Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಮನೆ ಕಟ್ಟುವಾಗ ಎಷ್ಟೇ ಎಚ್ಚರಿಕೆ ವಹಿಸಿದ್ದರು ಕೂಡ ಒಂದೆರಡು ಲೋಪಗಳು ಆಗುತ್ತವೆ. ಮನೆ ಕಟ್ಟಿದ ಬಳಿಕ ಅದು ತಿಳಿಯುತ್ತದೆ ನಂತರ ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಇಂತಹ ಸಮಸ್ಯೆಗಳಲ್ಲಿ ಏರ್ ಲೈನ್ ಕ್ರ್ಯಾಕ್ ಬರುವುದು ಕೂಡ ಒಂದು ಏರ್ ಲೈನ್ ಕ್ರ್ಯಾಕ್ ಎರಡು ರೀತಿಯಲ್ಲಿ ಬರುತ್ತದೆ.
ಮನೆ ಕಿಟಕಿ, ಬಾಗಿಲು, ಸೀಲಿಂಗ್ ಎಡ್ಜ್ ಇತ್ಯಾದಿ ಜಾಗದಲ್ಲಿ 1MM ನಷ್ಟು ಇದ್ದರೆ ಇದು ನಾರ್ಮಲ್ ಕ್ರ್ಯಾಕ್. ಈ ರೀತಿಯ ಏರ್ ಲೈನ್ ಕ್ರ್ಯಾಕ್ ಆಗುವುದು ಸಾಮಾನ್ಯ ಮತ್ತು ಹೆಚ್ಚಿನ ಅಪಾಯ ಇರುವುದಿಲ್ಲ ಇದನ್ನು ನಿಧಾನವಾಗಿ ಸರಿಪಡಿಸಿಕೊಳ್ಳಬಹುದು. ಮತ್ತೊಂದು ನಾರ್ಮಲ್ ಏರ್ ಲೈನ್ ಕ್ರ್ಯಾಕ್ ಗಿಂತ ಅಂದರೆ 1MM ಗಿಂತ ಹೆಚ್ಚಿಗೆ ದೊಡ್ಡದಾಗಿರುತ್ತದೆ ಹಾಗಾಗಿ ಇದನ್ನು ಡೇಂಜರಸ್ ಏರ್ ಲೈನ್ ಕ್ರ್ಯಾಕ್ ಎನ್ನುತ್ತಾರೆ.
ಇದನ್ನು ಕೂಡ ಸರಿಪಡಿಸಿಕೊಳ್ಳಬಹುದು ಅದರಲ್ಲೂ ಆದಷ್ಟು ಬೇಗ ಸರಿ ಮಾಡುವುದು ಒಳ್ಳೆಯದು ಈ ರೀತಿ ಏರ್ ಲೈನ್ ಕ್ರ್ಯಾಕ್ ಗಳು ಯಾಕೆ ಆಗುತ್ತವೆ ಎಂದು ಕಾರಣದ ಬಗ್ಗೆ ನೋಡುವುದಾದರೆ ಫೌಂಡೇಶನ್ ನಿಂದ ಬರುತ್ತದೆ. ಫೌಂಡೇಶನ್ ಸರಿಯಾಗಿ ಮಾಡಿಸದೆ ಇದ್ದಾಗ ಲೋಡ್ ಹೆಚ್ಚಾಗುತ್ತಾ ಹೋದಂತೆ ಹೆಚ್ಚು ದೊಡ್ಡದಾದ ಏರ್ ಲೈನ್ ಕ್ರ್ಯಾಕ್ ಗಳು ಉಂಟಾಗುತ್ತವೆ.
ಈ ಸುದ್ದಿ ಓದಿ:- ಈ ಚಿಕ್ಕ ಮಿಷಿನ್ ಇದ್ದರೆ ಸಾಕು, ಪ್ರತಿದಿನ ದುಡ್ಡೆದುಡ್ಡು. ತಿಂಗಳಿಗೆ ರೂ.60,000 ಸಂಪಾದನೆ ಮಷೀನ್ ನ ಬೆಲೆ ರೂ.20,000 ಮಾತ್ರ ಸಿಂಪಲ್ ಬಿಜಿನೆಸ್ ಐಡಿಯಾ..!
ಬೇಸ್ಮೆಂಟ್ ಮಾಡಿಸುವ ಮೊದಲು ನೀಟಾಗಿ ಮಡ್ ದಂಬಸ್ ಮಾಡಿಸಿ ಫೌಂಡೇಶನ್ ಮಾಡಿಸಿದರೆ ಎಷ್ಟೇ ಲೋಡ್ ಜಾಸ್ತಿಯಾದರೂ ತಡೆಯುತ್ತದೆ, ಸ್ಟ್ರೆಂಥ್ ಇರುತ್ತದೆ. ನಾರ್ಮಲ್ 1MM ಏರ್ ಲೈನ್ ಕ್ರಾಕ್ ಆಗುವುದು ಪ್ಲಾಸ್ಟಿಂಗ್ ಮಾಡುವ ಸಮಯದಲ್ಲಿ ಆಗುವ ತಪ್ಪಗಳಿಂದ ಬರುತ್ತದೆ. ಹಾಗಾಗಿ ಪ್ಲಾಸ್ಟಿಂಗ್ ಮಾಡಿಸುವಾಗ ಬಳಸುವ ಸ್ಯಾಂಡ್ ಅಥವಾ ಎಂ ಸ್ಯಾಂಡ್ ನ್ನು ಸಿಮೆಂಟ್ ಜೊತೆ ನೀಟಾಗಿ ಮಿಕ್ಸ್ ಮಾಡಿಸಬೇಕು.
* ಸರಿಯಾಗಿ ಕ್ಯೂರಿ ಮಾಡದೆ ಇರುವುದು ಕೂಡ ಏರ್ ಕ್ರ್ಯಾಕ್ ಬರುವುದಕ್ಕೆ ಒಂದು ಕಾರಣ. ಹಾಗಾಗಿ ಮನೆ ಕಟ್ಟುವ ಸಮಯದಲ್ಲಿ ಕ್ಯೂರಿಂಗ್ ಬಗ್ಗೆ ಕೂಡ ನಿರ್ಲಕ್ಷ ಮಾಡದೆ ಹೆಚ್ಚು ನಿಗಾವಹಿಸಿ ಮಾಡಿಸಿ
* ಪಿಲ್ಲರ್ ಗಳ ಬಳಿ ಕೂಡ ಏರ್ಲೈನ್ ಕ್ರ್ಯಾಕ್ ಆಗುತ್ತದೆ. ಗೋಡೆಗಳಿಗೆ ಪಿಲ್ಲರ್ ಗಳು ಜಾಯಿನ್ ಆಗುವ ಜಾಗದಲ್ಲಿ ಈ ರೀತಿಯ ಏರ್ಲೈನ್ ಟ್ರ್ಯಾಕ್ ದೊಡ್ಡದಾಗಿ ಆಗಿರುತ್ತದೆ ಇದನ್ನು ಕೂಡ ಸರಿಪಡಿಸಬಹುದು.
ಹೇಗೆಂದರೆ ಮೊದಲಿಗೆ ನೀವು ಕ್ರ್ಯಾಕ್ ಆಗಿರುವ ಜಾಗಕ್ಕೆ ಮಾರ್ಕೆಟ್ ಗಳಲ್ಲಿ ಸಿಗುವ ಏರ್ಲೈನ್ ಕ್ರ್ಯಾಕ್ ಪೇಸ್ಟ್ ತಂದು ಹಾಕಿಸಬೇಕು. ನಾಲ್ಕೈದು ಗಂಟೆಗಳಲ್ಲಿ ಈ ಪೇಸ್ಟ್ ಸಂಪೂರ್ಣವಾಗಿ ಒಣಗುತ್ತದೆ ನಂತರ ಚಿಕ್ಕನ್ ಮೆಶ್ ತಂದು ಹಾಕಿಸಿ ಆ ಜಾಗದಲ್ಲಿ ನೀಟಾಗಿ ಮೊಳೆ ಹೊಡೆದು ಅದರ ಮೇಲೆ ಪ್ಲಾಸ್ಟಿಂಗ್ ಮಾಡಿಸಬೇಕು. ಪಿಲ್ಲರ್ ಗಳ ಬಳಿ ಬರುವ ಏರ್ಲೈನ್ಸ್ ಕ್ರ್ಯಾಕ್ ಸರಿಪಡಿಸಲು ಬಹುತೇಕರು ಇದೆ ಉಪಾಯ ಮಾಡುತ್ತಾರೆ.
ಈ ಸುದ್ದಿ ಓದಿ:-KPSC ನೇಮಕಾತಿ, ಲೆಕ್ಕ ಪರಿಶೋಧನಾಧಿಕಾರಿ ಸಹಾಯಕ ನಿಯಂತ್ರಕರು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.! ವೇತನ 97,100 ಆಸಕ್ತರು ಅರ್ಜಿ ಸಲ್ಲಿಸಿ.!
* ನಾರ್ಮಲ್ ಏರ್ ಕ್ರ್ಯಾಕ್ ಸರಿ ಪಡಿಸಲು ಮಾರುಕಟ್ಟೆಯಲ್ಲಿ ಪೌಡರ್ ಸಿಗುತ್ತದೆ ಅದನ್ನು ತಂದು ಪೇಸ್ಟ್ ಮಾಡಿಕೊಂಡು ಏರ್ ಕ್ರ್ಯಾಕ್ ಆಗಿರುವ ಕಡೆಯಲೆಲ್ಲಾ ಅಪ್ಲೈ ಮಾಡಬೇಕು. ಮೊದಲಿಗೆ ಆ ಕ್ರ್ಯಾಕ್ ಸ್ವಲ್ಪ ಓಪನ್ ಮಾಡಿ ಈ ಪೇಸ್ಟ್ ಹಚ್ಚಿ ಮೇಲೆ ನೀಟಾಗಿ ಬ್ರಷ್ ಮಾಡಿ ನೀಟಾಗಿ ಫಿನಿಶಿಂಗ್ ಕೊಡಬೇಕು.
* ಒಂದು ವೇಳೆ ನೀವು ಇವುಗಳನ್ನು ಮಾಡಲು ತಿಳಿಯದೆ ಹೋದಲ್ಲಿ ಅಥವಾ ಇನ್ನು ಬೇರೆ ರೀತಿಯ ಪರಿಹಾರಗಳನ್ನು ಬಯಸಿದ್ದಲ್ಲಿ ನಿಮ್ಮ ಕಾಂಟ್ರಾಕ್ಟರ್ ಗೆ ವಿಷಯ ತಿಳಿಸಿ ಸಲಹೆ ಕೇಳಿದರೆ ಅವರು ಕೂಡ ನಿಮಗೆ ಸಹಾಯ ಮಾಡುತ್ತಾರೆ ಒಟ್ಟಾರೆಯಾಗಿ ನಿರ್ಲಕ್ಷ ಮಾಡದೆ ಕೂಡಲೇ ಇವುಗಳನ್ನು ಪೂರ್ತಿಗೊಳಿಸಿ ಮತ್ತು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.