ಜೀವನದಲ್ಲಿ ಇರುವ ಅತಿ ದೊಡ್ಡ ಕ’ಷ್ಟ ಎಂದರೆ ಅದು ಸಾಲದ ಬಾಧೆ. ಯಾಕೆಂದರೆ, ಸಾಲ ಎನ್ನುವುದು ಒಬ್ಬ ಮನುಷ್ಯನ ಎಲ್ಲಾ ನೆಮ್ಮದಿಯನ್ನು ಕೂಡ ಕಿತ್ತುಕೊಂಡು ಬಿಡುತ್ತದೆ. ಸಾಲ ಮಾಡಿದ ವ್ಯಕ್ತಿ ಮಾತ್ರ ಅಲ್ಲದೆ ಅವರ ಕುಟುಂಬಸ್ಥರೆಲ್ಲರೂ ಕೂಡ ಈ ನೋ’ವಿನ ಹೊರೆ ಹೊರಲೇಬೇಕಾಗುತ್ತದೆ.
ಸಾಲ ಎನ್ನುವುದು ಜೀವನದಲ್ಲಿ ಸಂತೋಷವನ್ನು ಹಾಳು ಮಾಡುವ ವಿಷಯ ಎಂದು ಅರಿವಿದ್ದರೂ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ಕಾರಣಕ್ಕೆ ಮತ್ತೊಬ್ಬರ ಬಳಿ ಸಾಲ ಮಾಡುವ ಅವಶ್ಯಕತೆ ಇದ್ದೇ ಇರುತ್ತದೆ. ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ಮತ್ತೊಬ್ಬರ ಬಳಿ ಸಾಲ ಮಾಡಿದಾಗ ಅದನ್ನು ತೀರಿಸಲು ಸಾಧ್ಯವಾಗದೆ ಅದೇ ಒಂದು ದೊಡ್ಡ ಋಣವಾಗಿ ಪ್ರತಿದಿನವೂ ಕೂಡ ಕಷ್ಟ ಕೊಡುವ ವಿಷಯವಾಗಿ ಬಿಟ್ಟಿರುತ್ತದೆ.
ಈ ರೀತಿ ನೀವು ಯೋಚನೆ ಮಾಡಿದ ರೀತಿ ಸಾಲ ತೀರಿಸಲು ಆಗುತ್ತಿಲ್ಲ ಎಂದರೆ ಅದಕ್ಕೆ ನೂರಾರು ಕಾರಣಗಳು ಇರುತ್ತವೆ. ಈ ರೀತಿ ಯಾವುದೇ ಸಮಸ್ಯೆಯಲ್ಲಿ ನೀವು ಸಿಕ್ಕಿಹಾಕಿ ಕೊಂಡಿದ್ದರು ಕೂಡ ಇವುಗಳಿಂದ ಶೀಘ್ರವಾಗಿ ಆಚೆ ಬರಬೇಕು ಎಂದರೆ ಭಕ್ತಿಯಿಂದ ಈಗ ನಾವು ಹೇಳುವ ಒಂದು ಉಪಾಯವನ್ನು ಮಾಡಬೇಕು. ಈ ತಂತ್ರವನ್ನು ನೀವು ಮಾಡಿದ್ದೇ ಆದಲ್ಲಿ ರಾಮಭಂಟ ಹನುಮನ ಆಶೀರ್ವಾದ ನಿಮಗೆ ಸಿಗುತ್ತದೆ.
ಎಲ್ಲರಿಗೂ ಗೊತ್ತು ಕಲಿಯುಗದ ಸಾಕ್ಷಾತ್ ದೈವ ಎಂದು ಕರೆಸಿಕೊಂಡಿರುವ ಆಂಜನೇಯನ ಆಶೀರ್ವಾದ ಸಿಕ್ಕಿದರೆ ಶನಿಗ್ರಹ ಕಾಟ ನವಗ್ರಹಗಳ ಕಾಟ ಯಾವುದೇ ರೀತಿಯ ಕಾಟಗಳಿದ್ದರೂ ಪರಿಹಾರವಾಗುತ್ತದೆ. ಈ ರೀತಿ ಗ್ರಹದೋಷಗಳು ಪರಿಹಾರ ಆಗುವುದರಿಂದ ಜೀವನದ ಸಮಸ್ಯೆಗಳು ಸರಿ ಹೋಗುತ್ತವೆ, ಎಲ್ಲ ಕ’ಷ್ಟಗಳಿಗೂ ಕೂಡ ಪರಿಹಾರದ ಮಾರ್ಗ ಸಿಗುತ್ತದೆ.
ಆಂಜನೇಯನು ಎಷ್ಟು ಶಕ್ತಿವಂತ, ಬುದ್ಧಿವಂತ, ಸಾಹಸವಂತ ಆದರೂ ಕೂಡ ಆತನು ಶ್ರೀರಾಮನ ಪ್ರೀತಿಯ ಭಂಟ. ಸ್ವಾರ್ಥವಿಲ್ಲದೇ ಸೇವೆ ಮಾಡುವ ಈ ಭಾವನೆಯೇ ಶ್ರೀರಾಮನಿಗೆ ಬಹಳ ಇಷ್ಟ ಆಗಿರುವುದು. ಹಾಗಾಗಿ ಭಕ್ತಿಯಿಂದ ಏಕಾಗ್ರತೆಯಿಂದ ನಂಬಿಕೆಯಿಂದ ಆಂಜನೇಯನು ಪ್ರಾರ್ಥಿಸಿದರೆ ಶ್ರೀರಾಮ ಮತ್ತು ಆಂಜನೇಯನ ಆಶೀರ್ವಾದ ಖಂಡಿತ ಸಿಗುತ್ತದೆ.
ನಮಗೆ ಯಾವುದೇ ರೀತಿ ಹಣಕಾಸಿನ ಬಾಧೆ ಇದ್ದರೂ ಕೂಡ ಅದು ಪರಿಹಾರ ಆಗುತ್ತದೆ. ಆದರೆ ಆಂಜನೇಯನಿಗೆ ಇಷ್ಟ ಆಗುವ ರೀತಿ ವಿಶೇಷ ಪೂಜೆ ಮಾಡುವುದರಿಂದ ಮಾತ್ರ ಆಂಜನೇಯ ಪ್ರಸನ್ನರಾಗುತ್ತಾರೆ. ಹಾಗಾಗಿ ನಾವು ಈಗ ಹೇಳುವ ರೀತಿಯಲ್ಲಿ ಆಂಜನೇಯನನ್ನು ಪ್ರಾರ್ಥಿಸಿರಿ. ಮಂಗಳವಾರ, ಗುರುವಾರ, ಶನಿವಾರ ಈ ಒಂದು ಉಪಾಯವನ್ನು ಮಾಡಿ ಮನೆಯನ್ನು ಶುದ್ಧಗೊಳಿಸಿ ನೀವು ಕೂಡ ಸ್ನಾನ ಮಾಡಿ.
ಭಕ್ತಿಯಿಂದ ಮನೆಯಲ್ಲಿ ಆಂಜನೇಯನ ಫೋಟೋ ಇದ್ದರೆ ಸ್ವಚ್ಛಗೊಳಿಸಿ ಅಲಂಕಾರ ಮಾಡಿ ಆಂಜನೇಯ ಮುಂದೆ ಮಲ್ಲಿಗೆ ಎಣ್ಣೆಯಿಂದ ದೀಪ ಹಚ್ಚಿಡಿ. ಬಳಿಕ 11 ವೀಳ್ಯದೆ ಹಾಗೂ 11 ಅಡಿಕೆಗಳನ್ನು ತೆಗೆದುಕೊಳ್ಳಿ. ಆಂಜನೇಯಕ್ಕೆ ಬಹಳ ಇಷ್ಟವಾದ ಸಿಂಧೂರವನ್ನು ಕೂಡ ತಪ್ಪದೆ ತೆಗೆದುಕೊಳ್ಳಿ. ಈಗ ಹನುಮಾನ್ ಚಾಲೀಸವನ್ನು ನೀವು ಪಠಿಸಬೇಕು.
11 ಬಾರಿ ಹನುಮಾನ್ ಚಾಲೀಸಾ ವನ್ನು ಪಠಿಸಬೇಕು ಮತ್ತು ಪ್ರತಿಯೊಂದು ಬಾರಿ ಹನುಮಾನ್ ಚಾಲಿಸ ಪಡಿಸಿ ಆದ ಮೇಲೆ ಒಂದು ಎಲೆಯನ್ನು ತೆಗೆದುಕೊಂಡು ಅದರಲ್ಲಿ ಕೇಸರಿಯಿಂದ ಜೈ ಶ್ರೀರಾಮ್ ಎಂದು ಬರೆಯಬೇಕು. ನಂತರ ಅದಕ್ಕೆ ಅಡಿಕೆ ಹಾಕಿ ಪಾನ್ ರೀತಿ ಮಡಚಬೇಕು. 11 ಎಲೆಗಳು ಪೂರ್ತಿ ಆದ ಮೇಲೆ ಅದನ್ನು ಹತ್ತಿರದಲ್ಲಿರುವ ಆಂಜನೇಯ ಗುಡಿಗೆ ತೆಗೆದುಕೊಂಡು ಹೋಗಿ ಸಮರ್ಪಿಸಬಹುದು. ಸಾಧ್ಯವಾಗದೆ ಇದ್ದಲ್ಲಿ ಯಾವುದಾದರೂ ಆಲದ ಮರದ ಕೆಳಗೆ ಇದನ್ನು ಹಾಕಬಹುದು. ಈ ರೀತಿ ಮಾಡುವುದರಿಂದ ನಿಮಗೆ ಎಷ್ಟೇ ದೊಡ್ಡಮೊತ್ತದ ಸಾಲ ಇದ್ದರೂ ಅದನ್ನು ತೀರಿಸುವ ಮಾರ್ಗ ಹೊಳೆಯುತ್ತದೆ.