ನಮ್ಮ ನಿಮ್ಮೆಲ್ಲರ ಸ್ಯಾಂಡಲ್ ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗ ಹಾಗೂ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಕನ್ನಡದಲ್ಲಿ ಹೆಚ್ಚಾಗಿ ತಂಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಇವರ ತಂಗಿಯ ಪಾತ್ರದಲ್ಲಿ ನಟಿಸಿದರೆ ಜನಗಳು ತುಂಬಾ ಇಷ್ಟಪಡುತ್ತಿದ್ದರು ಅದರಲ್ಲಿಯೂ ಶಿವ ರಾಜಕುಮಾರ್ ಅವರ ಜೊತೆಯಲ್ಲಿ ನಟಿಸಿರುವ ಅಣ್ಣ ತಂಗಿ, ತವರಿಗೆ ಬಾ ತಂಗಿ, ಈ ರೀತಿಯಾದಂತಹ ಸಿನಿಮಾಗಳನ್ನು ನೀಡುವ ಮೂಲಕ ಜನರ ಮನದಲ್ಲಿ ನೆಲೆಸಿದರು. ರಾಧಿಕಾ ಅವರು ನಿನಗಾಗಿ ಎನ್ನುವಂತಹ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿ ಈ ಒಂದು ಸಿನಿಮಾ ದೊಡ್ಡ ಹೆಸರನ್ನು ಪಡೆದುಕೊಳ್ಳುತ್ತಾರೆ ನಂತರದಲ್ಲಿ ಸಾಲು ಸಾಲು ಸಿನಿಮಾ ಆಫರ್ ಗಳು ಇವರಿಗೆ ಒದಗಿಬರುತ್ತದೆ.
ಸಾಕಷ್ಟ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವಂತಹ ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗದಲ್ಲಿ ಇರುವಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ವಿವಾಹವನ್ನು ಮಾಡಿಕೊಳ್ಳುತ್ತಾರೆ. ಆದರೆ ಇವರ ವಿವಾಹವು 4 ವರ್ಷಗಳ ಕಾಲ ಗೌಪ್ಯವಾಗಿ ಇರುತ್ತದೆ. ನಂತರ ಇವರ ಮದುವೆ ವಿಚಾರವೂ ಎಲ್ಲೆಡೆ ಪಸರಿಸಿಕೊಳ್ಳುತ್ತಾರೆ ರಾಧಿಕಾ ಕುಮಾರಸ್ವಾಮಿ ಹಾಗೆ ಕುಮಾರಸ್ವಾಮಿ ಅವರು ವಿವಾಹವಾಗಿರುವಂತಹ ಕೆಲವೊಂದು ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭಿಸುತ್ತದೆ ನಂತರದಲ್ಲಿ ಇಬ್ಬರು ಸಹ ತಾವು ಮದುವೆ ಆಗಿರುವ ವಿಷಯವನ್ನು ತಿಳಿಸುತ್ತಾರೆ. ಹೀಗಿರುವಾಗ ರಾಧಿಕಾ ಅವರನ್ನು ಕುಮಾರಸ್ವಾಮಿ ಮದುವೆಯಾಗಿರುವುದು ಅವರ ಮೊದಲನೇ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಸ್ವಲ್ಪವೂ ಇಷ್ಟ ಇರುವುದಿಲ್ಲ ಕೆಲವೊಂದಷ್ಟು ಕಾರಣಗಳಿಂದಾಗಿ ಇವರು ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಇರುತ್ತಾರೆ.
ರಾಧಿಕಾ ಮತ್ತು ಕುಮಾರಸ್ವಾಮಿ ಅವರಿಗೆ ಶಮಿಕಾ ಎಂಬ ಒಬ್ಬಳು ಮುದ್ದಾದ ಮಗಳು ಸಹ ಇದ್ದಾಳೆ ಸಿನಿಮಾರಂಗದಿಂದ ಸ್ವಲ್ಪ ದಿನಗಳ ಕಾಲ ಬ್ರೇಕ್ ಅನ್ನು ಪಡೆದುಕೊಂಡಂತಹ ರಾಧಿಕಾ ಅವರು ತಮ್ಮ ವೈವಾಹಿಕ ಜೀವನವನ್ನು ಸುಖಕರವಾಗಿ ಸಾಗಿಸುತ್ತಾ ಇರುತ್ತಾರೆ. ನಂತರ ಕೆಲವೊಂದಷ್ಟು ವಿವಾದಗಳಿಗೆ ಸಿಲುಕಿಕೊಂಡು ಸಾಕಷ್ಟು ಚರ್ಚೆಗೆ ಒಳಪಡುತ್ತಾರೆ. ಅಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ನನಗೂ ರಾಧಿಕಾ ಅವರಿಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತಹ ಮಾತನ್ನು ಬಹಿರಂಗವಾಗಿ ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಧಿಕಾ ಅವರನ್ನು ವಿವಾಹವಾಗಿರುವುದು ಅವರ ಪತ್ನಿ ಅನಿತಾ ಮತ್ತು ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ನುಂಗಲಾರದಂತಹ ತುತ್ತಾಗಿರುತ್ತು ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮದ ವುಂದೆಯೇ ರಾಧಿಕಾ ಅವರ ಮಗಳು ಶಮಿಕಾ ನನಗೆ ತಂಗಿಯಲ್ಲ ನಾನು ಎಂದಿಗೂ ಸಹ ಈ ಒಂದು ವಿಷಯವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವಂತಹ ರಾಧಿಕಾ ನನ್ನ ಹೆಸರಿನೊಂದಿಗೆ ಕುಮಾರಸ್ವಾಮಿ ಅವರ ಹೆಸರು ಯಾವಾಗಲೂ ಇರುತ್ತದೆ ಹಾಗೆಯೇ ನನ್ನ ಮಗಳ ಹೆಸರಿನ ಜೊತೆಗೆ ಕುಮಾರಸ್ವಾಮಿ ಅವರ ಹೆಸರು ಜೀವನಪರ್ಯಂತ ಇದ್ದೇ ಇರುತ್ತದೆ ನಿಖಿಲ್ ಕುಮಾರಸ್ವಾಮಿ ಅವರು ನನ್ನ ಮಗಳನ್ನು ಅವರ ತಂಗಿ ಎಂದು ಒಪ್ಪಿಕೊಳ್ಳದಿದ್ದರೂ ಸಹ ಶಮಿಕಾ ಕುಮಾರಸ್ವಾಮಿ ಅವರ ಮಗಳು ಎನ್ನುವುದು ಸುಳ್ಳಾಗುವುದಿಲ್ಲ, ಇಡೀ ಪ್ರಪಂಚಕ್ಕೆ ಶ್ರಮಿಕ ಕುಮಾರಸ್ವಾಮಿ ಅವರ ಮಗಳು ಎಂದು ತಿಳಿದಿದೆ. ಈ ರೀತಿಯಾಗಿ ಬಹಿರಂಗವಾಗಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮತ್ತು ಕುಮಾರಸ್ವಾಮಿ ಅವರ ನಡುವೆ ಇರುವಂತಹ ಸಂಬಂಧ ಯಾವಾಗಲೂ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.