ಶಕ್ತಿ ಯೋಜನೆಯಡಿ ಈಗ ಕರ್ನಾಟಕದ ಮಹಿಳೆಯರೆಲ್ಲರೂ ಉಚಿತ ಪ್ರಯಾಣದ ಅನುಕೂಲತೆ ಪಡೆಯುತ್ತಿದ್ದಾರ. ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೂ ಕೂಡ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭಗೊಂಡಿದೆ. ಅನ್ನ ಭಾಗ್ಯ ಯೋಜನೆಯು ಕೂಡ ಮುಂದಿನ ತಿಂಗಳಿಂದಲೇ ಜಾರಿಗೆ ಬರುತ್ತದೆ ಎಂದು ಹೇಳಲಾಗಿತ್ತು, ಆದರೆ ಈ ಬಗ್ಗೆ ಸರ್ಕಾರದಲ್ಲಿ ಸ್ವಲ್ಪ ಗೊಂದಲಗಳಿವೆ.
ಇದೆಲ್ಲದರ ನಡುವೆ ಕರ್ನಾಟಕದ ಕುಟುಂಬಗಳ ಯಜಮಾನಿಯರು ನಿರೀಕ್ಷಿಸುತ್ತಿರುವ ಗೃಹಲಕ್ಷ್ಮಿ ಯೋಜನೆಗೂ ಕೂಡ ಸರ್ಕಾರದಿಂದ ಹೊಸ ಮಾಹಿತಿ ಹೊರ ಬಿದ್ದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆ ಕುರಿತು ಕೆಲ ಪ್ರಮುಖ ವಿಷಯಗಳನ್ನು ತಿಳಿಸಿದ್ದಾರೆ ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ಗೃಹಲಕ್ಷ್ಮಿ ಯೋಜನೆಗೆ ಜೂನ್ 16 ರಿಂದಲೇ ಅರ್ಜಿ ಆಹ್ವಾನ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು ಆದರೆ ಯೋಜನೆಗೆ ಆಪ್ ಒಂದನ್ನು ಸಿದ್ಧಪಡಿಸುತ್ತಿರುವ ಕಾರಣ ವಿಳಂಬವಾಗಿದೆ ಎನ್ನುವುದನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರೇ ಅರ್ಜಿ ಸಲ್ಲಿಸಲಿ ಎನ್ನುವುದಕ್ಕಾಗಿ ಸರಳವಾಗಿ ಇರುವ ಆಪ್ ಅನ್ನು ತಯಾರಿಸಲಾಗುತ್ತಿದೆ, ಈಗಾಗಲೇ ಗೃಹಲಕ್ಷ್ಮಿ ಅಪ್ ಸಿದ್ದವಾಗಿದೆ.
ಜೂನ್ 28ರಂದು ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಜೊತೆ ಚರ್ಚಿಸಿ, ರೂಪರೇಷೆಗಳ ಬಗ್ಗೆ ತೀರ್ಮಾನಿಸಿ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವವರ ಒತ್ತಡದಿಂದಾಗಿ ಸರ್ವರ್ ಸಮಸ್ಯೆ ಆಗಿದೆ. ಈ ರೀತಿ ಸಮಸ್ಯೆ ಗೃಹಲಕ್ಷ್ಮಿ ಯೋಜನೆಗೆ ಆಗಬಾರದು ಎಂದು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ಸಹ ಹೇಳಿದ್ದಾರೆ.
ಆನ್ಲೈನಲ್ಲಿ ಮಾತ್ರವಲ್ಲದೇ ಅನಕ್ಷರಸ್ಥ ಮತ್ತು ಗ್ರಾಮೀಣ ಭಾಗದ ಮಹಿಳೆಯರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಆಫ್ಲೈನ್ ಅಲ್ಲೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು. ನಾಡಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಬಾಪೂಜಿ ಕೇಂದ್ರಗಳ ಕುಟುಂಬದ ಯಜಮಾನಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ.
ಪ್ರತಿ 1000 ಮಂದಿಗೆ ಇಬ್ಬರು ಪ್ರಜಾಪತಿನಿಧಿಗಳನ್ನು ನೇಮಿಸುವ ಬಗ್ಗೆ ಕೂಡ ಬುಧವಾರ ನಡೆಯುವ ಸಚಿವ ಸಂಪುಟದಲ್ಲಿ ತೀರ್ಮಾನ ಬರುವುದಾಗಿ ಸಚಿವೆ ತಿಳಿಸಿದ್ದಾರೆ. ಇದರ ಸಂಬಂಧ ಜೂನ್ 2,3 ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಿದ ಸಚಿವೆ ಬುಧವಾರ ಈ ಕುರಿತು ಆಪ್ ವಿವರವನ್ನು ಮುಖ್ಯಮಂತ್ರಿ ಎದುರು ಇಡುವ ಇಟ್ಟು ಅನುಮತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ಹೀಗಾಗಿ ಜುಲೈ ತಿಂಗಳ ಆರಂಭದಿಂದಲೇ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಗೊಳ್ಳಲಿದೆ ಎನ್ನುವ ನಿರೀಕ್ಷೆಗಳಿವೆ. ಮುಖ್ಯಮಂತ್ರಿಗಳು ಗೃಹಲಕ್ಷ್ಮಿ ಯೋಜನೆ ಕುರಿತು ಹೊರಡಿಸಿದ ಆದೇಶ ಪತ್ರದಲ್ಲಿ ಜೂನ್ 15 ರಿಂದ ಜುಲೈ 15 ರವರೆಗೆ ಅರ್ಜಿ ಸ್ವೀಕಾರ ಮಾಡಲಾಗುವುದು ನಂತರ ಆಗಸ್ಟ್ 15 ರವರೆಗೆ ಅದರ ಪರಿಶೀಲನೆ ನಡೆದು ಸ್ವತಂತ್ರ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು ಗೃಹಲಕ್ಷ್ಮಿ ಯೋಜನೆಯನ್ನು ಲಾಂಚ್ ಮಾಡಲಾಗುವುದು.
ಆಗಸ್ಟ್ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗುವ ಕುಟುಂಬದ ಯಜಮಾನಿ ಖಾತೆಗೆ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 2,000ರೂ. ಸಹಾಯಧನವನ್ನು ಅವರ ಖಾತೆಗೆ DBT ಮೂಲಕ ಜಮೆ ಮಾಡಲಾಗುವುದು ಎಂದು ತಿಳಿಸಿದ್ದರು. ಬಳಿಕ ತಾಂತ್ರಿಕ ತೊಂದರೆ ಹಾಗೂ ಸಿಬ್ಬಂದಿಗಳಿಗೆ ಇನ್ನಷ್ಟು ತರಬೇತಿ ಕೊಡುವ ಕಾರಣದಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನುವ ಮಾಹಿತಿ ಸರ್ಕಾರದಿಂದ ಹೊರಬಿದ್ದಿತ್ತು. ಈಗ ಅಂತಿಮವಾಗಿ ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಕುರಿತು ನಿರ್ಧಾರವಾಗಲಿದೆ.