ರಾಜ್ಯದಲ್ಲಿ ಕಳೆದ ಮೇ ತಿಂಗಳಿನಲ್ಲಿ ಚುನಾವಣೆ ನೀತಿ ಸಂಹಿತೆ (Code of conduct) ಜಾರಿಯಾಗಿದ್ದ ಕಾರಣ ಹೊಸ ರೇಷನ್ ಕಾರ್ಡ್ ಗೆ ಅರ್ಜಿ (New ration card apply) ಸ್ವೀಕರಿಸುವುದು ಹಾಗೂ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದ್ದ ಕಾರ್ಡ್ ಗಳ ವಿಲೇವಾರಿ ಕಾರ್ಯಕ್ರಮ (ration card distribution) ಇದೆಲ್ಲವೂ ಕೂಡ ಸ್ಥಗಿತವಾಗಿತ್ತು.
ರಾಜ್ಯದಲ್ಲಿ ನೂತನ ಸರ್ಕಾರ ಜಾರಿಯಾದ ಮೇಲೆ ಅನ್ನಭಾಗ್ಯ (Annabhagya) ಮತ್ತು ಗೃಹಲಕ್ಷ್ಮಿ (Gruhalakshmi) ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿದೆ, ಅದರಲ್ಲೂ BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಹಾಗೂ ಈಗಾಗಲೇ ಅರ್ಜಿ ಸಲ್ಲಿಸುವವರು BPL ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ.
ಆದರೆ ಇವರಿಗೆಲ್ಲ ಸರ್ಕಾರದ ವತಿಯಿಂದ ಕ’ಹಿ ಸುದ್ದಿ ಇದೆ ಅದೇನೆಂದರೆ ಇನ್ನು ಮುಂದೆ ಯಾರಿಗೂ BPL ರೇಷನ್ ಕಾರ್ಡ್ ಸಿಗುವುದಿಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (National food security act) ಪ್ರಕಾರ ಸ್ಥಳೀಯ ಸರಕಾರಗಳು ಗ್ರಾಮೀಣ ಪ್ರದೇಶಗಳಿಗೆ ಹಾಗೂ ನಗರ ಪ್ರದೇಶಗಳಿಗೆ ಇಂತಿಷ್ಟೇ BPL ಕಾರ್ಡ್ ಗಳನ್ನು ನೀಡಬೇಕು ಎನ್ನುವ ನಿಯಮ ಇದೆ.
ಆ ಪ್ರಕಾರವಾಗಿ ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ 76.04%, ನಗರ ಪ್ರದೇಶಗಳಲ್ಲಿ49.36% BPL ರೇಷನ್ ಕಾರ್ಡ್ ಗಳಿವೆ. ಒಟ್ಟಾರೆಯಾಗಿ ನಮ್ಮ ರಾಜ್ಯದಲ್ಲಿ 3,58,87,666 ಫಲಾನುಭವಿಗಳಿಗೆ 1,03,70,669 BPL ಕಾರ್ಡ್ ನೀಡಬೇಕು ಎನ್ನುವ ನಿಯಮ ಇದೆ. ಸದ್ಯ ರಾಜ್ಯದಲ್ಲಿ 3,92,54,052 ಫಲಾನುಭವಿಗಳಿಗೆ 1,16,98,551 BPL ಕಾರ್ಡ್ ಗಳು ವಿತರಣೆಯಾಗಿವೆ.
ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮೆ ಆಗಿದೆ ಈ ರೀತಿ ಚೆಕ್ ಮಾಡಿ ನೋಡಿ.!
ಅಂದರೆ NFSA ಕೊಟ್ಟಿದ್ದ ಮಿತಿಗಿಂತ13,27,882 BPL ರೇಷನ್ ಕಾರ್ಡ್ ಗಳು ಹೆಚ್ಚಾಗಿವೆ. BPL ಕಾರ್ಡ್ ಗಳು ಮಿತಿಗಿಂತ ಹೆಚ್ಚಿರುವುದರಿಂದ ಸರ್ಕಾರದ ಮೇಲೆ ಅತಿಹೆಚ್ಚಿನ ಆರ್ಥಿಕ ಹೊರೆ ಬೀಳುತ್ತದೆ. ಈ ಕಾರಣಕ್ಕಾಗಿ BPL ರೇಷನ್ ಕಾರ್ಡ್ ವಿತರಣೆ ಮತ್ತು ಅರ್ಜಿ ಸ್ವೀಕಾರವನ್ನು ಸ್ಥಗಿತಗೊಳಿಸಲು ಆಹಾರ ಇಲಾಖೆ ನಿರ್ಧರಿಸಿದೆ.
ಗ್ಯಾರಂಟಿ ಯೋಜನೆ ಕಾಣದಿಂದಾಗಿ ಮತ್ತು ವೈದ್ಯಕೀಯ ಸೌಲಭ್ಯದಲ್ಲಿ ರಿಯಾಯಿತಿ ಸಿಗುತ್ತದೆ, ವೈದ್ಯಕೀಯ ವಿಮೆಗಳು ಸಿಗುತ್ತವೆ, ಶೈಕ್ಷಣಿಕ ವೆಚ್ಚದಲ್ಲಿ ರಿಯಾಯಿತಿ ಇರುತ್ತದೆ ಎನ್ನುವ ಕಾರಣಕ್ಕಾಗಿ ಅತಿ ಹೆಚ್ಚು ಜನರು BPL ರೇಷನ್ ಕಾರ್ಡ್ ಪಡೆದುಕೊಳ್ಳುವ ತವಕದಲ್ಲಿದ್ದಾರೆ. ಆದರೆ ಇವರಿಗೆಲ್ಲ ನಿರಾಸೆಯಾಗಿದೆ.
ಲೇಬರ್ ಕಾರ್ಡ್ ಇದ್ದವರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ, ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
ಸರ್ಕಾರಕ್ಕೆ ಇರುವ ಒಂದೇ ದಾರಿ ಎಂದರೆ ಈಗಾಗಲೇ ನಕಲಿ ದಾಖಲೆ ಸೃಷ್ಟಿಸಿ ರೇಷನ್ ಕಾರ್ಡ್ ಹೊಂದಿರುವವರ ಕಾರ್ಡ್ಗಳನ್ನು ಪರಿಶೀಲಿಸಿ ರ’ದ್ದುಪಡಿಸಿ ನಂತರ ಸೂಕ್ತ ಫಲಾನುಭವಿಗಳಿಗೆ ಅವಕಾಶ ಮಾಡಿಕೊಡುವುದು. ಆದರೆ ಈಗಷ್ಟೇ ವಾರಗಳ ಹಿಂದೆ ಆಹಾರ ಇಲಾಖೆಯ ಸಚಿವರಾದ ಕೆ.ಎಚ್ ಮುನಿಯಪ್ಪ (Minister K.H Muniyappa) ಅವರು ನಮ್ಮ ಸರ್ಕಾರ ಯಾವುದೇ ಮಾಡಲು ಮುಂದಾಗಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ ಹಾಗಾಗಿ ಇನ್ನು ಕೆಲವು ದಿನಗಳವರೆಗೆ ಕಾಯದೆ ವಿಧಿ ಇಲ್ಲ.
ಸದ್ಯಕ್ಕಿಗ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 10 ರವರೆಗೆ ರೇಷನ್ ಕಾರ್ಡ್ ತಿದ್ದುಪಡಿ (ration card correction) ಮಾಡಿಕೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ಬಹಳ ದಿನಗಳಿಂದ ನಾಗರಿಕರು ಕೋರಿಕೊಂಡಿದ್ದ ಕೋರಿಕೆ ಮೇರೆಗೆ ಮತ್ತೊಮ್ಮೆ ಇಲಾಖೆಯ ತಿದ್ದುಪಡಿಗೆ ಅವಕಾಶ ನೀಡಿದೆ.
ಈ ಕಾಲಾವಕಾಶದೊಳಗೆ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು, ಹಳೇ ಸದಸ್ಯರ ಹೆಸರನ್ನು ತೆಗೆದುಹಾಕುವುದು, ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮತ್ತು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನ ಬದಲಾವಣೆ ಇತ್ಯಾದಿ ತಿದ್ದುಪಡಿಗಳ ಮಾಡಿಕೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ಅಗತ್ಯ ದಾಖಲೆಗಳ ಜೊತೆ ಹತ್ತಿರದಲ್ಲಿರುವ CSC ಸೆಂಟರ್ ಗಳು ಅಥವಾ ಸರಕಾರದ ಸೇವಾ ಕೇಂದ್ರಗಳಲ್ಲಿ ಹೋಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.