50 ಸಾವಿರಕ್ಕಿಂತ ಹೆಚ್ಚು ದುಡಿಯುವವರಿಗೆ ದೇಶದಾದ್ಯಂತ ಹೊಸ ರೂಲ್ಸ್ ಕೇಂದ್ರದಿಂದ ಅಧಿಕೃತ ಘೋಷಣೆ.!

 

ಕೇಂದ್ರ ಸರ್ಕಾರದಿಂದ ಹಲವು ಬಾರೀ ಹಳೆಯ ಕಾನೂನುಗಳು ಪರೀಕ್ಷಣೆಗೊಂಡಿವೆ. ಇದರ ಉದ್ದೇಶ ಸಾಮಾನ್ಯ ನಾಗರಿಕರಿಗೆ ಹೆಚ್ಚು ಅನುಕೂಲತೆ ಮಾಡಿ ಕೊಡುವುದೇ ಆಗಿದೆ. ಈಗ ಆದಾಯ ತೆರಿಗೆ ಇಲಾಖೆಯಿಂದ ಕೂಡ ಮತ್ತೊಂದು ಬಾರಿ ಹೊಸ ರೂಲ್ಸ್ ಜಾರಿಯಾಗಿದೆ. ಈ ಬಾರಿ ತಮ್ಮ ಸರ್ಕಾರದಿಂದ ಹೊಸ ನಿಯಮ ಏನು ಎನ್ನುವುದನ್ನು ಪ್ರಸ್ತುತ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೇಂದ್ರದಲ್ಲಿ BJP ಸರ್ಕಾರವು ಅಧಿಕಾರಕ್ಕೆ ಬಂದು 9 ವರ್ಷ ತುಂಬಿದೆ. ಈ ಸುಧೀರ್ಘ ಅವಧಿಯಲ್ಲಿ ಸರ್ಕಾರ ಕೈಗೊಂಡ ಅಭಿವೃದ್ಧಿ ಪರ್ವದ ಬಗ್ಗೆ ಎಲ್ಲರಿಗೂ ಮಾಹಿತಿ ತಲುಪಿಸಲು ಕಾರ್ಯಕ್ರಮಗಳನ್ನು BJP ನಾಯಕರುಗಳ ನಡೆಸುತ್ತಿದ್ದಾರೆ. ಇದೇ ರೀತಿ ಉಡುಪಿಯಲ್ಲಿ ನಡೆದ ಒಂದು BJP ಅಭಿವೃದ್ಧಿ ಪರ್ವಕಾಲದ ಕಾರ್ಯಕ್ರಮಕ್ಕೆ ನಿರ್ಮಲ ಸೀತಾರಾಮನ್ ಅವರು ಮುಖ್ಯಸ್ಥರಾಗಿ ಬಂದಿದ್ದರು, ಆ ಸಮಯದಲ್ಲಿ ತಮ್ಮ ಆದಾಯ ತೆರಿಗೆ ಇಲಾಖೆಯ ಮತ್ತೊಂದು ಹೊಸ ಕಾನೂನಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಭ್ರಷ್ಟಾಚಾರ ಮಟ್ಟ ಹಾಕಿ ಪಾರದರ್ಶಕ ಆಡಳಿತ ಜಾರಿಗೆ ತರಬೇಕು ಎನ್ನುವುದೇ BJP ಸರ್ಕಾರದ ಧ್ಯೇಯ. ಅದಕ್ಕಾಗಿ ಸಾಕಷ್ಟು ಶ್ರಮಿಸುತ್ತಿರುವ ಸರ್ಕಾರದ ಬಗ್ಗೆ ನಿರ್ಮಲ ಸೀತಾರಾಮನ್ ಅವರು ಮಾತನಾಡಿದ್ದಾರೆ. ಅಧಿಕ ಆದಾಯ ಪಡೆಯುತ್ತಿರುವ ಹಾಗೂ ಮಿತಿಗಿಂತ ಹೆಚ್ಚು ಆಸ್ತಿ ಹೊಂದುತ್ತಿರುವವರ ಬಗ್ಗೆ ನಿಗಾ ಇಡಲು BJP ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ಈ ರೀತಿ ಆಸ್ತಿ ಹೊಂದಿರುವವರು ತಮ್ಮ ಆದಾಯದ ತೆರಿಗೆ ಸಲ್ಲಿಸಬೇಕು ಅನೇಕರು ಸರ್ಕಾರಕ್ಕೆ ವಂಚಿಸುತ್ತಿರುವುದು ಬೆಳಕಿಗೆ ಬಂದಿರುವುದರಿಂದ ಅವರಿಗೆ ಸರ್ಕಾರ ದಂಡ ವಿಧಿಸುವ ಮೂಲಕ ಅಥವಾ ಶಿ’ಕ್ಷೆ ನೀಡುವ ಮೂಲಕ ಎಚ್ಚರಿಸುತ್ತಿದೆ. ಈಗ ಐಟಿ ರಿಟರ್ನ್ಸ್ ಸಲ್ಲಿಕೆ ಬಗ್ಗೆ ದೇಶದ ಎಲ್ಲಾ ಜನತೆಗೂ ಕೂಡ ಸಿಹಿ ಸುದ್ದಿ ಸಿಕ್ಕಿದೆ.

ತಮ್ಮ ಆದಾಯ ತೆರಿಗೆಯನ್ನು ಸರಿಯಾಗಿ ಪಾವತಿ ಮಾಡಿಕೊಂಡು ಬಂದು ತಮ್ಮ ಆಸ್ತಿ ಘೋಷಿಸಿಕೊಂಡವರಿಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಈ ರೀತಿ ತೆರಿಗೆ ಪಾವತಿ ಮಾಡುವಾಗ ಅದು ಪಂಚಾಯಿತಿ ಮಟ್ಟದಲ್ಲಿ ಕಟ್ಟುವ ಆಸ್ತಿ ತೆರಿಗೆ ಆದರೆ ಯಾವುದೇ ಸಮಸ್ಯೆ ಇಲ್ಲ. ಉದ್ಯೋಗಸ್ಥನ ವೇತನ ಹೆಚ್ಚಾಗಿರುವ ಕಾರಣ ಅದರಲ್ಲಿ ಟ್ಯಾಕ್ಸ್ ಕಟ್ ಆದರೆ ಅದು ವಿಪರೀತವಾಗಿ ಬೇಸರವನ್ನುಂಟು ಮಾಡುತ್ತದೆ.

ಕಷ್ಟಪಟ್ಟು ತಿಂಗಳು ಪೂರ್ತಿ ದುಡಿದ ಹಣದಲಕ ಟ್ಯಾಕ್ಸ್ ಗೆ ಹಣ ಕಟ್ ಆಗಿರುವುದು ಅವರಿಗೆ ಅನೇಕ ರೀತಿಯಾಗಿ ಕಾಡಬಹುದು. ಇದಕ್ಕೆ ಪರಿಗಣಿಸಿ ಪರಿಹಾರ ನೀಡಲು ನಿರ್ಧಾರ ಮಾಡಿದ BJP ಸರ್ಕಾರವು ಈ ಬಾರಿ ಅವರಿಗೆ ಭರ್ಜರಿ ಅವಕಾಶವೊಂದನ್ನು ನೀಡಿದೆ. ಅದೇನೆಂದರೆ, ಇನ್ನು ಮುಂದೆ ವಾರ್ಷಿಕವಾಗಿ 7.27 ಲಕ್ಷದವರೆಗೆ ಆದಾಯ ಹೊಂದಿರುವವರು ಯಾವುದೇ ರೀತಿ ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇಲ್ಲ.

ಅವರಿಗೆ ಮೋದಿ ಸರ್ಕಾರ ವಿನಾಯಿತಿ ನೀಡುತ್ತದೆ ಎನ್ನುವುದನ್ನು ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ. BKP ಸರ್ಕಾರವು 2023-24ನೇ ವಾರ್ಷಿಕ ಬಜೆಟ್ ಮಂಡನೆ ವೇಳೆ ಇದನ್ನು ಘೋಷಿಸಿದೆ ಎಂದು ತಿಳಿಸಿದ ಅವರು ಆದಾಯ ತೆರಿಗೆ ಇಲಾಖೆಯ ಮೂಲಕ ಗಳಿಸಿದ ಆದಾಯವನ್ನು ಸರ್ಕಾರ ದೇಶದ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಇದೇ ಕಾರಣದಿಂದ ಇಂದು ದೇಶದ ಜನತೆಗೆ ಗ್ಯಾಸ್, ಶುದ್ದ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸಿಕೊಡಲು ಸಾಧ್ಯವಾಯಿತು.

ನಮ್ಮ ಸರ್ಕಾರ ಬಂದ ಮೇಲೆ ಜನರಿಗೆ ಕಡಿಮೆ ದುಡ್ಡಿಗೆ ಔಷಧಿ ಜನೌಷಧಿ ಕೇಂದ್ರದ ಮೂಲಕ ಸಿಗುತ್ತಿದೆ ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಉತ್ತಮ ಆರೋಗ್ಯ ಸೇವೆ ಕೂಡ ಸಿಗುತ್ತಿದೆ, ಇದೇ ರೀತಿ ಮುಂದೆಯೂ ಕೂಡ ನಮ್ಮ ಸರ್ಕಾರ ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೆ ತರಲಿದೆ ಎನ್ನುವ ಭರವಸೆಯನ್ನು ನೀಡಿದರು.

Leave a Comment

%d bloggers like this: