ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಮನೆ ಕೂಡ ಒಂದು ಒಂದು. ಪ್ರತಿಯೊಂದು ಕುಟುಂಬಕ್ಕೂ ಕೂಡ ಸಣ್ಣದಾದ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವ ಅಚ್ಚುಕಟ್ಟಾದ ಒಂದು ಮನೆಯ (House) ಅವಶ್ಯಕತೆ ಇದ್ದೇ ಇರುತ್ತದೆ. ಮನೆ ಎನ್ನುವುದು ಎಲ್ಲರಿಗೂ ಒಂದೇ ತರನಾಗಿ ಇರುವುದಿಲ್ಲ.
ಬಡವರಿಗೆ ಇರಲು ಆಶ್ರಯ ಸಿಕ್ಕಿದರೆ ಸಾಕು ಮಳೆಗೆ ಸೋರದ, ಬಿಸಿಲಿಗೆ ನೆರಳದ ಹಾಗೆ ಒಂದು ಸೂರಾಗಲಿ ಎಂದು ಬಯಸಿದರೆ, ಮಧ್ಯಮ ವರ್ಗದವರು ತಾವು ಜೀವನದಲ್ಲಿ ಒಂದು ಒಳ್ಳೆಯ ಸಕಲ ಸೌಕರ್ಯಗಳನ್ನು ಉಳ್ಳ ಮನೆ ಕಟ್ಟಿಕೊಳ್ಳಬೇಕು ಎಂದುಕೊಳ್ಳುತ್ತಾರೆ ಅಥವಾ ಮನೆಯನ್ನೇ ಆಸ್ತಿಯನ್ನಾಗಿ ಮಾಡಿಕೊಂಡು ಅದರ ಮೇಲೆ ಹೂಡಿಕೆ ಮಾಡುತ್ತಾರೆ.
ಸೆಪ್ಟೆಂಬರ್ 30ರ ನಂತರ ಬಂದ್ ಆಗಲಿದೆ LIC ಈ ಪಾಲಿಸಿ.! LIC ಮಾಡಿಸಿರುವವರು ತಪ್ಪದೆ ನೋಡಿ.!
ಇನ್ನು ಶ್ರೀಮಂತ ವರ್ಗಕ್ಕೆ ಇದು ಪ್ರತಿಷ್ಠೆಯ ವಿಷಯ ಆಗಿರುತ್ತದೆ, ಹಾಗಾಗಿ ಅವರವರ ಪ್ರತಿಷ್ಠೆಗೆ ತಕ್ಕಹಾಗೆ ವಿಭಿನ್ನ ವಿನ್ಯಾಸಗಳುಳ್ಳ ಲಕ್ಷೂರಿ ಯಸ್ ಮನೆಗಳನ್ನು ಕಟ್ಟಿಸುತ್ತಾರೆ ಅಥವಾ ಕೊಂಡುಕೊಳ್ಳುತ್ತಾರೆ. ಬಡವರು, ನಿರಾಶ್ರಿತರು ಆರ್ಥಿಕವಾಗಿ ಹಿಂದುಳಿದ ಅನೇಕ ಕುಟುಂಬಗಳು ಜೀವನಪೂರ್ತಿ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ಅಥವಾ ಶೆಡ್ ನಲ್ಲಿ ಕಳೆದಿರುವ ಉದಾಹರಣೆಗಳು ಇವೆ.
ಇವುಗಳನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025ರ ವರೆಗೆ ಪ್ರತಿಯೊಬ್ಬರಿಗೂ ಸ್ವಂತ ಸೂರಿನ ಕನಸು ನನಸಾಗಬೇಕು ಎನ್ನುವ ದೂರ ದೃಷ್ಟಿಯನ್ನು ಇಟ್ಟುಕೊಂಡು ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆ ಮಾತ್ರ ಅಲ್ಲದೆ ಕೇಂದ್ರ ಮತ್ತು ರಾಜ್ಯದಿಂದ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಅನೇಕ ಯೋಜನೆಗಳು ಲಭ್ಯವಿದ್ದು.
60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಿಗಲಿದೆ ಪ್ರತಿ ತಿಂಗಳು 2 ಲಕ್ಷ ಪಿಂಚಣಿ.! ತಪ್ಪದೇ ಅರ್ಜಿ ಸಲ್ಲಿಸಿ.!
ಈ ಯೋಜನೆಗಳಿಗೆ ಆಯ್ಕೆಯಾದರೆ ಫಲಾನುಭವಿಗಳಾಗಿ ಸಹಾಯಧನ ಪಡೆದು ಶೀಘ್ರವಾಗಿ ಮನೆ ಕಟ್ಟಿಕೊಳ್ಳಬಹುದು . ಎಲ್ಲರಿಗೂ ತಮ್ಮ ಮನೆ ನಿರ್ವಾಣಕ್ಕೆ ಬೇಕಾದಷ್ಟು ಹಣದ ಅನುಕೂಲತೆ ಇರದ ಕಾರಣ ಸರ್ಕಾರ ನೆರವಿಗಾಗಿ ಕಾಯುತ್ತಿರುತ್ತಾರೆ ಅವರಿಗೆಲ್ಲ ಈಗ ಕೇಂದ್ರ ಸರ್ಕಾರದ (Government) ವತಿಯಿಂದ ಸಿಹಿ ಸುದ್ದಿ ಇದೆ.
ಈ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಹಲವು ಹೊಸ ಯೋಜನೆಗಳ ಘೋಷಣೆ ಆಗಿದೆ. ಅದರಲ್ಲಿ ನಗರ ಭಾಗದಲ್ಲಿ ವಾಸಿಸುತ್ತಿರುವವರು ಸ್ವಂತ ಮನೆ ಕಟ್ಟಿಕೊಳ್ಳಲು ಬಯಸಿದರೆ ಸರ್ಕಾರದ ನೆರವಿನ ಅನುಕೂಲತೆಯನ್ನು ಈ ಹೊಸ ಯೋಜನೆಯ (Housing Scheme) ಹೆಸರಿನಲ್ಲಿ ಪಡೆಯಲಿದ್ದಾರೆ. 2028 ರ ವರೆಗೆ ಯೋಜನೆ ಅವಧಿಯನ್ನು ವಿಸ್ತರಿಸಲಾಗಿದ್ದು ನಗರ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿರುವವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಈ ಯೋಜನೆ ಮೂಲಕ ಸರ್ಕಾರವು 3 – 6.8% ಬಡ್ಡಿ ದರದಲ್ಲಿ ಗರಿಷ್ಠ 9 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸುತ್ತಿದ್ದೆ. 50 ಲಕ್ಷ ಬಜೆಟ್ ಒಳಗೆ ಮನೆ ನಿರ್ಮಾಣ ಮಾಡುವವರು 20 ವರ್ಷಗಳ ಅವಧಿಗೆ ಈ ಸಾಲವನ್ನು ಪಡೆಯಬಹುದಾಗಿದೆ. ಯೋಜನೆಗಾಗಿ ಕೇಂದ್ರ ಸರ್ಕಾರವು ಮುಂದಿನ 5 ವರ್ಷಗಳವರೆಗೆ 600 ಕೋಟಿ ಹಣವನ್ನು ಮೀಸಲಿಟ್ಟಿದೆ. ಯೋಜನೆಯು ದೇಶದಾದ್ಯಂತ 2.5 ಮಿಲಿಯನ್ ಜನರಿಗೆ ಸಹಾಯವಾಗಲಿದೆ ಎಂದು ಊಹಿಸಲಾಗಿದೆ.
ಪ್ರಧಾನಮಂತ್ರಿಯವರು ಘೋಷಿಸಿರುವ ಈ ಹೊಸ ಯೋಜನೆಗಳ ಬಗ್ಗೆ ನಿಯಮಗಳು ಮತ್ತು ನಿಬಂಧನೆಗಳು ಹಾಗೂ ಇದಕ್ಕಿರುವ ಮಾರ್ಗಸೂಚಿ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳುವುದು ಬಾಕಿ ಇದೆ. ಸದ್ಯದಲ್ಲೇ ಸಂಬಂಧ ಪಟ್ಟ ಸಚಿವಾಲಯಗಳಿಂದ ಈ ಕುರಿತಾದ ಆದೇಶ ಹೊರ ಬೀಳಲಿದೆ, ಮುಂದಿನ ವರ್ಷದಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಅದಕ್ಕೂ ಮುನ್ನವೇ ಈ ಯೋಜನೆ ಜಾರಿಗೆ ಬರುತ್ತದೆ ಎಂದು ಊಹಿಸಲಾಗುತ್ತಿದೆ. ಈ ಯೋಚನೆ ಬಗ್ಗೆ ಹೆಚ್ಚು ಮಾಹಿತಿ ಬೇಕಾದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು.