ಇಂದು ಮಧ್ಯರಾತ್ರಿಯಿಂದಲೇ UPI ಟ್ರಾನ್ಸಾಕ್ಷನ್ ನಿಯಮ ಬದಲಾವಣೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಬಳಸುವ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಸುದ್ದಿ ಇದು.!

 

WhatsApp Group Join Now
Telegram Group Join Now

ಈಗ ದೇಶದಾದ್ಯಂತ ಎಲ್ಲಾ ಕ್ಷೇತ್ರವು ಕೂಡ ಡಿಜಟಲೀಕರಣಗೊಳ್ಳುತ್ತಿದೆ. ಬ್ಯಾಂಕಿಂಗ್ ಕ್ಷೇತ್ರವು ಕೂಡ ಇದರಲ್ಲಿ ಮುಂದಿದ್ದು ಭಾರತದಾದ್ಯಂತ ಈಗ ಎಲ್ಲಾ ಸ್ಮಾರ್ಟ್ಫೋನ್ ಬಳಕೆದಾರರು ಮತ್ತು ಯುವಜನತೆ ನಗದು ರಹಿತ ಹಣಕಾಸಿನ ವಹಿವಾಟಿನಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ ಕಳೆದ ಕೆಲವು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ.

ಒಬ್ಬರಿಂದ ಮತ್ತೊಬ್ಬರು ಆರ್ಥಿಕ ವಹಿವಾಟು ನಡೆಸಲು ನಗದು ಹಣವನ್ನೇ ಕೊಡಬೇಕಿತ್ತು ಅಥವಾ ಚೆಕ್ ಗಳ ಮೂಲಕ ಅಥವಾ ಬ್ಯಾಂಕ್ ಖಾತೆಯಿಂದ ಮತ್ತೊಬ್ಬರ ಖಾತೆಗೆ ಟ್ರಾನ್ಸ್ಫರ್ ಮಾಡುವ ಮೂಲಕ ಹಣದ ವಹಿವಾಟು ನಡೆಸಬೇಕಾಗಿತ್ತು. ಈಗ ಎಲ್ಲವೂ ಸಲೀಸಾಗಿ ಹೋಗಿರುವುದರಿಂದ ನಾವು ದಿನನಿತ್ಯದ ದಿನಸಿ, ರೇಷನ್, ಹಾಲು ಖರೀದಿಸುವವರಿಗೂ ಕೂಡ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಗಳಿಂದ ಟ್ರಾನ್ಸಾಕ್ಷನ್ ಮಾಡುತ್ತಿದ್ದೇವೆ.

ಬ್ಯಾಂಕಿಂಗ್ ಕ್ಷೇತ್ರವು ಈ ವಿಚಾರದಲ್ಲಿ ಗ್ರಾಹಕರಿಗೆ ನೆರವಾಗಿದೆ. ಬ್ಯಾಂಕ್ಗಳ ಸಹಾಯಕದಿಂದ UPI ಆಧಾರಿತ ಆಪ್ ಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಅಮೆಜಾನ್ ಪೇ ಇವುಗಳನ್ನು ಬಳಸಿಕೊಂಡು ತಮ್ಮ ಹಣಕಾಸಿನ ವ್ಯವಹಾರವನ್ನು ಸಲೀಸು ಮಾಡಿಕೊಳ್ಳುತ್ತಿದ್ದೇವೆ. ಆದರೆ ಕಾಲದಿಂದ ಕಾಲಕ್ಕೆ ಎಲ್ಲಾ ನಿಯಮ ಬದಲಾದಂತೆ ಇವುಗಳ ನಿಯಮ ಕೂಡ ಬದಲಾಗುತ್ತಿದೆ.

UPI ಟ್ರಾನ್ಸಾಕ್ಷನ್ ನಡೆಸಲು ಬ್ಯಾಂಕುಗಳು ಒಂದು ದಿನಕ್ಕೆ ಇಂತಿಷ್ಟು ಲಿಮಿಟ್ ಎಂದು ವಿಧಿಸುತ್ತಿದ್ದವು. ಕೆನರಾ ಬ್ಯಾಂಕ್ ತನ್ನ ದಿನದ ಮಿತಿ 25000 ಇಟ್ಟಿದ್ದರೆ, ICICI ಬ್ಯಾಂಕ್ ಅಲ್ಲಿ ಇದು ಒಂದು ಲಕ್ಷದ ವರೆಗೂ ಕೂಡ ಇದೆ. ಈ ರೀತಿ ಪ್ರತಿಯೊಂದು ಬ್ಯಾಂಕ್ಗಳು ಕೂಡ ಹಣಕಾಸಿನ ವಹಿವಾಟಿಕೆ ಒಂದು ಲಿಮಿಟ್ ಅನ್ನು ವಿಧಿಸಿದೆ.

ಬ್ಯಾಂಕ್ ಗಳ ಮಿತಿ ಕಡಿಮೆ ಇದ್ದರೆ ಎಲ್ಲಾ ಅಕೌಂಟ್ ಗಳನ್ನು ಕೂಡ ಈ ಆಪ್ ಗಳಿಗೆ ಲಿಂಕ್ ಮಾಡಿ ಮತ್ತೊಂದು ಬ್ಯಾಂಕ್ ಖಾತೆಯಿಂದ ಹಣದ ವಹಿವಾಟು ಮಾಡಿಕೊಂಡು ಬ್ಯಾಲೆನ್ಸ್ ಮಾಡುತಿದ್ದೆವು. ಈಗ ಬದಲಾಗಿರುವ ಹೊಸ ನಿಯಮದ ಪ್ರಕಾರ ಒಟ್ಟಾರೆಯಾಗಿ UPI ಟ್ರಾನ್ಸಾಕ್ಷನ್ ಗೆ ಇಂತಿಷ್ಟು ಲಿಮಿಟ್ ಮತ್ತು ಇಷ್ಟೇ ಟ್ರಾನ್ಸಾಕ್ಷನ್ಗಳು ದಿನಕ್ಕೆ ಎನ್ನುವ ಮಿತಿ ಇದೆ.

ಇನ್ನು ಮುಂದೆ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಅಮೆಜಾನ್ ಪೇ ಇವುಗಳಿಗೆ ಕೂಡ ಒಟ್ಟು ಟ್ರಾನ್ಸಾಕ್ಷನ್ ಮೊತ್ತ ಮತ್ತು ಒಂದು ದಿನಕ್ಕೆ ಇಂತಿಷ್ಟೇ ಟ್ರಾನ್ಸಾಕ್ಷನ್ ಗಳು ಎನ್ನುವ ಲಿಮಿಟ್ ಬಂದಿದೆ. ಇವುಗಳನ್ನು UPI ಆಧಾರಿತ ಆಪ್ ಗಳನ್ನು ಬಳಸಿ ಹಣದ ವಹಿವಾಟು ನಡೆಸುವ ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರಬೇಕು. ಆದ್ದರಿಂದ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಕೂಡ ಹಂಚಿಕೊಳ್ಳಿ.

NPCI ಗೈಡ್ ಲೈನ್ಸ್ ಪ್ರಕಾರ ಅಮೇಜಾನ್ ಪೇ ಅಲ್ಲಿ ಒಬ್ಬ ಬಳಕೆದಾರ ಅಕೌಂಟನ್ನು ಕ್ರಿಯೇಟ್ ಮಾಡಿದ 24 ಗಂಟೆಯ ಒಳಗಾಗಿ 5000 ಮಾತ್ರ ಕಳುಹಿಸಬಹುದಾಗಿದೆ. ನಂತರ ದಿನಕ್ಕೆ 20 ಟ್ರಾನ್ಸಾಕ್ಷನ್ಗಳ ಅವಕಾಶವನ್ನು ನೀಡಲಾಗುತ್ತದೆ, ಒಂದು ದಿನದ ಹಣಕಾಸಿನ ವಹಿವಾಟಿನ ಮಿತಿ ಒಂದು ಲಕ್ಷದವರೆಗೂ ಇರುತ್ತದೆ. ಫೋನ್ ಪೇ ಬಳಕೆದಾರರು ಕೂಡ ಒಂದು ದಿನಕ್ಕೆ ಒಂದು ಲಕ್ಷದ ವರೆಗೆ ಹಣಕಾಸಿನ ವಹಿವಾಟು ಮಾಡಲು ಅವಕಾಶ ಕೊಡಲಾಗಿದೆ.

ದಿನಕ್ಕೆ 10 ರಿಂದ 20 ಟ್ರಾನ್ಸಾಕ್ಷನ್ ಮಾಡುವ ಸೌಲಭ್ಯವನ್ನು ನೀಡಲಾಗುತ್ತಿದೆ ಗೂಗಲ್ ಪೇ ಅಲ್ಲೂ ಕೂಡ ಒಂದು ಲಕ್ಷದವರೆಗೆ ಲಿಮಿಟ್ ನೀಡಲಾಗಿದ್ದು, 10 ಟ್ರಾನ್ಸಾಕ್ಷನ್ ಗಳನ್ನು ಮಾತ್ರ ಮಾಡಬಹುದಾಗಿದೆ. ಪೇಟಿಎಂ ಬಳಕೆದಾರರಿಗೂ ಒಂದು ಲಕ್ಷದವರೆಗೆ ಅನುಮತಿ ಇದೆ, ಆದರೆ ಒಂದು ಬಾರಿಗೆ 20,000 ವರೆಗೆ ಲಿಮಿಟ್ ಇದ್ದು ದಿನಕ್ಕೆ ಐದು ಬಾರಿ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now