Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಆಟೋ (Passenger Auto) ಎನ್ನುವುದು ಒಂದು ವೆಹಿಕಲ್ ಮಾತ್ರ ಅಲ್ಲ ಇದೊಂದು ಸೆಂಟಿಮೆಂಟ್ ಕೂಡ. ಯಾಕೆಂದರೆ ಒಬ್ಬ ದುಡಿಯುವ ವ್ಯಕ್ತಿಯು ಮನೆಯಲ್ಲಿ ಇದ್ದ ರೀತಿ ಆಟೋ ಮನೆಯಲ್ಲಿದ್ದರೆ ಆ ಕುಟುಂಬದ ಹೊಟ್ಟೆಪಾಡಿನ ಜೊತೆ ಮಕ್ಕಳ ವಿದ್ಯಾಭ್ಯಾಸ ಹಿರಿಯರ ವೈದ್ಯಕೀಯ ಖರ್ಚು ಹೀಗೆ ಒಂದು ಸಂಸಾರವನ್ನು ತೂಗಿಸಿಬಿಡುತ್ತದೆ. ಹೀಗಾಗಿ ನಮ್ಮ ದೇಶದಲ್ಲಿ ಆಟೋವನ್ನು ಬಹಳ ವಿಶೇಷವಾಗಿ ಕಾಣಲಾಗುತ್ತಿದೆ.
ಸಾಮಾನ್ಯವಾಗಿ ಆಟೋ ಮಾಲೀಕರು ಶ್ರಮಜೀವಿಗಳು ಆದರೆ ದಿನ ಪೂರ್ತಿ ದುಡಿಮೆಯು ಪೆಟ್ರೋಲ್ ಬೆಲೆ ತೆರುವುದಕ್ಕೆ ಅಥವಾ ವಾಹನದ ಸರ್ವಿಸ್ ಗಳಿಗೆ ಕೊಡುವುದಕ್ಕೆ ಆಗುತ್ತಿದೆ. ಹೀಗೆ ಇವರ ಜೀವನ ಆರಕ್ಕೇರದೆ ಮೂರಕ್ಕಿಳಿಯದೆ ಬದುಕುವ ರೀತಿ ಆಗಿದೆ. ಇನ್ನು ಕೆಲವರಿಗೆ ಆಟೋ ಖರೀದಿಸಬೇಕು ಎನ್ನುವ ಆಸೆ ಇದ್ದರು ಅದರ ಬಂಡವಾಳ ಹಾಗೂ ಇನ್ನಿತ್ಯಾದಿ ಖರ್ಚುಗಳಿಗೆ ಹೆದರಿ ಸುಮ್ಮನಾಗುತ್ತಿದ್ದಾರೆ. ಈ ರೀತಿ ಯೋಚಿಸುವವರಿಗೆಲಾ ಲ ಭಾರತದ ನಂ.1 ಎಲೆಕ್ಟ್ರಿಕ್ 3-ವೀಲರ್ ಕಂಪನಿಯಾದ ಮಹೀಂದ್ರಾ ಕಡೆಯಿಂದ ಸಿಹಿ ಸುದ್ದಿ ಇದೆ.
ಈ ಸುದ್ದಿ ಓದಿ:- 5 ಗ್ಯಾರೆಂಟಿ ಘೋಷಣೆ ಮಾಡಿದ ನರೇಂದ್ರ ಮೋದಿ.! ಗದ್ದುಗೆಗಾಗಿ BJP ಸರ್ಕಾರದ ರಣತಂತ್ರ.!
ಅದೇನೆಂದರೆ ಪ್ರಯಾಣಿಕರ ಬಳಕೆಯ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ (Mahindra last mile mobility) ಕಂಪನಿಯು ಟ್ರಿಯೊ ಪ್ಲಸ್ ಇ-ಆಟೋ (Treo plus e-auto) ನವೀಕೃತ ಮಾದರಿಯನ್ನು ಪರಿಚಯಿಸಿದೆ.
ಮೆಟಲ್ ಬಾಡಿಯೊಂದಿಗೆ ಇನ್ನಿತರ ವಿಶೇಷ ಫೀಚರ್ಸ್ ಗಳನ್ನು ಹೊಂದಿರುವ ಇವುಗಳ ಖರೀದಿಯು ಕೂಡ ಗ್ರಾಹಕರಿಗೆ ಅನುಕೂಲವಾಗುವಂತೆಯೇ ಇದೆ. ರೂ.3.58 ಲಕ್ಷ ಇದರ ಎಕ್ಸ್ ಶೋರೂಂ ಬೆಲೆ ಆಗಿದ್ದರೂ ಹೊಸ ಟ್ರಿಯೊ ಪ್ಲಸ್ ಇ-ಆಟೋವನ್ನು ಗ್ರಾಹಕರು ಸುಲಭವಾಗಿ ಖರೀದಿಸಲು ಮಹೀಂದ್ರಾ ಕಂಪನಿ ಕೂಡ ಕೈಜೋಡಿಸುತ್ತಿದೆ.
ತನ್ನ ಹಣಕಾಸು ಪಾಲುದಾರರೊಂದಿಗೆ ಈ ನೂತನ ಮಾದರಿಯ ಹೊಸ ಇ-ಆಟೋ ಖರೀದಿಗಾಗಿ ಶೇ.90 ರಷ್ಟು ಹಣಕಾಸು ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡುತ್ತಿದೆ. ಗ್ರಾಹಕನು ವಾಹನ ಖರೀದಿಸಿ ದುಡಿಮೆಗೆ ಇಳಿದ ನಂತರ ಸುಲಭವಾದ 60 EMI ಕಂತುಗಳಲ್ಲಿ ಇದನ್ನು ತೀರಿಸಬಹುದು.
ಈ ಸುದ್ದಿ ಓದಿ:- LPG ಬಳಕೆದಾರರಿಗೆಲ್ಲಾ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ ರೂ.300 ಸಬ್ಸಿಡಿ ನೆರವು, ಪಡೆಯುವುದು ಹೇಗೆ ನೋಡಿ.!
ಮಹೀಂದ್ರಾ ಟ್ರಿಯೋ ಪ್ಲಸ್ ಇ-ಆಟೋ ಫೀಚರ್ಸ್ ಗಳು:-
* ಭಾರತದಾದ್ಯಂತ ಹರಡಿರುವ ಅತಿದೊಡ್ಡ ಸೇವಾ ಜಾಲದ ಮೂಲಕ ಗ್ರಾಹಕರಿಗೆ ಸಾಟಿಯಿಲ್ಲದ ಸರ್ವಿಸ್ ಬೆಂಬಲ ಸಿಗುತ್ತದೆ. * ಇದಲ್ಲದೆ, ಮೆಟಲ್ ಬಾಡಿಡ್ ಟ್ರೆಯೊ ಪ್ಲಸ್‌ನಲ್ಲಿ ಗ್ರಾಹಕರು 5 ವರ್ಷ ಅಥವಾ 120000km ಸ್ಟ್ಯಾಂಡರ್ಡ್ ವಾರಂಟಿ ಪ್ರಯೋಜನ ಪಡೆಯುತ್ತಾರೆ.
* ಪರಿಸರ ಸ್ನೇಹಿ.
* ಮಹೀಂದ್ರಾ ಕಂಪನಿಯು 10.24kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು 8kW ಪವರ್ ಮತ್ತು 42NM ಟಾರ್ಕ್ ಉತ್ಪಾದನೆಯ ಮೂಲಕ ಪ್ರತಿ ಚಾರ್ಜ್ ಗೆ 150 ಕಿ.ಮೀ ಮೈಲೇಜ್ ನೀಡುತ್ತದೆ.
* ಟ್ರಿಯೋ ಇ-ಆಟೋ 10.24 kWh ಸಾಮರ್ಥ್ಯದ 48V ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಹೊಂದಿರುತ್ತದೆ. ಈ ಮೂರು-ಚಕ್ರದ ಎಲೆಕ್ಟ್ರಿಕ್ ಆಟೋ ಒಂದೇ ಚಾರ್ಜ್‌ನಲ್ಲಿ 150km ಕ್ರಮಿಸುತ್ತದೆ ಮತ್ತು ಬ್ಯಾಟರಿ ಚಾರ್ಜ್ ಆಗುವುದಕ್ಕೆ 4 ಗಂಟೆ 20 ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ.
* 8kW ಪವರ್ ಮತ್ತು 42 Nm ಟಾರ್ಕ್ ಉತ್ತಮ ಪಿಕಪ್ ನೀಡುತ್ತದೆ. 55km/h ಗರಿಷ್ಠ ವೇಗ ಮತ್ತು 12.45° ದರ್ಜೆಯತೆಯು ಕ್ಲೈಂಬಿಂಗ್ ಅನ್ನು ಸುಲಭಗೊಳಿಸುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶೋರೂಮ್ ಗೆ ಭೇಟಿ ಕೊಡಿ.