ಲೋಕಸಭಾ ಚುನಾವಣೆ 2024(Parliment Election 2024) ಸಮರಕ್ಕೆ ಇನ್ನು ಬೆರಳೆಣಿಕೆಯಷ್ಟು ದಿನಗಳಷ್ಟೇ ಬಾಕಿ ಉಳಿದಿದೆ. ದೇಶದಾದ್ಯಂತ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, 19 ಏಪ್ರಿಲ್ 2024 ರಿಂದ ಚುನಾವಣೆ ಕಾರ್ಯ ಆರಂಭಗೊಳ್ಳುತ್ತಿದೆ.
ಇದರ ನಡುವೆ ದೇಶದಲ್ಲಿ ಆಡಳಿತದಲ್ಲಿರುವ ಪ್ರಬಲ ಪಕ್ಷಗಳ ಜೊತೆಗೆ ಇನ್ನಿತರ ಪಕ್ಷಗಳು ಕೂಡ ಜೊತೆ ಸೇರಿ ಕುರ್ಚಿಗಾಗಿ ತಮ್ಮದೇ ಆದ ಷಡ್ಯಂತ್ರಗಳನ್ನು ರೂಪಿಸಿ ಜನರ ಬೆಂಬಲ ಗಿಟ್ಟಿಸಿಕೊಂಡು ವೋಟ್ ಬ್ಯಾಂಕ್ ಹೊಡೆಯುವುದಕ್ಕೆ ಸಿದ್ಧತೆ ಮಾಡುತ್ತಿವೆ.
ಈ ವಿಚಾರವಾಗಿ ಕಳೆದ ವರ್ಷ ಕರ್ನಾಟಕದ ವಿಧಾನಸಭಾ ಚುನಾವಣೆ (Karnataka Assembly Election 2023) ವೇಳೆ ಕಾಂಗ್ರೆಸ್ ಪಕ್ಷವು (Congress Party manifesto guaranty Schemes) ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳು ಮತ್ತೊಮ್ಮೆ ಮಗದೊಮ್ಮೆ ಹೆಚ್ಚು ಸುದ್ದಿಯಾಗುತ್ತಿದ್ದು ಲೋಕಸಭಾ ಚುನಾವಣೆಯಲ್ಲೂ ಕೂಡ ಪ್ರಬಲ ಪಕ್ಷಗಳು ಇಂತಹ ಗ್ಯಾರಂಟಿ ಯೋಜನೆಗಳನ್ನು ಅಸ್ತ್ರವಾಗಿ ಉಪಯೋಗಿಸುತ್ತಿವೆ.
ಈ ಸುದ್ದಿ ಓದಿ:- LPG ಬಳಕೆದಾರರಿಗೆಲ್ಲಾ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ ರೂ.300 ಸಬ್ಸಿಡಿ ನೆರವು, ಪಡೆಯುವುದು ಹೇಗೆ ನೋಡಿ.!
ಲೋಕಸಭಾ ಚುನಾವಣೆ ಪ್ರಯುಕ್ತ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಮತ್ತು ಮೈತ್ರಿ ಪಕ್ಷಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದು ಕಳೆದ ತಿಂಗಳೇ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ 5 ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಮಹಿಳಾ ಖಾತರಿ ನ್ಯಾಯ ಯೋಜನೆ ಎನ್ನುವ ಹೆಸರಿನಲ್ಲಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಘೋಷಿಸಿ ಈ ಬಗ್ಗೆ ಸುದ್ದಿಯಾಗಿತ್ತು.
ನಂತರ ದಿನಗಳಲ್ಲಿ ಬಹುತೇಕರ ಚಿತ್ತ BJP ಸರ್ಕಾರವು ಘೋಷಿಸಿದ ಪ್ರಣಾಳಿಕೆಯತ್ತ ಇತ್ತು. ಈಗ ಅಂತಿಮವಾಗಿ ಎಲ್ಲರ ಕುತೂಹಲಕ್ಕೆ ತೆರೆ ಬಿದ್ದಿದೆ. ಏಪ್ರಿಲ್ 14, 2024 ರ ಭಾನುವಾರದ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ BJP ಸರ್ಕಾರವು ಕೇಂದ್ರದಲ್ಲಿ ಮತ್ತೊಮ್ಮೆ ತಮ್ಮ ಸರ್ಕಾರ ಮುಂದುವರೆಯಬೇಕು ಎಂದು ಬಯಸಿ.
ಇದು ಜನಸಾಮಾನ್ಯರ ಸಹಕಾರದಿಂದ ಯಶಸ್ವಿಯಾದರೆ ದೇಶದಲ್ಲಿ ಐದು ಪ್ರಮುಖ ಬದಲಾವಣೆ ತರುವುದಾಗಿ ಭರವಸೆ ನೀಡಿದೆ. ಈ ಐದು ಆಶ್ವಾಸನೆಗಳ ಕರಡು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಕರಡು ರಚಿಸಲಾಗಿದ್ದು, ಇದನ್ನು ತಮ್ಮ ಪಕ್ಷದ ಸಂಕಲ್ಪ ಪತ್ರ ಎಂದು ಪಕ್ಷ ಕರೆದಿದೆ.
ಈ ಸುದ್ದಿ ಓದಿ:-ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
ಈ ಚುನಾವಣಾ ಪ್ರಣಾಳಿಕೆಯನ್ನು ಕಾರ್ಯಕ್ರಮದಲ್ಲಿ ಗಣ್ಯರಾಗಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, BJP ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು ಬಿಡುಗಡೆಗೊಳಿಸಿದರು.
BJP ಸರ್ಕಾರದ ಆ ಐದು ಭರವಸೆಗಳು ಇವೇ ನೋಡಿ:-
* ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಸಾಮಾನ್ಯ ಮತದಾರರ ಪಟ್ಟಿ ವ್ಯವಸ್ಥೆಯನ್ನು ದೇಶಕ್ಕೆ ಪರಿಚಯಿಸುವುದು
* ಉಚಿತ ಪಡಿತರ ಯೋಜನೆ ಮೂಲಕ ನೀಡುತ್ತಿರುವ ಪಡಿತರವನ್ನು ಮುಂದಿನ 5 ವರ್ಷಗಳವರೆಗೆ ಮುಂದುವರೆಸುವುದು
* 75 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯನ್ನೂ ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ ಸೇರಿಸುವುದು
* ಲಕ್ಷಾಂತರ ಮನೆಗಳಿಗೆ ವಿದ್ಯುತ್ ಬಿಲ್ ಗಳನ್ನು ತೆಗೆದುಹಾಕುವುದು ಮತ್ತು ವಿದ್ಯುತ್ ಮೂಲಕ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು. ಪ್ರಸ್ತುತವಾಗಿ ಜಾರಿಯಲ್ಲಿರುವ ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು.
* ಬಹುನಿರೀಕ್ಷಿತ ಕಾಯ್ದೆಯಾಗಿ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರುವುದು
* ಪ್ರಧಾನವಾದ ಈ 5 ಘೋಷಣೆಗಳ ಜೊತೆಗೆ ಪ್ರಣಾಳಿಕೆಯು 2036 ರಲ್ಲಿ ಭಾರತದ ಒಲಿಂಪಿಕ್ಸ್ ಬಿಡ್, ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನುಷ್ಠಾನ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಶಾಸನವನ್ನು ಒಳಗೊಂಡಿದೆ.