ಹೆಲ್ಮೆಟ್ ಹಾಕಿದ್ರು ಬೀಳುತ್ತೆ 2000 ರೂಪಾಯಿ ದಂಡ ಕೆಂದ್ರ ಸರ್ಕಾರದಿಂದ ಮತ್ತೊಂದು ಹೊಸ ಟ್ರಾಫಿಕ್ ರೂಲ್ಸ್ ಜಾರಿ…

 

WhatsApp Group Join Now
Telegram Group Join Now

ಎಲ್ಲಾ ಸಂಚಾರಿ ನಿಯಮಗಳ ಮುಖ್ಯ ಉದ್ದೇಶ ವಾಹನ ಸವಾರರ ಪ್ರಾಣ ರಕ್ಷಣೆ ಮಾಡುವುದಾಗಿದೆ. ಜೊತೆಗೆ ಮೋಟಾರ್ ವಾಹನ ಕಾಯ್ದೆಗಳು ವಾತಾವರಣದಲ್ಲಿ ಪರಿಸರ ಮಾಲಿನ್ಯವನ್ನು ತಗ್ಗಿಸುವುದು, ಜೊತೆಗೆ ವಾಹನ ದಟ್ಟಣೆಯನ್ನು ನಿಯಂತ್ರಿಸುವುದು ಇನ್ನು ಮುಂತಾದ ಕಾರಣಗಳನ್ನು ಒಳಗೊಂಡಿರುತ್ತದೆ. ಸದ್ಯಕ್ಕೆ ಈಗ ದೇಶದಲ್ಲಿ ಎಲ್ಲಾ ಕಡೆ ಟ್ರಾಫಿಕ್ ರೂಲ್ಸ್ಸ್ ಗಳದ್ದೇ ತಲೆನೋವು ಆಗಿದೆ.

ದಿನಕೊಂದು ವಿಚಿತ್ರ ನಿಯಮಗಳು ವಾಹನ ಸವಾರರಿಗೆ ಗೊತ್ತಿದ್ದರೆ ಅನೌನ್ಸ್ ಆಗಿ ಕಂಡ ಕಂಡಲ್ಲಿ ಟ್ರಾಫಿಕ್ ಪೊಲೀಸರು ಕೈ ತಡೆದು ಸವಾರರನ್ನು ನಿಲ್ಲಿಸುವಂತೆ ಹಾಗಿದೆ. ಇದುವರೆಗೆ ದೇಶದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ನಾನಾ ರೀತಿಯ ಹೊಸ ಹೊಸ ಟ್ರಾಫಿಕ್ ರೂಲ್ಸ್ಗ್ ಗಳು ಬಂದು ಜನರ ಪಾಕೆಟ್ ಮನಿಯಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ದಂಡವಾಗಿ ಕಟ್ಟುವ ರೀತಿ ಆಗಿದೆ.

ಈಗ ಮತ್ತೊಮ್ಮೆ ಹೊಸ ರೂಲ್ಸ್ ಅನ್ನು ದ್ವಿಚಕ್ರ ವಾಹನ ಸವಾರರಿಗಾಗಿ ತರಲಾಗಿದೆ. ದ್ವಿಚಕ್ರ ವಾಹನ ಸವರರು ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಗಾಡಿಗೆ ಸಂಬಂಧಪಟ್ಟ ಇಲ್ಲಾ ಡಾಕ್ಯುಮೆಂಟ್ ಅನ್ನು ಹತ್ತಿರದಲ್ಲೇ ಇಟ್ಟುಕೊಂಡಿರಬೇಕು ಹಿಂಬದಿ ಸವಾರರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು. ಅರ್ಧ ಹೆಲ್ಮೆಟ್ ಅಥವಾ ಲೋಕಲ್ ಹೆಲ್ಮೆಟ್ ಧರಿಸುವಂತಿಲ್ಲ.

ಎಲ್ಲರೂ ಪೂರ್ತಿ ತಲೆ ಕವರ್ ಆಗಿರುವ ರೀತಿ ಹೆಲ್ಮೆಟ್ ಹಾಕಬೇಕು, ಹಿಂಬದಿ ಮಕ್ಕಳನ್ನು ಕೂರಿಸಿಕೊಂಡರೆ ಅವರಿಗೆ ಬೆಲ್ಟ್ ಹಾಕಿರಬೇಕು, ಇದೆಲ್ಲ ಇದುವರೆಗೆ ದ್ವಿಚಕ್ರ ವಾಹನ ಓಡಿಸಿರುವ ವಾಹನ ಸವಾರರಿಗೆ ಇದ್ದ ಸವಾಲುಗಳಂತಹ ರೂಲ್ಸ್ ಗಳು ಎಂದೇ ಹೇಳಬಹುದು. ಇಷ್ಟೆಲ್ಲ ಫಾಲೋ ಮಾಡಿದ್ದ ನಂತರವೂ ಕೂಡ ಇನ್ನು 2000 ರೂಗಳು ನಿಮಗೆ ದಂಡವಾಗಿ ಬೀಳುವ ಸಾಧ್ಯತೆಗಳು ಇರುತ್ತವೆ.

ಯಾಕೆಂದರೆ ಹೊಸದಾಗಿ ಮತ್ತೆರಡು ರೂಲ್ಸ್ ಇವುಗಳಿಗೆ ಆಡ್ ಆಗಿದೆ. ಕಳೆದ ತಿಂಗಳಷ್ಟೇ ದೇಶದಾದ್ಯಂತ ದಂಡ ಉಳಿಸಿಕೊಂಡಿರುವ ವಾಹನ ಸವರರಿಗೆ 50% ಆಫರ್ ಅನ್ನು ಸರ್ಕಾರ ಘೋಷಿಸಿತ್ತು. ಇದುವರೆಗೂ ದಂಡ ಕಟ್ಟದೆ ತಪ್ಪಿಸಿಕೊಂಡು ಓಡಾಡುತ್ತಿದ್ದವರೆಲ್ಲ ಆಫರ್ ಸಿಕ್ಕಿದ ಖುಷಿಯಲ್ಲಿ ತಾವೇ RTO ಕಚೇರಿಗಳನ್ನು ಮತ್ತು ಟ್ರಾಫಿಕ್ ಪೊಲೀಸರನ್ನು ಹುಡುಕಿಕೊಂಡು ಹೋಗಿ ದಂಡ ಕಟ್ಟಿ ಫ್ರೀ ಆದೆವು ಎಂದು ಸಂಭ್ರಮದಲ್ಲಿದ್ದರು.

ಈ ಸಂಭ್ರಮ ಹೀಗೆ ಉಳಿಯಬೇಕು ಎಂದರೆ ಹೊಸದಾಗಿ ಸೇರಿರುವ ಈ ಎರಡು ನಿಯಮಗಳನ್ನು ತಿಳಿದುಕೊಂಡಿರಬೇಕು. ಅದೇನೆಂದರೆ ನೀವು ಹೆಲ್ಮೆಟ್ ಅನ್ನು ಧರಿಸಿರಬೇಕು, ಧರಿಸಿರುವ ಹೆಲ್ಮೆಟ್ಟಿಗೆ ನೀವು ಕಡ್ಡಾಯವಾಗಿ ಲಾಕ್ ಮಾಡಿರಲೇಬೇಕು. ಇಲ್ಲವಾದಲ್ಲಿ ನಿಮಗೆ ಸಾವಿರರೂ ದಂಡ ಬೀಳಲಿದೆ. ಜೊತೆಗೆ ರಸ್ತೆಯ ಮೇಲೆ ಬೈಕ್ ವೇಗ 40Km/hr ಒಳಗೆ ಇರಬೇಕು ಅದನ್ನು ಮೀರಿದರೆ ಆಗಲೂ ಸಹ ನಿಮ್ಮ ಖಾತೆಗೆ 1000 ರೂ ದಂಡವಾಗಿ ಕನ್ನ ಬೀಳಲಿದೆ.

ಇದರ ಜೊತೆಗೆ ಮೂರು ತಿಂಗಳವರೆಗೆ ಪರವಾನಿಗೆ ರದ್ದು ಕೂಡ ಆಗಲಿದೆ. ಸದ್ಯಕ್ಕೀಕ ಈ ಮೇಲ್ಕಂಡ ಎರಡು ರೂಲ್ಸ್ ಗಳನ್ನು ತೆಲಂಗಾಣ ಸರ್ಕಾರವು ಜಾರಿಗೆ ತಂದಿದ್ದು, ವಾಹನ ಸವಾರರ ಪ್ರಾಣ ರಕ್ಷಣೆಯೇ ಹಾಗೂ ವಾಹನ ದಟ್ಟಣೆ ತಗ್ಗಿಸುವುದೇ ಇದರ ಮುಖ್ಯ ಉದ್ದೇಶ ಎಂದು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಇಲಾಖೆ ಹೇಳಿಕೊಂಡಿದೆ. ಇದು ಪರಿಣಾಮಕಾರಿಯಾಗಿ ಜಾರಿಗೆ ಬಂದು ಒಳಿತು ಆದಲ್ಲಿ ದೇಶದಾದ್ಯಂತ ಇದೇ ರೂಲ್ಸ್ ಮುಂದುವರಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now