ಹೊಸ ರೇಷನ್ ಕಾರ್ಡ್ ಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ.! ಹೊಸದಾಗಿ ರೇಷನ್ ಕಾರ್ಡ್ ಮಾಡಿಸುವವರು, ಹಳೆ ರೇಷನ್ ಕಾರ್ಡ್ ಗೆ ಹೆಸರು ಸೇರಿಸಬೇಕು ಅನ್ನುವವರು ತಪ್ಪದೆ ನೋಡಿ.!

 

ರಾಜ್ಯದಲ್ಲಿ ಗ್ಯಾರಂಟಿ ಕಾರ್ಡ್ ಗಳು ಘೋಷಣೆ ಆಗುತ್ತಿದ್ದಂತೆ ಎಲ್ಲರೂ ಈಗ ಹೊಸದಾಗಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಓಡಾಡುತ್ತಿದ್ದಾರೆ. ಗೃಹಲಕ್ಷ್ಮಿ, ಅನ್ನ ಭಾಗ್ಯ ಯೋಜನೆಗಳ ಫಲಾನುಭವಿಗಳಾಗಲು ರೇಷನ್ ಕಾರ್ಡನ್ನು ಅಗತ್ಯ ದಾಖಲೆಯಾಗಿ ಕೇಳಬಹುದಾದ ಕಾರಣ ಈಗಿನಿಂದಲೇ ರೇಷನ್ ಕಾರ್ಡ್ ಅನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಆನ್ಲೈನ್ ಅಲ್ಲಿ ಹಾಗೂ ಆಫ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಪ್ರತಿನಿತ್ಯ ಕಛೇರಿಗಳಿಗೆ ಸಾವಿರಾರು ಮಂದಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸುತ್ತುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್ ಇದ್ದ ಕಾರಣ ತಾತ್ಕಾಲಿಕವಾಗಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು, ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಹೊಸ ರೇಷನ್ ಕಾರ್ಡ್ ಗಳ ಬಗ್ಗೆ ಅರ್ಜಿ ಸಲ್ಲಿಸುವ ಕರ್ನಾಟಕದ ನಾಗರಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳೊಬ್ಬರು ಮಾತನಾಡಿ ಹೊಸದಾಗಿ BPL ಕಾರ್ಡ್ ಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ ಅರ್ಜಿಗಳ ವಿಲೇವಾರಿ ಮತ್ತು ಕಾರ್ಡ್ ಗಳ ವಿತರಣೆ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಮುಂದಿನ ತಿಂಗಳಿನಿಂದ ವಿತರಣೆ ಕಾರ್ಯ ಕೂಡ ಆರಂಭವಾಗಬಹುದು ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವವರಿಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಆನ್ಲೈನ್ ಮೂಲಕ ಅವರು ಅರ್ಜಿ ಸಲ್ಲಿಸಬೇಕು. ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರ ಹೆಸರನ್ನು ಅಥವಾ ಮತ್ತೇನಾದರೂ ಮಾಹಿತಿಯನ್ನು ತಿದ್ದುಪಡಿ ಮಾಡಿಸಿಕೊಳ್ಳುವ ಬಗ್ಗೆ ತಿಳಿಸದೆ ಇದ್ದರೂ ಅದಕ್ಕೂ ಕೂಡ ಇದೇ ನಿಯಮ ಅನ್ವಯವಾಗುವ ಸಾಧ್ಯತೆ ಇದೆ.

ನೀವೇನಾದರೂ ಹೊಸದಾಗಿ ರೇಷನ್ ಕಾರ್ಡಿಗೆ ಅಪ್ಲೈ ಮಾಡುತಿದ್ದರೆ ಈ ಕ್ರಮಗಳನ್ನು ಅನುಸರಿಸಿ ನಿಮ್ಮ ಪರ್ಸನಲ್ ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ. ಮೊದಲಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಆದ https://ahara.kar.nic.in ಗೆ ಭೇಟಿ ನೀಡಿ ಒಂದು ಅಫೀಸಿಯಲ್ ಪೇಜ್ ಓಪನ್ ಆಗುತ್ತದೆ, ಇ-ಸೇವೆಗಳು ಎನ್ನುವುದನ್ನು ಕ್ಲಿಕ್ ಮಾಡಿ.

ಎಡಭಾಗದ ಮೆನುವಿನಲ್ಲಿ ಕಾಣುವ ಇ-ಪಡಿತರ ಚೀಟಿ ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿ ಅದರ ಕೆಳಗೆ ಹೊಸ ರೇಷನ್ ಕಾರ್ಡ್ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ. ಸದ್ಯಕ್ಕೆ ಸಮಯವನ್ನು ನಿಗದಿಗೊಳಿಸಲಾಗಿದೆ ಬೆಳಗ್ಗೆ 10:00 ರ ನಂತರ ಮಾತ್ರ ಈ ವೆಬ್ಸೈಟ್ ಓಪನ್ ಆಗುತ್ತದೆ. ವೆಬ್ಸೈಟ್ ಓಪನ್ ಮಾಡಿ ಕೇಳುವ ವಿವರಗಳನ್ನು ಫಿಲ್ ಮಾಡಿ ಮತ್ತು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ.

ಒಂದು ವೇಳೆ ನಿಮ್ಮ ಪರ್ಸನಲ್ ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇದ್ದರೆ ಹತ್ತಿರದಲ್ಲಿರುವ ಕರ್ನಾಟಕ ಗ್ರಾಮಒನ್ ಅಥವಾ ಬೆಂಗಳೂರು ಕೇಂದ್ರಗಳಿಗೆ ಹೋಗಿ ಬಯೋಮೆಟ್ರಿಕ್ ಮಾಹಿತಿ ನೀಡುವ ಮೂಲಕ ಜೊತೆಗೆ ರೇಷನ್ ಕಾರ್ಡಲ್ಲಿ ಸೇರ ಬಯಸುವ ಎಲ್ಲರ ಆಧಾರ್ ಕಾರ್ಡ್ ಪ್ರತಿ ಕುಟುಂಬದ ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಪ್ರಮುಖ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ, ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

Leave a Comment

%d bloggers like this: