ಪ್ರತಿಯೊಬ್ಬರು ಕೂಡ ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಯಾಕೆಂದರೆ ಶಾಲೆಗೆ ಹೋಗುವ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಡೆಯುವುದರಿಂದ ಹಿಡಿದು ಈಗ ವೃದ್ಧರು ತಮ್ಮ ಮಾಸಿಕ ಪಿಂಚಣಿ ಪಡೆಯುವವರೆಗೂ ಎಲ್ಲಾ ಆರ್ಥಿಕ ವ್ಯವಹಾರಗಳು ಬ್ಯಾಂಕ್ ಖಾತೆ ಮೂಲಕ ನಡೆಯುತ್ತಿರುವುದರಿಂದ ಪ್ರತಿಯೊಬ್ಬರ ಹೆಸರನ್ನು ಕೂಡ ಕನಿಷ್ಠ ಒಂದಾದರೂ ಉಳಿತಾಯ ಖಾತೆ ಇದ್ದೇ ಇರುತ್ತದೆ.
ಹೀಗೆ ನಾನಾ ಕಾರಣಕ್ಕಾಗಿ ನಾವು ಉಳಿತಾಯ ಖಾತೆಯನ್ನು ತೆರೆದರು ಯಾವುದಾದರೂ ಸಂದರ್ಭದಲ್ಲಿ ಇದು In Active ಆಗಬಹುದು. ಯಾಕೆಂದರೆ ಬ್ಯಾಂಕ್ ಖಾತೆ ಹೊಂದಿರುವವರು ಕನಿಷ್ಠ ಮೊತ್ತದ ಹಣವನ್ನು ಹೊಂದಿರಲೇಬೇಕು ಎನ್ನುವ ನಿಯಮ ಹೊರಡಿಸಿರುತ್ತಾರೆ. ಆ ನಿಯಮವನ್ನು ಪಾಲಿಸಿ ಅಕೌಂಟ್ ಅಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡದೆ ಇದ್ದ ಪರಿಸ್ಥಿತಿಯಲ್ಲಿ ಖಾತೆ ಸ್ಥಗಿತಗೊಳ್ಳುತ್ತದೆ.
ಸದ್ಯಕ್ಕೆ ಭಾರತದಲ್ಲಿ ಈ ಮಿತಿ ಒಂದು ಬ್ಯಾಂಕ್ ಗಿಂತ ಮತ್ತೊಂದು ಬ್ಯಾಂಕ್ ಗೆ ಭಿನ್ನವಾಗಿರುತ್ತದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಜನ್ ಧನಾ ಖಾತೆ ತೆರೆದವರು ಹೊರತುಪಡಿಸಿ ಉಳಿದ ಎಲ್ಲರೂ ಕೂಡ ತಮ್ಮ ಖಾತೆಗಳಲ್ಲಿ ಮಿನಿಮಮ್ ಹಣ ಉಳಿಸಿಕೊಳ್ಳಲೇಬೇಕು. ಸರಾಸರಿ ಹೇಳುವುದಾದರೆ ಕನಿಷ್ಠ 1000ರೂ. ಆದರೂ ನಾವು ನಮ್ಮ ಖಾತೆಯಲ್ಲಿ ಹಣವನ್ನು ಉಳಿಸಿಕೊಳ್ಳಲೇ ಬೇಕಾಗಿದೆ.
ಆದರೆ ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇದ್ದರೆ ಉತ್ತಮ ಎನ್ನುವುದರ ಬಗ್ಗೆ ನಾವು ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಯಾಕೆಂದರೆ ಉಳಿತಾಯ ಖಾತೆಯಲ್ಲಿ ಇಡುವ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗುವುದಿಲ್ಲ ಇದರ ಬದಲು ಹೂಡಿಕೆ ರೂಪದಲ್ಲಿ ನಾವು ಹಣವನ್ನು ಇಟ್ಟಾಗ ಉಳಿತಾಯ ಖಾತೆಗಿಂತ ಹೆಚ್ಚಿನ ಹಣ ಸಿಗುತ್ತದೆ. ಈ ಹೂಡಿಕೆ ಅಥವಾ ನಿಶ್ಚಿತ ಠೇವಣಿ ವ್ಯವಸ್ಥೆಯೂ ಕೂಡ ಅದೇ ಬ್ಯಾಂಕ್ ಗಳು ಲಭ್ಯವಿರುತ್ತದೆ ಮತ್ತು ಉಳಿತಾಯ ಖಾತೆಯಲ್ಲಿ ಇಟ್ಟ ಹಣದಷ್ಟೇ ಸುರಕ್ಷತೆ ಮತ್ತು ಭದ್ರತೆ ಆ ಖಾತೆಗೂ ಕೂಡ ಇರುತ್ತದೆ.
ಹಾಗಾಗಿ ನೀವು ದೊಡ್ಡ ಮೊತ್ತದ ಹಣವನ್ನು ಉಳಿತಾಯ ಖಾತೆಯಲ್ಲಿ ಇಡುವುದಾದರೆ ಅದರ ಬದಲು ಕನಿಷ್ಠ ಅವಧಿಯಲ್ಲಿ ಇರುವ ಯಾವುದಾದರೂ ನಿಶ್ಚಿತ ಠೇವಣಿಯಲ್ಲಿ ಇಡಬಹುದು. ಯಾವುದಾದರೂ ತುರ್ತು ಪರಿಸ್ಥಿತಿಯಲ್ಲಿ ಹಣ ಹಿಂಪಡೆಯುವ ಅವಕಾಶಗಳು ಕೂಡ ಇರುವುದರಿಂದ ನಿಮ್ಮ ನಿಮ್ಮ ಆರ್ಥಿಕ ಪರಿಸ್ಥಿತಿ ಲೆಕ್ಕಾಚಾರದ ಅನುಸಾರ ಯೋಜನೆಯನ್ನು ಆರಿಸಬೇಕಾಗುತ್ತದೆ.
ಇದರ ಜೊತೆಗೆ ನೀವೇನಾದರೂ ಸಾಲ ಹೊಂದಿದ್ದರೆ ನೀವು ಸಾಲವನ್ನು ತೀರಿಸುವುದರ ಬದಲು ಆ ಹಣವನ್ನು ಉಳಿತಾಯ ಖಾತೆಯಲ್ಲಿ ಇಟ್ಟುಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಅದರ ಬದಲು ನೀವು ಮೊದಲು ಸಾಲ ತೀರಿಸಿ ನಂತರ ಉಳಿದ ಹಣವನ್ನು ಖಾತೆಯಲ್ಲಿ ಉಳಿಸಿಕೊಳ್ಳುವುದು ಉತ್ತಮ.
ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳುಬೇಕು ಎಂದು ನೋಡುವುದಾದರೆ, ನಿಮ್ಮ ತಿಂಗಳ ಸಂಬಳ ಉಳಿತಾಯ ಖಾತೆಗೆ ಬರುತ್ತಿದೆ ಎಂದರೆ ನಿಮ್ಮ ಇಡೀ ತಿಂಗಳ ಮನೆ ನಿರ್ವಹಣೆ ಖರ್ಚು, ಪ್ರೀಮಿಯಂ ಗಳು, EMI ಗಳು ಇವುಗಳನ್ನು ಪಾವತಿಸಿ ಎಮರ್ಜೆನ್ಸಿ ಎನ್ನುವ ಕಾರಣಕ್ಕಾಗಿ ಹಣ ಉಳಿಸುವುದರಿಂದ ನೀವು 3 ತಿಂಗಳ ಖರ್ಚಿಗೆ ಆಗುವಷ್ಟು ಅಂದರೆ ಒಂದು ತಿಂಗಳಿಗೆ ನಿಮ್ಮ ತಿಂಗಳ ಖರ್ಚು 15,000 ಇದೆ ಎಂದರೆ 45,00 – 50,000 ಉಳಿತಾಯ ಖಾತೆಯಲ್ಲಿ ಇರಿಸಿಕೊಂಡರೆ ಸಾಕು ಎನ್ನುತ್ತಾರೆ ಆರ್ಥಿಕ ತಜ್ಞರು.