ನೀವಿನ್ನು ಉದ್ಯೋಗ ಹುಡುಕುತ್ತಿದ್ದೀರಾ? ಅಥವಾ ಸರ್ಕಾರಿ ಉದ್ಯೋಗವನ್ನೇ ಪಡೆಯಬೇಕು ಎಂದು ಪ್ರಯತ್ನ ಪಡುತ್ತಿದ್ದೀರಾ? ನಿಮಗೆ ಸರ್ಕಾರ ವತಿಯಿಂದ ಬಿಗ್ ಅಪ್ಡೇಟ್ ಇದೆ. ಅದೇನೆಂದರೆ, ಸರ್ಕಾರದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ ಸಂಸ್ಥೆ ಕಾಯಂ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.
ಇದಕ್ಕಾಗಿ ಅಧಿಸೂಚನೆ ಕೂಡ ಹೊರಡಿಸಿದ್ದು ಆ ಪ್ರಕಟಣೆಯಲ್ಲಿ ಸವಿವರವಾಗಿ ಯಾರೂ ಅರ್ಜಿ ಸಲ್ಲಿಸಲು ಅರ್ಹರು, ಕೇಳಲಾಗುವ ಅರ್ಹತೆಗಳೇನು? ಕೆಲಸದ ಸ್ಥಳ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ ಆಯ್ಕೆ ವಿಧಾನ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಅರ್ಜಿ ಶುಲ್ಕ ಇನ್ನು ಇತ್ಯಾದಿ ಎಲ್ಲಾ ಮಾಹಿತಿ ಬಗ್ಗೆ ಕೂಡ ತಿಳಿಸಿದೆ.
ಈ ಅಂಕಣದಲ್ಲಿ ನಾವು ಸಹ ಅದರಲ್ಲಿರುವ ಆಯ್ದ ಕೆಲವು ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ತಿಳಿಸಿಕೊಡುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಜೊತೆಗೂ ಶೇರ್ ಮಾಡಿ.
ನೇಮಕಾತಿ ಸಂಸ್ಥೆ:- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ (NIELIT)
ಒಟ್ಟು ಹುದ್ದೆಗಳ ಸಂಖ್ಯೆ:- 80
ಉದ್ಯೋಗ ಸ್ಥಳ:- ಭಾರತದಾತ್ಯಂತ…
ಹುದ್ದೆಗಳ ವಿವರ:-
● ಡ್ರಾಫ್ಟ್ ಮನ್ ಸಿ – 05 ಹುದ್ದೆಗಳು
● ಪ್ರಯೋಗಾಲಯ ಸಹಾಯಕ ಬಿ – 05 ಹುದ್ದೆಗಳು
● ಪ್ರಯೋಗಾಲಯ ಸಹಾಯಕ ಎ – 20 ಹುದ್ದೆಗಳು
● ವ್ಯಾಪಾರಿ ಬಿ – 20 ಹುದ್ದೆಗಳು
● ಸಹಾಯಕ ಬಿ – 24 ಹುದ್ದೆಗಳು
ವೇತನ ಶ್ರೇಣಿ:- ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಅವರ ಹುದ್ದೆ ಅನುಸಾರವಾಗಿ ರೂ.18,000 ದಿಂದ ರೂ.92,300 ವರೆಗೆ ವೇತನ ನಿಗದಿಯಾಗಿರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
● ಡ್ರಾಫ್ಟ್ ಮನ್ ಸಿ – 10ನೇ ತರಗತಿ ಅಥವಾ ITI ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
● ಪ್ರಯೋಗಾಲಯ ಸಹಾಯಕ ಬಿ – 10ನೇ ತರಗತಿ ಮತ್ತು 12ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
● ಪ್ರಯೋಗಾಲಯ ಸಹಾಯಕ ಎ – 10ನೇ ತರಗತಿ ಮತ್ತು 12ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
● ವ್ಯಾಪಾರಿ ಬಿ – 10ನೇ ತರಗತಿ ಮತ್ತು ITI ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
● ಸಹಾಯಕ ಬಿ – 10ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
● ಕನಿಷ್ಠ ವಯೋಮಿತಿ 18 ವರ್ಷಗಳು
● ಗರಿಷ್ಠ ವಯೋಮಿತಿ 27 ವರ್ಷಗಳು
ವಯೋಮಿತಿ ಸಡಿಲಿಕೆ:-
● OBC (NCL) ಅಭ್ಯರ್ಥಿಗಳಿಗೆ 03 ವರ್ಷಗಳು.
● SC / ST ಅಭ್ಯರ್ಥಿಗಳಿಗೆ 05 ವರ್ಷಗಳು.
ಅರ್ಜಿ ಶುಲ್ಕ:-
● SC/ST, PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
● ಉಳಿದ ಎಲ್ಲಾ ಅಭ್ಯರ್ಥಿಗಳಿಗೂ 200ರೂ.
● ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು.
ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಕೌಶಲ್ಯ ಪರೀಕ್ಷೆ
● ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:-
● NIELET ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ,
● ಅರ್ಜಿ ಲಿಂಕ್ ಕ್ಲಿಕ್ ಮಾಡಿ ವಿವರಗಳನ್ನು ತುಂಬಿಸಿ, ಕೇಳಲಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ,
● ಅರ್ಜಿ ಶುಲ್ಕ ಪಾವತಿ ಮಾಡಿ ಇ-ರಶೀದಿ ಪಡೆಯಿರಿ, ಅರ್ಜಿ ಸಲ್ಲಿಕೆ ಪೂರ್ತಿಯಾದ ಮೇಲೆ ತಪ್ಪದೇ ಅರ್ಜಿ ಸಲ್ಲಿಕೆ ಸಂಖ್ಯೆಯನ್ನು ಪಡೆದುಕೊಳ್ಳಿ.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 02.10.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31.10.2023.