ಕಂದಾಯ ಇಲಾಖೆಗೆ ಸಂಬಂಧಪಟ್ಟ ಹಾಗೆ ಹೊಸ ಸರ್ಕಾರ ಸ್ಥಾಪನೆಯದ ಮೇಲೆ ಸಾಕಷ್ಟು ಮಹತ್ವದ ಬದಲಾವಣೆಗಳಾಗಿದ್ದು, ಹಲವಾರು ದಿನಗಳಿಂದ ಚರ್ಚೆಯ ವಿಷಯವಾಗಿದ್ದ ಸಂಗತಿಗೆ ಬುಧವಾರ ನಡೆದ ಕಲಾಪದಲ್ಲಿ ಸಹಮತ ದೊರಕಿದೆ ಮತ್ತು ಬಹು ನಿರೀಕ್ಷಿತ ಕಾಯ್ದೆ ಕರ್ನಾಟಕ ತಿದ್ದುಪಡಿ ವಿಧೇಯಕ-2024 ಅಂಗೀಕಾರವಾಗಿದೆ.
ವ್ಯವಸ್ಥೆಯಲ್ಲಿ ಪಾದಶಕತೆ ತರಲು ಮತ್ತು ಸರ್ಕಾರಿ ಕಚೇರಿಗಳಿಗೆ ಜನಸಾಮಾನ್ಯರು ಅನವಶ್ಯಕವಾಗಿ ಅಲೆಯುವುದನ್ನು ತಪ್ಪಿಸಲು ಅವರಿಗೆ ಆಗುವ ಸಮಯ ವ್ಯರ್ಥ ಮತ್ತು ಹಣ ವ್ಯರ್ಥ ತಪ್ಪಿಸುವುದರ ಜೊತೆಗೆ ಕಚೇರಿಗಳಲ್ಲಿ ಜನಸಂದಣಿ ತಡೆಗಟ್ಟಲು ಅನುಕೂಲವಾಗುವಂತ ನಿಯಮಗಳನ್ನು ಜಾರಿಗೆ ತರಲಾಗಿದೆ.
ಈ ವಿಧೇಯಕವನ್ನು ಮಂಡನೆ ಮಾಡಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ನೋಂದಣಿ ಪ್ರಕ್ರಿಯೆಯಲ್ಲಿ ನಾಗರೀಕ ಸೇವೆಯನ್ನು ಮತ್ತಷ್ಟು ಸರಳ ಮತ್ತು ಜನಸ್ನೇಹಿಗೊಳಿಸುವ ಉದ್ದೇಶದಿಂದ ಈ ವಿಧೇಯಕವನ್ನು ಜಾರಿಗೆ ತಂದಿರುವುದಾಗಿ ತಿಳಿಸಿದ್ದಾರೆ. ಆ ಪ್ರಕಾರವಾಗಿ ಆಸ್ತಿ ನೊಂದಣಿ ವಿಷಯದಲ್ಲಿ ಬಹಳ ಉತ್ತಮ ಬದಲಾವಣೆಗಿದ್ದು ಅದರ ವಿವರ ಏನು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಚಿಸುತ್ತಿದ್ದೇವೆ.
ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಎರಡು ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ. ಮೊದಲ ತಿದ್ದುಪಡಿ ಸಂಗತಿಯೇನೆಂದರೆ, ಆಸ್ತಿ ಮಾರಾಟಗಾರರು ಹಾಗೂ ಕೊಳ್ಳುವವರು ಇವರಿಬ್ಬರ ಉಪಸ್ಥಿತಿ ಇಲ್ಲದೆ ತಾವು ಇರುವ ಜಾಗದಿಂದಲೇ ತಾಂತ್ರಿಕವಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಲು ವಿಧೇಯಕದಲ್ಲಿ ಅವಕಾಶ ಮಾಡಿ ಕೊಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದುವರೆಗೂ ಇದ್ದ ನಿಯಮ ಬೇರೆ ರೀತಿ ಇತ್ತು. ಉಪ ನೋಂದಣಾಧಿಕಾರಿ ಕಚೇರಿಗೆ ಮಾರುವವರು, ಕೊಳ್ಳುವವರು ಮತ್ತು ಎರಡು ಕಡೆಯ ಸಾಕ್ಷಿಗಳ ಉಪಸ್ಥಿತಿ ಕಡ್ಡಾಯವಾಗಿತ್ತು. ಇದರಿಂದ ಸರಕಾರಿ ಕಚೇರಿಯಲ್ಲಿ ಜನಸಂದಣಿಯು ಹೆಚ್ಚಾಗಿ ಎಲ್ಲರಿಗೂ ತೊಂದರೆಯಾಗುತ್ತಿತ್ತು.
ಜನಸಾಮಾನ್ಯರು ಅನಗತ್ಯವಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಓಡಾಡಿ ಸಮಯ ಹಣ ವ್ಯರ್ಥ ಮಾಡಿಕೊಳ್ಳುವುದನ್ನು ತಪ್ಪಿಸಲು ಮತ್ತು ಅವರಿಗೆ ಅನುಕೂಲತೆಗಳು ಇಲ್ಲದೆ ಪರದಾಡುವುದನ್ನು ತಪ್ಪಿಸುವ ಸಲುವಾಗಿ ತಾಂತ್ರಿಕ ನೋಂದಣಿಗೆ ಅಂಕಿತ ಹಾಕಿರುವುದಾಗಿ ಕಂದಾಯ ಸಚಿವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಇದರ ಬಗ್ಗೆ ಇನ್ನು ಮುಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಹೌಸಿಂಗ್ ಬೋರ್ಡ್, ಸ್ಲಂ ಬೋರ್ಡ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಂತಹ ನಂಬಿಕಾರ್ಹ ಮೂಲಗಳ ಸಹಾಯದಿಂದ ನಾಗರೀಕರು ತಾಂತ್ರಿಕವಾಗಿಯೇ ಆಸ್ತಿ ನೋಂದಣಿ ಕಾರ್ಯ ಮಾಡಿಕೊಳ್ಳಬಹುದು.
ಈ ಹೊಸ ಮಾದರಿಯು ದೇಶದಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ರಾಜ್ಯದಲ್ಲಿ ಜಾರಿಗೆ ಬಂದಿದ್ದು ಯಶಸ್ವಿ ಕೂಡ ಆಗಿದೆ. ಕರ್ನಾಟಕದಲ್ಲೂ ಜನರಿಗೆ ಈ ರೀತಿ ನಿಯಮ ಮಾಡಿದರೆ ಅನುಕೂಲತೆಯಾಗಲಿದೆ ಎಂದು ಭಾವಿಸಿ ತಿದ್ದುಪಡಿ ತರಲಾಗಿದೆ ಎಂದು ಸಚಿವರು ವಿಷಯ ಹಂಚಿಕೊಂಡಿದ್ದಾರೆ.
ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಹಣ ಸೋರಿಕೆಯನ್ನು ತಡೆಯುವ ಸಲುವಾಗಿ ಮತ್ತೊಂದು ತಿದ್ದುಪಡಿ ತರಲಾಗಿದ್ದು ಇನ್ನು ಮುಂದೆ ಪೇಪರ್ ಖಾತಾ ನೋಂದಣಿಗೆ ರದ್ದುಗೊಳಿಸಲಾಗಿದೆ. ಬುಧವಾರ ಜಾರಿಗೆ ತಂದ ವಿಧೇಯಕದಲ್ಲಿ ಈ ವಿಚಾರದ ತಿದ್ದುಪಡಿಯು ಸೇರಿದೆ. ನಗರ ಭಾಗದಲ್ಲಿ ಪೇಪರ್ ಖಾತಾ ಬಳಸಿ ನೋಂದಣಿ ಮಾಡುತ್ತಿರುವುದು ತಿಳಿದು ಬಂದಿದೆ.
ಇನ್ನು ಮುಂದೆ ಇ-ಆಸ್ತಿ ಆಗಿದ್ದರೆ ಮಾತ್ರ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ತಿಳಿಸಿದ್ದಾರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಹೌಸಿಂಗ್ ಬೋರ್ಡ್ ಹಾಗೂ ಕಾವೇರಿ ಡೇಟಾಬೇಸ್‍ನಿಂದ ಅಸಲಿ ಖಾತಾ ಪರಿಶೀಲನೆ ನಡೆಸಿ ನಂತರವಷ್ಟೇ ನೋಂದಣಿ ಮುಂದುವರೆಯಲಿದೆ. ಇಂತಹ ಕ್ರಮಗಳಿಂದ ಸಾಕಷ್ಟು ಅಕ್ರಮಗಳಿಗೂ ತಡೆಯೊಡ್ಡಿದಂತಾಗುತ್ತದೆ ಎಂದು ಈ ರೀತಿ ತಿದ್ದುಪಡಿ ತರಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.