ನೀವು ಡಿಲೀಟ್ ಮಾಡಿರುವ ಹಳೆ ಫೋಟೋ ಈಗ ಬೇಕಾಗಿದೆಯಾ.? ಡಿಲಿಟ್ ಮಾಡಿ 2 ವರ್ಷವಾಗಿದ್ರೂ ಕೂಡ ಈ ಟ್ರಿಕ್ ಇಂದ ಮತ್ತೆ ಹಳೆ ಫೋಟೋಗಳನ್ನು ಮರಳಿ ಪಡೆಯಬಹುದು.!

 

ಫೋಟೋ ತೆಗೆದಿಟ್ಟುಕೊಳ್ಳುವುದನ್ನು ಪ್ರತಿಯೊಬ್ಬರು ಮಾಡುತ್ತಾರೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಅದು ಸರಳವಾಯ್ತು ಮತ್ತು ಹೆಚ್ಚಾಯ್ತು ಎಂದು ಹೇಳಬಹುದು. ಫೋಟೋಗಳನ್ನು ಬರಿ ಮೆಮೊರಿ ಗಾಗಿ ಹಾಗೂ ಆಸಕ್ತಿ ಗಾಗಿ ತೆಗೆಯುವುದು ಮಾತ್ರವಲ್ಲದೆ, ಡಾಕ್ಯುಮೆಂಟ್ ಆಗಿ ಕೂಡ ಫೋಟೋ ತೆಗೆಯುತ್ತಾರೆ. ಆದರೆ ಫೋನ್ ಮೆಮೊರಿ ಫುಲ್ ಆದಾಗ ಅಥವಾ ಮಿಸ್ ಆಗಿ ಆ ಫೊಟೋಗಳನ್ನು ಡಿಲೀಟ್ ಮಾಡಿರುತ್ತೀರಿ.

ಸ್ವಲ್ಪ ದಿನದ ಬಳಿಕ ಫೋಟೋ ನಿಮಗೆ ಬೇಕಾಗಿರುತ್ತದೆ ಆಗ ಆ ಬಗ್ಗೆ ಪಶ್ಚಾತಾಪ ಪಡುತ್ತೀರಿ. ಅಂತಹ ಸಮಯದಲ್ಲಿ ಫೋಟೋಗಳನ್ನು ಮತ್ತೆ ಪಡೆಯಲು ನಿಮಗೆ ಇರುವ ಎಲ್ಲಾ ಮಾರ್ಗವನ್ನು ಪ್ರಯತ್ನಿಸಿಯೂ ನೋಡಿರುತ್ತೀರಿ. ಪ್ಲೇ ಸ್ಟೋರ್ ನಲ್ಲಿ ಕೆಲವೊಂದು ಆಪ್ ಗಳಿವೆ. ಆ ಆಪ್ ಗಳ ಮೂಲಕ ನೀವು ಫೋಟೋ ವಾಪಸ್ ಪಡೆಯಬಹುದು ಎಂದು ಕೆಲವರು ಸಲಹೆ ಕೊಟ್ಟಿರುತ್ತಾರೆ.

ನೀವು ಆ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಂಡರೂ ಫೋಟೋ ಪಡೆದು ಆಗಿರುವುದಿಲ್ಲ ಅಥವಾ ಕೆಲವೊಂದು ಆಪ್ ಗಳನ್ನು ಡೌನ್ಲೋಡ್ ಮಾಡಿದ ಮೇಲೆ ನಂತರ ಡಿಲೀಟ್ ಮಾಡುವ ಫೋಟೋಗಳನ್ನು ಮಾತ್ರ ವಾಪಸ್ ಪಡೆಯುವ ಅವಕಾಶ ಇರುತ್ತದೆ. ಆಗಲೂ ನಿಮಗೆ ನಿಮ್ಮ ಹಳೆ ಫೋಟೋಗಳನ್ನು ಪಡೆಯಲು ಆಗುವುದಿಲ್ಲ. ಇಂತಹ ಸಮಯಗಳಲ್ಲಿ ನಿಮ್ಮ ಮೊಬೈಲ್ ಅಲ್ಲೇ ಇರುವ ಸೆಟ್ಟಿಂಗ್ ಮೂಲಕ ನೀವು ನಿಮ್ಮ ಫೋಟೋಗಳನ್ನು ವಾಪಸ್ ಪಡೆಯಬಹುದು ಆ ಟೆಕ್ನಿಕ್ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಇದರ ಬಗ್ಗೆ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತಿದ್ದೇವೆ.

● ಪ್ರತಿಯೊಬ್ಬರ ಮೊಬೈಲ್ ಫೋನ್ ನಲ್ಲೂ ಕೂಡ file manager ಅಥವಾ my file ಎನ್ನುವ ಆಪ್ಷನ್ ಇರುತ್ತದೆ.
● ನಂತರ Device ಅನ್ನು ಸೆಲೆಕ್ಟ್ ಮಾಡಿ, setting ಗೆ ಹೋಗಿ ಆಗ display hidden files ಎನ್ನುವ ಆಪ್ಷನ್ ಕಾಣುತ್ತದೆ ಅದು dis able ಆಗಿರುತ್ತದೆ. unable ಮಾಡಿ. ಅಂದರೆ off ಆಗಿರುತ್ತದೆ on ಮಾಡಿ.

● ಮತ್ತೆ ಬ್ಯಾಕ್ ಗೆ ಬಂದು Divice storage ಕ್ಲಿಕ್ ಮಾಡಿ swipe ಮಾಡುತ್ತಾ ಹೋದರೆ DCIM ಆಪ್ಷನ್ ಸಿಗುತ್ತದೆ. ಅದು ಎಲ್ಲಾ ಮೊಬೈಲ್ ನಲ್ಲೂ ಕೂಡ ಇರುತ್ತದೆ. DCIM ಟ್ಯಾಪ್ ಮಾಡಿದರೆ Picture ಎನ್ನುವ ಫೋಲ್ಡರ್ ಕಾಣುತ್ತದೆ.

● ಒಂದು ವೇಳೆ ಇಲ್ಲ ಎಂದರೆ ಹಿಂದಿನ ಮೆನು ಗೆ ಬಂದು ಸ್ವೆಪ್ ಮಾಡುತ್ತಾ ಹೋದರೆ DCIM ನಂತರದ ಆಪ್ಷನ್ ಗಳಲ್ಲಿ Picture ಫೋಲ್ಡರ್ ಕಾಣುತ್ತದೆ. ಅದನ್ನು ಟ್ಯಾಪ್ ಮಾಡಿದರೆ ಮೂರನೇ ಆಯ್ಕೆಯಲ್ಲಿ dot thumbnails ಫೋಲ್ಡರ್ ಇರುತ್ತದೆ. ಅದನ್ನು ಓಪನ್ ಮಾಡಿದರೆ ನಿಮ್ಮ ಫೋನ್ ನಲ್ಲಿ ಡಿಲಿಟ್ ಆಗಿರುವ ಅಷ್ಟು ಫೋಟೋಗಳು ಇರುತ್ತವೆ.

● ಅದರಲ್ಲಿ ನಿಮಗೆ ಯಾವ ಫೋಟೋ ಬೇಕು ಅದನ್ನು ಸೆಲೆಕ್ಟ್ ಮಾಡಿ mark ಆಪ್ಷನ್ ಇರುತ್ತದೆ. ಬೇಕಾದ ಎಲ್ಲಾ ಫೋಟೋಗಳನ್ನು ಸೆಲೆಕ್ಟ್ ಮಾಡಿ share ಆಯ್ಕೆ ಮೂಲಕ ಬೇರೆಯವರಿಗೆ ಕಳುಹಿಸಬಹುದು. Move ಆಪ್ಷನ್ ಮೂಲಕ ನಿಮ್ಮ ಫೋನ್ ನ ಯಾವುದಾದರೂ ಫೋಲ್ಡರ್ ಗೆ ಕಳುಹಿಸಿಕೊಳ್ಳಬಹುದು.

● ಬಹುತೇಕ ಎಲ್ಲಾ ಫೋನ್ ಗಳಲ್ಲೂ my file ಅಥವಾ file manager ಆಪ್ಷನ್ ಇರುತ್ತದೆ. ಒಂದು ವೇಳೆ ಇದನ್ನು ಹುಡುಕಲು ಆಗದವರು Files by Google ಎನ್ನುವ app ಡೌನ್ಲೋಡ್ ಮಾಡಿಕೊಂಡು ಈ ಮೇಲೆ ತಿಳಿಸಿದ ರೀತಿಯೇ ಮುಂದುವರೆಯುವ ಮೂಲಕ ಫೋಟೋಗಳನ್ನು ವಾಪಸ್ ಪಡೆಯಬಹುದು.

Leave a Comment

%d bloggers like this: