ATM ನಲ್ಲಿ ಹಣ ಡ್ರಾ ಮಾಡುವವರಿಗೆ ಹೊಸ ರೂಲ್ಸ್ ಜಾರಿ ATM ಬಳಕೆ ಮಾಡುವ ಪ್ರತಿಯೊಬ್ಬರೂ ನೋಡಿ.

 

WhatsApp Group Join Now
Telegram Group Join Now

ಜನ ಹಣದ ಬಳಕೆ ಹೆಚ್ಚು ಮಾಡುತ್ತಿದ್ದಂತೆ ಅದನ್ನು ಹೊಡೆಯುವ ಖದೀಮರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇತ್ತೀಚಿಗೆ ಆನ್ಲೈನ್ ಬ್ಯಾಂಕಿಂಗ್ ಹೆಚ್ಚು ಹೆಸರುವಾಸಿ ಆಗಿದ್ದು ಎಲ್ಲರೂ ನೆಟ್ ಬ್ಯಾಂಕಿಂಗ್ ಮೂಲಕ ಮತ್ತು UPI ಆಧಾರಿತ ಆಪ್ ಗಳ ಮೂಲಕ ತಮ್ಮ ಆರ್ಥಿಕ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಡಿಜಿಟಲ್ ಭಾರತ ಮಾಡಬೇಕು ಎನ್ನುವುದು ಕೇಂದ್ರ ಸರ್ಕಾರದ ಕನಸಾಗಿದ್ದು, ಯುವಜನತೆಯು ಕೂಡ ಇದರ ಆಸಕ್ತಿ ತೋರಿ ಈ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇದರ ನಡುವೆ ಸೈಬರ್ ಕ್ರೈಂ ಕಳ್ಳತನದ ಕಾಟವು ತಪ್ಪಿಲ್ಲ.

ಪ್ರತಿಬಾರಿಯ ಹೊಸತೊಂದು ಜಾಲ ಎಣೆದು ಸೈಬರ್ ಕಳ್ಳರು ಆನ್ಲೈನ್ ಟಾನ್ಸಾಕ್ಷನ್ ಮಾಡುವವರ ಖಾತೆಗೆ ಹದ್ದಿನ ಕಣ್ಣಿಟ್ಟು ಕನ್ನ ಹಾಕುತ್ತಿದ್ದಾರೆ. ಇವರ ಜೊತೆ ಜೊತೆಗೆ ಎಟಿಎಂ ಬಳಸಿ ವ್ಯವಹಾರ ಮಾಡುವವರನ್ನು ವಂಚಿಸುವವರ ಸಂಖ್ಯೆಯು ಕಡಿಮೆಯೇನಿಲ್ಲ. ದಶಕದ ಹೊಸತರಲ್ಲಿ ಎಟಿಎಂ ಕಾರ್ಡಿಂದ ಹಣ ಡ್ರಾ ಮಾಡಿ ನಗದು ವ್ಯವಹಾರಗಳಿಗೆ ಹಣ ಬಳಸುವುದು ಹೊಸ ವಿಧಾನ ಆಗಿತ್ತು. ನಿಧಾನವಾಗಿ ದೇಶದ ಬಹುತೇಕ ಮಂದಿ ಇದಕ್ಕೆ ಡಿಪೆಂಡ್ ಆದರು.

ಇಂದಿಗೂ ಕೂಡ ನಗದು ವ್ಯವಹಾರ ಮಾಡುವವರಿಗೆ ಬ್ಯಾಂಕುಗಳಿಗಿಂತ ಹತ್ತಿರವಾಗಿ ಕೈಗೆ ಸಿಗುವ ಸೇವೆ ಎಂದರೆ ಅದು ATM ಗಳು. ATM ಗಳ ಮೂಲಕ ತಮ್ಮ ಡೆಬಿಟ್ ಕಾರ್ಡ್ ಬಳಸಿ ಹಣ ಪಡೆದು ಸಮಯ ಉಳಿಸಬಹುದು ಎಂದುಕೊಂಡಿದ್ದವರಿಗೆ ಎಟಿಎಂ ಕಾರ್ಡ್ ನ ವಂಚನೆ ಪ್ರಕರಣಗಳು ಬೆಚ್ಚಿ ಬೀಳಿಸಿವೆ. ಎಟಿಎಂ ಕಾರ್ಡ್ ಬಳಕೆದಾರರ ಮೇಲೂ ಕೂಡ ಚೋರದ ಕಣ್ಣು ಬಿದ್ದಿದ್ದು ಸೋಗು ಹಾಕಿ ಅವರನ್ನು ವಂಚಿಸುತ್ತಿದ್ದಾರೆ.

ಇದನ್ನೆಲ್ಲಾ ಪರಿಗಂಡ ಬ್ಯಾಂಕುಗಳು ತನ್ನ ಗ್ರಾಹಕರ ಹಣದ ಭದ್ರತೆ ಕಾಪಾಡಿಸುವ ಸಲುವಾಗಿ ಮತ್ತೊಂದು ಹೊಸ ವಿಧಾನವನ್ನು ಎಟಿಎಂ ಬಳಕೆ ಮಾಡುವ ಬಳಕೆದಾರರಾಗಿ ಜಾರಿಗೆ ತಂದಿದೆ. ಅದೇನೆಂದರೆ ಇನ್ನು ಮುಂದೆ ಎಟಿಎಂ ಕಾರ್ಡ್ ಳಸಿ ಹಣ ಡ್ರಾ ಮಾಡುವಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ದಾಖಲಿಸಬೇಕಾಗುತ್ತದೆ. ಸಾಮಾನ್ಯವಾಗಿ ನಾವು ATMಗೆ ಹೋದಾಗ ನಮ್ಮ ಕಾರ್ಡನ್ನು ಹಾಕಿ ಬ್ಯಾಂಕಿನಿಂದ ಕೊಟ್ಟಿದ್ದ ಸೀಕ್ರೆಟ್ ಕೋಡ್ ಹಾಕಿ ಹಣ ಡ್ರಾ ಮಾಡಿ ಬರುತ್ತಿದ್ದೆವು.

ಇನ್ನು ಮುಂದೆ ಇದರೊಂದಿಗೆ OTP ಕೂಡ ಹಾಕುವ ಅವಶ್ಯಕತೆ ಬರುತ್ತದೆ. ನೀವು ATMಗೆ ಹೋಗಿ ನಿಮ್ಮ ಹಣ ಡ್ರಾ ಮಾಡುವ ವಿಧಾನ ಅನುಸರಿಸುತ್ತಿದ್ದಂತೆ ನೀವು ನೋಂದಾಯಿಸಿದ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಅಥವಾ ಬ್ಯಾಂಕಿನ ಜೊತೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ. OTPಯನ್ನು ಎಂಟರ್ ಮಾಡಿದ ನಂತರವೇ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗುತ್ತದೆ, ಇಲ್ಲವಾದಲ್ಲಿ ನಿಮ್ಮ ಟ್ರಾನ್ಸಾಕ್ಷನ್ ಕ್ಯಾನ್ಸಲ್ ಆಗಿ ಹೋಗುತ್ತದೆ.

ಈ ಒಂದು ವಿಧಾನದಿಂದ ಸಾಕಷ್ಟು ಗ್ರಾಹಕರಿಗೆ ವಂಚನೆ ಆಗುವುದು ತಪ್ಪುತ್ತದೆ. ಹಾಗಾಗಿ ಇನ್ನು ಮುಂದೆ ATM ಗೆ ಹೋಗುವಾಗ ಕಾರ್ಡ್ ಬಳಕೆದಾರರ ಅವರ ಮೊಬೈಲ್ ಕೂಡ ಜೊತೆಗೆ ಕೊಂಡೊಯ್ಯಲೇಬೇಕು ಮತ್ತು ಸದ್ಯಕ್ಕೀಗ SBI ಬ್ಯಾಂಕ್ ತನ್ನ ಗ್ರಾಹಕರಿಗೆ ಈ ವಿಧಾನವನ್ನು ಜಾರಿಗೆ ತಂದಿದೆ. ಈ ಹಿಂದೆಯೇ ಕೆನರಾದಂತಹ ಅನೇಕ ರಾಷ್ಟ್ರೀಕೃತ ಬ್ಯಾಂಕ್ ಗಳು ಇದನ್ನು ಜಾರಿಗೆ ತಂದಿದ್ದವು.

SBI ಕೂಡ 10,000 ಕ್ಕಿಂತ ಹೆಚ್ಚಿಗೆ ಹಣವನ್ನು ಡ್ರಾ ಮಾಡುವವರಿಗೆ ಈ ವಿಧಾನ ಅನುಸರಿಸಲು ಸೂಚಿಸಿದೆ. ಜೊತೆಗೆ ಮತ್ತೊಂದು ಮುಖ್ಯವಾದ ಅಂಶ ಎಂದರೆ ಒಂದು ಟ್ರಾನ್ಸಾಕ್ಷನ್ ಗೆ ಒಂದು OTP ಮಾತ್ರ ಮಾನ್ಯ ವಾಗಿರುತ್ತದೆ. ಇದು ಗ್ರಾಹಕರ ಹಣ ರಕ್ಷಿಸಲು ಮತ್ತೊಂದು ಟ್ರಿಕ್ ಆಗಿದೆ. SBI ಬ್ಯಾಂಕಿನ ಈ ವಿಧಾನದ ಬಗ್ಗೆ ನಿಮ್ಮ ಅಭಿಪ್ರಾಯ ಏನೇನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now