ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ UPI ಆಧಾರಿತ ಆಪ್ ಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮೂಲಕ ತಮ್ಮ ಹಣಕಾಸಿನ ವಹಿವಾಟನ್ನು ನಡೆಸುತ್ತಿದ್ದಾರೆ. ಮೊಬೈಲ್ ಬಳಸುವ ಬಹುತೇಕರಲ್ಲಿ ಎಲ್ಲರೂ ಕೂಡ ಇವುಗಳನ್ನು ಅವಲಂಬಿಸಿದ್ದಾರೆ ಆದರೆ ಇದರಲ್ಲಿರುವ ಒಂದು ರಿಸ್ಕ್ ಅಂಶ ಏನೆಂದರೆ.
ಒಂದು ವೇಳೆ ನಮ್ಮ ಮೊಬೈಲ್ ಫೋನ್ ಕಳೆದು ಹೋದರೆ ಅದರಲ್ಲಿರುವ ಆಪ್ ಮೂಲಕ ನಮ್ಮ ಖಾತೆಯಲ್ಲಿರುವ ಹಣವನ್ನು ಕದೀಮರು ದೋಚಬಹುದು. ಆದರೆ ಮೊಬೈಲ್ ಕಳೆದುಕೊಂಡ ಅಥವಾ ಕಳ್ಳತನವಾದ ತಕ್ಷಣವೇ ಈ ಒಂದು ಕೆಲಸ ಮಾಡಿದರೆ ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದು. ಹಾಗಾಗಿ ತಪ್ಪದೇ ಈಗ ನಾವು ಹೇಳುವ ಈ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ ಹೊಸ ಯೋಜನೆ.! ಗೆಳತಿ ಯೋಜನೆಯಡಿ 2.25 ಲಕ್ಷ ಸಂಪೂರ್ಣ ಉಚಿತ.!
1. Paytm ಗ್ರಾಹಕರು:-
* ಮೊಬೈಲ್ ಕಳ್ಳತನವಾದರೆ ಅಥವಾ ಕಳೆದು ಹೋದರೆ ತಕ್ಷಣವೇ ಕಂಪ್ಲೇಂಟ್ ಕೊಡುವುದನ್ನು ಮರೆಯಬೇಡಿ ಅದರ ಜೊತೆಗೆ ನಿಮ್ಮ ಫೋನ್ ಪೇ ಐಡಿಯನ್ನು ಕೂಡ ಬ್ಲಾಕ್ ಮಾಡಿ.
* ತಕ್ಷಣವೇ ನಿಮ್ಮ ಆಪ್ತರ ಮೊಬೈಲ್ ನಿಂದ Paytm ಸಹಾಯವಾಣಿ ಸಂಖ್ಯೆಯಾದ 01204456456 ಸಂಖ್ಯೆಗೆ ಕರೆ ಮಾಡಿ
* ಹೇಳಲಾಗುವ ಎಲ್ಲಾ ಮಾಹಿತಿಯನ್ನು ಗಮನವಿಟ್ಟು ಕೇಳಿ ಕಳೆದು ಹೋದ ಫೋನ್ (lost phone) ಎನ್ನುವ ಸೂಚನೆ ಬಂದಾಗ ಆ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
* ನೀವು ಕರೆ ಮಾಡಿರುವ ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ನೀವು ಪೇಟಿಎಂ ಬಳಸುತ್ತಿದ್ದ ಮೊಬೈಲ್ ನಂಬರ್ ಕೂಡ ನಮೂದಿಸಿ ಎಲ್ಲ ಸೇವೆಗಳಿಂದ ಲಾಗೌಟ್ (log out) ಆಗಲು ಇರುವ ಆಪ್ಷನ್ ಸೆಲೆಕ್ಟ್ ಮಾಡಿ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 9250 ಬಡ್ಡಿ ಸಿಗುತ್ತೆ.!
* ಅಥವಾ 24*7 ಕಾರ್ಯನಿರ್ಹಿಸುವ ಪೇಟಿಎಂ ವೆಬ್ ಸೈಟ್ ಗೆ ಭೇಟಿ ಕೊಟ್ಟು ಸಹಾಯವಾಣಿ ವಿಭಾಗಕ್ಕೆ ಹೋಗಿ ವರದಿ ಸಲ್ಲಿಸಿ, ಪೊಲೀಸ್ ಕಂಪ್ಲೇಂಟ್ ಕೊಟ್ಟಿರುವ ದಾಖಲೆ ಇನ್ನಿತರ ನಿಮ್ಮ ಪೇಟಿಎಂ ಬಳಕೆ ಸಂಬಂಧಿಸಿದ ಮಾಹಿತಿ ನೀಡುವ ಮೂಲಕ ನೀವು ತಾತ್ಕಾಲಿಕವಾಗಿ ನಿಮ್ಮ ಆಪ್ ಬಳಕೆ ಸ್ಥಗಿತಗೊಳಿಸಿ ವಂಚನೆ ಆಗುವುದರಿಂದ ತಪ್ಪಿಸಿಕೊಳ್ಳಬಹುದು.
2. Google pe ಗ್ರಾಹಕರು :-
* ಗೂಗಲ್ ಪೇ ಸಂಸ್ಥೆಯ ಸಹಾಯವಾಣಿ ಸಂಖ್ಯೆಯಾದ 18004190157 ಕರೆ ಮಾಡಿ ಹೇಳುವ ಮಾಹಿತಿಯನ್ನು ಕೇಳಿ ಗೂಗಲ್ ಪೇಷಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧ ಗೊಳಿಸುವ ಆಪ್ಷನ್ ಬಂದಾಗ ಸೆಲೆಕ್ಟ್ ಮಾಡಿ ಗೂಗಲ್ ಪೇ ಐಡಿ ಬ್ಲಾಕ್ ಮಾಡಬಹುದು
* ಅಥವಾ ಕಂಪ್ಯೂಟರ್ ಇಲ್ಲವೇ ಮೊಬೈಲ್ ನಲ್ಲಿ google find my phone ಜಾಲತಾಣಕ್ಕೆ ಭೇಟಿ ನೀಡಿ, ನಿಮ್ಮ ಮೊಬೈಲ್ ನಲ್ಲಿರುವ ಮುಖ್ಯ ಡಾಟವನ್ನು ದೂರದಿಂದಲೇ ಅಳಿಸಿ ಮೊಬೈಲ್ ಖಾತೆಯನ್ನು ನಿರ್ಬಂಧಿಸಬಹುದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ 2000 ಅಲ್ಲ 4000 ಹಣ ನೀಡಲು ನಿರ್ಧರಿಸಿರುವ ಸರ್ಕಾರ, ತಪ್ಪದೇ ಈ ಕೆಲಸ ಮಾಡಿ.!
3. Phone pe ಗ್ರಾಹಕರು:-
* ಫೋನ್ ಪೇ ಗ್ರಾಹಕರಿಗೆ ಇರುವ ಸಹಾಯವಾಣಿ ಸಂಖ್ಯೆಯಾದ 08068727374 / 02268727374 ಈ ಸಂಖ್ಯೆಗೆ ಕರೆ ಮಾಡಿ ವರದಿ ಸಲ್ಲಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
* ಈ ಸಮಯದಲ್ಲಿ ನಿಮ್ಮ ಕರೆಯನ್ನು ಸ್ವೀಕರಿಸುವ ಫೋನ್ ಪೇ ಬೆಂಬಲ ಅಧಿಕಾರಿಗೆ ನಿಮ್ಮ ಐಡಿಯನ್ನು ಗುರುತಿಸುವ ಸಲುವಾಗಿ ನೀವು ಫೋನ್ ಪೇ ಬಳಸುತ್ತಿರುವ ಮೊಬೈಲ್ ಸಂಖ್ಯೆ, ನಿಮ್ಮ ಕಡೆಯ ಟ್ರಾನ್ಸಾಕ್ಷನ್, ಫೋನ್ ಪೇ ಲಿಂಕ್ ಮಾಡಿದ ಇಮೇಲ್ ಐಡಿ ಹಾಗೂ ಬಳಸುತ್ತಿದ್ದ ಬ್ಯಾಂಕ್ ಹೆಸರುಗಳು ಇತ್ಯಾದಿಗಳನ್ನು ತಿಳಿಸಬೇಕು.
* ನಂತರ ಅವರು ನಿಮ್ಮ ಐಡಿಯನ್ನು ನಿಮ್ಮ ಅನುಮತಿಯೊಂದಿಗೆ ತಾತ್ಕಾಲಿಕವಾಗಿ ಬಂದ್ ಮಾಡುತ್ತಾರೆ.