ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.!

 

WhatsApp Group Join Now
Telegram Group Join Now

ದೇಶದ ಆರ್ಥಿಕತೆಯಲ್ಲಿ ರೆಪೋ ದರದ (Repo rate) ಆಧಾರದ ಮೇಲೆ ಬ್ಯಾಂಕ್ ಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ರೆಫೋ ದರವನ್ನು ರಿಸರ್ವ್ ಬ್ಯಾಂಕ್ (RBI) ಅಂದರೆ ಆ ದೇಶದ ಕೇಂದ್ರ ಬ್ಯಾಂಕ್ ನಿರ್ಧರಿಸುತ್ತದೆ. ಹಣದ ಕೊರತೆ ಇದ್ದ ಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕ್ ಗಳಿಗೆ ಸಾಲವನ್ನು ನೀಡಲು RBI ನಿಗದಿಪಡಿಸಿರುವ ದರ ಎಂದು ಕೂಡ ಇದನ್ನು ಕರೆಯಬಹುದು.

ವಾಣಿಜ್ಯ ಬ್ಯಾಂಕ್ ಗಳಿಗೆ ಕೇಂದ್ರ ಬ್ಯಾಂಕ್ ಗಳ ಹಣದ ಹರಿವಿನ ಪ್ರಮಾಣದ ಮೇಲೆ ರೆಪೋ ದರ ಹೆಚ್ಚಳವಾಗುತ್ತದೆ ಅಥವಾ ಕುಸಿತವಾಗುತ್ತದೆ. ಈ ರೀತಿ ನಿರ್ಧಾರ ಆದ ಮೇಲೆ ಬ್ಯಾಂಕ್ ಗಳಲ್ಲೂ ಕೂಡ ಕೆಲ ಬದಲಾವಣೆಗಳು ಆಗುತ್ತವೆ. ಬ್ಯಾಂಕ್ ಗಳಿಂದ ಸಾಲ ಪಡೆಯುವ ಗ್ರಾಹಕರಿಗೆ ಬಡ್ಡಿದರ ಅಥವಾ ಡೆಪಾಸಿಟ್ ಗಳ ಮೇಲೆ ಬೀಳುವ ಬಡ್ಡಿ ದರದ ಮೇಲು ಕೂಡ ಇದು ಪ್ರಭಾವ ಬೀರುತ್ತದೆ.

RBI ಪ್ರಸ್ತುತ ವರ್ಷದಲ್ಲೂ ತನ್ನ ರೆಪೋ ದರವನ್ನು ಪರೀಷ್ಕರಿಸಿದೆ ಆದರೆ ಇದು ಕಳೆದ ವರ್ಷಕ್ಕಿಂತ ಯಾವುದೇ ವ್ಯತ್ಯಾಸವಾಗದೆ ಯಥಾ ಸ್ಥಿತಿ ಉಳಿಸಿಕೊಂಡಿದೆ. ಅದರ ಕೆಲ ಬ್ಯಾಂಕ್ ಗಳಲ್ಲಿ ಗ್ರಾಹಕರು ಪಡೆದಿದ್ದ ಸಾಲಗಳಿಗೆ ಅನ್ವಯವಾಗುತ್ತಿದ್ದ ಬಡ್ಡಿದರ ಹಾಗೂ ಅವರ ಹಣದ ಠೇವಣಿ ಮೇಲೆ ಸಿಗುತ್ತದ ಬಡ್ಡಿದರವು ವ್ಯತ್ಯಾಸವಾಗಿದೆ.

ಅದರಲ್ಲಿ ನಮ್ಮ ದೇಶದಲ್ಲಿನ ವಾಣಿಜ್ಯ ವಲಯದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಕೆನರಾ ಬ್ಯಾಂಕ್ (Canara bank) ನಲ್ಲೂ ಕೂಡ ಈ ವ್ಯತ್ಯಾಸ ಕಂಡು ಬಂದಿದೆ. RBI ತನ್ನ ರೆಪೋ ದರವನ್ನು ಘೋಷಿಸಿದ ಮೇಲೆ ಬ್ಯಾಂಕ್ ಗಳು ತಮ್ಮಲ್ಲಿನ ಸಾಲ ಹಾಗೂ ಡಿಪೋಸಿಟ್ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಿದೆ ಇದು ಸಾಲ ಪಡೆದ ಗ್ರಾಹಕರಿಗೆ ಚಿಂತೆಯನ್ನುಂಟು ಮಾಡಿದೆ.

ಯಾಕೆಂದರೆ, ಈ ಬಾರಿಯ ವ್ಯತ್ಯಾಸ ನೇರವಾಗಿ ಗ್ರಾಹಕರ ಪಡೆದ ಸಾಲದ ಮೇಲೆ ಇದು ನೇರವಾದ ಪರಿಣಾಮ ಬೀರಿದೆ. ಕೆನರಾ ಬ್ಯಾಂಕ್ ನಲ್ಲಿ ಕೃಷಿ ಸಾಲ, ಗೃಹ ಸಾಲ, ವಾಣಿಜ್ಯ ಸಾಲ ಅಥವಾ ಇನ್ನಿತರ ಯಾವುದೇ ಉದ್ದೇಶದಿಂದ ಸಾಲ ಪಡೆದಿದ್ದರೂ ಇನ್ನು ಮುಂದೆ ಅವರ ಹೊರೆ ಕೊಂಚ ಹೆಚ್ಚಾಗಲಿದೆ. ಸಾಲ ಪಡೆದವರ EMI ಹೆಚ್ಚಾಗಲಿದೆ.

ಕೆನರಾ ಬ್ಯಾಂಕ್ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಫ್ರಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) ಹೆಚ್ಚಿಸಿದೆ. RBI ರೆಪೋ ದರ ಘೋಷಿಸಿದ ಮೇಲೆ ಕೆನರಾ ಬ್ಯಾಂಕ್ ನ MCLR 0.05 ಬೇಸಿಸ್ ಪಾಯಿಂಟ್ ಗಳಿಗೆ ಏರಿಕೆಯಾಗಿದೆ.

ಕೆನರಾ ಬ್ಯಾಂಕ್ ನಲ್ಲಿ ಪರಿಷ್ಕರಣೆಗೊಂಡ MCLR ದರ ಹೀಗಿದೆ.
● ಒಂದು ತಿಂಗಳ MCLR ದರ 8.05% ಏರಿಕೆ
● ಮೂರು ತಿಂಗಳ MCLR ದರ 8.15% ಏರಿಕೆ
● ಆರು ತಿಂಗಳ MCLR ದರ 8.50% ಏರಿಕೆ
● ಒಂದು ವರ್ಷದ MCLR ದರ 8.70% ಏರಿಕೆ.

ಕೆನರಾ ಬ್ಯಾಂಕ್ ನಲ್ಲಿ ನೀವು ಕೂಡ ಸಾಲ ಪಡೆದಿರುವ ಗ್ರಾಹಕರಾಗಿದ್ದರೆ ಈ ವಿಚಾರ ಬಗ್ಗೆ ನಿಮಗೆ ಇನ್ನೂ ಹೆಚ್ಚಿನ ವಿವರಣೆ ಬೇಕಾದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಸಿಬ್ಬಂದಿಗಳ ಬಳಿ ಪೂರ್ತಿ ಮಾಹಿತಿಯನ್ನು ಪಡೆಯಬಹುದು. ಅಥವಾ ಕೆನರಾ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗಳಲ್ಲಿ ಕೂಡ ಇದರ ಬಗ್ಗೆ ಮಾಹಿತಿ ಪಡೆಯಬಹುದು. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now