಿಮ್ಮ ಹುಣ್ಣಿನ ಸಮಸ್ಯೆಯೂ ಬೇಗ ನಿವಾರಣೆಯಾಗುತ್ತದೆ. ನಾಲ್ಕನೇದಾಗಿ ಎಲ್ಲರ ಮನೆಯಲ್ಲೂ ಸಹ ಜೇನುತುಪ್ಪ ಇದ್ದೇ ಇರುತ್ತದೆ ಹಾಗೆ ಜೇನುತುಪ್ಪದ ಜೊತೆ ಅರಿಶಿಣವನ್ನು ಸೇರಿಸಿ ಹುಣ್ಣಾಗಿರುವ ಜಾಗಕ್ಕೆ ಎರಡರಿಂದ ಮೂರು ನಿಮಿಷಗಳ ಕಾಲ ಲೇಪನ ಮಾಡಿ ಹಾಗೆ ಬಿಟ್ಟರೆ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ ಇಲ್ಲವಾದರೆ ನೀವು ಬಿಸಿ ನೀರಿಗೆ ಉಪ್ಪು, ಅರಿಶಿಣ ಸ್ವಲ್ಪ ಜೇನುತುಪ್ಪ ಹಾಕಿ ಬಳಸುವುದರಿಂದ ಕಡಿಮೆಯಾಗುತ್ತದೆ.
ಐದನೆಯದಾಗಿ ನೀವು ಬಿ ಕಾಂಪ್ಲೆಕ್ಸ್ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಎಷ್ಟೇ ನೋವಿದ್ದರೂ ಸಹ ನಿಮಗೆ ಅದು ಬೇಗ ನಿವಾರಣೆಯಾಗುತ್ತದೆ. ಆರನೆಯದಾಗಿ ನೀವು ಬ್ರಷ್ ಮಾಡಿದ ನಂತರ ಐದರಿಂದ ಆರು ತುಳಸಿ ಎಲೆಗಳನ್ನು ತೆಗೆದುಕೊಂಡು ಬಾಯಲ್ಲಿ ಹಾಕಿ ಚೆನ್ನಾಗಿ ಜಗಿದು ಅದರ ರಸವನ್ನು ಕುಡಿಯುವುದರಿಂದ ಬಾಯಿ ಹುಣ್ಣಿಮೆ ಸಮಸ್ಯೆ ಮಟ್ಟಿಗೆ ನಿವಾರಣೆಯಾಗುತ್ತದೆ. 7ನೇಯದಾಗಿ ನಾವು ಕೊಬ್ಬರಿ ಮತ್ತು ಗಸಗಸೆಯನ್ನು ಬಾಯಿಯಲ್ಲಿ ಹಾಕಿ ಜಗಿಯುವುದರಿಂದ ಅದರಲ್ಲಿರುವ ಜಡ್ಡಿನ ಅಂಶ ಬ್ಯಾಕ್ಟೀರಿಯಾವನ್ನು ನಿವಾರಣೆ ಮಾಡುತ್ತದೆ ಹಾಗೆಯೇ ನಮ್ಮ ದೇಹದ ಉಷ್ಣತೆಯನ್ನು ಸಹ ಇದು ಕಡಿಮೆ ಮಾಡುತ್ತದೆ.