ಮೊದಲು ಬ್ಯಾಂಕ್ ನಲ್ಲಿ ಜಮಾ ಮಾಡಿದ್ದ ಹಣವನ್ನು ಬೇಕೆಂದಾಗ ತೆಗೆದುಕೊಳ್ಳಲು ಬ್ಯಾಂಕಿನಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಹಣವನ್ನು ಪಡೆಯುತ್ತಿದ್ದರು ಇದರಿಂದ ಗ್ರಾಹಕರಿಗೂ ತೊಂದರೆ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಗೂ ಕೆಲಸದ ಒತ್ತಡ ಇರುತ್ತಿತ್ತು. ಕ್ರಮೇಣ ಈ ಪರಿಸ್ಥಿತಿಯನ್ನು ಸರಿದೂಗಿಸಲು ಎ ಟಿ ಎಂ ಬಳಕೆ ಹೆಚ್ಚಾದಂತೆ ಬ್ಯಾಂಕ್ ಸರತಿ ಸಾಲಿನ ಸಂಖ್ಯೆ ಕಡಿಮೆ ಆಗಿ ಎ ಟಿ ಎಂ ಗಳಲ್ಲಿ ಸರತಿ ಸಾಲು ಹೆಚ್ಚಾಯಿತು ಹಾಗೆಯೇ ಇದರಿಂದ ಬ್ಯಾಂಕ್ ಸಿಬ್ಬಂದಿಗಳಿಗೆ ಸ್ವಲ್ಪ ಒತ್ತಡ ಕಡಿಮೆಯಾದರೂ ಸಹ ಎ ಟಿ ಎಂ ಗಳಲ್ಲಿನ ಕೆಲವು ಕೊರತೆಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಎ ಟಿ ಎಂ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುವುದು, ಎ ಟಿ ಎಂ ಕಾರ್ಡ್ ಮೆಸಿನ್ ನಲ್ಲಿಯೇ ಉಳಿದು ಗ್ರಾಹಕರನ್ನು ದಿಗಿಲುಗೊಳಿಸುವುದು ಹೀಗೆ ಇನ್ನೂ ಅನೇಕ ರೀತಿಯ ತೊಂದರೆಗಳನ್ನು ಈ ಎ ಟಿ ಎಂ ನೀಡುತ್ತಿದೆ..
ಅಲ್ಲದೇ ಎ ಟಿ ಎಂ ಗಳಲ್ಲಿ ಹ್ಯಾಕರ್ಸ್ ಗಳ ಸಂಖ್ಯೆಯು ಇತ್ತೀಚೆಗೆ ಹೆಚ್ಚುತ್ತಿದ್ದು ಎ ಟಿ ಎಂ ಕಾರ್ಡ್ ನ ಸೀಕ್ರೆಟ್ ಪಿನ್ ಕದಿಯುವ ಹ್ಯಾಕರ್ಸ್ ಕಳ್ಳರು ಹೆಚ್ಚಾಗಿದ್ದಾರೆ. ಎಷ್ಟೋ ಬ್ಯಾಂಕ್ ಗ್ರಾಹಕರು ಇವರಿಂದ ವಂಚಿತರಾಗಿ ತಮ್ಮ ಹಣಗಳನ್ನು ಕಳೆದುಕೊಂಡಿದ್ದಾರಲ್ಲದೇ ಮತ್ತೊಮ್ಮೆ ಬ್ಯಾಂಕ್ ಎ ಟಿ ಎಂ ಗಳ ಕಡೆಗೆ ತಲೆ ಹಾಕಲು ಕೂಡ ಭಯ ಬೀಳುತ್ತಿದ್ದಾರೆ. ಬ್ಯಾಂಕ್ ಮಾಲೀಕರು ಹಾಗೂ ಸಿಬ್ಬಂಧಿಗಳು ಇಂತಹ ಅನಾಹುತಗಳನ್ನು ತಪ್ಪಿಸಲು ಅನೇಕ ರೀತಿಯಲ್ಲಿ ಪ್ರಯತ್ನಿಸಿ ಗ್ರಾಹಕರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದ್ದರೂ ಸಹ ಇವರ ಯಾವುದೇ ಉಪಾಯಗಳಿಗೂ ಸಹ ಹ್ಯಾಕರ್ಸ್ ಗಳು ಬಗ್ಗುತ್ತಿಲ್ಲ. ಗ್ರಾಹಕರಿಗೆ ಆಗುತ್ತಿರುವ ಈ ರೀತಿಯ ವಂಚನೆ ಮೋಸಗಳನ್ನು ತಪ್ಪಿಸಲು ಎಸ್ ಬಿ ಐ ಒಂದು ಹೊಸ ನಿರ್ಧಾರವನ್ನು ಕೈಗೊಂಡಿದೆ ಅದೇನೆಂದರೆ ಬ್ಯಾಂಕ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಮೊದಲು ಓ ಟಿ ಪಿ ಬಂದ ಮೇಲೆ ಎಂಟರ್ ಮಾಡಿದ ನಂತರವೇ ಪಿನ್ ನಮೂದಿಸಬೇಕು ಅದಾದ ಮೇಲೆ ಹಣವನ್ನು ವಿಥ್ ಡ್ರಾ ಮಾಡಬಹುದು.
ಈ ನಿಯಮದ ಬಗ್ಗೆ ಬ್ಯಾಂಕ್ ಈಗಾಗಲೇ ಮಾಹಿತಿ ನೀಡಿದ್ದು ಬ್ಯಾಂಕ್ ಜಾರಿ ಮಾಡಿರುವ ಓಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ವ್ಯವಸ್ಥೆಯು ಎಸ್ ಬಿ ಐ ಏಟಿಎಂ ಗಳಲ್ಲಿನ ವಹಿವಾಟುಗಳಿಗೆ ವಂಚಕರಿಂದ ಗ್ರಾಹಕರನ್ನು ರಕ್ಷಿಸುವ ಒಂದು ಮಾರ್ಗವಾಗಿದೆ. ನಿಮ್ಮನ್ನು ವಂಚನೆಯಿಂದ ರಕ್ಷಿಸುವುದು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿರುತ್ತದೆ ಎಂದು ಬ್ಯಾಂಕ್ ನವರು ಹೇಳುತ್ತಾರೆ ಓಟಿಪಿ ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಎಸ್ ಬಿ ಐ ಗ್ರಾಹಕರು ತಿಳಿದಿರಬೇಕು ಎಂದು ಅದರ ಕಾರ್ಯ ಕ್ಷಮತೆಯನ್ನು ಎಸ್ ಬಿ ಐ ನವರು ತಿಳಿಸಿದ್ದಾರೆ. ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ನಿಯಮದ ಪ್ರಕಾರ ಗ್ರಾಹಕರು ಒಟಿಪಿ ಇಲ್ಲದೆ ನಗದು ಹಿಂಪಡೆಯುವಂತಿಲ್ಲ. ಇದರಲ್ಲಿ, ನಗದು ಹಿಂಪಡೆಯುವ ಸಮಯದಲ್ಲಿ, ಗ್ರಾಹಕರು ತಮ್ಮ ಮೊಬೈಲ್ ಫೋನ್ ನಲ್ಲಿ ಓಟಿಪಿ ಅನ್ನು ಪಡೆಯುತ್ತಾರೆ, ಅದನ್ನು ನಮೂದಿಸಿದ ನಂತರವೇ ಎಟಿಎಂನಿಂದ ಹಣವನ್ನು ಹಿಂಪಡೆಯಲಾಗುತ್ತದೆ.
ಈ ಸಂಖ್ಯೆಯನ್ನು ನಮೂದಿಸದಿದ್ದಲ್ಲಿ ನಿಮ್ಮ ನಗದು ಮೆಸಿನ್ ನಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತದೆ. ವಾಸ್ತವವಾಗಿ, ಎಟಿಎಂ ವಹಿವಾಟುಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಬ್ಯಾಂಕ್ 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಇದರ ಅಡಿಯಲ್ಲಿ, ಎಸ್ ಬಿ ಐ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಅವರ ಡೆಬಿಟ್ ಕಾರ್ಡ್ ಪಿನ್ಗೆ ಕಳುಹಿಸಿದ ಓಟಿಪಿ ಯೊಂದಿಗೆ ಪ್ರತಿ ಬಾರಿ ತಮ್ಮ ಏಟಿಎಂ ನಿಂದ ರೂ 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಅನುಮತಿಸುತ್ತದೆ. 10000 ಕ್ಕಿಂತ ಕಡಿಮೆ ಹಣ ಡ್ರಾ ಮಾಡಲು ಈ ಓಟಿಪಿ ಯ ಅವಶ್ಯಕತೆ ಇರುವುದಿಲ್ಲ ಕೇವಲ ಡೆಬಿಟ್ ಕಾರ್ಡ್ ಪಿನ್ ನಮೂದಿಸಿದರೆ ಸಾಕು 10000 ಕ್ಕಿಂತ ಹೆಚ್ಚು ಹಣ ಮೋಸಕ್ಕೆ ಒಳಗಾಗದಂತೆ ಬ್ಯಾಂಕ್ ಈ ಮುನ್ನೆಚ್ಚರಿಕ ಕ್ರಮವನ್ನು ಜಾರಿ ಗೊಳಿಸಿದೆ. ಇದರಿಂದ ಎ ಟಿ ಎಂ ಮೆಸಿನ್ ನಲ್ಲಿ ಆಗುವ ಹ್ಯಾಕಿಂಗ್ ತಂತ್ರಗಳನ್ನು ತಪ್ಪಿಸಲು ಈ ನಿರ್ಧಾರವನ್ನು ಎಸ್ ಬಿ ಐ ಕೈಗೊಂಡಿದ್ದು ಇದೇ ನಿರ್ಧಾರಗಳನ್ನು ಇತರ ಬ್ಯಾಂಕ್ ಗಳು ಸಹ ಅನುಸರಿಸುತ್ತವೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಗ್ರಾಹಕರು ವಂಚನೆಯಿಂದ ಪಾರಾಗಲು ಈ ನಿಯಮವನ್ನು ಬ್ಯಾಂಕ್ ನವರು ಜಾರಿಗೆ ತಂದಿದ್ದು ಇದರಿಂದ ಗ್ರಾಹಕರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿದೆ. ಇದಲ್ಲದೆ ದೇಶಾದ್ಯಂತ ಎಸ್ ಬಿ ಐ ಶಾಖೆಗಳು ಅಧಿಕವಾಗಿದ್ದು ಅತಿ ಹೆಚ್ಚು ದರೋಡೆ ಹಾಗೂ ಹ್ಯಾಕಿಂಗ್ ತಂತ್ರಗಳು ಹೆಚ್ಚಾಗಿ ಈ ಬ್ಯಾಂಕ್ ನಲ್ಲಿಯೇ ನಡೆಯುವುದರಿಂದ ಎಸ್ ಬಿ ಐ ಇಂತಹ ನಿರ್ಧಾರಗಳನ್ನು ಆಗಾಗ್ಗೆ ತೆಗೆದುಕೊಂಡು ಗ್ರಾಹಕರ ನೆರವಿಗೆ ಬರುತ್ತದೆ. ಇದು ಭಾರತದಲ್ಲಿ 71,705 ಬಿ ಸಿ ಔಟ್ಲೆಟ್ಗಳೊಂದಿಗೆ 22,224 ಶಾಖೆಗಳು ಮತ್ತು 63,906 ಏಟಿಎಂ /ಸಿ ಡಿ ಎಂ ಗಳ ದೊಡ್ಡ ಜಾಲವನ್ನು ಹೊಂದಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವ ಗ್ರಾಹಕರ ಸಂಖ್ಯೆ ಸರಿಸುಮಾರು 91 ಮಿಲಿಯನ್ ಮತ್ತು 20 ಮಿಲಿಯನ್ ನಷ್ಟು ಇದ್ದು ಈ ಬ್ಯಾಂಕಿನಲ್ಲಿನ ವ್ಯವಹಾರ ದೊಡ್ಡದಾಗಿದ್ದು ಗ್ರಾಹಕರ ಹಿತವು ಕೂಡ ದೊಡ್ಡ ಮಟ್ಟದಲ್ಲಿ ಇರುವುದು ಅನಿವಾರ್ಯ.