ಸರ್ಕಾರದ ಭೂಮಿಯನ್ನು ಒತ್ತುವರಿ (government land encroachment) ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಳ್ಳುವುದು, ಅಂಗಡಿಯ ನಿರ್ಮಾಣ ಮಾಡಿಕೊಳ್ಳುವುದು ಅಥವಾ ಜಮೀನು ಮಾಡಿಕೊಳ್ಳುವುದನ್ನು ಅಕ್ರಮ ಎಂದು ಹೇಳಲಾಗುತ್ತದೆ. ಸರ್ಕಾರವು ಯಾವಾಗ ಬೇಕಾದರೂ ಇವರನ್ನು ಅಲ್ಲಿಂದ ತೆರವು ಮಾಡಿಸಬಹುದು ಸರ್ಕಾರದ ಭೂಮಿಯನ್ನು ಸರ್ಕಾರದ ಯೋಜನೆಗಳ ಉದ್ದೇಶ ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ವ್ಯಕ್ತಿ ಉಪಯೋಗಿಸಿಕೊಳ್ಳುವಂತಿಲ್ಲ.
ಈ ಸರ್ಕಾರಿ ಭೂಮಿಯ ರಕ್ಷಣೆ ಮಾಡುವ ಜವಾಬ್ದಾರಿ ಮತ್ತು ಕರ್ತವ್ಯ ಕಂದಾಯ ಸರ್ಕಾರದ್ದಾಗಿದೆ. ಇದರ ಸಂಬಂಧವಾಗಿ ಕಂದಾಯ ಇಲಾಖೆಯ (Revenue Department) ನೂತನ ಸಚಿವರಾಗಿರುವ ಕೃಷ್ಣ ಬೈರೇಗೌಡ (Krishna Bairegowda) ಅವರು ಜಿಲ್ಲಾಧಿಕಾರಿಗಳ ಸಭೆ ನಡೆಸಿ ಕೆಲವು ವಿಶೇಷ ಕಾರ್ಯಗಳನ್ನು ಕೈಗೊತ್ತುಕೊಳ್ಳುವಂತೆ ಆದೇಶ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಸ್ವತಃ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರೇ ವಿಕಾಸ ಭವನದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯದ ಬಗ್ಗೆ ಪ್ರಸ್ತಾಪ ನಡೆಸಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ಕೊಂಡಿದ್ದಾರೆ.ಅದೇನೆಂದರೆ, ಯಾರೇ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿದರೆ ಅಥವಾ ತಮ್ಮ ಜಮೀನಾಗಿ ಮಾಡಿಕೊಂಡಿದ್ದರೆ ಸರ್ಕಾರ ಅಂತಹ ಒತ್ತುವರಿ ತೆರವು ಗೊಳಿಸಲು ಮುಂದಾಗಿದೆ.
ಅಗಸ್ಟ್ 8 ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರೊಳಗೊಂಡ ಸಮಿತಿ ಇದರ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಿದೆ. ಅನಧಿಕೃತವಾಗಿ ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸಲು ಕ್ರಮ ಕೈಗೊಂಡಿರುವ ಕುರಿತು ಚರ್ಚೆ ನಡೆಯುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಭೂಮಿ ತೆರವುಗೊಳಿಸುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಎ. ಟಿ ರಾಮಸ್ವಾಮಿ ಹಾಗೂ ಬಾಲಸುಬ್ರಹ್ಮಣ್ಯ ವರದಿಯಲ್ಲಿ ನಮೂದಿಸಲಾಗಿದ್ದು ಅದನ್ನು ಆಧಾರವಾಗಿಟ್ಟುಕೊಂಡೇ ಒತ್ತುವರಿ ಮಾಡಿರುವ ಭೂಮಿ ತೆರೆವು ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ.
ಸದ್ಯದಲ್ಲಿಯೇ ಆರಂಭಿಸುವುದಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯದೆಲ್ಲೆಡೆ ಸರ್ಕಾರಕ್ಕೆ ಮರೆಮಾಚಿ ಈ ರೀತಿ ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪ್ರತಿ ತಿಂಗಳು ಒಂದು ನಿಗದಿತ ಪ್ರಮಾಣದಲ್ಲಿ ಒತ್ತುವರಿ ತೆರವು ಕಾರ್ಯ ನಡೆಯಬೇಕು.
ಹೆಂಡತಿಗೆ ಗಂಡನ ಆಸ್ತಿಯ ಮೇಲೆ ಹಕ್ಕು ಇರೋದಿಲ್ವಾ.? ಕಾನೂನು ಏನು ಹೇಳುತ್ತೆ ನೋಡಿ.!
ಈ ಬಗ್ಗೆ ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಅಧಿಕಾರಿಗಳ ಜೊತೆಗೆ ನಡೆಸಲಾಗುವುದು. ಒತ್ತುವರಿ ಆಗಿದ್ದ ಭೂಮಿಯನ್ನು ತೆರವುಗೊಳಿಸಿ ರಕ್ಷಣೆ ಮಾಡಿದ ನಂತರ ರವೆನ್ಯೂ ಇನ್ಸ್ಪೆಕ್ಟರ್ ಹಾಗೂ ಇತರ ಅಧಿಕಾರಿಗಳು ಮತ್ತೆ ಆ ಭೂಮಿ ಯಾರಿಂದಲೂ ಒತ್ತುವರಿ ಆಗದೆ ಇರುವಂತೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಇಂತಹ ಸಾಕಷ್ಟು ಪ್ಲಾನ್ ಗಳನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಭೂ ನೋಂದಣಿ ಬಗ್ಗೆ ಕೂಡ ಮಾತನಾಡಿದ ಸಚಿವರು ಜಿಲ್ಲಾ ಮಟ್ಟದಲ್ಲಿಯೇ ಇದನ್ನು ಸರಿಪಡಿಸಲು ತಹಶೀಲ್ದಾರರು ಹಾಗೂ ಇತರ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಸಾಕಷ್ಟು ಬಾರಿ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಬೇರೆಯವರ ಹೆಸರಿನಲ್ಲಿ ಇರುವ ಜಮೀನನ್ನು ಮಾರುತ್ತಾರೆ. ನಂತರ ಆ ಭೂಮಿಯ ನಿಜವಾದ ಮಾಲೀಕ ತನ್ನ ಭೂಮಿಯನ್ನು ಹಿಂಪಡೆಯಲು ಕೊರ್ಟು, ಕಛೇರಿ ಎಂದು ಅಲೆಯಬೇಕು.
ಸ್ಟೇ ಆರ್ಡರ್ ಪ್ರಕರಣಗಳು ಕೂಡ ನಡೆತ್ತಿದೆ, ಹೀಗೆ ಮಾಡಿದರೆ ಆ ಭೂಮಿ ಯಾರು ಬಳಕೆ ಮಾಡಿಕೊಳ್ಳದೆ ಇರುವ ರೀತಿ ಆಗುತ್ತದೆ. ಇದಕ್ಕೆಲ್ಲ ಕಡಿವಾಣ ಹಾಕಲು ಮೋಸ ಆಗಿದೆ ಎಂದು ಗೊತ್ತಾದ ತಕ್ಷಣವೇ ಜಮೀನು ನೋಂದಣಿಯನ್ನು ರದ್ದು ಮಾಡುವ ಅಧಿಕಾರಿಬನ್ನು ಜಿಲ್ಲಾಧಿಕಾರಿಗಳಿಗೆ ನೀಡುವ ಕಟ್ಟುನಿಟ್ಟಾದ ರೂಲ್ಸ್ ಜಾರಿಗೆ ತರಲು ಪ್ರಯತ್ನ ನಡೆಯುತ್ತಿದೆ ಎನ್ನುವ ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ.