ಪತಿ ಕುಟುಂಬವೊಂದರ ಮುಖ್ಯಸ್ಥ. ಆ ಪತಿಯು ಆಕಾಲಿಕ ಮರಣಕ್ಕೆ ತುತ್ತಾದರೆ ಆ ಕುಟುಂಬದ ಆಧಾರ ಸ್ತಂಭವೇ ಕಳಚಿ ಹೋದಂತೆ. ಆ ಸಮಯದಲ್ಲಿ ಕುಟುಂಬವು ಮಾನಸಿಕವಾಗಿ ಆರ್ಥಿಕವಾಗಿ ಕುಗ್ಗಿ ಹೋಗಿರುತ್ತದೆ ಅಂತಹ ಸಮಯಗಳಲ್ಲಿ ವಿಧವಾ ಪತ್ನಿ ಹಾಗೂ ಕುಟುಂಬದವರಿಗೆ ಸಹಾಯ ಮಾಡಲು ಸರ್ಕಾರವು ವಿಧವಾ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ.
ಇದು ಸರ್ಕಾರದ ಯೋಜನೆ ಆಗಿದ್ದು, ಮಾಸಿಕವಾಗಿ ಪ್ರತಿ ತಿಂಗಳು ವಿಧವಾ ಪಿಂಚಣಿ ಯೋಜನೆ ಪೂರ್ವ ನಿರ್ಧರಿತವಾದ ಮೊತ್ತವು ಮಹಿಳೆಯ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮೂಲಕ ಜಮೆ ಆಗುತ್ತದೆ. ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಬಿಟ್ಟು ಕೊಟ್ಟಿದೆ. ಇಂದು ದೇಶದ ಅನೇಕ ರಾಜ್ಯಗಳಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರು ಮತ್ತು ಬೇರೆ ರೀತಿಯಲ್ಲಿ ಪರಿತ್ಯಕ್ತರಾಗಿರುವವರು ಯೋಜನೆಯ ಫಲಾನುಭವಿಗಳಾಗಿದ್ದಾರೆ.
● 18 ವರ್ಷ ವಯಸ್ಸಿನಿಂದ 65 ವರ್ಷ ಒಳಪಟ್ಟ ಎಲ್ಲಾ ವಿಧವಾ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಮಾಸಿಕವಾಗಿ ಬರುವ ವಿಧವಾ ಪಿಂಚಣಿಯನ್ನು ಪಡೆಯಬಹುದು.
● ಆ ಮಹಿಳೆಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಾಗಿರಬೇಕು.
● ಮಕ್ಕಳಿದ್ದ ಪಕ್ಷದಲ್ಲಿ ಮಗುವಿಗೆ 25 ವರ್ಷ ತುಂಬುವವರೆಗೂ ಮಾತ್ರ ಸರ್ಕಾರದ ಈ ಪಿಂಚಣಿ ಸೌಲಭ್ಯ ದೊರೆಯುತ್ತದೆ ನಂತರ ಆ ಮಹಿಳೆಯ ಸಂಪೂರ್ಣ ಜವಾಬ್ದಾರಿ ಮಕ್ಕಳದ್ದೇ ಆಗಿರುತ್ತದೆ.
● ಒಂದು ವೇಳೆ ಆಕೆಗೆ ಒಬ್ಬಳೇ ಮಗಳಿದ್ದರೆ 65 ವರ್ಷ ತುಂಬವರೆಗೂ ಕೂಡ ಈ ವಿಧವಾ ಪಿಂಚಣಿ ಪಡೆಯಬಹುದು.
ಈ ರೀತಿ ವಿಧವಾ ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆಯುತ್ತಿರುವ ವಿಧವೆಯವರಿಗೆ ಏಪ್ರಿಲ್ ಮೇ ಮತ್ತು ಜೂನ್ ತಿಂಗಳ ವಿಧವಾ ಪಿಂಚಣಿ ಹಣವು ಬಂದಿರಲಿಲ್ಲ, ಇದರಿಂದ ಸಾಕಷ್ಟು ಮಹಿಳೆಯರು ಸಮಸ್ಯೆಗೆ ಸಿಲುಕಿದ್ದರು. ಆದರೆ ಸರ್ಕಾರ ಈಗ ಅದಕ್ಕೆ ಕಾರಣವನ್ನು ತಿಳಿಸಿದೆ.
ಸಾಮಾಜಿಕ ಭದ್ರತಾ ಯೋಜನೆ ಅಡಿ ವಿಧವಾ ಪಿಂಚಣಿ ಯೋಜನೆ ಮತ್ತು ಅಂಗವಿಕಲರಿಗೆ ಸಿಗುತ್ತಿದ್ದ ಪಿಂಚಣಿಯನ್ನು 1400 ರಿಂದ 1500 ಕ್ಕೆ ಏರಿತ್ತಿರುವುದರಿಂದ ಪ್ರಕ್ರಿಯೆಯಲ್ಲಿ ಗೊಂದಲವಾಗಿದೆ. ಆದರೆ ತಪ್ಪದೇ ಮೂರು ತಿಂಗಳ ಒಟ್ಟು 4500 ರೂಪಾಯಿ ಹಣವನ್ನು ಫಲಾನುಭವಿಗಳ ಖಾತೆಗೆ ನೆರವಾಗಿ ವರ್ಗಾವಣೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಅಧಿಕೃತವಾಗಿ ಹೇಳಿಕೆ ಕೊಟ್ಟಿದ್ದಾರೆ.
ವಿಧವಾ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ನೀವು ಮೊದಲು ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಬೇಕು.
● ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯಿಂದ ವಿಧವಾ ಪಿಂಚಣಿ ಯೋಜನೆಗಾಗಿ ಫಾರ್ಮ್ ಅನ್ನು ತೆಗೆದುಕೊಳ್ಳಬೇಕು.
● ಫಾರ್ಮ್ ಅನ್ನು ತೆಗೆದುಕೊಂಡ ಮೇಲೆ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಕೂಡ ಭರ್ತಿ ಮಾಡಬೇಕು ಮತ್ತು ಎಲ್ಲಾ ಅಗತ್ಯ ದಾಖಲೆಗ ಪ್ರತಿಗಳನ್ನು ಕೂಡ ಜೊತೆಗೆ ಲಗತ್ತಿಸಬೇಕು.
● ಮಾಹಿತಿಯನ್ನು ಫಿಲ್ ಮಾಡಿದ ನಂತರ, ವಿಧವಾ ಪಿಂಚಣಿ ಯೋಜನೆ ಫಾರ್ಮ್ ಅನ್ನು ಕಛೇರಿಗೆ ಸಲ್ಲಿಸಿ.
● ನಿಮ್ಮ ಎಲ್ಲಾ ದಾಖಲೆಗಳ ಪರಿಶೀಲನೆಯ ನಂತರ, ನೀವು ಪ್ರತಿ ತಿಂಗಳು ನಿಮ್ಮ ಖಾತೆಯಲ್ಲಿ ಪಿಂಚಣಿ ಮೊತ್ತವನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ.
● ದೇಶದ ಪ್ರತಿಯೊಂದು ರಾಜ್ಯಗಳಲ್ಲೂ ವಿಧವಾ ಪಿಂಚಣಿ ಯೋಜನೆಯಡಿ ನೀಡುತ್ತಿರುವ ಪಿಂಚಣಿ ಮೊತ್ತವು ಬೇರೆ ಬೇರೆ ರೀತಿ ಇರುತ್ತದೆ.
ಕೇಳಲಾಗುವುದು ದಾಖಲೆಗಳು:-
● ಮಹಿಳೆಯ ಆಧಾರ್ ಕಾರ್ಡ್
● ಬ್ಯಾಂಕ್ ಪಾಸ್ ಬುಕ್ ವಿವರ
● ಇತ್ತೀಚಿನ ಭಾವಚಿತ್ರ
● ರೇಷನ್ ಕಾರ್ಡ್
● ಆದಾಯ ಪ್ರಮಾಣ ಪತ್ರ
● ಪತಿಯ ಮರಣ ದೃಢೀಕರಣ ಪತ್ರ
● ಮೊಬೈಲ್ ಸಂಖ್ಯೆ
● ಇನ್ನಿತರ ಪ್ರಮುಖ ದಾಖಲೆಗಳು.