ಯುವನಿಧಿ ಯೋಜನೆಯ 3000 ರೂಪಾಯಿ ನಿರುದ್ಯೋಗ ಭತ್ಯೆ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ.!

 

ಕರ್ನಾಟಕದಲ್ಲಿ ಅಧಿಕಾರ ಸ್ಥಾಪಿಸಿರುವ ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುಂಚೆ ನೀಡಿದ್ದ ಗ್ಯಾರಂಟಿ ಕಾರ್ಡ್ ಭರವಸೆಗಳನ್ನು ಈಡೇರಿಸುತ್ತಿದೆ. ಅದರ ಅನ್ವಯ ಕರ್ನಾಟಕದಲ್ಲಿರುವ ಪದವಿ ಮತ್ತು ಡಿಪ್ಲೋಮೋ ವಿದ್ಯಾಭ್ಯಾಸ ಮಾಡಿದ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ಹೇಳಿದ್ದ ಯುವನಿಧಿ ಯೋಜನೆಗೆ ಇರುವ ಷರತ್ತು ಹಾಗೂ ನಿಬಂಧನೆಗಳನ್ನು ಕೂಡ ಆದೇಶಪತ್ರದ ಮೂಲಕ ಘೋಷಿಸಿದೆ.

ಈ ಯೋಜನೆಗೆ ಯಾರೆಲ್ಲಾ ಅರ್ಹರು, ಯಾವ ರೀತಿಯ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ, ಎಲ್ಲಿ ಅರ್ಜಿ ಸಲ್ಲಿಸಬೇಕು, ದಾಖಲೆಗಳಾಗಿ ಯಾವ್ಯಾವ ಮಾಹಿತಿ ಕೊಡಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಯುವನಿಧಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

2022-23ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳು ಸೇರಿದಂತೆ ಎಲ್ಲಾ ವಿಧದ ಪದವೀಧರ ನಿರುದ್ಯೋಗಿ ಯುವಕ ಯುವತಿಯರಿಗೆ ಮಾಸಿಕ 3000 ಮತ್ತು ಡಿಪ್ಲೋಮಾ ಪದವಿ ಪಾಸಾದ ಯುವಕ ಯುವತಿಯರಿಗೆ 1500 ನಿರುದ್ಯೋಗ ಭತ್ಯೆ ನೀಡಲು ನಿರ್ಧರಿಸಿದ್ದೇವೆ. ಲಿಂಗತ್ವ ಅಲ್ಪಸಂಖ್ಯಾತರು ಕೂಡ ಈ ಯೋಜನೆಯ ಸಹಾಯ ಪಡೆದುಕೊಳ್ಳಬಹುದು.

ಸ್ವಂತ ಪರಿಶ್ರಮದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಹೊಂದಿದ್ದು ಉದ್ಯೋಗ ಸಿಗದೆ ಸಂಕಷ್ಟದಲ್ಲಿರುವ ನಾಡಿನ ಯುವಶಕ್ತಿಗೆ ಆರ್ಥಿಕ ನೆರವು ನೀಡಿ ಅವರ ಕನಸಿಗೆ ಬೆಂಬಲವಾಗಿ ನಿಲ್ಲಲು ಸರ್ಕಾರ ಈ ಯೋಜನೆಯನ್ನು ಘೋಷಿಸಿದೆ. ಪದವಿ ಪಡೆದು 180 ದಿನಗಳಾಗಿದ್ದರು ಉದ್ಯೋಗ ಸಿಗದೆ ಭವಿಷ್ಯದ ಬಗ್ಗೆ ಆತಂಕದಲ್ಲಿರುವ ಯುವ ಜನತೆಗೆ ಉದ್ಯೋಗ ಹುಡುಕಲು ಅನುಕೂಲ ಕಲ್ಪಿಸಿ ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದು ಈ ಯೋಜನೆಯ ಉದ್ದೇಶ ಎಂದು ಸರ್ಕಾರ ತಿಳಿಸಿದೆ.

ಯುವನಿಧಿ ಯೋಜನೆಗೆ ಸರ್ಕಾರ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳು:-
● ಪದವಿ ಅಥವಾ ಡಿಪ್ಲೋಮೋ ಮುಗಿಸಿ ಆರು ತಿಂಗಳಾಗಾದರೂ ಉದ್ಯೋಗ ಸಿಗದೇ ಇರುವ ಕನ್ನಡಿಗರಿಗೆ ಈ ಯೋಜನೆ ಅನ್ವಯಿಸುತ್ತದೆ.
● ಈ ಯೋಜನೆಯು ಎರಡು ವರ್ಷಗಳ ವರೆಗೆ ಮಾತ್ರ ಅನ್ವಯವಾಗುತ್ತದೆ. ಎರಡು ವರ್ಷದ ಅವಧಿ ಒಳಗೆ ಫಲಾನುಭವಿಗೆ ಉದ್ಯೋಗ ದೊರೆತರೆ ಸಹಾಯಧನವನ್ನು ಸ್ಥಗಿತಗೊಳಿಸಲಾಗುತ್ತದೆ.
● ನಿರುದ್ಯೋಗ ಭತ್ಯೆಯನ್ನು DBT ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.

● ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ದೊರೆತ ಬಳಿಕ ತಪ್ಪು ಘೋಷಣೆ ಅಥವಾ ಘೋಷಿಸಲು ವಿಳಂಬವಾದರೆ ದಂಡ ವಿಧಿಸಲಾಗುತ್ತದೆ.
● ಯಾವುದಾದರೂ ಉದ್ಯಮ ಆರಂಭಿಸಲು ಸರ್ಕಾರದಿಂದ ಲೋನ್ ಪಡೆದಿರುವವರಿಗೆ ಇದು ಅನ್ವಯವಾಗುವುದಿಲ್ಲ.
● ಉನ್ನತ ವ್ಯಾಸಂಗ ಮಾಡುವವರಿಗೆ ಇದು ಅನ್ವಯವಾಗುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-
● ಆಧಾರ್ ಕಾರ್ಡ್
● NPCI ಗೆ ಲಿಂಕ್ ಆಗಿ ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಪಾಸ್ ಬುಕ್.
● ಕರ್ನಾಟಕ ನಿವಾಸಿ ದೃಢೀಕರಣ ಪತ್ರ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಇನ್ನಿತರೆ ದಾಖಲೆಗಳು
● ಮೊಬೈಲ್ ಸಂಖ್ಯೆ.

ಯುವನಿಧಿ ಯೋಜನೆಗೆ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸ್ವೀಕಾರ ಮಾಡಲು ಸರ್ಕಾರವು ವೆಬ್ಸೈಟ್ ಸಿದ್ಧಪಡಿಸುತ್ತಿದೆ. ಶೀಘ್ರದಲ್ಲಿಯೇ ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭ ಆಗುತ್ತದೆ. ಅಲ್ಲಿಯವರೆಗೂ ಕೂಡ ಫಲಾನುಭವಿಗಳು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಕೂಡ ಸಿದ್ಧ ಮಾಡಿ ಇಟ್ಟುಕೊಳ್ಳತಕ್ಕದ್ದು. ಜೊತೆಗೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಆಗಿರುವುದರಿಂದ ಫಲಾನುಭವಿಗಳು ಆಗಲು ಇಚ್ಚಿಸುವವರು ಇದನ್ನು ಕೂಡ ದೃಢಪಡಿಸಿಕೊಳ್ಳತಕ್ಕದ್ದು. ಸದ್ಯದಲ್ಲೇ ರಾಜ್ಯದಲ್ಲಿ ಯೋಜನೆ ಲಾಂಚ್ ಆಗಲಿದೆ ಶೀಘ್ರವಾಗಿ ಎಲ್ಲ ನಿರುದ್ಯೋಗಗಳ ಖಾತೆಗಳಿಗೂ ಕೂಡ ಸರ್ಕಾರ ಘೋಷಿಸಿದ ನಿರುದ್ಯೋಗ ಭತ್ಯೆ ಜಮೆ ಆಗಲಿದೆ.

Leave a Comment

%d bloggers like this: