ಎಲ್ಲಾ ಮಹಿಳೆಯರಿಗೂ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆಯ 2000ರೂ, ಸರ್ಕಾರದಿಂದ ಮತ್ತಷ್ಟು ಕಂಡೀಷನ್ ರೂಲ್ಸ್ ಗಳು ತಯಾರಿ‌ಏನದು ನೋಡಿ..!

ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿ ಕಾರ್ಡ್ ಘೋಷಣೆಗಳನ್ನು ಮಾಡಿ ಆದೇಶ ಪತ್ರ ಹೊರಡಿಸಿದೆ. ಆದರೆ ಪದೇಪದೇ ಅದಕ್ಕೆ ರೂಪಿಸುವ ಮಾರ್ಗಸೂಚಿಗಳಲ್ಲಿ ಹೆಚ್ಚುವರಿ ಕಂಡೀಷನ್ ಗಳು ಸೇರ್ಪಡೆ ಆಗುತ್ತಿವೆ. ಗ್ಯಾರಂಟಿ ಕಾರ್ಡ್ ಗಳಲ್ಲಿ ಮಹಿಳೆಯರಿಗೆ ಮೀಸಲಾದ ಮಹತ್ವಪೂರ್ಣ ಯೋಜನೆ ಎನಿಸಿದ ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಕುಟುಂಬದ ಯಜಮಾನಿಗೆ 2000ರೂ. ಸಹಾಯಧನ ನೀಡುವುದಾಗಿ ಸರ್ಕಾರ ಘೋಷಿಸಿತ್ತು.

ನಂತರ ಈ ಯೋಜನೆಯ ಆದೇಶ ಪತ್ರ ಹೊರ ಬಿದ್ದಾಗ APL ಮತ್ತು BPL ಭೇದವಿಲ್ಲದೆ ಎಲ್ಲಾ ಕುಟುಂಬದ ಯಜಮಾನಿಗೂ ಕೂಡ 2,000ರೂ. ಸಹಾಯಧನವನ್ನು ನೀಡುತ್ತೇವೆ. ಮನೆಯಲ್ಲಿ ಅತ್ತೆ ಅಥವಾ ಸೊಸೆ ಅಥವಾ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಕುಟುಂಬದವರಿಗೆ ಯಾರಿಗೆ ಸಹಾಯಧನ ಸಿಗಬೇಕು ಎನ್ನುವ ತೀರ್ಮಾನಕ್ಕೆ ಬಿಡುತ್ತೇವೆ.

ಫಲಾನುಭವಿಯು ಈಗಾಗಲೇ ಸಾಮಾಜಿಕ ಭದ್ರತೆ ಪಿಂಚಣಿ ಪಡೆಯುತ್ತಿದ್ದರು ಕೂಡ ಸಹಾಯಧನ ನೀಡುತ್ತೇವೆ. ಕರ್ನಾಟಕದ ಮಹಿಳೆಯಾಗಿರಬೇಕು, ಬ್ಯಾಂಕ್ ಖಾತೆ ಹೊಂದಿರಬೇಕು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿ NPCI ಲಿಂಕ್ ಆಗಿರಬೇಕು ಎನ್ನುವುದಷ್ಟೇ ಸರ್ಕಾರದ ಕಂಡೀಷನ್, 18 ವರ್ಷ ಮೇಲ್ಪಟ್ಟ ಯಾರಾದರೂ ಯಜಮಾನಿ ಆಗಬಹುದು.

ಅನುಭವಿಗಳು ಪೂರಕ ದಾಖಲೆಗಳನ್ನು ಕೊಟ್ಟು ಜೂನ್ 15ರಿಂದ ಜುಲೈ 15ರವರೆಗೆ ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು, ಬಳಿಕ ಆಗಸ್ಟ್ 15 ರಂದು ಎಲ್ಲಾ ಫನಾನುಭವಿಗಳ ಖಾತೆಗೆ 2000ರೂ ಸಹಾಯವನ್ನು ನೇರ ವರ್ಗಾವಣೆ ಮೂಲಕ ಜಮೆ ಮಾಡುತ್ತೇವೆ. ಪ್ರತಿ ತಿಂಗಳು ಕೂಡ ಎಲ್ಲಾ ಮಹಿಳೆಯರು ಈ ಸಹಾಯಧನವನ್ನು ಪಡೆಯುತ್ತಾರೆ ಎಂದು ಹೇಳಿತ್ತು.

ಆದರೆ ಈಗ ಮತ್ತೊಮ್ಮೆ ಮಾರ್ಗಸೂಚಿಯಲ್ಲಿ ಬದಲಾವಣೆ ತಂದಿದೆ.
ಎರಡು ಕಠಿಣ ಹೊಸ ರೂಲ್ಸ್ ಗಳನ್ನು ಈ ಯೋಜನೆಗೆ ಹಾಕಲಾಗಿದೆ. ಆರ್ಥಿಕ ಇಲಾಖೆ ಮತ್ತು ಯೋಜನೆ ಇಲಾಖೆಗಳ ಜೊತೆ ಸಮಾಲೋಚಿಸಿ ಸಚಿವ ಸಂಪುಟದ ಅನುಮೋದನೆ ಪಡೆದ ಬಳಿಕ ಹೊರಬಿದ್ದ ಹೊಸ ಮಾರ್ಗಸೂಚಿಯಲ್ಲಿ ಆದಾಯ ತೆರಿಗೆ ಮತ್ತು GST ರಿಟರ್ನ್ಸ್ ಸಲ್ಲಿಸುವ ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಹೊಸ ಮಾರ್ಗ ಸೂಚಿ ಪ್ರಕಾರ ಕುಟುಂಬದ ಯಜಮಾನ ಅಥವಾ ಯಜಮಾನಿಯು ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಥವಾ GST ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಅವರು ಈ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಲಾಗಿದೆ. ಅಂದರೆ ಸಾಮಾನ್ಯ ಅಂಗಡಿ, ಹೋಟೆಲ್, ಟ್ರಾವೆಲ್ಸ್ ಇರುವವರು ಕೂಡ ವ್ಯಾಪ್ತಿಯಿಂದ ಹೊರಗೆ ಉಳಿಯುವ ಸಾಧ್ಯತೆ ಇದೆ.

ಈ ಮೊದಲು ಇದರ ಬಗ್ಗೆ ತಿಳಿಸದೆ ಇದ್ದರೂ ಕೂಡ ಈಗ ಈ ಅಂಶಗಳನ್ನು ಸೇರ್ಪಡಿಸಲಾಗಿದೆ. ಇದರ ಜೊತೆಗೆ ಸರ್ಕಾರಿ ಉದ್ಯೋಗ ಹೊಂದಿರುವವರು ಕೂಡ ಯೋಜನೆಯಿಂದ ಹೊರಗುಳಿಯಲ್ಲಿದ್ದಾರೆ. ಸರ್ಕಾರಿ ಹುದ್ದೆ ಹೊಂದಿರುವವರ ಪತ್ನಿ ಅಥವಾ ಕುಟುಂಬದ ಯಜಮಾನಿಯೇ ಸರ್ಕಾರಿ ಹುದ್ದೆ ಹೊಂದಿದ್ದಲ್ಲಿ ಅವರು ಸಹ ಗೃಹಲಕ್ಷ್ಮಿ ಯೋಜನೆ ಸಹಾಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲಾಗಿದೆ.

ಇದರಿಂದ ಗೃಹಲಕ್ಷ್ಮಿ ಯೋಜನೆಯ 2000ರೂ. ಸಹಾಯದಿಂದ ವಂಚಿತರಾಗುವ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಯಜಮಾನಿ ಯಾರು ಎನ್ನುವ ವಿಷಯಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, BPL ಮತ್ತು APL ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯನ್ನೇ ಕುಟುಂಬದ ಯಜಮಾನಿ ಎಂದು ತೀರ್ಮಾನಕ್ಕೆ ಬರಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆ ಲಾಂಚ್ ಆಗುವವರೆಗೂ ಇನ್ನೆಷ್ಟು ಬದಲಾವಣೆಗಳು ಆಗಲಿದೆಯೋ ಕಾದು ನೋಡೋಣ.

Leave a Comment

%d bloggers like this: