ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಆಹ್ವಾನ, ಹೊಸದಾಗಿ ಮದುವೆಯಾದವರು ಮತ್ತು ರೇಷನ್ ಕಾರ್ಡಿಗೆ ಹೆಸರು ಸೇರಿಸಬೇಕಾದವರು ತಪ್ಪದೆ ಈ ಮಾಹಿತಿ ನೋಡಿ.!

 

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಜೂನ್ 1ನೇ ತಾರೀಖಿನಿಂದ 2023ರ ಸಾಲಿನಲ್ಲಿ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಹ್ವಾನ ಮಾಡಿದೆ. ಹೊಸ ರೇಷನ್ ಕಾರ್ಡ್ ಬಯಸುವವರು ಅಥವಾ ರೇಷನ್ ಕಾರ್ಡಲ್ಲಿ ಯಾವುದೇ ತಿದ್ದುಪಡಿ ಮಾಡಲು ಬಯಸುವವರು.

CSC ಕೇಂದ್ರದಲ್ಲಿ ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಕಾರಣ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ಹೇಳಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿಗೆ ತರುವುದಾಗಿ ಭರವಸೆ ನೀಡಿದೆ.

ಈ ಎಲ್ಲಾ ಗ್ಯಾರೆಂಟಿ ಕಾರ್ಡ್ ಯೋಜನೆಗಳ ಫಲಾನುಭವಿಗಳು ಆಗಬೇಕು ಎಂದರೆ BPL ಕಾರ್ಡ್ ಗಳು ಇರುವುದು ಕಡ್ಡಾಯವಾಗಿದೆ. ಹಾಗಾಗಿ ಈಗ ರೇಷನ್ ಕಾರ್ಡ್ ಗಳಲ್ಲಿ ಹೆಸರು ಸೇರಿಸುವುದು ಅಥವಾ ಪ್ರತ್ಯೇಕ ಕಾರ್ಡ್ ಅರ್ಜಿ ಸಲ್ಲಿಸುವುದು ಮುಂತಾದ ಕೋರಿಕೆಗಳು ಹೆಚ್ಚಾಗಿ ಬರುತ್ತಿವೆ. ನೀವೇನಾದರೂ ಹೊಸದಾಗಿ ಮದುವೆ ಆಗಿದ್ದರೆ ಈಗ ಹೊಸ ರೇಷನ್ ಕಾರ್ಡ್ ಪಡೆಯಲು ನಿರ್ಧರಿಸಿದ್ದರೆ ಜೂನ್ 1ರ ನಂತರ ಅರ್ಜಿ ಹಾಕಬಹುದು.

ಈ ಸಮಯದಲ್ಲಿ ದಾಖಲೆಗಳಾಗಿ ರೇಷನ್ ಕಾರ್ಡ್ ಗೆ ಸೇರ್ಪಡೆ ಆಗುವ ಸದಸ್ಯರ ಪೈಕಿ ಒಬ್ಬರ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ. ಜೊತೆಗೆ ಉಳಿದ ಸದಸ್ಯರ ಆಧಾರ್ ಕಾರ್ಡ್ ಕೂಡ ಬೇಕಾಗುತ್ತದೆ. ಈ ಪುರಾವೆಗಳನ್ನು ತೆಗೆದುಕೊಂಡು CSC ಕೇಂದ್ರಗಳಲ್ಲಿ ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು.

ಮದುವೆ ಆಗಿರುವ ಹೆಣ್ಣುಮಗಳು ತಮ್ಮ ಗಂಡನ ಮನೆಯ ರೇಷನ್ ಕಾರ್ಡ್ ಗೆ ಸೇರಬೇಕು ಎಂದರೆ ಮೊದಲು ತಂದೆ ಮನೆಯ ರೇಷನ್ ಕಾರ್ಡ್ ಅಲ್ಲಿ ಹೆಸರು ತೆಗೆಸಬೇಕು ನಂತರ ಪ್ರತ್ಯೇಕ ಕಾಡಿಗೆ ಅರ್ಜಿ ಸಲ್ಲಿಸಬಹುದು ಅಥವಾ ಗಂಡನ ಮನೆಯ ಕಾರ್ಡಿಗೆ ಸೇರ್ಪಡೆ ಆಗಬಹುದು.

ಈಗಾಗಲೇ ಒಂದು ರೇಷನ್ ಕಾರ್ಡ್ ನಲ್ಲಿ ಎಲ್ಲರೂ ಒಟ್ಟಿಗೆದ್ದು ಈಗ ಪ್ರತ್ಯೇಕ ರೇಷನ್ ಕಾರ್ಡ್ ಪಡೆಯಬೇಕು ಎಂದರೆ ಅದಕ್ಕೂ ಸಹ ಮೊದಲು ಈಗಾಗಲೇ ಇರುವ ರೇಷನ್ ಕಾರ್ಡಿನಲ್ಲಿ ಹೆಸರನ್ನು ತೆಗೆಸಿ ನಂತರ ಜಾತಿ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಗಳ ದಾಖಲೆ ನೀಡುವ ಮೂಲಕ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು. 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ರೇಷನ್ ಕಾರ್ಡಿಗೆ ಸೇರಿಸಬೇಕು ಎಂದರೆ ಆ ಮಕ್ಕಳ ಆಧಾರ್ ಕಾರ್ಡ್ ಬೇಕು.

ಒಂದು ವೇಳೆ ಆಧಾರ್ ಕಾರ್ಡ್ ಲಭ್ಯವಿಲ್ಲದೆ ಇದ್ದರೆ ಜನನ ಪ್ರಮಾಣ ಪತ್ರವನ್ನು ಕೂಡ ಒಂದು ಪುರಾವೆಯಾಗಿ ಕೊಟ್ಟು ಮಕ್ಕಳ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬಹುದು. ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳುಗಳ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬೇಕು ಎಂದರೆ ಅವರ ಬಯೋಮೆಟ್ರಿಕ್ ಮಾಹಿತಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು. ನಂತರ ಅವರ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ನೀಡಿ ಅವರನ್ನು ಕುಟುಂಬದ ರೇಷನ್ ಕಾರ್ಡ್ ಪಟ್ಟಿಯಲ್ಲಿ ಸೇರಿಸಬಹುದು. ಎಲ್ಲ ಮಾಹಿತಿಗಳು ಸರಿಯಾಗಿದ್ದು ಅರ್ಜಿ ಸಲ್ಲಿಸಿದರೆ ನೀವು ಅರ್ಜಿ ಸಲ್ಲಿಸಿದ 70 ದಿನಗಳ ಒಳಗಡೆ ಹೊಸ ರೇಷನ್ ಕಾರ್ಡ್ ಸಿಗುತ್ತದೆ.

Leave a Comment

%d bloggers like this: