ಕರ್ನಾಟಕ ರಾಜ್ಯ ಸರ್ಕಾರದ 4ನೇ ಗ್ಯಾರಂಟಿ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಯು ನೆನ್ನೆ ಸಂಜೆ 5:00 ಗಂಟೆಗೆ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಆವರಣದಲ್ಲಿ ಲಾಂಚ್ ಆಗಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಮಾರ್ಗಸೂಚಿಯನ್ನು ತಿಳಿಸಿದ್ದಾರೆ.
ಆ ರೀತಿ SMS ಕಳುಹಿಸಿದವರಿಗೆ ರಿಪ್ಲೈ ಕೂಡ ಬಂದಿದ್ದು ಬಳಿಕ ಅವರು ಯಾವ ಸ್ಥಳದಲ್ಲಿ ಯಾವ ಸಮಯಕ್ಕೆ ಯಾವ ದಿನ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ಅದರಲ್ಲಿ ತಿಳಿಸಲಾಗಿದೆ. ನೆನ್ನೆ ಸಂಜೆಯಿಂದ ಸರ್ಕಾರ ತಿಳಿಸಿದ್ದ ಸಂಖ್ಯೆ ಆಕ್ಟಿವೇಟ್ ಆಗಿದ್ದು ಆ ಪ್ರಕಾರವಾಗಿ SMS ಸಲ್ಲಿಸಿದವರಿಗೆ ರಿಪ್ಲೈ ಕೂಡ ಬಂದಿದೆ ಎಂದು ಈ ಅಂಕಣದಲ್ಲಿ ಇದರ ಬಗ್ಗೆ ವಿವರಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
● ಪ್ರತಿ ಕುಟುಂಬದ ಯಜಮಾನಿಗೆ 2000 ಸಹಾಯಧನ ಬರುವ ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು ಮನೆ ಯಜಮಾನಿಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 8147500500 ಈ ಸಂಖ್ಯೆಗೆ ತಮ್ಮ ರೇಷನ್ ಕಾರ್ಡ್ ಅಲ್ಲಿರುವ RC ಸಂಖ್ಯೆಯನ್ನು SMS ಮೂಲಕ ಕಳುಹಿಸಬೇಕು.
● SMS ಕಳುಹಿಸಿದ ಕೆಲವೇ ಸೆಕೆಂಡ್ ಗಳಲ್ಲಿ VM-SEVSIN ಮೂಲಕ ಅವರಿಗೆ ರಿಪ್ಲೈ ಬರುತ್ತದೆ. ಆ ರಿಪ್ಲೈ ನಲ್ಲಿ ಗೃಹಲಕ್ಷ್ಮಿ ಯೋಜನೆ ವೇಳಾಪಟ್ಟಿ ಎಂದು ಬರೆದು ನಿಮ್ಮ RC ಸಂಖ್ಯೆ ಜೊತೆ ಅರ್ಜಿ ಸಲ್ಲಿಸಬೇಕಾದ ಸ್ಥಳ, ಕೇಂದ್ರ, ಸಮಯ ಮತ್ತು ದಿನಾಂಕವನ್ನು ಕರ್ನಾಟಕ ಸರ್ಕಾರದ ಹೆಸರಿನಲ್ಲಿ ಕಳುಹಿಸಲಾಗಿರುತ್ತದೆ.
● ನಿಮಗೆ ರಿಪ್ಲೈ ಆಗಿ ಬಂದ SMS ನಲ್ಲಿ ಸೂಚಿಸಿರುವ ಸ್ಥಳಕ್ಕೆ ಅದೇ ಸಮಯಕ್ಕೆ ನೀವು ಆ ದಿನಾಂಕದಂದು ಪೂರಕ ದಾಖಲೆಗಳ ಜೊತೆ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಬೇಕಾಗುವ ದಾಖಲೆಗಳು:-
1. ಪತಿ ಮತ್ತು ಪತ್ನಿಯ ಆಧಾರ್ ಕಾರ್ಡ್
2. ರೇಷನ್ ಕಾರ್ಡ್
3. ಪಾಸ್ ಬುಕ್ ವಿವರ (ಆಧಾರ್ ಕಾರ್ಡ್ ಲಿಂಕ್ ಆಗಿರದ ಪಾಸ್ ಬುಕ್ ಕೊಡಲು ಇಚ್ಚಿಸಿದ್ದಲ್ಲಿ ಅದಕ್ಕೂ ಅನುಮತಿ ಇದೆ)
4. ಮೊಬೈಲ್ ಸಂಖ್ಯೆ.
● ಒಂದು ದಿನಕ್ಕೆ 60 ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು.
ನಿಮ್ಮ ಹತ್ತಿರದ ಬಾಪೂಜಿ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳನ್ನೇ SMS ಅಲ್ಲಿ ಸೂಚಿಸಲಾಗುತ್ತದೆ, ಅಲ್ಲಿಗೆ ಹೋಗಿ ನೀವು ಅರ್ಜಿ ನೋಂದಾಯಿಸಿಕೊಳ್ಳಬೇಕು.
● ಒಂದು ವೇಳೆ ಆ ಸಮಯಕ್ಕೆ ಅರ್ಜಿ ಸಲ್ಲಿಸಲು ಹೋಗಲು ಸಾಧ್ಯವಾಗದೆ ಇದ್ದರೆ 5:00 – 7:00ರವರೆಗೆ ಅವಕಾಶ ನೀಡಲಾಗುತ್ತದೆ.
ಗೃಹ ಜ್ಯೋತಿ ಯೋಜನೆ ಆರಂಭದಲ್ಲಿ ಉಂಟಾದ ಸರ್ವರ್ ಸಮಸ್ಯೆ ಹಾಗೂ ಜನದಟ್ಟಣೆಯ ಸಮಸ್ಯೆ, ತಾಂತ್ರಿಕ ಸಮಸ್ಯೆಗಳು ಮತ್ತೊಮ್ಮೆ ರಿಪೀಟ್ ಆಗಬಾರದು. ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಸರಳವಾಗಿರಬೇಕು ಮತ್ತು ಸಿಬ್ಬಂದಿಗೂ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ತಡವಾದರೂ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಇಷ್ಟು ಸರಳವಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಈ ಪ್ರಕರವಾಗಿ ಮೊದಲು RC ಸಂಖ್ಯೆಯನ್ನು SMS ಮಾಡಿ, ನೋಂದಣಿ ಮಾಡಿಕೊಂಡು ರಿಪ್ಲೈ ಬಂದ ಪ್ರಕಾರವಾಗಿ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ.