ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಂದು ಮನೆ, ಖಾಲಿ ನಿವೇಶನ ಸೈಟು ಮುಂತಾದ ಆಸ್ತಿಗಳಿಗೆ (Rural Property) ಆಸ್ತಿಯ ಮಾಲೀಕರು ಇ-ಸ್ವತ್ತು (e-swathu) ಮಾಡಿಸಬೇಕು. ಇ-ಸ್ವತ್ತು ಮಾಡಿಸಿದಾಗ ಮಾತ್ರ ಅದನ್ನು ಮಾರಾಟ ಮಾಡಲು ಸಾಧ್ಯ. ಹಾಗಾಗಿ ಇ-ಸ್ವತ್ತು ಪ್ರಕ್ರಿಯೆ ಭರದಿಂದ ನಡೆಯುತ್ತಿದೆ.
ಈ ರೀತಿ ಇ-ಸ್ವತ್ತು ಮಾಡಿಸುವುದಕ್ಕೆ ಅದರದ್ದೇ ಆದ ವಿಧಾನಗಳು ಇದ್ದು ಕೆಲವು ದಾಖಲೆ ಪತ್ರಗಳನ್ನು ಕೂಡ ಸಲ್ಲಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಅತ್ಯಂತ ಮುಖ್ಯವಾದ ವಿಷಯ ಏನೆಂದರೆ, ಅಕ್ಕ ಪಕ್ಕದ ಆಸ್ತಿಯ ವಾರಸುದಾರರಿಂದ ಯಾವುದೇ ಅಕ್ಷೇಪಣೆ ಇಲ್ಲ ಎಂದು ಸಹಿ ಕೂಡ ಪಡೆಯಬೇಕು, ಕೆಲವೊಮ್ಮೆ ವೈ’ಶ’ಮ್ಯ’ದ ಕಾರಣದಿಂದಾಗಿ ಯಾವುದೇ ದಾಖಲೆ ಇಲ್ಲದಿದ್ದರೂ ಕೂಡ ಅಕ್ಕಪಕ್ಕದವರು ತಕರಾರು ಮಾಡುತ್ತಾರೆ.
ಈ ರೀತಿ ಆದಾಗ ಏನು ಮಾಡಬೇಕು? ಯಾವುದೇ ಆಧಾರ ಇಲ್ಲದೇ ಅಡ್ಡಿ ಪಡಿಸಿದರೆ ಏನು ಮಾಡಬೇಕು? ಎನ್ನುವ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಇ-ಸ್ವತ್ತು ಮಾಡಿಸುವಾಗ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಂದು ಸದರಿ ಆಸ್ತಿಯ ಸ್ಥಳ ಪರಿಶೀಲನೆ ಮಾಡುತ್ತಾರೆ ಮತ್ತು ಚಕ್ಕುಬಂದಿ ವಿವರಗಳನ್ನು ಗಮನಿಸಿ ಅದರ ಅಳತೆಯನ್ನು ಕೂಡ ನೋಡುತ್ತಾರೆ ಮತ್ತು ಸದರಿ ಆಸ್ತಿಯ ಆಜು ಬಾಜು ಆಸ್ತಿಯ ವಾರಸುದಾರರುಗಳಿಂದ ಸಹಿ ಕೂಡ ಪಡೆಯುತ್ತಾರೆ.
ಈ ಸುದ್ದಿ ಓದಿ:- ಅಂಗನವಾಡಿ ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ.! 10th ಪಾಸ್ ಆಗಿರುವವರು ಅರ್ಜಿ ಸಲ್ಲಿಸಬಹುದು.!
ಆ ಆಸ್ತಿಗೆ ಸಂಬಂಧಿಸಿದಂತೆ ತಮಗೆ ಯಾವುದೇ ತಕರಾರು ಇಲ್ಲ ಎಂದು ಕೆಲವರು ಸಹಿ ಮಾಡಿಕೊಡುತ್ತಾರೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಇನ್ನು ಕೆಲವರು ವಿಸ್ತೀರ್ಣ ಸರಿ ಇಲ್ಲ ತಮ್ಮದು ಕೂಡ ಜಾಗ ಸೇರಿದೆ ಎಂದು ಹೇಳಿ ತಕರಾರು ಮಾಡುತ್ತಾರೆ, ಸಹಿ ಹಾಕಿ ಕೊಡುವುದಿಲ್ಲ.
ಕೆಲವೊಮ್ಮೆ ಇದು ಸತ್ಯವಾಗಿರುತ್ತದೆ ಆಸ್ತಿ ಒತ್ತುವರಿ ಆಗಿದ್ದಾಗ ಈ ರೀತಿ ಪಕ್ಕದವರು ಆಸ್ತಿ ಒತ್ತುವರಿ ಆಗಿದೆ ಎಂದು ನಿಗದಿತ ಸಮಯದೊಳಗೆ ಗ್ರಾಮ ಪಂಚಾಯಿತಿಗೆ ದೂರಿಗೆ ಸಂಬಂಧಿಸಿದ ದಾಖಲೆಗಳ ಸಮೇತ ತಕರಾರು ಅರ್ಜಿ ಸಲ್ಲಿಸಿ ನಂತರ ರಾಜಿ ಪಂಚಾಯಿತಿ ಮೂಲಕ ಅಥವಾ
ಕೋರ್ಟಿನಲ್ಲಿ ದಾವೇ ಹೂಡಿ ಇದರ ಪರಿಹಾರ ಮಾಡಿಕೊಳ್ಳಬಹುದು.
ಆದರೆ ಕೆಲವರು ತಮಗೆ ಬಳಿ ಯಾವುದೇ ಆಧಾರ ಇರದಿದ್ದರೂ ಉದ್ದೇಶಪೂರ್ವಕವಾಗಿಯೇ ಇ-ಸ್ವತ್ತು ಮಾಡಿಸಿಕೊಳ್ಳುವವರ ಮೇಲೆ ಇರುವ ದ್ವೇ’ಷ’ದ ಕಾರಣದಿಂದಾಗಿ ಸಹಿ ಹಾಕದೆ ಅಡ್ಡಿಪಡಿಸುತ್ತಾರೆ. ಆ ಸಂದರ್ಭಗಳಲ್ಲಿ ಇ-ಸ್ವತ್ತು ಮಾಡಿಸಿಕೊಳ್ಳುವ ವ್ಯಕ್ತಿಯ ಹೆಸರಿನಲ್ಲಿ ಆಸ್ತಿಪತ್ರ ಮತ್ತು ರಿಜಿಸ್ಟರ್ ಪತ್ರಗಳು ಇದ್ದರೆ ಈ ಸ್ವತ್ತು ಮಾಡಿಸಿಕೊಳ್ಳುವ ವ್ಯಕ್ತಿಗೆ ಯಾವುದೇ ಸಮಸ್ಯೆ ಇಲ್ಲ. ದಾಖಲೆಗಳ ಪರಿಶೀಲನೆ ನಡೆದು ಸಹಿ ಇಲ್ಲದಿದ್ದರೂ ಇ-ಸ್ವತ್ತು ಮಾಡಿಕೊಡಲಾಗುತ್ತದೆ.
ಈ ಸುದ್ದಿ ಓದಿ:- ಹೊಸ ಡಿಜಿಟಲ್ ವೋಟರ್ ಕಾರ್ಡ್ ಪಡೆಯುವ ವಿಧಾನ.!
ಆದರೆ ಡಿಮ್ಯಾಂಡ್ ಪುಸ್ತಕದಲ್ಲಿ ಮಾತ್ರ ಇವರ ಹೆಸರಿದ್ದು ಯಾವುದೇ ರಿಜಿಸ್ಟರ್ ಆಗಿಲ್ಲ ಎಂದಾಗ ಆಸ್ತಿ ವಿವರ ಸರಿ ಇದ್ದು, ಅಕ್ಕ ಪಕ್ಕದವರು ಸಹಿ ಹಾಕದೆ ಅಡ್ಡಿಪಡಿಸಿದಾಗ ಒಂದು ವಾರದ ಒಳಗೆ ತಪ್ಪದೆ ಅಡ್ಡಿಪಡಿಸಿದವರು ಗ್ರಾಮ ಪಂಚಾಯಿತಿಗೆ ತಕರಾರು ಅರ್ಜಿಯನ್ನು ದಾಖಲೆ ಸಮೇತ ಸಲ್ಲಿಸಬೇಕು.
ಒಂದು ವೇಳೆ ಅವರು ಆ ರೀತಿ ಯಾವುದೇ ಲಿಖಿತ ರೂಪದ ತಕರಾರು ಅರ್ಜಿ ಸಲ್ಲಿಸಲಿಲ್ಲ ಎಂದರೆ ನೋಟಿಸ್ ನೀಡಿದ ಒಂದು ವಾರದ ಒಳಗೆ ಯಾವುದೇ ತಕರಾರು ಅರ್ಜಿ ಬಂದಿಲ್ಲ ಎಂದರೆ ಆಗಲೂ ಇದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಅಧಿಕಾರಿಗಳು ಇ-ಸ್ವತ್ತು ಮಾಡಲು ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಅರ್ಜಿಯನ್ನು ಪುರಸ್ಕರಿಸಿ ಆತನ ಹೆಸರಿಗೆ ಇ-ಸ್ವತ್ತು ಮಾಡಿಕೊಡುತ್ತಾರೆ.