ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ.!

 

WhatsApp Group Join Now
Telegram Group Join Now

ರಾಜ್ಯದಾದ್ಯಂತ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಹಾಗೂ ಹಳೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration card) ಮಾಡಿಸಲು ಕಾಯುತ್ತಿದ್ದ ಎಲ್ಲಾ ನಾಗರಿಕರಿಗೂ ಕರ್ನಾಟಕ ರಾಜ್ಯ ಸರ್ಕಾರದ (Karnataka Government) ಕಡೆಯಿಂದ ಮತ್ತೊಂದು ಬಿಗ್ ಅಪ್ಡೇಟ್ ಇದೆ. ಅದೇನೆಂದರೆ ರೇಷನ್ ಕಾರ್ಡ್ ಎಷ್ಟು ಪ್ರಮುಖ ದಾಖಲೆ ಎನ್ನುವುದು ಈಗ ಪ್ರತಿಯೊಬ್ಬರಿಗೂ ಗೊತ್ತಿದೆ.

ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ (Guaranty Scheme) ಪಡೆಯಲು ಮತ್ತು ಕೃಷಿ, ಶಿಕ್ಷಣ, ವೈದ್ಯಕೀಯ ಸೇರಿದಂತೆ ಅನೇಕ ವಿಭಾಗಗಳಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಸಿಗುವ ಅನುದಾನಗಳನ್ನು ಪಡೆಯಲು ರೇಷನ್ ಕಾರ್ಡ್ ಇರುವುದು ಮತ್ತು ರೇಷನ್ ಕಾರ್ಡ್ ಗಳಲ್ಲಿ ಮಾಹಿತಿಗಳು ಸರಿಯಾಗಿರುವುದು ಮುಖ್ಯ.

ಆದರೆ ಅನೇಕರಿಗೆ ತಮ್ಮ ರೇಷನ್ ಕಾರ್ಡ್ ಗಳಲ್ಲಿ ಸಮಸ್ಯೆಗಳಾಗಿವೆ, ಹಾಗಾಗಿ ಇವುಗಳ ತಿದ್ದುಪಡಿಗೆ ಕಾಯುತ್ತಿರುವ ಜನರಿಗೆ ಸರ್ಕಾರ ಕಳೆದ ಒಂದು ವರ್ಷದಲ್ಲಿ ನಾಲ್ಕೈದು ಬಾರಿ ಅವಕಾಶ ಮಾಡಿಕೊಟ್ಟಿದ್ದು ಸರ್ವರ್ ಸಮಸ್ಯೆ ಮತ್ತು ಇನ್ನಿತರ ಕಾರಣಗಳಿಂದಾಗಿ ಈ ಪ್ರಕ್ರಿಯೆ 100% ಯಶಸ್ವಿ ಆಗಿಲ್ಲ ಹಾಗಾಗಿ ಈಗ ಮತ್ತೊಮ್ಮೆ ಈ ಬಗ್ಗೆ ಸರ್ಕಾರ ಯೋಚಿಸಿದೆ.

ದಿನಾಂಕ 21 ಮೇ 2024 ರಂದು ಒಂದು ದಿನದ ಮಟ್ಟಿಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಹಾಗೂ ಹಳೆ ರೇಷನ್ ಕಾರ್ಡ್ ನಲ್ಲಿ ಇರುವ ಮಾಹಿತಿಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಅನುಮತಿ ನೀಡಿದೆ. ವಲಯವಾರು ಸಮಯ ನಿಗದಿ ಮಾಡಲಾಗಿದ್ದು ಆಯಾ ಜೋನ್ ಗೆ ಸಂಬಂಧ ಪಟ್ಟವರು ನಿಗದಿಪಡಿಸಿದ ಸಮಯದಲ್ಲಿ ನಿಗದಿಪಡಿಸಿದ ಸ್ಥಳಕ್ಕೆ ಸೂಕ್ತ ದಾಖಲೆಗಳ ಜೊತೆ ಹೋಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಅಥವಾ ಅರ್ಜಿ ಸಲ್ಲಿಸಬಹುದು.

ಕೇವಲ ಮೆಡಿಕಲ್ ಎಮರ್ಜೆನ್ಸಿ ಕಾರಣದಿಂದ (Medical Reason) ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುತ್ತಿರುವವರಿಗೆ ಅಥವಾ ತಿದ್ದುಪಡಿ ಮಾಡಿಸುತ್ತಿರುವವರಿಗೆ ಮಾತ್ರ ಈ ಬಾರಿ ಅವಕಾಶ ಮಾಡಿಕೊಡಲಾಗಿದೆ ಇದರ ಕುರಿತಾದ ಇನ್ನಷ್ಟು ವಿವರ ಹೀಗಿದೆ.

ಯಾವುದಕ್ಕೆ ಅವಕಾಶ:-

1. ಮೆಡಿಕಲ್ ಕಾರಣದಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು
2. ಹಳೆ ರೇಷನ್ ಕಾರ್ಡ್ ಗಳಲ್ಲಿ ಈ ಕೆಳಗಿನ ತಿದ್ದುಪಡಿಗಳು
* ಹೊಸ ಸದಸ್ಯರ ಸೇರ್ಪಡೆ
* ಕುಟುಂಬದ ಯಜಮಾನಿ ಹೆಸರು ಬದಲಾವಣೆ
* ಹೆಸರು ತಿದ್ದುಪಡಿ
* ಮರಣ ಹೊಂದಿದ ಅಥವಾ ಕುಟುಂಬದಲ್ಲಿ ಇಲ್ಲದ ಸದಸ್ಯರ ಹೆಸರು ತೆಗೆದು ಹಾಕುವುದು
* ಇ-ಕೆವೈಸಿ ಇತ್ಯಾದಿ

ಬೇಕಾಗುವ ದಾಖಲೆಗಳು:-

* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ
* 6 ವರ್ಷದ ಒಳಗಿನ ಮಕ್ಕಳ ಜನನ ಪ್ರಮಾಣ ಪತ್ರ
* ಕುಟುಂಬದಲ್ಲಿ ಯಾವುದಾದರೂ ಒಬ್ಬ ಸದಸ್ಯರ ಹೆಸರಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಮೊಬೈಲ್ ಸಂಖ್ಯೆ
* ಭಾವಚಿತ್ರಗಳು

ಎಲ್ಲಿ ಅರ್ಜಿ ಸಲ್ಲಿಸಬೇಕು:-

* ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ CSC ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಸಮಯ

* Server 1 – 12:00PM – 02:00PM (ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ)
* Server 2 – 02:00PM – 04:00PM (ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ)
* Server 3 – 04:00PM – 06:00PM ( ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲ್ಬುರ್ಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ)

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now