ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಿಂತ ತಮ್ಮ ಸ್ವಂತ ವಾಹನಗಳಲ್ಲಿ ಹೋರಾಡುವವರ ಸಂಖ್ಯೆ ಹೆಚ್ಚಾಗಿದೆ. ತಮ್ಮ ಶಾಲಾ ಕಾಲೇಜುಗಳಿಗೆ ಹೋಗಲು, ಕಚೇರಿ ಕೆಲಸಗಳಿಗೆ ಹೋಗಲು, ದೂರದ ಊರುಗಳಿಗೆ ಪ್ರಯಾಣ ಬೆಳೆಸಲು ಈ ರೀತಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಕಡಿಮೆ ಸಮಯ ಹಿಡಿಯುತ್ತದೆ ಮತ್ತು ಪ್ರಯಾಣದ ಆಯಾಸವು ಕಡಿಮೆ ಇರುತ್ತದೆ ಎನ್ನುವ ಕಾರಣಕ್ಕಾಗಿ ಜನ ಸ್ವಂತ ವಾಹನದಲ್ಲಿ ಓಡಾಡಲು ಇಷ್ಟಪಡುತ್ತಾರೆ.
ನೀವು ಈ ರೀತಿ ನಿಮ್ಮ ಸ್ವಂತ ವಾಹನವನ್ನು ತೆಗೆದುಕೊಂಡು ರಸ್ತೆ ಮೇಲೆ ಇಳಿಯುವುದಾದರೆ ಅದಕ್ಕೂ ಮೊದಲು ರಸ್ತೆ ಸಂಚಾರ ನಿಯಮಗಳೆಲ್ಲವನ್ನು ತಿಳಿದಿರಬೇಕು. ಜೊತೆಗೆ ನೀವು ವಾಹನ ಚಲಾಯಿಸುತ್ತಾ ಪ್ರಯಾಣಿಸುವುದಾದರೆ ನಿಮ್ಮ ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳು ಹಾಗೂ ನೀವು ಹೊಂದಿರುವ ಚಾಲನಾ ಪರವಾನಿಗೆ ಮುಂತಾದ ದಾಖಲೆಗಳನ್ನು ಕೂಡ ಜೊತೆಗೆ ಇಟ್ಟುಕೊಂಡಿರಬೇಕು.
ಇಲ್ಲವಾದಲ್ಲಿ ತಪಾಸಣೆ ವೇಳೆ ಸಿಕ್ಕಿ ಬಿದ್ದರೆ ದಂಡ ಬೀಳುತ್ತದೆ. ಜೊತೆಗೆ ಕೆಲವು ಕಠಿಣ ನಿಯಮಗಳ ಉಲ್ಲಂಘನೆ ಆದಾಗ ನಿಮ್ಮ DL , ಇನ್ವಾಯ್ಸ್ ಗಳು ಕ್ಯಾನ್ಸಲ್ ಕೂಡ ಆಗಬಹುದು. ಆದ ಕಾರಣ ನಿಮ್ಮ ಕ್ಷೇಮಕ್ಕಾಗಿ ಹಾಗೂ ಸಾರ್ವಜನಿಕರ ಹಿತ ರಕ್ಷಣೆಗಾಗಿ ಸಂಚಾರ ನಿಯಮ ತಿಳಿಯದೇ ಮತ್ತು ಸರಿಯಾಗಿ ವಾಹನ ಚಲಾಯಿಸಲು ಬರದಿದ್ದರೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸಬೇಡಿ.
ಈಗ ಸರ್ಕಾರ ಈ ರಸ್ತೆ ಸಂಚಾರ ನಿಯಮಗಳಲ್ಲಿ ಒಂದು ಪ್ರಮುಖವಾದ ಬದಲಾವಣೆ ಮಾಡಿದೆ. ಅದೇನೆಂದರೆ, ನೀವು ಸ್ವಂತ ವಾಹನ ಹೊಂದಿದ್ದರೆ ಇದನ್ನು ಗಮನವಿಟ್ಟು ತಿಳಿದುಕೊಳ್ಳಿ. ನಿಮ್ಮ ಗಾಡಿಯ ನಂಬರ್ ಪ್ಲೇಟ್ ತುಂಬಾ ಗಲೀಜಾಗಿದ್ದಾರೆ ಅಥವಾ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇಲ್ಲದಿದ್ದರೆ 1000ರೂ. ವರೆಗೆ ದಂಡ ಬೀಳುತ್ತದೆ ಹಾಗೂ ನಿಮ್ಮ ಇನ್ವಾಯ್ಸ್ ಕ್ಯಾನ್ಸಲ್ ಆಗುತ್ತದೆ ಎನ್ನುವ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.
ಆದಕಾರಣ ಇನ್ನು ಸಹ ನೀವು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಪಡೆಯದಿದ್ದರೆ ತಕ್ಷಣವೇ ಅದನ್ನು ಆನ್ಲೈನಲ್ಲಿ ಬುಕ್ ಮಾಡಿ ಪಡೆದುಕೊಳ್ಳಿ. ಮತ್ತು ಸಂಚಾರ ನಿಮ್ಮ ಉಲ್ಲಂಘನೆ ಆಗದಂತೆ ಜವಾಬ್ದಾರಿ ನಾಗರಿಕನಾಗಿ ನಡೆದುಕೊಳ್ಳಿ. ಈ ರೀತಿ ಆನ್ಲೈನಲ್ಲಿ ನಂಬರ್ ಪ್ಲೇಟ್ ಆರ್ಡರ್ ಮಾಡಲು ಇರುವ ಸರಳ ವಿಧಾನಗಳು ಈ ರೀತಿ ಇದೆ.
● ಮೊದಲು ಅಧಿಕೃತ ವೆಬ್ಸೈಟ್ ಆದ bookmyhsrp.com ಗೆ ಭೇಟಿಕೊಡಿ.
● ಆಗ ತೆರೆಯುವ ಪುಟದಲ್ಲಿ ನಂಬರ್ ಪ್ಲೇಟ್ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
● ನಿಮ್ಮ ರಾಜ್ಯ, ವಾಹನ ಸಂಖ್ಯೆ, ನಿಮ್ಮ ಚಾಯ್ಸ್ ಸಂಖ್ಯೆ, ಇತ್ಯಾದಿ ವಿವರಗಳನ್ನು ಫಿಲ್ ಮಾಡಿ
● ನೀವು ಈ ನಂಬರ್ ಪ್ಲೇಟ್ ಅನ್ನು ಎಲ್ಲಿ ಆರ್ಡರ್ ಪಡೆಯಲು ಬಯಸುತ್ತೀರಿ ಎನ್ನುವುದನ್ನು ಕೂಡ ಆಯ್ಕೆ ಮಾಡಬೇಕು. ಒಂದು ವೇಳೆ ನೀವು ಶೋರೂಮ್ ಅಲ್ಲಿ ಆರ್ಡರ್ ಪಡೆಯುವುದಾದರೆ ಶೋರೂಮ್ ನ ವಿಳಾಸವನ್ನು ಫಿಲ್ ಮಾಡಿ ಅಥವಾ ಮನೆಗೆ ಆರ್ಡರ್ ಪಡೆಯುವುದಾದರೆ ನಿಮ್ಮ ಮನೆಯ ವಿಳಾಸವನ್ನು ಫಿಲ್ ಮಾಡಿ.
● ಇಷ್ಟೆಲ್ಲಾ ಪ್ರಕ್ರಿಯೆಗಳು ಮುಗಿದ ಮೇಲೆ ಕೊನೆಯಲ್ಲಿ ಮತ್ತೊಮ್ಮೆ ಚೆಕ್ ಮಾಡಿಕೊಂಡು ಸಬ್ಮಿಟ್ ಎನ್ನುವ ಬಟನ್ ಕ್ಲಿಕ್ ಮಾಡಿ.
● ನಿಗದಿತ ದಿನಾಂಕದಂದು ನಿಮಗೆ ನಂಬರ್ ಪ್ಲೇಟ್ ಸಿಗುತ್ತದೆ. ಮತ್ತು ನೀವು ನಂಬರ್ ಪ್ಲೇಟ್ ಗಾಗಿ ರಿಜಿಸ್ಟರ್ ಮಾಡಿದ ನೋಂದಣಿ ಸಂಖ್ಯೆಯನ್ನು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ನಿಮ್ಮ ಕೈಗೆ ಸೇರುವವರೆಗೂ ಇಟ್ಟುಕೊಂಡಿರಿ.