Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ರೇಷನ್ ಕಾರ್ಡ್ (Ration Card) ಈಗ ಬಹಳ ಮುಖ್ಯವಾದ ದಾಖಲೆಯಾಗಿದೆ. ಈಗಂತೂ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi) ಸಹಾಯಧನಗಳನ್ನು ಪಡೆಯಬೇಕು ಎಂದರೆ. ರೇಷನ್ ಕಾರ್ಡ್ ಇರಲೇಬೇಕು ಹಾಗೂ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆಯ ಮಾಹಿತಿಗಳು ಸರಿಯಾಗಿರಬೇಕು ಮತ್ತು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಆಗಿರಬೇಕು.
ಇದಿಷ್ಟು ಮಾತ್ರವಲ್ಲದೆ ಗ್ಯಾರಂಟಿಯೇತರವಾಗಿ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರೂಪಿಸಲಾಗಿರುವ ವಿಶೇಷ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರೆ ಅಗತ್ಯ ದಾಖಲೆಯಾಗಿ ರೇಷನ್ ಕಾರ್ಡ್ ಸಲ್ಲಿಸಲೇಬೇಕು.
ಸರ್ಕಾರ ರೂಪಿಸಿರುವ ಈ ಕಲ್ಯಾಣ ಯೋಜನೆಗಳ ಅನುಕೂಲತೆಯನ್ನು ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳು ಪಡೆಯಬೇಕು ಎನ್ನುವುದು ಕೂಡ ಸರ್ಕಾರದ ಆಶಯವಾಗಿದೆ ಆದರೆ ಅರ್ಹರಾಗಿದ್ದರು ಅನೇಕರು ರೇಷನ್ ಕಾರ್ಡ್ ಗಳ ದಾಖಲೆಗಳಲ್ಲಿ ಸಮಸ್ಯೆ ಆಗಿರುವುದು ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಇರುವ ಕಾರಣದಿಂದಾಗಿ ಈ ಯೋಜನೆಗಳ ಪ್ರಯೋಜನ ಪಡೆಯಲಾಗುತ್ತಿಲ್ಲ.
ಈ ಸುದ್ದಿ ಓದಿ:- ಇನ್ಮೇಲೆ ಮನೆಯೇ ಕುಳಿತು ಆಸ್ತಿ ನೋಂದಣಿ ಮಾಡಲು ಅವಕಾಶ.!
ಇನ್ನು ಕೆಲವರಿಗೆ ರೇಷನ್ ಕಾರ್ಡ್ ಗಳೇ ಇಲ್ಲ. ಇತ್ತೀಚೆಗೆ ಗ್ಯಾರೆಂಟಿ ಯೋಜನೆಗಳು ಜಾರಿಯಾದ ಮೇಲು ಸರ್ಕಾರ ನಾಲ್ಕೈದು ಬಾರಿ ರೇಷನ್ ಕಾರ್ಡ್ ನಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿಕೊಂಡು ತಿದ್ದುಪಡಿ ಮಾಡಿಕೊಳ್ಳಲು (Ration card Correction) ಅವಕಾಶ ಮಾಡಿಕೊಟ್ಟಿತ್ತು. ಈ ಸಮಯದಲ್ಲಿ ಅನೇಕರು ತಮ್ಮ ರೇಷನ್ ಕಾರ್ಡ್ ನಲ್ಲಿದ್ದ ಸಮಸ್ಯೆಗಳನ್ನು ಸರಿಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಿ ಇವುಗಳ ಪ್ರಯೋಜನ ಪಡೆಯುತ್ತಿದ್ದಾರೆ.
ಆದರೆ ರೇಷನ್ ಕಾರ್ಡ್ ಗಳು ಇಲ್ಲದವರ ಸ್ಥಿತಿ ಹೇಳದಂತಾಗಿದೆ. ಯಾಕೆಂದರೆ ಈಗಾಗಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಮೂರು ವರ್ಷಕ್ಕಿಂತ ಹೆಚ್ಚು ಸಮಯವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆ – 2024ರ (Assembly Election – 2024) ಚುನಾವಣಾ ನೀತಿ ಸಂಹಿತೆ ಕಾರಣದಿಂದಾಗಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸ್ವೀಕಾರ ಹಾಗೂ ರೇಷನ್ ಕಾರ್ಡ್ ಗಳು ಅನುಮೋದನೆ ಮತ್ತು ವಿತರಣೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಈಗ ಚುನಾವಣೆ ಮುಗಿದು ಹೊಸ ಸರ್ಕಾರ ಸ್ಥಾಪನೆಯಾಗಿ ಆರು ತಿಂಗಳು ಕಳೆಯುತ್ತಿದೆ. ಇನ್ನು ಸಹ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಆಹ್ವಾನ ಮತ್ತು ಈಗಾಗಲೇ ಅನುಮೋದನೆಗೊಂಡಿರುವ ಕಾರ್ಡುಗಳ ವಿತರಣೆ ಕಾರ್ಯಕ್ರಮ ನಡೆದಿಲ್ಲ ಇದರ ಬಗ್ಗೆ ಪದೇಪದೇ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಸಚಿವರಿಗೂ ಕೂಡ ಪ್ರಶ್ನೆ ಎದುರಾಗುತ್ತಿದ್ದು ಅಂತಿಮವಾಗಿ ಇದಕ್ಕೆಲ್ಲ ಒಂದು ಸ್ಪಷ್ಟ ಉತ್ತರ ಸಿಕ್ಕಿದೆ.
ಈ ಸುದ್ದಿ ಓದಿ :- ಸ್ವಂತ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಒಂದು ಲಕ್ಷ ಸಹಾಯಧನ ಘೋಷಣೆ ಆಸಕ್ತರು ಅರ್ಜಿ ಸಲ್ಲಿಸಿ.!
ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪರವರೆ (Minister K.H Muniyappa) ಇತ್ತೀಚೆಗೆ ಒಂದು ಸಂದರ್ಭದಲ್ಲಿ ಮಾಧ್ಯಮಗಳೆದುರು ಮಾರ್ಚ್ 31ರ ಒಳಗಾಗಿ ಯಾರೆಲ್ಲ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರು, ಅವರಿಗೆ BPL ರೇಷನ್ ಕಾರ್ಡ್ ಅನುಮೋದನೆಯಾಗಿತ್ತು ಮತ್ತು ಚುನಾವಣೆ ಕಾರಣದಿಂದಾಗಿ ತಡೆಹಿಡಿಯಲಾಗಿತ್ತು.
ಆ ಕಾರ್ಡ್ ಗಳ ವಿತರಣೆ ಕಾರ್ಯಕ್ರಮವನ್ನು ಶೀಘ್ರವೇ ಆರಂಭಿಸಿ ಅರ್ಹರಿಗೆ BPL ಕಾರ್ಡ್ ಹಂಚಿಕೆ ಮಾಡಲಿದ್ದೇವೆ ಮತ್ತು ಸರ್ಕಾರದಿಂದ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಿದ್ದೇವೆ ಎನ್ನುವ ಭರವಸೆಯನ್ನು ನೀಡಿದ್ದಾರೆ.
ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ಈಗಾಗಲೇ ಅರ್ಜಿ ಸಲ್ಲಿಸಿ ಪಡೆದುಕೊಳ್ಳಲು ಕಾಯುತ್ತಿದ್ದವರಿಗೆ ಈ ಸಿಹಿ ವಿಷಯ ತಲುಪಿಸಿ.